ಮೆಚುರಿಟಿ ಹಣ ಕೇಳಲು ಹೋದ‌ ಯುವಕನನ್ನು ಕೂಡಿ ಹಾಕಿದ ಮ್ಯಾನೇಜರ್; ರಾತ್ರಿ 9 ರವರೆಗೆ ಬ್ಯಾಂಕನಲ್ಲೇ ಯುವಕ ಬಂಧಿ

ಸಹಾರಾ ಇಂಡಿಯಾ ಬ್ಯಾಂಕ್ ಮ್ಯಾನೇಜರ್ ತಿರುಪತಿ, ಯುವಕ ವಿಕಾಸ್​ ಮೇಲೆ ದರ್ಪ ತೋರಿದ್ದು, ಬ್ಯಾಂಕಿನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾರೆ. ನಿನ್ನೆ ಸಂಜೆ 5 ರಿಂದ ರಾತ್ರಿ 9ರವರೆಗೆ ಬ್ಯಾಂಕಲ್ಲೇ ವಿಕಾಸ್ ಬಂಧಿಯಾಗಿದ್ದಾನೆ.

ಮೆಚುರಿಟಿ ಹಣ ಕೇಳಲು ಹೋದ‌ ಯುವಕನನ್ನು ಕೂಡಿ ಹಾಕಿದ ಮ್ಯಾನೇಜರ್; ರಾತ್ರಿ 9 ರವರೆಗೆ ಬ್ಯಾಂಕನಲ್ಲೇ ಯುವಕ ಬಂಧಿ
ಬ್ಯಾಂಕ್ ಮ್ಯಾನೇಜರ್ ತಿರುಪತಿ
Follow us
TV9 Web
| Updated By: preethi shettigar

Updated on:Oct 24, 2021 | 8:00 AM

ಚಿತ್ರದುರ್ಗ: ಮೆಚುರಿಟಿ ಹಣ ಕೇಳಲು ಹೋದ‌ ಯುವಕನನ್ನು ಬ್ಯಾಂಕ್ ಒಳಗೆ ಕೂಡಿ ಹಾಕಿದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ. ಸಹಾರಾ ಇಂಡಿಯಾ ಬ್ಯಾಂಕ್ ಮ್ಯಾನೇಜರ್ ತಿರುಪತಿ, ಯುವಕ ವಿಕಾಸ್​ ಮೇಲೆ ದರ್ಪ ತೋರಿದ್ದು, ಬ್ಯಾಂಕಿನಲ್ಲಿ ಕೂಡಿ ಹಾಕಿ ಬೀಗ ಹಾಕಿದ್ದಾರೆ. ನಿನ್ನೆ ಸಂಜೆ 5 ರಿಂದ ರಾತ್ರಿ 9ರವರೆಗೆ ಬ್ಯಾಂಕಲ್ಲೇ ವಿಕಾಸ್ ಬಂಧಿಯಾಗಿದ್ದಾನೆ.

ರಾತ್ರಿ ನಗರ ಪೊಲೀಸರು ಸಹಾರಾ ಇಂಡಿಯಾ ಬ್ಯಾಂಕ್​ಗೆ ಬಂದ ಮೇಲೆ ವಿಕಾಸ್​ನನ್ನು ಬಿಡುಗಡೆ ಮಾಡಲಾಗಿದೆ. ಆದರೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮ್ಯಾನೇಜರ್ ತಿರುಪತಿ ಹೇಳುವುದೇ ಬೇರೆ. ಬ್ಯಾಂಕಿನ ವಹಿವಾಟು ವಿಚಾರ ಕೋರ್ಟಿನಲ್ಲಿ ವಿಚಾರಣೆ ನಡೆಯುತ್ತಿದೆ. ಕೋರ್ಟಿನಲ್ಲಿ ಪ್ರಕರಣ ಇತ್ಯರ್ಥ ಬಳಿಕ ಮೆಚುರಿಟಿ ಹಣ ನೀಡುತ್ತೇವೆ. ಈ ಬಗ್ಗೆ ಮಾಹಿತಿ ನೀಡಿದರೂ ವಿಕಾಸ್ ಹಠ ಹಿಡಿದು ಕುಳಿತರು. ಹೀಗಾಗಿ ಬ್ಯಾಂಕ್ ಸುರಕ್ಷತೆ ದೃಷ್ಟಿಯಿಂದ ಬೀಗ ಹಾಕಿದೇನೆ ಎಂದು ತಿಳಿಸಿದ್ದಾರೆ. ಚಿತ್ರದುರ್ಗ ನಗರ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಮಂಗಳೂರಿನ ಓನೆಕ್ಸ್ ಪಬ್ ಮೇಲೆ ಸಿಸಿಬಿ ಪೊಲೀಸರ ದಾಳಿ ನಿಗದಿತ ಸಮಯಕ್ಕಿಂತ ಹೆಚ್ಚು ತೆರೆಯಲಾಗಿದ್ದ ಪಬ್ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿದ್ದಾರೆ. ಮಂಗಳೂರಿನ ಎಂಜಿ ರಸ್ತೆಯಲ್ಲಿರುವ ಓನೆಕ್ಸ್ ಪಬ್​ನಲ್ಲಿ ಜೋರಾಗಿ ಧ್ವನಿವರ್ಧಕ ಬಳಸಿದ್ದು, ಅಕ್ಕಪಕ್ಕದವರಿಗೆ ಕಿರಿಕಿರಿ ಉಂಟುಮಾಡಿದೆ. ಅಲ್ಲದೇ ಪಬ್​ನಿಂದ ಹೊರಬರುವವರು ಅಶ್ಲೀಲವಾಗಿ ವರ್ತಿಸುವುದರಿಂದ ಅಕ್ಕಪಕ್ಕದ ನಿವಾಸಿಗಳಿಗೆ ಮತ್ತು ದೇವಸ್ಥಾನಕ್ಕೆ ಹೋಗಿ ಬರುವ ದಾರಿಯಲ್ಲಿ ಕಿರಿಕಿರಿ ಉಂಟಾಗುತ್ತಿದೆ. ಹೀಗಾಗಿ ಸಾರ್ವಜನಿಕರು ದೂರು ನೀಡಿದ್ದು, ಈ ದೂರಿನ ಆಧಾರದ ಮೇಲೆ ಪೊಲೀಸರು ಪಬ್ ಮೇಲೆ ದಾಳಿ ಮಾಡಿದ್ದಾರೆ.

ಮಂಗಳೂರು ಸಿಸಿಬಿ ಇನ್ಸ್​ಪೆಕ್ಟರ್​ ಮಹೇಶ್ ಪ್ರಸಾದ್ ಮತ್ತು ಬರ್ಕೆ ಪೊಲೀಸ್ ಠಾಣೆ ಇನ್ಸ್​ಪೆಕ್ಟರ್ ಜ್ಯೋತಿರ್ಲಿಂಗ ನೇತೃತ್ವದಲ್ಲಿ ದಾಳಿ ನಡೆಸಿದ್ದು, ದಾಳಿ ವೇಳೆ ಧ್ವನಿವರ್ಧಕಗಳನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಅಬಕಾರಿ ಕಾಯ್ದೆ, ಕೆಪಿ ಕಾಯ್ದೆ, ಎಪಿಡೆಮಿಕ್ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

 ಇದನ್ನೂ ಓದಿ: ಅಮರಿಂದರ್​ ಸಿಂಗ್​​ ಪಾಕ್​ ಗೆಳತಿ ಅರೂಸಾ ಅಲಂಗೆ ಐಎಸ್​ಐ ಲಿಂಕ್​ ಆರೋಪ; ಫೋಟೋ ಮೂಲಕ ಕಾಂಗ್ರೆಸ್​ಗೆ ತಿರುಗೇಟು ಕೊಟ್ಟ ಕ್ಯಾಪ್ಟನ್​

ವಿಜಯಪುರ: ಯುವಕನ ಕೊಲೆ; ಭೀಮಾತೀರದಲ್ಲಿ ಕೇಳಿಬಂತು ಮರ್ಯಾದೆ ಹತ್ಯೆ ಆರೋಪ

Published On - 7:58 am, Sun, 24 October 21

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ