POCSO Case 2ನೇ ಪೋಕ್ಸೋ ಪ್ರಕರಣದಲ್ಲೂ ಮುರುಘಾಶ್ರೀಗೆ ಸಿಗಲಿಲ್ಲ ಜಾಮೀನು
2ನೇ ಪೋಕ್ಸೋ ಪ್ರಕರಣದಲ್ಲೂ ಸಹ ಚಿತ್ರದುರ್ಗ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ, ಇದರಿಂದ ಶ್ರೀಗಳಿಗೆ ಜೈಲೇ ಗತಿಯಾಗಿದೆ.
ಚಿತ್ರದುರ್ಗ: ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ 2ನೇ ಪೋಕ್ಸೋ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರದುರ್ಗದ ಮುರುಘಾಶ್ರೀ ಜಾಮೀನು ಅರ್ಜಿ ವಜಾಗೊಂಡಿದೆ. 2ನೇ ಪೋಕ್ಸೋ ಪ್ರಕರಣದಲ್ಲಿ ಡಾ.ಶಿವಮೂರ್ತಿ ಮುರುಘಾ ಶರಣರ(Shivamurthy Sharanaru ) ಜಾಮೀನು ಅರ್ಜಿ ವಜಾಗೊಳಿಸಿ ಚಿತ್ರದುರ್ಗ (Chitradurga) 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಇಂದು(ಡಿಸೆಂಬರ್ 01) ಆದೇಶ ಹೊರಡಿಸಿದೆ.
ಈಗಾಗಲೇ ಮೊದಲನೇ ಪೋಕ್ಸೋ ಪ್ರಕರಣದಲ್ಲಿ ಜೈಲುಪಾಲಾಗಿರುವ ಮುರುಘಾ ಶ್ರೀಗಳ ವಿರುದ್ಧ ಅಕ್ಟೋಬರ್ 13ರಂದು 2ನೇ ಫೋಕ್ಸೋ ಕೇಸ್ ದಾಖಲಾಗಿತ್ತು. ಆಗಷ್ಟ್ 26ರಂದು 1ನೇ ಫೋಕ್ಸೋ ಪ್ರಕರಣ ದಾಖಲಾಗಿತ್ತು. ಬಳಿಕ ಮುರುಘಾಶ್ರೀಗಳನ್ನ ಸೆಪ್ಟೆಂಬರ್ 1ರಂದು ಪೊಲೀಸರು ಬಂಧಿಸಿದ್ದು,. ಕಳೆದ 3ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇದನ್ನೂ ಓದಿ: ಚಿತ್ರದುರ್ಗ ಮುರುಘಾಶ್ರೀ ಕಾಮಚೇಷ್ಟೆ ಬಯಲಿಗೆಳೆದ ಒಡನಾಡಿ ಸಂಸ್ಥೆ ಬಾಯಿ ಮುಚ್ಚಿಸಲು 3 ಕೋಟಿ. ರೂ ಆಫರ್
ಮತ್ತೊಂದು ಆರೋಪ
ಮುರುಘಾ ಮಠದ ಹಾಸ್ಟೆಲ್ನಲ್ಲಿ ವಾಸವಿದ್ದ 22 ಅನಾಥ ಮಕ್ಕಳು ನಾಪತ್ತೆಯಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ನಾಪತ್ತೆಯಾಗಿರುವವರ ಪೈಕಿ 14 ಹೆಣ್ಣು ಹಾಗೂ 8 ಗಂಡು ಮಕ್ಕಳಿದ್ದಾರೆ. ಅನಾಥ ಮಕ್ಕಳು ಮಠಕ್ಕೆ ಸಿಕ್ಕಿದ್ದು ಹೇಗೆ? ಅನಾಥ ಮಕ್ಕಳನ್ನು ಸಾಕಲು ಸರ್ಕಾರದಿಂದ ಅನುಮತಿ ಪಡೆಯಲಾಗಿತ್ತೇ ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ. ‘ಬಸವ ಕುಟೀರ’ಕ್ಕೆ ಈ ಹಿಂದೆ ಸರ್ಕಾರದಿಂದ ಅನುದಾನ ಸಿಗುತ್ತಿತ್ತು. ಅದರೆ 2012ರಲ್ಲಿ ಈ ಅನುದಾನವನ್ನು ಶಿವಮೂರ್ತಿ ಮುರುಘಾ ಶರಣರು ನಿರಾಕರಿಸಿದ್ದರು. ಸರ್ಕಾರದ ಅನುದಾನ ಬಳಕೆ ಮಾಡಿಕೊಳ್ಳದ ಸಂಸ್ಥೆಯ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನ ನೀಡುತ್ತಿರಲಿಲ್ಲ. ಹೀಗಾಗಿ ಮಕ್ಕಳು ನಾಪತ್ತೆಯಾದ ವಿಚಾರವೂ ತಡವಾಗಿ ಬೆಳಕಿಗೆ ಬಂದಿದೆ.
ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ