ಚಿತ್ರದುರ್ಗ: ಏರ್ಪೋರ್ಟ್ನಲ್ಲಿ (Airport) ಕೊವಿಡ್(Covid 19) ಟೆಸ್ಟ್ ರಿಪೋರ್ಟ್ ಗೋಲ್ ಮಾಲ್ ವಿಚಾರದ ಬಗ್ಗೆ ಚಿತ್ರದುರ್ಗದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ (Dr.Sudhakar) ಪ್ರತಿಕ್ರಿಯೆ ನೀಡಿದ್ದು, ಈ ವಿಚಾರ ಈವರೆಗೆ ನನ್ನ ಗಮನಕ್ಕೆ ಬಂದಿಲ್ಲ. ತಪ್ಪು ವರದಿ ಕೊಟ್ಟಿದ್ದರೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ. ಯಾವುದೇ ಲ್ಯಾಬ್ ತಪ್ಪು ವರದಿ ನೀಡಿದ್ದರೆ ಲೈಸನ್ಸ್(License) ರದ್ದು ಮಾಡಲಾಗುತ್ತದೆ. ವಿಮಾನ ನಿಲ್ದಾಣವೇ ಆಗಿರಲಿ, ಎಲ್ಲೇ ತಪ್ಪು ಆಗಿದ್ದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಹಿರಿಯೂರು ಬಳಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ
ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್, ಸಾರಿಗೆ ಸಚಿವ ಬಿ.ಶ್ರೀರಾಮುಲು, ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಪೂರ್ಣಿಮಾ ಪತಿ ಶ್ರೀನಿವಾಸ್ ಭಾಗಿಯಾಗಿದ್ದರು.
ಸಿಎಂ ಮನೆ ಬಳಿ ಕಾಂಗ್ರೆಸ್ ನಾಯಕರು ಧರಣಿ ನಡೆಸುವ ವಿಚಾರ
ಚಿತ್ರದುರ್ಗ ಜಿಲ್ಲೆ ಹಿರಿಯೂರು ಬಳಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಮಾತನಾಡಿದ್ದು, ಪರವಾನಿಗೆ ಪಡೆದು ಅವರು ಪ್ರತಿಭಟನೆ ಮಾಡಲಿ. ಯಾರ ಮನೆ ಬಳಿ, ಯಾವ ರೀತಿ ಬೇಕಾದರೂ ಪ್ರತಿಭಟಿಸಲು ಅವಾಕಾಶ ಇದೆ. ಯಾವ ಪುರುಷಾರ್ಥಕ್ಕೆ ಪ್ರತಿಭಟನೆ ಎಂಬುದು ತಿಳಿಸಲಿ. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಯಾರು ತಪ್ಪು ಮಾಡಿದರು ತಪ್ಪೇ. ನಿಯಮಗಳನ್ನು ಯಾರೂ ಸಹ ಮೀರಿ ನಡೆಯಬಾರದು. ಇನ್ನೂ ಶುಕ್ರವಾರದ ಸಭೆಯಲ್ಲಿ ಮುಂದಿನ ಕ್ರಮದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ. ಸಾಧಕ ಬಾಧಕ ಗಮನಿಸಿ ಸಿಎಂ ಬೊಮ್ಮಾಯಿ ಅಂತಿಮ ನಿರ್ಣಯ ತೆಗದುಕೊಳ್ಳುತ್ತಾರೆ. ವಿಪಕ್ಷ ನಾಯಕರು ಹತಾಶೆಯಿಂದ ಮಾತಾಡುತ್ತಿದ್ದಾರೆ. ನಾನು ಪ್ರತಿಕ್ರಿಯಿಸಲ್ಲ ಎಂದು ಹೇಳಿದ್ದಾರೆ.
ಆರೋಗ್ಯ ಸಚಿವ ಡಾ.ಸುಧಾಕರ್ ಬಳಿ ದೂರು ನೀಡಿದ ಮಹಿಳೆ
ಸ್ವಾಬ್ ಟೆಸ್ಟ್ ಬಳಿಕ 2-3 ದಿನದ ನಂತರ ರಿಪೋರ್ಟ್ ಬರುತ್ತೆಂದು ಆರೋಗ್ಯ ಸಚಿವ ಡಾ.ಸುಧಾಕರ್ ಬಳಿ ಮಹಿಳೆ ದೂರು ನೀಡಿದ್ದಾರೆ. ಡಿಸಿ ಕವಿತಾ ಮನ್ನಿಕೇರಿ, ಡಿಹೆಚ್ಓ ಡಾ.ರಂಗನಾಥ್ಗೆ ಸಚಿವ ಡಾ.ಸುಧಾಕರ್ ಪ್ರಶ್ನಿಸಿದ್ದಾರೆ. ಈ ಬಗ್ಗೆ ಪರಿಶೀಲಿಸಿ, ಯಾಕೆ ವಿಳಂಬ ಆಗುತ್ತಿದೆ ಎಂದು ಪ್ರಶ್ನೆ ಕೇಳಿದ್ದಾರೆ. ಜತೆಗೆ ವಿಳಂಬ ಆಗದಂತೆ ಕ್ರಮ ಕೈಗೊಳ್ಳಲು ಆರೋಗ್ಯ ಸಚಿವ ಡಾ.ಸುಧಾಕರ್ ಸೂಚನೆ ನೀಡಿದ್ದಾರೆ.
ಮಾಸ್ಕ್ ಮರೆತು ಮೊಬೈಲ್ ಮಾತಲ್ಲಿ ಬ್ಯೂಸಿಯಾದ ಆರೋಗ್ಯ ಸಚಿವ ಡಾ.ಸುಧಾಕರ್
ಹಿರಿಯೂರು ಬಳಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಶಂಕುಸ್ಥಾಪನೆ ವೇಳೆ ಮಾಸ್ಕ್ ಮರೆತು ಮೊಬೈಲ್ ಮಾತಲ್ಲಿ ಆರೋಗ್ಯ ಸಚಿವ ಡಾ.ಸುಧಾಕರ್ ಬ್ಯೂಸಿಯಾಗಿದ್ದಾರೆ. ಈ ವೇಳೆ ಮಾಸ್ಕ್ ತೆಗೆದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಕುಳಿತಿದ್ದರು. ಆಸ್ಪತ್ರೆ ಶಂಕು ಸ್ಥಾಪನೆ ಕಾರ್ಯಕ್ರಮದಲ್ಲಿ ಕೊವಿಡ್ ನಿಯಮ ಉಲ್ಲಂಘನೆಯಾಗಿದೆ.
ಇದನ್ನೂ ಓದಿ:
ಉಮೇಶ್ ಕತ್ತಿ ಮಾಸ್ಕ್ ಹಾಕಲ್ಲವಂತೆ ಅನ್ನೋ ಉಡಾಫೆಗೆ ಆರೋಗ್ಯ ಸಚಿವ ಸುಧಾಕರ್ ಹೇಳಿದ್ದೇನು?
ಸುಧಾಕರ್ಗೆ ಅಧಿಕಾರದ ಮದ! ದುರಹಂಕಾರದಲ್ಲಿ ಮಾತನಾಡುತ್ತಿದ್ದಾರೆ- ಸಿದ್ದರಾಮಯ್ಯ ತಿರುಗೇಟು
Published On - 3:33 pm, Wed, 19 January 22