Kadugolla Tribe: ಚಳ್ಳಕೆರೆ ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಜಾತ್ರೆಯಲ್ಲಿ ಮುಳ್ಳಿನ ಗುಡಿ ಮೇಲಿಂದ ಕಳಶ ಕೀಳುವ ಪವಾಡ ಒಮ್ಮೆ ನೋಡಿ

| Updated By: ಸಾಧು ಶ್ರೀನಾಥ್​

Updated on: Jan 10, 2023 | 2:43 PM

ಒಂದು ತಿಂಗಳಿಂದ ದೇವರ ಹೆಸರಲ್ಲಿ ವ್ರತ ಮಾಡಿದ್ದ ಈರಗಾರರನ್ನು ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಕರೆತರಲಾಯಿತು. ಬರಿ ಮೈಯಲ್ಲಿ, ಬರಿಗಾಲಲ್ಲಿರುವ ಈರಗಾರರು ಮುಳ್ಳಿನ ಗುಡಿ ಏರಿ ಸ್ಪರ್ಧೆಗೆ ಬಿದ್ದು ಕಳಶ ಕೀಳುತ್ತಾರೆ. ಮೊದಲು ಕಳಶ ಕೀಳಿದವರಿಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಲಾಗುತ್ತದೆ.

Kadugolla Tribe: ಚಳ್ಳಕೆರೆ ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಜಾತ್ರೆಯಲ್ಲಿ ಮುಳ್ಳಿನ ಗುಡಿ ಮೇಲಿಂದ ಕಳಶ ಕೀಳುವ ಪವಾಡ ಒಮ್ಮೆ ನೋಡಿ
ಚಳ್ಳಕೆರೆ: ಕಾಡುಗೊಲ್ಲರ ಆರಾಧ್ಯ ದೈವ ಕ್ಯಾತಪ್ಪನ ಜಾತ್ರೆಯಲ್ಲಿ ಮುಳ್ಳಿನ ಗುಡಿ ಮೇಲಿಂದ ಕಳಶ ಕೀಳುವ ಪವಾಡ ಒಮ್ಮೆ ನೋಡಿ
Follow us on

ಬುಡಕಟ್ಟು ಸಮುದಾಯದ ಜನರು ಇಂದಿಗೂ ಅನೇಕ ಸಂಪ್ರದಾಯಗಳನ್ನು (Tradition) ಆಚರಿಸುತ್ತಾರೆ. ಮುಳ್ಳಿನ ಗುಡಿ ಕಟ್ಟಿ ಕಳಶ ಕೀಳುವ ವಿಶೇಷ ಆಚರಣೆ ಎಂಥವರನ್ನೂ ರೋಮಾಂಚನಗೊಳಿಸುತ್ತದೆ. ವಿಶೇಷ ಉತ್ಸವದ ಝಲಕ್ ಇಲ್ಲಿದೆ ನೋಡಿ. ನುಣುಪಾದ ಭಾರಿ ಕಳ್ಳೆಯಿಂದ ನಿರ್ಮಾಣವಾಗಿರುವ ಮುಳ್ಳಿನ ಗುಡಿ-ಗೋಪುರ. ಕ್ಷಣಾರ್ಧದಲ್ಲಿ ಮುಳ್ಳಿನ ಗುಡಿ ಏರಿ ಕಳಶ ಕೀಳಿದ ಈರಗಾರರು. ಮೈನವಿರೇಳುವ ಈ ರೋಚಕ ಕ್ಷಣ ಕಣ್ತುಂಬಿಕೊಳ್ಳಲು ಕಾದು ಕುಳಿತ ಜನ. ಈ ದೃಶ್ಯಗಳು ಕಂಡು ಬಂದಿದ್ದು ಕೋಟೆನಾಡು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ (challakere) ತಾಲೂಕಿನ ಪುರ್ಲಹಳ್ಳಿ ಬಳಿ. ಹೌದು, ಬುಡಕಟ್ಟು ಸಂಸ್ಕೃತಿಯ ಕಾಡುಗೊಲ್ಲ ಸಮುದಾಯದ ನೂರಾರು ವರ್ಷಗಳಿಂದ ಇದನ್ನು ಆಚರಿಸುತ್ತಾ (Budakattu utsava) ಬಂದಿದೆ. ಸುಮಾರು 15 ದಿನಗಳ ಕಾಲ ಕಾಡುಗೊಲ್ಲರ (Kadugolla tribe) ಆರಾಧ್ಯ ದೈವ ಕ್ಯಾತಪ್ಪನ ಜಾತ್ರೆ ಅಂಗವಾಗಿ ವಿವಿಧ ಆಚರಣೆ (Spiritual) ನಡೆಯುತ್ತದೆ.

ನಿನ್ನೆ ಸೋಮವಾರ ಪುರ್ಲಹಳ್ಳಿ ಬಳಿಯು ವಸಲು ದಿಬ್ಬದಲ್ಲಿ ವಿಶೇಷ ಆಚರಣೆಯೊಂದಿಗೆ ಜಾತ್ರೆ ಅಂತ್ಯವಾಗಿದೆ. ಒಂದು ತಿಂಗಳಿಂದ ದೇವರ ಹೆಸರಲ್ಲಿ ವ್ರತ ಮಾಡಿದ್ದ ಈರಗಾರರನ್ನು ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಕರೆತರಲಾಯಿತು. ಬರಿ ಮೈಯಲ್ಲಿ, ಬರಿಗಾಲಲ್ಲಿರುವ ಈರಗಾರರು ಮುಳ್ಳಿನ ಗುಡಿ ಏರಿ ಸ್ಪರ್ಧೆಗೆ ಬಿದ್ದು ಕಳಶ ಕೀಳುತ್ತಾರೆ. ಮೊದಲು ಕಳಶ ಕೀಳಿದವರಿಗೆ ಹೂವಿನ ಹಾರ ಹಾಕಿ ಗೌರವ ಸಲ್ಲಿಸಲಾಗುತ್ತದೆ.

ಸುಮಾರು ಒಂದು ತಿಂಗಳಿಂದ ಕಾಡುಗೊಲ್ಲ ಸಮುದಾಯದ ಜನರು ಶ್ರದ್ಧೆ ಭಕ್ತಿಯಿಂದ ಕ್ಯಾತಪ್ಪ ದೇವರಿಗೆ ನಡೆದುಕೊಳ್ಳುತ್ತಾರೆ. ನವಣೆ, ಹುರುಳಿ ಕಾಳು ಸೇವನೆ ನಿಷಿದ್ಧ ಸೇರಿದಂತೆ ಇತರೆ ವ್ರತಗಳನ್ನು ಆಚರಸಿರುತ್ತಾರೆ. ಕ್ಯಾತಪ್ಪ ದೇವರ ಜಾತ್ರೆಯ ಕೊನೆಯ ದಿನದ ಮುಳ್ಳಿನ ಗುಡಿ ಹತ್ತುವ ಪವಾಡ ಕಣ್ತುಂಬಿಕೊಳ್ಳಲು ಕಾತುರತೆಯಿಂದ ಕಾದಿರುತ್ತಾರೆ. ಸರಸರನೇ ಮುಳ್ಳಿನ ಗೋಪುರ ಏರಿದ ಈರಗಾರರು ಕಳಶ ಕೀಳುವುದನ್ನು ಕಂಡು ಪುಳಕಿತರಾಗುತ್ತಾರೆ. ನುಣುಪಾದ ಮುಳ್ಳಿನ ಮೇಲೆ ಬರಿಗಾಲಲ್ಲಿ, ಬರಿಮೈಲಿ ಏರುವ ಪರಿ ಕಂಡು ಆರಾಧ್ಯ ದೇವರಿಗೆ ನಮಿಸಿ ಪುನೀತ ಭಾವ ಅನುಭವಿಸುತ್ತಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದಲ್ಲಿ ಬುಡಕಟ್ಟು ಸಮುದಾಯದ ಕಾಡುಗೊಲ್ಲರ ವಿಶೇಷ ಆಚರಣೆ ಎಂಥವರನ್ನೂ ಚಕಿತಗೊಳಿಸುತ್ತದೆ. ಕಳೆದ ಮೂರು ವರ್ಷಗಳಿಂದ ಕೊವಿಡ್ ಕಾರಣಕ್ಕೆ ಈ ಆಚರಣೆಗೆ ಬ್ರೇಕ್ ಬಿದ್ದಿತ್ತು. ಈ ವರ್ಷ ಎಂದಿನಂತೆ ಸಾಂಪ್ರದಾಯಿಕ ಆಚರಣೆ ನಡೆದಿದ್ದು ಸಾವಿರಾರು ಭಕ್ತರು ಭಾಗಿ ಆಗಿದ್ದರು. ನಾಡು ಸಮೃದ್ಧಿ ಆಗಿರಲಿ ಎಂದು ದೇವರಲ್ಲಿ ನಮಿಸಿದರು.

ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ