AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕುಡಿದ ಅಮಲಿನಲ್ಲಿ ಅರೆಬೆತ್ತಲೆಯಾಗಿ ಬಾಲಕಿಯರ ಹಾಸ್ಟೆಲ್​​ ಪ್ರವೇಶಿಸಿದ ವ್ಯಕ್ತಿ; ಮುಂದೇನಾಯ್ತು?

ಇತ್ತೀಚೆಗೆ ಹೆಣ್ಣುಮಕ್ಕಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ಇದಕ್ಕೊಂದು ಉದಾಹರಣೆ ಎಂಬಂತೆ ಚಿತ್ರದುರ್ಗ(Chitradurga)ದ ಐಯುಡಿಪಿ ಬಡಾವಣೆಯ ಹಾಸ್ಟೆಲ್​​ನಲ್ಲಿ ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಅರೆ ಬೆತ್ತಲೆಯಾಗಿ ಬಾಲಕಿಯರ ವಸತಿ ನಿಲಯ(Girls Hostel) ಪ್ರವೇಶಿಸಿದ ಘಟನೆ ನಡೆದಿದೆ.

ಕುಡಿದ ಅಮಲಿನಲ್ಲಿ ಅರೆಬೆತ್ತಲೆಯಾಗಿ ಬಾಲಕಿಯರ ಹಾಸ್ಟೆಲ್​​ ಪ್ರವೇಶಿಸಿದ ವ್ಯಕ್ತಿ; ಮುಂದೇನಾಯ್ತು?
ಚಿತ್ರದುರ್ಗದಲ್ಲಿ ಅರೆಬೆತ್ತಲೆಯಾಗಿ ಬಾಲಕಿಯರ ಹಾಸ್ಟೆಲ್​​ ಪ್ರವೇಶಿಸಿದ ವ್ಯಕ್ತಿ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on: May 23, 2024 | 8:01 PM

Share

ಚಿತ್ರದುರ್ಗ, ಮೇ.23: ಕುಡಿದ ಅಮಲಿನಲ್ಲಿ ವ್ಯಕ್ತಿಯೊಬ್ಬ ಅರೆ ಬೆತ್ತಲೆಯಾಗಿ ಬಾಲಕಿಯರ ವಸತಿ ನಿಲಯ(Girls Hostel) ಪ್ರವೇಶಿಸಿದ ಘಟನೆ ಚಿತ್ರದುರ್ಗ(Chitradurga)ದ ಐಯುಡಿಪಿ ಬಡಾವಣೆಯ ಹಾಸ್ಟೆಲ್​​ನಲ್ಲಿ ನಡೆದಿದೆ. ಕೆಲ ಕಾಲ ಈ ವಿಕೃತ ವ್ಯಕ್ತಿ, ಹಾಸ್ಟೆಲ್ ವಿದ್ಯಾರ್ಥಿನಿಯರಲ್ಲಿ ಆತಂಕ ಸೃಷ್ಠಿಸಿದ್ದಾನೆ. ಕೂಡಲೇ ಎಚ್ಚೆತ್ತ ಸ್ಥಳೀಯರು, ಆರೋಪಿಯನ್ನು ಹಿಡಿದು ಬಡಾವಣೆ ಠಾಣೆ ಪೊಲೀಸರಿಗೆ ಒಪ್ಪಿಸಿದ್ದಾರೆ. ಆಟೋದಲ್ಲಿ ಠಾಣೆಗೆ ಕರೆದೊಯ್ಯುವ ವೇಳೆ ಆರೋಪಿ ಕಣ್ಣೀರು ಹಾಕಿದ್ದು, ಈ ಘಟನೆ ಚಿತ್ರದುರ್ಗದ ಬಡಾವಣೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಬಂಡೇಪಾಳ್ಯದಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಚಾಕು ಇರಿತ

ಬೆಂಗಳೂರು: ನಗರದ ಹೊರವಲಯ ಬಂಡೇಪಾಳ್ಯ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಚಾಕು ಇರಿದ ಘಟನೆ ನಡೆದಿದೆ. ಕಾರು ಚಾಲಕ ನರಸಿಂಹ(37) ಚಾಕು ಇರಿತಕ್ಕೊಳಗಾದ ವ್ಯಕ್ತಿ. ಮಂಜು ಅಲಿಯಾಸ್ ಜೋಕರ್ ಮಂಜು ಮತ್ತು ಆತನ ಮಗ ದೀಪಕ್ ಆರೋಪಿಗಳು. ಮುನಿರಾಜು ಎಂಬ ಸ್ನೇಹಿತನ ಮನೆಯಲ್ಲಿ ಮಟನ್ ಊಟದ ಪಾರ್ಟಿಯಲ್ಲಿ ನರಸಿಂಹ ಮತ್ತು ಜೋಕರ್ ಮಂಜು ನಡುವೆ ಗಲಾಟೆ ನಡೆದಿತ್ತು. ಈ ವೇಳೆ ಅವಾಚ್ಯ ಶಬ್ದಗಳಿಂದ ಇಬ್ಬರು ಬೈದಾಡಿಕೊಂಡು ಕಿರಿಕ್ ಮಾಡಿಕೊಂಡು ಅಲ್ಲಿಂದ ನರಸಿಂಹ ಹೊರಟು ಹೋಗಿದ್ದ.

ಇದನ್ನೂಓದಿ:ಬಾಕಿ ಹಣಕ್ಕಾಗಿ ವ್ಯಕ್ತಿಯನ್ನು ಅರೆಬೆತ್ತಲೆಯಾಗಿ ಕೂಡಿಸಿದ ಪೆಟ್ರೋಲ್ ಬಂಕ್ ಮಾಲೀಕರು

ಬಳಿಕ ಪೋನ್ ಮಾಡಿ ಮಗ ದೀಪಕ್​ನನ್ನು ಜೋಕರ್ ಮಂಜ ಕರೆಸಿಕೊಂಡಿದ್ದ . ಬಂಡೇಪಾಳ್ಯ ಪೋಲಿಸ್ ಠಾಣಾ ಸಮೀಪದ ಖಾಲಿ ಜಾಗದಲ್ಲಿ ಕುಳಿತಿದ್ದ ನರಸಿಂಹ, ಅಲ್ಲಿಗೆ ಹೋದ ಜೋಕರ್ ಮಂಜ ಮತ್ತು ಆತನ ಮಗನಿಂದ ನರಸಿಂಹ ಜೊತೆ ಮತ್ತೆ ಗಲಾಟೆ ನಡೆದಿದೆ. ಈ ವೇಳೆ ಚಾಕುವಿನಿಂದ ನರಸಿಂಹನ ಎದೆ ಭಾಗಕ್ಕೆ ಇರಿದು ಹಲ್ಲೆ ಮಾಡಿದ್ದಾರೆ. ಅಲ್ಲಿಂದ ಜೋರಾಗಿ ಕಿರುಚಾಡಿಕೊಂಡು ಬಂಡೇಪಾಳ್ಯ ಪೋಲಿಸ್ ಠಾಣೆಗೆ ನರಸಿಂಹ ಓಡಿ ಬಂದಿದ್ದ. ಕೂಡಲೇ ಪೋಲೀಸರು ಆತನನ್ನ ಸೇಂಟ್ ಜಾನ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದರು. ಇದೀಗ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ನರಸಿಂಹ ಹೋರಾಟ ನಡೆಸುತ್ತಿದ್ದು, ಘಟನೆ ಸಂಬಂಧ ಬಂಡೇಪಾಳ್ಯ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Basavaraj Mudnur
Basavaraj Mudnur

ಆದ್ಯ ವಚನಕಾರ ದೇವರ ದಾಸಿಮಯ್ಯನ 'ಮುದನೂರು' ನಮ್ಮ ಮೂಲ ಊರು. ಸಂತಗುಣದ ತಾತ ಕಿರಿ ವಯಸ್ಸಿನಲ್ಲೇ ಊರು-ಮನೆ ತೊರೆದು ಬರಿಗೈಲಿ ಬಂದು ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ಸ್ವಾಭಿಮಾನದ ಬದುಕು ಕಟ್ಟಿಕೊಂಡರು. ಅಪ್ಪ ಶಿಕ್ಷಕರಾಗಿ ಬದುಕು ರೂಪಿಸಿಕೊಂಡರು. ನನಗೂ ಜೀವನ ಪಾಠ ಕಲಿಸಿದ 'ಗುರು' & 'ಗಾಡ್ ಫಾದರ್' ನನ್ನಪ್ಪ. ಓದು ಮತ್ತು ಬರವಣಿಗೆ ನನ್ನ ಹವ್ಯಾಸ. ಕೋಟೆ-ಕೊತ್ತಲು‌, ಕಾಡು-ಮೇಡು‌‌‌ ಸುತ್ತಾಟ, ಚಾರಣವೆಂದರೆ ಪ್ರಾಣಪ್ರೀತಿ. ಹಳೇ ಹಿಂದಿ ಹಾಡು, ಗಝಲ್, ಜನಪದ, ಭಾವಗೀತೆಗಳು ಮತ್ತು ಭಜನೆ ನನಗಿಷ್ಟ. ಕಾಲೇಜು ದಿನಗಳಲ್ಲಿದ್ದ ಕ್ರಿಕೆಟ್ ಹುಚ್ಚು ಕಡಿಮೆ ಆಗಿದೆ. ಕೋಟೆನಾಡು‌ ಚಿತ್ರದುರ್ಗ ಜಿಲ್ಲೆಯ ಟಿವಿ9 ಪ್ರತಿನಿಧಿಯಾಗಿ ಒಂದೂವರೆ ದಶಕದಿಂದ ಕಾರ್ಯ ನಿರ್ವಹಿಸುತ್ತಿದ್ದೇನೆ. 'ಹೆಣ್ಣಾಗಿದ್ದೇ ತಪ್ಪಾ?' ಅಭಿಯಾನದ ಮೂಲಕ ಮೌಢ್ಯದ ವಿರುದ್ಧ ಜಾಗೃತಿ, 'ವಿಷಾಮೃತ' ಅಭಿಯಾನದ ಮೂಲಕ ನೀರಿನ ಕುರಿತು ಸರ್ಕಾರದ ಕಣ್ತೆರೆಸುವ ಕಾರ್ಯ, 'ಕೆರೆ ಉಳಿಸಿ' ಅಭಿಯಾನದ ಮೂಲಕ ಜಲಮೂಲಗಳ ಸಂರಕ್ಷಣೆ, 'ಆಪರೇಷನ್ ಚಿನ್ನ' ಸರಣಿ ವರದಿ ಮೂಲಕ ವಂಚಕರ ಜಾಲ ಬೇಧಿಸುವ ಕರ್ತವ್ಯ, ಬುಡಕಟ್ಟು ಸಮುದಾಯಗಳ ಜೀವನ, ಸಂಸ್ಕೃತಿ, ಆಚರಣೆಗಳ ಅನಾವರಣ, ಬಯಲುಸೀಮೆಯ ರೈತರ ಸಂಕಷ್ಟ, ಭದ್ರಾ ಮೇಲ್ದಂಡೆ ಯೋಜನೆ ಅಗತ್ಯತೆ ಕುರಿತು ವರದಿ, ಭ್ರಷ್ಟರ ಮುಖವಾಡ ಬಯಲು, ಕಾವಿಧಾರಿಗಳ ಕಪಟತನ ತೆರೆದಿಡುವುದು ಸೇರಿ ಅನೇಕ ಜೀವಪರ, ಜನಪರ ವರದಿಗಾರಿಕೆಗೆ ಟಿವಿ9 ವಾಹಿನಿಯಲ್ಲಿ ಅವಕಾಶ ಸಿಕ್ಕಿದ್ದು ಹೆಮ್ಮೆಯ ಸಂಗತಿ.

Read More