ವರದಕ್ಷಿಣೆ ಆಸೆಗೆ 8 ವರ್ಷದಿಂದ ಪ್ರೀತಿಸಿದ ಯುವತಿಗೆ ಕೈಕೊಡಲು ಮುಂದಾದ ಶಿಕ್ಷಕ: ಮುಂದೇನಾಯ್ತು?

ವರದಕ್ಷಿಣೆ ಆಸೆಗೆ ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಯುವತಿಗೆ ಶಿಕ್ಷಕ ಮೋಸ ಮಾಡಲು ಮುಂದಾಗಿದ್ದ. ಇದನ್ನ ತಿಳಿದ ಯುವತಿ ದೂರು ನೀಡಿದ್ದರು. ವಿಚಾರಣೆ ಬಳಿಕ ಮದುವೆ ಆಗಲು ಒಪ್ಪಿದ ಹಿನ್ನಲೆ ಪೊಲೀಸರ ಸಮ್ಮುಖದಲ್ಲೇ ಮದುವೆ ಮಾಡಿಸಲಾಗಿದೆ. ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ಘಟನೆ ನಡೆದಿದೆ.

ವರದಕ್ಷಿಣೆ ಆಸೆಗೆ 8 ವರ್ಷದಿಂದ ಪ್ರೀತಿಸಿದ ಯುವತಿಗೆ ಕೈಕೊಡಲು ಮುಂದಾದ ಶಿಕ್ಷಕ: ಮುಂದೇನಾಯ್ತು?
35
Image Credit source: tv9 kannada
Edited By:

Updated on: Feb 27, 2026 | 6:07 PM

ಚಿತ್ರದುರ್ಗ, ಫೆಬ್ರವರಿ 27: ಪೊಲೀಸರ ಸಮ್ಮುಖದಲ್ಲಿ ಪ್ರೇಯಸಿಗೆ ಶಿಕ್ಷಕ (Teacher) ತಾಳಿ ಕಟ್ಟಿರುವಂತಹ ಘಟನೆ ಚಿತ್ರದುರ್ಗ ತಾಲೂಕಿನ ಭರಮಸಾಗರ ಪೊಲೀಸ್ ಠಾಣೆ ಬಳಿ ದೇವಸ್ಥಾನದಲ್ಲಿ ನಡೆದಿದೆ. 8 ವರ್ಷದಿಂದ ಪ್ರೀತಿಸಿ ಬಳಿಕ  ಶಿಕ್ಷಕ ಹರೀಶ್ ವಂಚನೆಗೆ ಯತ್ನಿಸಿದ ಆರೋಪ ಕೇಳಿಬಂದಿತ್ತು. ಹರೀಶ್ ವಿರುದ್ಧ ಭರಮಸಾಗರ ಠಾಣೆಗೆ ಕಾವ್ಯಾ ದೂರು ನೀಡಿದ್ದರು. ಹೀಗಾಗಿ ಪೊಲೀಸರ ಸಮ್ಮುಖದಲ್ಲಿ ಚರ್ಚೆ ವೇಳೆ ಒಪ್ಪಿದ ಹಿನ್ನಲೆ ಇಬ್ಬರಿಗೂ ಮದುವೆ ಮಾಡಿಸಲಾಗಿದೆ.

ನಡೆದಿದ್ದೇನು? 

ಚಿತ್ರದುರ್ಗ ತಾಲೂಕಿನ ತಣಿಗೆಹಳ್ಳಿಯ ಹರೀಶ್​ ಪರಶುರಾಂಪುರ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ಇಸಾಮುದ್ರ ಗೊಲ್ಲರಹಟ್ಟಿ ಕಾವ್ಯಾ ಮತ್ತು ಹರೀಶ್ ಸಂಬಂಧಿಕರಾಗಿದ್ದು 8 ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇತ್ತೀಚೆಗೆ  ನಿಶ್ಚಿತಾರ್ಥ ಕೂಡ ಆಗಿತ್ತು.

ಇದನ್ನೂ ಓದಿ: ಅನ್ಯಕೋಮಿನ ಯುವಕನಿಂದ ಚಾಕು ಇರಿತ: ಸಿಡಿದೆದ್ದ ಹಿಂದೂ ಸಂಘಟನೆಗಳು, ಚಿತ್ರದುರ್ಗ ರಣಾಂಗಣ

ಈ ಮಧ್ಯೆ ವರದಕ್ಷಿಣೆ ಆಸೆಗೆ ಹರೀಶ್ ಬೇರೆ ಯುವತಿ ಜೊತೆ ಮದುವೆಗೆ ಸಿದ್ಧತೆ ನಡೆಸಿದ್ದರು ಎನ್ನಲಾಗಿದೆ. ಹೀಗಾಗಿ ಹರೀಶ್ ವಿರುದ್ಧ ಭರಮಸಾಗರ ಠಾಣೆಗೆ ಕಾವ್ಯಾ ದೂರು ನೀಡಿದ್ದಾರೆ. ಹರೀಶ್ ವಿರುದ್ಧ ಕಾವ್ಯಾ ಮತ್ತು ಪೋಷಕರು ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು. ಇನ್ನು ಶಿಕ್ಷಕ ಹರೀಶ್​ನನ್ನು ಠಾಣೆಗೆ ಕರೆಸಿದ ಪೊಲೀಸರು ವಿಚಾರಣೆ ಮಾಡಿದ್ದಾರೆ. ಈ ವೇಳೆ ಪೊಲೀಸರ ಸಮ್ಮುಖದಲ್ಲಿ ಚರ್ಚೆ ವೇಳೆ ಕಾವ್ಯಾರನ್ನು ವಿವಾಹವಾಗಲು ಹರೀಶ್ ಒಪ್ಪಿದ್ದು, ಅಲ್ಲೇ ಪೊಲೀಸ್ ಠಾಣೆ ಬಳಿ ದೇಗುಲದಲ್ಲಿ ಪೊಲೀಸರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ.

ಪೋಷಕರ ವಿರೋಧದ ಆತಂಕ: ರಕ್ಷಣೆ ಕೋರಿ ಎಸ್​ಪಿ ಕಚೇರಿ ಮೆಟ್ಟಿಲೇರಿದ ನವಜೋಡಿ

ಪ್ರೀತಿಸಿ ಮದುವೆಯಾದ ಜೋಡಿಗೆ ಪೋಷಕರ ವಿರೋಧದ ಆತಂಕ ಹಿನ್ನಲೆ ಕೊಪ್ಪಳ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಕಚೇರಿಗೆ ನವಜೋಡಿ ಆಗಮಿಸಿದ ಘಟನೆ ನಡೆದಿದೆ. ಮನೆಯವರು ವಿರೋಧಿಸುವ ಆತಂಕ ಇದೆ, ಹೀಗಾಗಿ ರಕ್ಷಣೆ ಬೇಕು ಅಂತ ಚಿನ್ಮಯಿ ಮತ್ತು ಬಸವರಾಜ್ ಮೇಟಿ ಜೋಡಿ ಎಸ್​ಪಿ ಕಚೇರಿ ಮೆಟ್ಟಿಲೇರಿದ್ದಾರೆ.

ಇದನ್ನೂ ಓದಿ: ಸಾಮೂಹಿಕ ಅತ್ಯಾಚಾರ ಪ್ರಕರಣ ತನಿಖೆ ವೇಳೆ ಬೆಚ್ಚಿಬಿದ್ದ ಖಾಕಿ: ವಿದ್ಯಾರ್ಥಿನಿಯರನ್ನೇ ಗುರಿಯಾಗಿಸಿಕೊಂಡಿದ್ದ ಮಾದಕ ಜಾಲ ಬಯಲು

ನವಜೋಡಿ ಕೊಪ್ಪಳ ಜಿಲ್ಲೆಯ ಕುಕನೂರ ತಾಲೂಕಿನ ನಿವಾಸಿಗಳು. ಚಿನ್ಮಯಿ‌ ಬ್ರಾಹ್ಮಣ ಸಮುದಾಯಕ್ಕೆ ಸೇರಿದ್ದು, ಬಸವರಾಜ್ ಮೇಟಿ ಲಿಂಗಾಯತ ಸಮುದಾಯಕ್ಕೆ ಸೇರಿದ ಯುವಕ. ಹುಬ್ಬಳ್ಳಿಯಲ್ಲಿ ಜನವರಿ 14ರಂದು ಮದುವೆ ಆಗಿದ್ದಾರೆ. ಇದೀಗ ಚಿನ್ಮಯಿ ಕುಟುಂಬದವರು ವಿರೋಧ ಮಾಡುವ ಆತಂಕ ಹಿನ್ನಲೆ ಕೊಪ್ಪಳ ಎಸ್​ಪಿ ಕಚೇರಿಗೆ ಬಂದಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More
Follow Us