ರೈತರಿಗೆ ತಪ್ಪದ ಗೋಳು; ನೂರಾರು ಎಕರೆಯಲ್ಲಿ ಬೆಳೆದ ಶೇಂಗಾ ಬೆಳೆಗೆ ಸುಳಿರೋಗ ಕಾಟ
ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಸೇಂಗಾ ಬೆಳೆ ಪ್ರಮುಖವಾಗಿ ಬೆಳೆಯಲಾಗುತ್ತದೆ. ಹೀಗಾಗಿ, ಸೇಂಗಾ ಕಣಜ ಎಂದೇ ದುರ್ಗ ಖ್ಯಾತಿ ಪಡೆದಿದೆ. ಆದ್ರೆ, ಈ ವರ್ಷ ಮಾತ್ರ ಅತಿಯಾದ ಶೀತದಿಂದ ಸೇಂಗಾ ಬೆಳೆಗೆ ಸುಳಿರೋಗ ಬಾಧಿಸುತ್ತಿದ್ದು ರೈತರು ಕಂಗಾಲಾಗಿದ್ದಾರೆ. ಈ ಕುರಿತು ವರದಿ ಇಲ್ಲಿದೆ.
ಚಿತ್ರದುರ್ಗ, ಸೆ.08: ಚಿತ್ರದುರ್ಗ ಜಿಲ್ಲೆಯಲ್ಲಿ ಶೇಂಗಾ ಬೆಳೆ ಹೆಚ್ಚಾಗಿ ಬೆಳೆಯಲಾಗುತ್ತದೆ. ಹೀಗಾಗಿ, ಶೇಂಗಾ ಕಣಜ ಎಂಬ ಖ್ಯಾತಿ ಕೋಟೆನಾಡಿಗಿದೆ. ಈ ವರ್ಷ ಸುಮಾರು 1ಲಕ್ಷ 20ಸಾವಿರ ಹೆಕ್ಟೇರ್ನಲ್ಲಿ ಶೇಂಗಾ ಬಿತ್ತನೆ ಆಗಿದೆ. ಆದ್ರೆ, ಸುಮಾರು ಐನೂರು ಹೆಕ್ಟೇರ್ಗೂ ಹೆಚ್ಚು ಪ್ರದೇಶದಲ್ಲಿನ ಶೇಂಗಾಕ್ಕೆ ಸುಳಿರೋಗ ಕಾಡುತ್ತಿದೆ. ಕಳೆದೊಂದು ತಿಂಗಳಿಂದ ನಿರಂತರ ತುಂತುರು ಮಳೆಯಿಂದಾಗಿ ಬೆಳೆ ಹಾನಿಗೊಳಗಾಗುತ್ತಿದೆ. ಸರ್ಕಾರ ಕೂಡಲೇ ವಿಷೇಶ ತಜ್ಞರ ಸಮಿತಿ ರಚಿಸಿ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ರೈತರು ಆಗ್ರಹಿಸುತ್ತಿದ್ದಾರೆ.
ಇನ್ನು ಶೇಂಗಾ ಬೆಳೆಗೆ ಹರಡಿದ ಸುಳಿರೋಗ ಬಾಧೆಯಿಂದ ರೈತೆರಿಗೆ ಏನೋ ತೋಚದ ಸ್ಥಿತಿ ನಿರ್ಮಾಣ ಆಗಿದೆ. ಹೊಸದಾಗಿ ಈ ಸುಳಿರೋಗ ಕಾಣಿಸಿಕೊಂಡಿದ್ದು, ಪರಿಹಾರ ತಿಳಿಯದಾಗಿದೆ. ಜೋರಾಗಿ ಮಳೆ ಸುರಿಯಬೇಕು ಅಥವಾ ರಣ ಬಿಸಿಲು ಬಿದ್ದರೆ ಸುಳಿರೋಗ ಮಾಯವಾಗುತ್ತದೆ ಎನ್ನಲಾಗುತ್ತಿದೆ. ಆದ್ರೆ, ವಾತಾವರಣ ಬದಲಾಗುವ ಲಕ್ಷಣಗಳಿಲ್ಲ ಎಂಬುದು ರೈತರನ್ನು ಕಂಗೆಡಿಸಿದೆ.
ಇದನ್ನೂ ಓದಿ:ರೈತನ ಕಣ್ಣಲ್ಲಿ ನೀರು ತರಿಸಿದ ಈರುಳ್ಳಿ; ಖಾಸಗಿ ಕಂಪನಿಯ ಔಷಧಿ ಸಿಂಪಡಿಸಿ ಬೆಳೆ ಕಳೆದುಕೊಂಡ ಅನ್ನದಾತ
ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ನೂರಾರು ಹೆಕ್ಟೇರ್ ನಲ್ಲಿ ಬೆಳೆದ ಸೇಂಗಾ ಬೆಳೆ ಸುಳಿರೋಗದಿಂದ ಹಾಳಾಗುತ್ತಿದೆ. ಹೀಗಾಗಿ, ಸರ್ಕಾರ ಕೂಡಲೇ ಈ ಬಗ್ಗೆ ಗಮನಹರಿಸಿ ಅಧ್ಯಯನಕ್ಕೆ ತಜ್ಞರ ಸಮಿತಿ ರಚಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ