ಪ್ರಧಾನಿ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ, ಚಿತ್ರದುರ್ಗ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್​ಐಆರ್

ಪ್ರಧಾನಿ ಮೋದಿ ಬಗ್ಗೆ ಅವಾಚ್ಯ ಶಬ್ದ ಬಳಸಿ ಏಕವಚನದಲ್ಲಿ ಬೈದಿದ್ದ ಚಿತ್ರದುರ್ಗ ಕಾಂಗ್ರೆಸ್ ಮುಖಂಡ, ಕಾರ್ಮಿಕರ ಕಲ್ಯಾಣ ಮಂಡಳಿ ಅದ್ಯಕ್ಷ ಜಿ ಎಸ್ ಮಂಜುನಾಥ್ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಚಿತ್ರದುರ್ಗ ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ನೀಡಿದ ದೂರಿನ ಮೇರೆಗೆ ಎಫ್​ಐಆರ್ ದಾಖಲಾಗಿದೆ.

ಪ್ರಧಾನಿ ಮೋದಿ  ವಿರುದ್ಧ ವಿವಾದಾತ್ಮಕ ಹೇಳಿಕೆ, ಚಿತ್ರದುರ್ಗ ಕಾಂಗ್ರೆಸ್ ಮುಖಂಡನ ವಿರುದ್ಧ ಎಫ್​ಐಆರ್
ಜಿ ಎಸ್ ಮಂಜುನಾಥ್
Follow us
TV9 Web
| Updated By: ರಮೇಶ್ ಬಿ. ಜವಳಗೇರಾ

Updated on:Mar 11, 2024 | 7:48 PM

ಚಿತ್ರದುರ್ಗ, ಮಾರ್ಚ್ 11): ನರೇಂದ್ರ ಮೋದಿ (Narendra Modi) ನನ್ನ ಕೈಗೆ ಸಿಕ್ರೆ ಕಾಲಲ್ಲಿರೋದು ತೆಗೆದು ಹೊಡೀತಿನಿ ಎಂದು ಹೇಳಿಕೆ ನೀಡಿದ್ದ ಕಾರ್ಮಿಕರ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ ಜಿ.ಎಸ್ ಮಂಜುನಾಥ್ ವಿರುದ್ಧ ಇದೀಗ ದೂರು ದಾಖಲಾಗಿದೆ. ಚಿತ್ರದುರ್ಗ(Chitradruga) ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಕಲ್ಲೇಶಯ್ಯ ಅವರು ನೀಡಿದ ದೂರಿನ ಅನ್ವಯ ಕಾಂಗ್ರೆಸ್ ಮುಖಂಡ ಜಿಎಸ್ ಮಂಜುನಾಥ್ ವಿರುದ್ಧ ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದೆ.

ಹಿರಿಯೂರಲ್ಲಿ ಸಮುದಾಯ ಭವನ ಉದ್ಘಾಟನೆ ವೇಳೆ ಮಾತನಾಡಿದ್ದ ಮಂಜನಾಥ್, ಚುನಾವಣೆ (Lok Sabha Elections 2024) ವೇಳೆ ಸಿಲಿಂಡರ್ ದರ 100 ರೂ. ಕಡಿಮೆ ಮಾಡಿದ್ದಾರೆ. ನನಗೇನಾದರು ಸಿಕ್ಕರೆ ಕಾಲಿನಲ್ಲಿರುವುದು ತೆಗೆದು ಹೊಡೆಯುತ್ತಿದ್ದೆ ಎಂದು ಪ್ರಧಾನಿ ಮೋದಿ (Narendra Modi) ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆ ಭಾರೀ ವೈರಲ್ ಆಗಿದ್ದು, ಮಂಜುನಾಥ್ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಈಗ  ಕಲ್ಲೇಶಯ್ಯ  ಎನ್ನುವರು ಮಂಜುನಾಥ್ ವಿರುದ್ಧ ದೂರು ನೀಡಿದ್ದು, ಪ್ರದಾನಿ ಹುದ್ದೆಗೆ ಅಪಮಾನ, ಶಾಂತಿ ಕದಡುವ ಹೇಳಿಕೆ ನೀಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಆಗ್ರಹಿಸಿದ್ದಾರೆ.

ಅಷ್ಟಕ್ಕೂ ಮುಂಜುನಾಥ್ ಹೇಳಿದ್ದೇನು?

ಹಿರಿಯೂರಿನಲ್ಲಿ ನಡೆದಿದ್ದ ಡಾ. ಬಿಆರ್ ಅಂಬೇಡ್ಕರ್, ಬಾಬು ಜಗಜೀನವರಾಂ ಸಮುದಾಯ ಭವನ ಉದ್ಘಾಟನಾ ಕಾರ್ಯಕ್ರಮದಲ್ಲಿ ಜಿ.ಎಸ್ ಮಂಜುನಾಥ್ ಭಾಗವಹಿಸಿದ್ದರು. ಈ ವೇಳೆ ಮಾತನಾಡುವಾಗ, ಲೋಕಸಭೆ ಚುನಾವಣೆ ಬರ್ತಿದ್ದಂತೆ ಸಿಲಿಂಡರ್ ಬೆಲೆ 100 ರೂಪಾಯಿ ಕಡಿಮೆ ಮಾಡಿದ್ದಾರೆ. ಈಗ್ಯಾಕಲೇ ಮಾಡ್ತಿಯಾ ಎಂದು ಏಕ ವಚನದಲ್ಲೇ ವಾಗ್ದಾಳಿ ನಡೆಸಿದ್ದರು.

ಈ ದೇಶದ ಪ್ರಜೆಗಳಾಗಿ ನಾವೆಲ್ಲ ಪ್ರಶ್ನೆ‌ ಮಾಡಬೇಕು. ಇಷ್ಟು ದಿನ 95 ಸಾವಿರ ಒಂದು ಲಕ್ಷ ಮುಖಕ್ಕೆ ಹೊಡೆದು ಕಿತ್ಕೊಂಡು ಈಗ 100 ಫ್ರೀ ಅಂತಿದ್ದಾನೆ. 465 ರೂಪಾಯಿ ಇದ್ದ ಸಿಲಿಂಡರ್ ಬೆಲೆ 1200 ರೂ ಯಾಕೆ ಮಾಡಿದೆ ಎಂದು ನಾವು ಪ್ರಶ್ನೆ ಮಾಡಬೇಕು. ಚುನಾವಣೆ ಆದ ಮೇಲೆ ಸಿಲಿಂಡರ್ ದರ 1400 ರೂಪಾಯಿ ಮಾಡ್ತೀಯಾ ಎಂದು ಪ್ರಶ್ನೆ ಮಾಡಬೇಕು. ಲಕ್ಷ ರೂಪಾಯಿ ನಮ್ಮಿಂದ ದೋಚಿ, ನೂರು ಸಿಲಿಂಡರ್ ರೇಟ್ ಕಡಿಮೆ ಮಾಡಿದ್ರು ಎಂದು ಜಿ.ಎಸ್ ಮಂಜುನಾಥ್ ಕಿಡಿಕಾರಿದ್ದರು.

ನಂತರ ಮಾತು ಮುಂದುವರೆಸಿದ್ದ ಕಾರ್ಮಿಕರ ಕಲ್ಯಾಣ ಮಂಡಳಿಯ ಉಪಾಧ್ಯಕ್ಷ, ನಾವು ದೇವಸ್ಥಾನ ಕಟ್ಟಲಿಲ್ಲ, ನಾವು ಅದನ್ನು ವಿರೋಧ ಮಾಡಿಲ್ಲ, ನಮ್ಮ ಸಂಸ್ಕೃತಿಯೂ ಅದಲ್ಲ. ನಾವು ಯೂನಿವರ್ಸಿಟಿಗಳನ್ನು ಕಟ್ಟಿದ್ದೇವೆ. ಅದರಲ್ಲಿ ಕಲಿತವರೇ ಈಗ ಬಿಜೆಪಿಯಲ್ಲಿ ನಿಂತು, ಕಾಂಗ್ರೆಸ್ ಏನು ಮಾಡಿದೆ ಎಂದು ಪ್ರಶ್ನೆ ಮಾಡ್ತಿದ್ದಾರೆ. ಈ ಬಗ್ಗೆ ಕಾಂಗ್ರೆಸ್​​ನವರು, ದೇಶದ ಪ್ರಜೆಗಳು ಮಾತನಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:45 pm, Mon, 11 March 24

ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ