AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಲಸ ಕೊಡಿಸೋ ನೆಪದಲ್ಲಿ 28.70 ಲಕ್ಷ ಪೀಕಿದ.. ವಂಚಕ ಸ್ವರೂಪ್​ ಶೆಟ್ಟಿ ವಿರುದ್ಧ ಮತ್ತೊಂದು ಕೇಸ್ ದಾಖಲು

ತಾನೊಬ್ಬ ಶ್ರೀಮಂತ ಎಂದು ಪರಿಚಯಿಸಿಕೊಂಡು ದೊಡ್ಡ ಕಂಪನಿಯಲ್ಲಿ ಕೆಲಸ ಕೊಡಿಸ್ತೀನಿ ಎಂದು ನಂಬಿಸಿ ಹಣ ಪೀಕುತ್ತಿದ್ದ ವಂಚಕ ಸ್ವರೂಪ್​ ಶೆಟ್ಟಿ ವಿರುದ್ಧ ಕಾಡುಗೋಡಿ ಠಾಣೆಯಲ್ಲಿ ಮತ್ತೊಂದು ಕೇಸ್ ದಾಖಲಾಗಿದೆ.

ಕೆಲಸ ಕೊಡಿಸೋ ನೆಪದಲ್ಲಿ 28.70 ಲಕ್ಷ ಪೀಕಿದ.. ವಂಚಕ ಸ್ವರೂಪ್​ ಶೆಟ್ಟಿ ವಿರುದ್ಧ ಮತ್ತೊಂದು ಕೇಸ್ ದಾಖಲು
ವಂಚಕ ಸ್ವರೂಪ್​ ಶೆಟ್ಟಿ
ಆಯೇಷಾ ಬಾನು
|

Updated on: Jan 14, 2021 | 3:20 PM

Share

ಬೆಂಗಳೂರು: ವಂಚಕ ಸ್ವರೂಪ್​ ಶೆಟ್ಟಿ ವಿರುದ್ಧ ಕಾಡುಗೋಡಿ ಠಾಣೆಯಲ್ಲಿ ಮತ್ತೊಂದು ಕೇಸ್ ದಾಖಲಾಗಿದೆ. ತಾನೊಬ್ಬ ಶ್ರೀಮಂತ ಎಂದು ಪರಿಚಯಿಸಿಕೊಂಡು ದೊಡ್ಡ ಕಂಪನಿಯಲ್ಲಿ ಕೆಲಸ ಕೊಡಿಸ್ತೀನಿ ಎಂದು ನಂಬಿಸಿ ಹಣ ಪೀತ್ತಿದ್ದ ಸ್ವರೂಪ್ ಮೇಲೆ ಮತ್ತೊಂದು ಕೇಸ್ ದಾಖಲಾಗಿದೆ.

ವಂಚಕ ಸ್ವರೂಪ್, ಸ್ಟಾರ್ ಹೋಟೆಲ್​ನಲ್ಲಿ ಕಿರಣ್ ಎಂಬುವವರನ್ನು ಪರಿಚಯ ಮಾಡಿಕೊಂಡಿದ್ದ. ಅವರ ಬಳಿ ತಾನೊಬ್ಬ ಶ್ರೀಮಂತ.  MNC ಕಂಪನಿಯಲ್ಲಿ CEO ಅಂತ ಹೇಳಿಕೊಂಡಿದ್ದ. ಹಾಗೂ ಪ್ರತಿಷ್ಠಿತ ಖಾಸಗಿ ಕಂಪನಿಯಲ್ಲಿ ಕಿರಣ್​ ತಮ್ಮನಿಗೆ ಕೆಲಸ ಕೊಡಿಸುವುದಾಗಿ ಹೇಳಿ ಕಿರಣ್ ಬಳಿ ಹಣ ಪಡೆದು ವಂಚನೆ ಮಾಡಿದ್ದಾನೆ ಎಂಬ ಆರೋಪವಿದೆ.

ನನ್ನ ಸ್ನೇಹಿತನಿಗೆ ಕಷ್ಟವಿದೆ ಆದ್ರೆ ಅವನಿಗೆ ಸಹಾಯ ಮಾಡ್ತೀನಿ ಅಂತ ಮಾತುಕೊಟ್ಟಿದ್ದೇನೆ. ಆದರೇ ನನ್ನ ಬ್ಯಾಂಕ್ ಅಕೌಂಟ್ ಐಟಿ ರೇಡ್ ನಿಂದ ಪ್ರೀಜ್ ಆಗಿದೆ ನನ್ನ ಸ್ನೇಹಿತನ ಅಕೌಂಟ್​ಗೆ ಹಣ ಹಾಕು ಎಂದು ಹೇಳಿ ಮೊದಲ ಹಂತದಲ್ಲಿ ಸ್ವರೂಪ್, ಕಿರಣ್​ನಿಂದ 2 ಲಕ್ಷ 40 ಸಾವಿರ ಹಣ ಜಮೆ ಮಾಡಿಸಿದ್ದಾನೆ. ಬಳಿಕ ಮತ್ತೊಂದು ಬಾರಿ 2 ಲಕ್ಷದ 30 ಲಕ್ಷ ಹಾಕಿಸಿಕೊಂಡಿದ್ದ. ನಂತರ ಮತ್ತೆ 9 ಲಕ್ಷ ಕ್ಯಾಷ್ ಅನ್ನು ಕಾಡುಗೋಡಿ ಬಸ್ ನಿಲ್ದಾಣದ ಬಳಿ ಭೇಟಿ ಮಾಡಿ ಪಡೆದುಕೊಂಡಿದ್ದ. ಇದಾದ ಬಳಿಕ ತನ್ನ ತಂದೆಗೆ ಹಾರ್ಟ್ ಅಟ್ಯಾಕ್ ಆಗಿದ್ದು, ಹಣ ಬೇಕು ಅಂತ 15 ಲಕ್ಷ ಹಣ ಅಕೌಂಟ್ ಮೂಲಕ ಪಡೆದಿದ್ದ. ಹಣ ಕೊಡದಿದ್ದರೇ ನಿನ್ನ ತಮ್ಮನಿಗೆ ಕೆಲಸ ಕೊಡಿಸುವುದಿಲ್ಲ ಅಂತ ಬ್ಲಾಕ್ ಮೇಲ್ ಮಾಡಿದ್ದ. ಈ ರೀತಿ ಹಂತ-ಹಂತವಾಗಿ 28 ಲಕ್ಷದ 70 ಸಾವಿರ ಹಣ ಪಡೆದು ಮೋಸ ಮಾಡಿದ್ದಾನೆ.

ಈ ಹಿಂದೆ ಕೂಡ ಹಾವೇರಿ ಮೂಲದ ಅರ್ಷದ್ ಎಂಬ ಹುಡುಗನನ್ನು ಬಂಧನದಲ್ಲಿರಿಸಿಕೊಂಡು 48 ಲಕ್ಷ ಪಡೆದಿದ್ದ. ಅದೇ ಕೇಸ್​ನಲ್ಲಿ ಕಾಡುಗೋಡಿ ಪೊಲೀಸರಿಂದ ಅರೆಸ್ಟ್ ಆಗಿದ್ದ. ಬಳಿಕ ಬೇರೊಂದು ಪ್ರಕರಣದಲ್ಲಿ ಆರೋಪಿ ಸ್ವರೂಪ್ ನನ್ನು ಬಾಡಿ ವಾರಂಟ್ ಮೂಲಕ ವಶಕ್ಕೆ ಪಡೆದಿದ್ದರು. ಸದ್ಯ ಈಗ ಈ ವಂಚಕನ ಮೇಲೆ ಮತ್ತೊಂದು ಕೇಸ್ ದಾಖಲಾಗಿದೆ.

ಹಣ ವಂಚನೆ ಆರೋಪ: ನಿರ್ಮಾಪಕ ಕೆ. ಮಂಜು ವಿರುದ್ಧ ಎಫ್ಐಆರ್​ ದಾಖಲು

Follow Us
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
ಗ್ಯಾಂಗ್ಸ್ ಆಫ್ ಯುಕೆ: ಎರಡನೇ ಇನ್ನಿಂಗ್ಸ್ ನಿರೀಕ್ಷೆಯಲ್ಲಿ ಒರಟ ಪ್ರಶಾಂತ್
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
6,6,6,6,6.. ಪಂಜಾಬ್ ವಿರುದ್ಧ ಅಬ್ಬರಿಸಿದ ಆಯುಷ್ ಮ್ಹಾತ್ರೆ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ರಂಗೇರಿದ ಚುನಾವಣಾ ಅಖಾಡ; ಪುದುಚೇರಿಯಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಅಧಿಕಾರಿ ಮೇಲೆ ಪಾಲಿಕೆ ಸದಸ್ಯನಿಂದ ಹಲ್ಲೆ: ಕಮಿಷನರ್ ಶಾಕಿಂಗ್‌ ರಿಯಾಕ್ಷನ್‌
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಜೈಪುರದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ, ಜನಜೀವನ ಅಸ್ತವ್ಯಸ್ತ
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಳೇ ಸೇಡು ತೀರಿಸಿಲು ದಾವಣಗೆರೆಯಲ್ಲಿ ಷಡ್ಯಂತ್ರ ನಡೆದಿದೆ ಎಂದ ಶ್ರೀರಾಮುಲು
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ಹಬ್ಬಳ್ಳಿ ಲವ್ ಜಿಹಾದ್​​​ಗೆ ಸ್ಫೋಟಕ ಟ್ವಿಸ್ಟ್:ಜಿಮ್ ಟ್ರೈನರ್​​ನ ಕಾಮಕಾಂಡ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ವೇದಿಕೆ ಮೇಲೆ ವಾಂತಿ: ಸಂತೋಷ್ ಹೆಗ್ಡೆ ಆರೋಗ್ಯದ ಬಗ್ಗೆ ಖಾದರ್ ಮಾಹಿತಿ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಶಿರಸಿ ಬಳಿ ಎರಡು ಬಸ್​​ಗಳ ನಡುವೆ ಭೀಕರ ಅಪಘಾತ: ಪ್ರಯಾಣಿಕರ ಸ್ಥಿತಿ ಗಂಭೀರ
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!
ಸಚಿವ ಮುನಿಯಪ್ಪ ಮೇಲೆ ಕೆಪಿಸಿಸಿ ವಕ್ತಾರ ಲಕ್ಷ್ಮಣ್​​ ಗರಂ!