AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಂತಾಮಣಿಯಿಂದ ದೇಶ-ವಿದೇಶಕ್ಕೆ ರಫ್ತಾಗುತ್ತೆ ಫೇಮಸ್ ಖಾರದ ಕಡಲೆ ಬೀಜ..!

ಚುಮುಚುಮು ಚಳಿಯಲ್ಲಿ ಸ್ಪೈಸಿ ಕಡಲೆ ಬೀಜ ಸವಿಯಬೇಕು ಎನ್ನುಸುತ್ತಿದೆ ಅಲ್ವೇ? ಹಾಗಾದಾರೆ ಚಿಂತಾಮಣಿಯಿಂದ ತಯಾರಾಗುವ ಕಡಲೆ ಬೀಜದ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ..

ಚಿಂತಾಮಣಿಯಿಂದ ದೇಶ-ವಿದೇಶಕ್ಕೆ ರಫ್ತಾಗುತ್ತೆ ಫೇಮಸ್ ಖಾರದ ಕಡಲೆ ಬೀಜ..!
ಚಿಂತಾಮಣಿಯಿಂದ ತಯಾರಾಗುವ ಕಡಲೆ ಬೀಜ ದೇಶ ವಿದೇಶದಲ್ಲೂ ಫೇಮಸ್
shruti hegde
| Updated By: Lakshmi Hegde|

Updated on: Jan 14, 2021 | 3:02 PM

Share

ಚಿಕ್ಕಬಳ್ಳಾಪುರ: ಒಂದರ ಮೇಲೊಂದರಂತೆ ಚಂಡಮಾರುತಗಳ ಅಬ್ಬರ ಒಂದೆಡೆಯಾದ್ರೆ ಮತ್ತೊಂದೆಡೆ ಚುಮು ಚುಮು ಚಳಿ. ಕೊರೆಯುವ ಚಳಿಗೆ ಬಾಯಿ ಬಿಸಿ ಮಾಡಿಕೊಳ್ಳಲು ಸ್ಪೈಸಿಯಾಗಿರುವ ಹುರಿಗಾಳು ಕಡಲೇ ಬೀಜ ತಿನ್ನಬೇಕು ಅನ್ನಿಸುತ್ತೆ ಅಲ್ವಾ? ಅದರಲ್ಲೂ ಚಿಕ್ಕಬಳ್ಳಾಪುರ ಚಿಂತಾಮಣಿಯಲ್ಲಿ ಕಡಲೆ ಬೀಜ ಸವಿಯುತ್ತಿದ್ರೆ.. ವಾವ್..

ದೇಶ-ವಿದೇಶಗಳಲ್ಲಿ ಹೆಸರು ಮಾಡಿದೆ ಈ  ಖಾರದ ಕಡಲೆ ಬೀಜ ಕೇವಲ ಸ್ಥಳೀಯವಾಗಿ ಅಷ್ಟೇ ಅಲ್ಲ, ರಾಜ್ಯ, ದೇಶ-ವಿದೇಶಗಳಲ್ಲಿ ಹೆಸರು ಮಾಡಿದೆ ಚಿಂತಾಮಣಿಯ ಖಾರದ ಕಡಲೆ ಬೀಜ. ಇನ್ನು, ಉತ್ಪಾದಕರಂತೂ, ತಯಾರಿಸಿದ ಕಡಲೆ ಬೀಜವನ್ನು ಮಾರಾಟ ಮಾಡೋದ್ರಲ್ಲಿ ಬಿಜಿಯೋ ಬಿಜಿ..!

ಚುಮು ಚುಮು ಚಳಿಯಲ್ಲಿ ಕಡಲೆ ಬೀಜ ಸವಿಯಲು ರುಚಿ ಚಿಂತಾಮಣಿ ಅಂದ್ರೆ ಖಾರದ ಕಡಲೆ ಬೀಜ, ಖಾರದ ಕಡಲೇ ಬೀಜ ಅಂದ್ರೆ ಚಿಂತಾಮಣಿ ಎಂದು ಪ್ರಸಿದ್ಧಿ ಪಡೆದಿದೆ. ಹಾಗಾಗಿ, ಚಿಂತಾಮಣಿಗೂ ಖಾರದ ಕಡಲೇ ಬೀಜಕ್ಕೂ ಬಿಡಿಸಲಾಗದ ನಂಟು. ಬೀದಿ ಬದಿ, ಬೀಡಾ ಅಂಗಡಿಯಿಂದ ಹಿಡಿದು, 5ಸ್ಟಾರ್-7ಸ್ಟಾರ್ ಹೋಟೆಲ್​ಗಳಲ್ಲಿಯೂ ಪ್ರಸಿದ್ಧಿ ಹೊಂದಿದೆ ಚಿಂತಾಮಣಿ ಕಡಲೆ ಬೀಜ.

ಚಿಂತಾಮಣಿಯಲ್ಲಿ ಕಡಲೆ ಬೀಜದ ಸಿದ್ಧತೆ ಒಂದೆಡೆ ಕಡಲೆ ಬೀಜಗಳನ್ನು ಕ್ಲೀನ್ ಮಾಡುತ್ತಿದ್ರೆ, ಮತ್ತೊಂದೆಡೆ ಸ್ಪೈಸಿ ಮಸಾಲೆ ರೆಡಿಯಾಗುತ್ತೆ. ನಂತರ ಇದಕ್ಕೆ ಇನ್ನೊಂದು ಸ್ಪೆಷಲ್ ಮಸಾಲೆ ಸೇರಿಸಿ, ಮಿಕ್ಸ್​ ಮಾಡುತ್ತಾರೆ. ಹಸಿರು ಹಾಗೂ ಕೆಂಪು ಬಣ್ಣದ(ಖಾರ) ಕಡಲೇ ಬೀಜವನ್ನು ತಯಾರಿಸಲಾಗುತ್ತದೆ. ಮಸಾಲೆ ಪದಾರ್ಥಗಳಿಂದ ಸಿದ್ಧಗೊಂಡ ಕಡಲೆ ಬೀಜಗಳು ರಾಜ್ಯ, ದೇಶ, ವಿದೇಶಗಳಿಗೆ ರವಾನೆಯಾಗುತ್ತದೆ. ಇನ್ನು ಕೊರೊನಾದಿಂದ ಬಹುತೇಕ ಉದ್ಯಮಿಗಳಿಗೆ, ವ್ಯಾಪಾರಸ್ಥರಿಗೆ ನಷ್ಟವಾದ್ರೂ ಈ ಚಿಂತಾಮಣಿಯ ಖಾರದ ಕಡಲೆ ಬೀಜ ಉತ್ಪಾದಕರಿಗೆ ನಷ್ಟ ಮಾಡಿಲ್ಲ.

ಗ್ರಾಹಕ ಮತ್ತು ಉತ್ಪಾದಕರ ಅಭಿಪ್ರಾಯ ಚಾಟ್ಸ್​ಗೆ ಫೇಮಸ್​ ಅಂದರೆ, ನಮ್ಮ ಚಿಂತಾಮಣಿ. ಅದರಲ್ಲೂ ಕಡಲೇ ಬೀಜಕ್ಕೆ ಜನರ ಬೇಡಿಕೆ ಹೆಚ್ಚಿದೆ. ನಾವು ಈ ಕಡೆಲೆ ಬೀಜ ತಿನ್ನುತ್ತಾ ಟೈಮ್​ಪಾಸ್​ ಮಾಡುತ್ತೇವೆ ಎಂದು ಗ್ರಾಹಕಿ ಅಮೃತಾ ಅಭಿಪ್ರಾಯಪಟ್ಟಿದ್ದಾರೆ.

ಹಸಿ ಕಡಲೆ ಬೀಜ ತಂದು, ಅವುಗಳನ್ನು ಶುದ್ಧಗೊಳಿಸಿ, ನಮ್ಮಲ್ಲೇ ತಯಾರಿಸುವ ಮಸಾಲೆಯನ್ನು ಸೇರಿಸುತ್ತೇವೆ. ಚಿಕ್ಕ ಚಿಕ್ಕ ಪ್ಯಾಕೇಟ್​ಗಳನ್ನು ತಯಾರಿಸಿ ಬೇರೆ ದೇಶಗಳಿಗೆ, ರಾಜ್ಯಗಳಿಗೆ ರವಾನೆ ಮಾಡುತ್ತೇವೆ. ಗ್ರಾಹಕರಿಗೆ ಇಷ್ಟವಾದಂತಹ ಆಹಾರ ಪದಾರ್ಥವನ್ನು ನೀಡುವುದು ನಮಗೆ ಸಂತೋಷವನ್ನುಂಟು ಮಾಡುತ್ತದೆ ಎಂದು ಚಿಂತಾಮಣಿ ಕಡಲೆ ಬೀಜ ಉತ್ಪಾದಕ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಒಟ್ಟಿನಲ್ಲಿ, ಚಿಂತಾಮಣಿಯ ಕಡಲೆ ಬೀಜಗಳು ರುಚಿ ಹಾಗೂ ಗುಣಮಟ್ಟಕ್ಕೆ ಹೆಸರುವಾಸಿ. ಇದರಿಂದ, ಹೋಟೆಲ್, ಬಾರ್ ಆ್ಯಂಡ್ ರೆಸ್ಟೋರೆಂಟ್, ಬೇಕರಿ, ಹೋಲ್ ಸೇಲ್ ಡೀಲರ್​ಗಳು ತಮ್ಮ ಅಗತ್ಯಕ್ಕೆ ಅನುಗುಣವಾದ ಬೇಡಿಕೆ ಒಡ್ಡಿ ಮಸಾಲೆ ಕಡಲೆ ಬೀಜ ಖರೀದಿಸುತ್ತಾರೆ. ಚಳಿಗಾಲದ ಸಮಯದಲ್ಲಂತೂ ಜನರ ಚಿಂತಾಮಣಿ ಕಡಲೆ ಬೀಜಕ್ಕೆ ಮುಗಿಲು ಬೀಳುತ್ತಾರೆ.