ಅಗ್ನಿ ನರ್ತನಕ್ಕೆ ಅಪ್ಪ, ಅಮ್ಮ, ಮಗಳು ಸಜೀವ ದಹನ: ಹತ್ತಾರು ಸಂಶಯ!

ಅಗ್ನಿ ನರ್ತನಕ್ಕೆ ಅಪ್ಪ, ಅಮ್ಮ, ಮಗಳು ಸಜೀವ ದಹನ: ಹತ್ತಾರು ಸಂಶಯ!

ಚಿತ್ರದುರ್ಗ: ನಗರದ ಗಾರೆಹಟ್ಟಿ ಬಡಾವಣೆಯಲ್ಲಿ ಕೆಲವರು ಆಗ್ತಾನೆ ನಿದ್ರೆಯಿಂದ ಎದ್ದು ಕಣ್ ಒರಿಸಿಕೊಂಡು ಮನೆಯಿಂದ ಹೊರ ಬಂದಿದ್ರಷ್ಟೇ. ಈ ವೇಳೆ ಶಾಕ್ ಆಗಿ ಹೋಗಿದ್ರು. ಯಾಕಂದ್ರೆ, ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ದೊಡ್ಡ ದುರಂತವೇ ನಡೆದುಬಿಟ್ಟಿತ್ತು. ಅಗ್ನಿ ನರ್ತನಕ್ಕೆ ಅಪ್ಪ, ಅಮ್ಮ ಹಾಗೂ 13 ವರ್ಷದ ಹುಡುಗಿ ಸಜೀವವಾಗಿ ದಹನವಾಗಿಬಿಟ್ಟಿದ್ರು. ಇಲ್ಲಿ ಮೊದ ಮೊದ್ಲು ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದೆ. ಅದ್ರಿಂದ್ಲೇ ಒಂದು ಕುಟುಂಬ ಸಾವಿನ ಮನೆ ಸೇರಿದೆ ಎನ್ನಲಾಗಿತ್ತು. ಆದ್ರೆ, ಸಿಲಿಂಡರ್ ನೋಡಿದ್ರೆ ಚೆನ್ನಾಗಿಯೇ ಇತ್ತು. ಹೀಗಾಗಿ ಹತ್ತಾರು ಸಂಶಯದ ಪ್ರಶ್ನೆಗಳು ಹುಟ್ಟಿಕೊಂಡಿದೆ.

ಖಾಸಗಿ ಬಸ್ ಚಾಲಕನಾಗಿ ಕೆಲಸ ಅರುಣ್ ಮಾಡ್ತಿದ್ದ. ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಲತಾ ಸೇವೆ ಸಲ್ಲಿಸ್ತಿದ್ರು. ಇವರಿಬ್ಬರ ಮುದ್ದಿನ ಮಗಳು ಇದೇ ಅಮೃತಾ. ಪ್ರಾರಂಭದಲ್ಲಿ ಸಂಸಾರ ಚೆನ್ನಾಗಿಯೇ ಇತ್ತು. ಮೂವರು ಖುಷಿಯಾಗಿ ಕಾಲ ಕಳೀತಿದ್ರು. ಆದ್ರೆ, ಕೆಲ ವರ್ಷಗಳಿಂದ ಅರುಣ್​ಗೆ ಮಹಿಳೆಯರ ಸಹವಾಸ ಹೆಚ್ಚಾಗಿತ್ತಂತೆ. ಇದ್ರಿಂದ ಗಂಡ, ಹೆಂಡ್ತಿ ನಡುವೆ ಜಗಳ ಶುರುವಾಗಿತ್ತು. ಅಲ್ದೆ, ಇಬ್ಬರು ವಿಚ್ಛೇದನಕ್ಕಾಗಿ ಕೋರ್ಟ್ ಮೊರೆ ಹೋಗಿದ್ರು. ಆವತ್ತಿನಿಂದ ಅರುಣ್ ಹೆಂಡ್ತಿಯನ್ನ ಬಿಟ್ಟು ಹೋಗಿದ್ದ. ಆಗಾಗ ಮಾತ್ರ ಮನೆಗೆ ಬರ್ತಿದ್ದನಂತೆ.

ಮುಂಜಾನೆ ಸಮಯ.. ದಟ್ಟ ಹೊಗೆ.. ಆಗಿದ್ದು ಘನ ಘೋರ!
ಅದ್ರಂತೆ ಬೆಳಗ್ಗೆ 6 ಗಂಟೆಗೆ ಮನೆಗೆ ಬಂದ ಅರುಣ್, ಹೆಂಡ್ತಿ ಹಾಗೂ ಮಗಳಿಗೆ ಸೀಮೆಎಣ್ಣೆ ಸುರಿದು ಕೊಂದಿದ್ದಾನೆ. ಈ ವೇಳೆ ಅರುಣ್​ಗೂ ಬೆಂಕಿ ತಾಗಿ ಸತ್ತಿದ್ದಾನೆ ಅಂತಾ ಮೃತ ಲತಾ ಸಹೋದರಿ ಆರೋಪ ಮಾಡ್ತಿದ್ದಾರೆ. ಒಟ್ನಲ್ಲಿ, ಗಂಡ, ಹೆಂಡ್ತಿ ಜಗಳವೋ ಅಥವಾ ಬೇರೆ ಏನಾದ್ರೂ ರೀಸನ್ ಇದ್ಯೋ ಗೊತ್ತಿಲ್ಲ. ಆದ್ರೆ, ಇಲ್ಲಿ ಒಂದು ಕುಟುಂಬವೇ ಸರ್ವನಾಶ ಆಗಿದೆ. ನೂರಾರು ಕನಸು ಕಂಡಿದ್ದ 13 ವರ್ಷದ ಹುಡುಗಿ ನರಕಯಾತನೆ ಅನುಭವಿಸಿ ಬಾರದ ಲೋಕ ಸೇರಿದ್ದಾಳೆ.

Click on your DTH Provider to Add TV9 Kannada