AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪರಸ್ತ್ರೀಯರ ವ್ಯಾಮೋಹವಿದ್ದ ಪತಿರಾಯ, ಅದನ್ನ ಪ್ರಶ್ನಿಸುತ್ತಿದ್ದ ತನ್ನ ಪತ್ನಿಯನ್ನು ಗೋಡೆಗೆ ಹೊಡೆದು ಸಾಯಿಸಿದ!

extra marital affair: ಚಿತ್ರದುರ್ಗದಲ್ಲಿ ಫೋಟೋಗ್ರಾಫರ್ ಆಗಿದ್ದ ಯರಿಸ್ವಾಮಿ ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದು ಪತ್ನಿಯ ಮೇಲೆ ಘೋರ ಕೃತ್ಯವೆಸಗಿದ್ದಾನೆ. ಪತಿಯೇ ದೇವರೆಂದು ನಂಬಿಕೊಂಡಿದ್ದ ಅಮಾಯಕಳ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ.

ಪರಸ್ತ್ರೀಯರ ವ್ಯಾಮೋಹವಿದ್ದ ಪತಿರಾಯ, ಅದನ್ನ ಪ್ರಶ್ನಿಸುತ್ತಿದ್ದ ತನ್ನ ಪತ್ನಿಯನ್ನು ಗೋಡೆಗೆ ಹೊಡೆದು ಸಾಯಿಸಿದ!
ಪತ್ನಿಯನ್ನು ಗೋಡೆಗೆ ಹೊಡೆದು ಸಾಯಿಸಿದ!
TV9 Web
| Edited By: |

Updated on: Apr 11, 2023 | 2:38 PM

Share

ಆ ಜೋಡಿಗೆ ಆರು ವರ್ಷದ ಹಿಂದಷ್ಟೇ ಮದುವೆ ಆಗಿತ್ತು. ಮುದ್ದಾದ ಇಬ್ಬರು ಗಂಡು ಮಕ್ಕಳು ಸುಂದರ ಸಂಸಾರಕ್ಕೆ ಸಾಕ್ಷಿಯಾಗಿದ್ದರು. ಆದ್ರೆ, ಪತಿಗೆ (husband) ಮಾತ್ರ ಪರಸ್ತ್ರೀಯರ ವ್ಯಾಮೋಹವಿತ್ತು (extra marital affair). ಪ್ರಶ್ನಿಸಿದ ಪತ್ನಿಯನ್ನೇ (wife) ಪತಿರಾಯ ತೀವ್ರ ಹಲ್ಲೆ ಮಾಡಿ ಹತ್ಯೆ ಮಾಡಿರುವ ಘಟನೆ ಕೋಟೆನಾಡಿನಲ್ಲಿ ನಡೆದಿದೆ. ಮೃತಳ ಸಂಬಂಧಿಕರು ಇದರಿಂದ ಕಂಗಾಲಾಗಿದ್ದಾರೆ. ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ. ಈ ದೃಶ್ಯಗಳು ಕಂಡು ಬಂದಿದ್ದು ಚಿತ್ರದುರ್ಗ ನಗರದ (chitradurga) ಗೋಪಾಲಪುರ ರಸ್ತೆಯ ಬಡಾವಣೆಯಲ್ಲಿ. ಈ ಕುರಿತು ಒಂದು ವರದಿ.

ಹೌದು, ಸುಮಾರು ಆರು ವರ್ಷದ ಹಿಂದೆ ಮೊಳಕಾಲ್ಮೂರು ತಾಲೂಕಿನ ಕೋನಸಾಗರ ಗ್ರಾಮದ ಯರಿಸ್ವಾಮಿ, ಚಿತ್ರದುರ್ಗ ತಾಲೂಕಿನ ಕೋಡಯ್ಯನಹಟ್ಟಿಯ ರೋಜಾ ಜತೆ ಮದುವೆ ಆಗಿತ್ತು. ಪೋಷಕರ ಆಶಯದಂತೆ ಪದವಿ ಓದಿದ್ದ ರೋಜಾ, ಫೋಟೋಗ್ರಾಫರ್ ಯರಿಸ್ವಾಮಿ ಜತೆ ಮದುವೆ ಆಗಿದ್ದಳು. ಚಿನ್ನಾಭರಣ, ವರದಕ್ಷಿಣೆ ನೀಡಿ ಪೋಷಕರು ಮದುವೆ ಮಾಡಿದ್ದರು. ಬಳಿಕ ಚಿತ್ರದುರ್ಗ ನಗರದ ಗೋಪಾಲಪುರ ರಸ್ತೆಯ ಬಡಾವಣೆಯಲ್ಲಿ ಮನೆ ಮಾಡಿಕೊಂಡು ವಾಸವಾಗಿದ್ದರು.

ಸುಂದರ ಸಂಸಾರಕ್ಕೆ ಇಬ್ಬರು ಗಂಡು ಮಕ್ಕಳು ಜತೆಯಾಗಿದ್ದರು. ಆದ್ರೆ, ವರ್ಷಗಳು ಸವೆದಂತೆ ಸ್ತ್ರೀಲೋಲನಾಗಿದ್ದ ಯರಿಸ್ವಾಮಿಯ ಮುಖವಾಡ ಬಯಲಾಗಿತ್ತು. ಪರಸ್ತ್ರೀಯರ ಸಂಘ ಮಾಡಿದ್ದ ಯರಿಸ್ವಾಮಿ ಪತ್ನಿ ಮೇಲೆ ದೌರ್ಜನ್ಯ ನಡೆಸುತ್ತಿದ್ದನು. ಅನೇಕ ಸಲ ಸಂಬಂಧಿಕರು ಬುದ್ಧಿವಾದ ಹೇಳಿದರೂ ಕೇಳಿರಲಿಲ್ಲ. ಆದ್ರೆ, ನಿನ್ನೆ ರಾತ್ರಿ ವೇಳೆ ಅನಾಚಾರವನ್ನು ಪ್ರಶ್ನಿಸಿದ ಪತ್ನಿಯ ಮೇಲೆಯೇ ರಾಕ್ಷಸ ಕೃತ್ಯವೆಸಗಿದ ಯರಿಸ್ವಾಮಿ ಮನಸೋ ಇಚ್ಛೆ ಹೊಡೆದು ಗೋಡೆಗೆ ತಳ್ಳಿದ್ದಾನೆ. ಬಳಿಕ, ತಲೆಯಲ್ಲಿ ರಕ್ತಸ್ರಾವ ಆಗುವುದು ಕಂಡು ಆಟೋದಲ್ಲಿ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾನೆ. ಆದ್ರೆ, ವೈದ್ಯರು ರೋಜಾ ಉಸಿರು ಚೆಲ್ಲಿದ್ದಾಳೆಂದು ಹೇಳುತ್ತಿದ್ದಂತೆ ಎಸ್ಕೇಪ್ ಆಗಿದ್ದಾನೆ.

ಇನ್ನು ಚಿತ್ರದುರ್ಗ ನಗರ ಠಾಣೆ ಪೊಲೀಸ್ರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಯರಿಸ್ವಾಮಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಪತ್ತೆಗೆ ಪೊಲೀಸ್ರು ಬಲೆ ಬೀಸಿದ್ದಾರೆ. ಮೃತಳ ಕುಟುಂಬಸ್ಥರು ಹಾಗೂ ಗೆಳತಿಯರು ಪತಿಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ಯುವತಿಯರ ಜತೆಗೆ ಯರಿಸ್ವಾಮಿ ಸಂಬಂಧ ಇರಿಸಿಕೊಂಡಿದ್ದು ಅವರು ಸಹ ರೋಜಾ ಜತೆ ಗಲಾಟೆ ನಡೆಸಿದ್ದಾರೆ. ನನ್ನ ಗಂಡ ಎಂದು ರೋಜಾ ಜತೆಗೆ ಗಲಾಟೆ ನಡೆಸಿದ ಘಟನೆಗಳೂ ನಡೆದಿವೆ.

Also Read:

ಹೆಂಡತಿ ಮಕ್ಕಳ ಬಿಟ್ಟು ನೇಣಿಗೆ ಶರಣಾದ, ವಿವಾಹಿತ ಪ್ರಿಯತಮೆಗಾಗಿ ಹುಚ್ಚನಂತಾದವ ಎದೆ ಮೇಲೆ ಆಕೆಯ ಹೆಸರು ಹಚ್ಚೆ ಹಾಕಿಸಿಕೊಂಡಿದ್ದ!

ಆದ್ರೂ, ಪತಿಯನ್ನು ಬಿಟ್ಟು ತವರು ಸೇರಬಾರದೆಂಬ ಏಕೈಕ ಕಾರಣಕ್ಕೆ ಎಲ್ಲಾ ಹಿಂಸೆ ಸಹಿಸಿಕೊಂಡಿದ್ದಳು. ಈ ಹಿಂದೆಯೂ ಅನೇಕ ಸಲ ಇದೇ ರೀತಿ ರೋಜಾಳ ಮೇಲೆ ದೌರ್ಜನ್ಯ ನಡೆಸಿದ್ದನು. ಕೊನೆಗೂ ಪತ್ನಿಯನ್ನು ಹೊಡೆದು ಸಾಯಿಸಿದ್ದಾನೆ. ಆರೋಪಿಗೆ ತಕ್ಕ ಕಠಿಣ ಶಿಕ್ಷೆಯಾಗಬೇಕು. ಇಲ್ಲವಾದಲ್ಲಿ ಜನರ ಕೈಗೆ ನೀಡಬೇಕೆಂದು ಕಿಡಿ ಕಾರಿದ್ದಾರೆ.

ಒಟ್ಟಾರೆ ಚಿತ್ರದುರ್ಗದಲ್ಲಿ ಫೋಟೋಗ್ರಾಫರ್ ಆಗಿದ್ದ ಯರಿಸ್ವಾಮಿ ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದು ಪತ್ನಿಯ ಮೇಲೆ ಘೋರ ಕೃತ್ಯವೆಸಗಿದ್ದಾನೆ. ಪತಿಯೇ ದೇವರೆಂದು ನಂಬಿಕೊಂಡಿದ್ದ ಅಮಾಯಕಳ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದಾನೆ. ನಗರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಪೊಲೀಸ್ರು ಆರೋಪಿಯ ಪತ್ತೆ ಹಚ್ಚಿ ತಕ್ಕ ಶಿಕ್ಷೆ ವಿಧಿಸಬೇಕಿದೆ.

ವರದಿ: ಬಸವರಾಜ ಮುದನೂರ್, ಟಿವಿ 9, ಚಿತ್ರದುರ್ಗ

ಇನ್ನಷ್ಟು ರಾಜ್ಯಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್