AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Chitradurga Anganwadi Centre: ಚಿಣ್ಣರನ್ನು ಸೆಳೆಯುತ್ತಿದೆ ಮಾದರಿ ಅಂಗನವಾಡಿ ಕೇಂದ್ರ, ಖಾಸಗಿ ಶಾಲೆಗಳಿಗೇ ಸೆಡ್ಡು

ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮಂಜುಳಾ ಅತ್ಯಂತ ಕಾಳಜಿಯಿಂದ ಈ ಅಂಗನವಾಡಿಯನ್ನು ಮಾದರಿ ಅಂಗನವಾಡಿಯನ್ನಾಗಿಸಿದ್ದಾರೆ. ಪೋಷಕರು, ಗಾಂಧಿ ನಗರ ಗೆಳೆಯರ ಬಳಗ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಾಯ ಪಡೆದು ಖಾಸಗಿ ವಿದ್ಯಾ ಸಂಸ್ಥೆಗಳಿಗೆನೂ ಕಡಿಮೆ ಇಲ್ಲದಂತೆ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಿದ್ದಾರೆ.

Chitradurga Anganwadi Centre: ಚಿಣ್ಣರನ್ನು ಸೆಳೆಯುತ್ತಿದೆ ಮಾದರಿ ಅಂಗನವಾಡಿ ಕೇಂದ್ರ, ಖಾಸಗಿ ಶಾಲೆಗಳಿಗೇ ಸೆಡ್ಡು
ಮಾದರಿ ಅಂಗನವಾಡಿ
ಬಸವರಾಜ ಮುದನೂರ್, ಚಿತ್ರದುರ್ಗ
| Edited By: |

Updated on:Jun 07, 2023 | 2:44 PM

Share

ಚಿತ್ರದುರ್ಗ: ಸರ್ಕಾರಿ ಅಂಗನವಾಡಿ ಕೇಂದ್ರಗಳೆಂದರೆ(Anganwadi Centre) ಮೂಗು ಮುರಿಯುವವರೆ ಹೆಚ್ಚು. ಕಾರಣ ಬಹುತೇಕ ಅಂಗನವಾಡಿ ಕೇಂದ್ರಗಳು ಹಳೇ ಕಟ್ಟಡದಲ್ಲಿರುತ್ತವೆ, ಅವ್ಯವಸ್ಥೆಯಿಂದ ಕೂಡಿರುತ್ತವೆ ಎಂಬುದು ಸಹಜ ಆರೋಪ. ಆದ್ರೆ, ಕೋಟೆನಾಡು ಚಿತ್ರದುರ್ಗದಲ್ಲೊಂದು(Chitradurga) ಮಾದರಿ ಅಂಗನವಾಡಿ ಕೇಂದ್ರ ಮಾತ್ರ ಖಾಸಗಿ ಸಂಸ್ಥೆಗಳಿಗೆನೂ ಕಡಿಮೆಯಿಲ್ಲ ಎಂಬಂತೆ ರೂಪುಗೊಂಡಿದೆ. ಈ ಕುರಿತು ವರದಿ ಇಲ್ಲಿದೆ.

ಕೋಟೆನಾಡು ಚಿತ್ರದುರ್ಗ ನಗರದ ಮಹಾತ್ಮ ಗಾಂಧಿ ನಗರದಲ್ಲಿ ಮಾದರಿ ಅಂಗನವಾಡಿ ಕೇಂದ್ರ ನಿರ್ಮಾಣವಾಗಿದೆ. ಹೌದು, ಇಲ್ಲಿನ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಮಂಜುಳಾ ಅತ್ಯಂತ ಕಾಳಜಿಯಿಂದ ಈ ಅಂಗನವಾಡಿಯನ್ನು ಮಾದರಿ ಅಂಗನವಾಡಿಯನ್ನಾಗಿಸಿದ್ದಾರೆ. ಪೋಷಕರು, ಗಾಂಧಿ ನಗರ ಗೆಳೆಯರ ಬಳಗ ಮತ್ತು ವಿವಿಧ ಸಂಘ-ಸಂಸ್ಥೆಗಳ ಸಹಾಯ ಪಡೆದು ಖಾಸಗಿ ವಿದ್ಯಾ ಸಂಸ್ಥೆಗಳಿಗೆನೂ ಕಡಿಮೆ ಇಲ್ಲದಂತೆ ಅಂಗನವಾಡಿ ಕೇಂದ್ರ ನಿರ್ಮಾಣ ಮಾಡಿದ್ದಾರೆ.

model anganwadi centre in chitradurga which grabbing attraction

ಅಂಗನವಾಡಿ ಮಕ್ಕಳಿಗೂ ಸಮವಸ್ತ್ರ

ಇದನ್ನೂ ಓದಿ: 6ನೇ ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್: ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರಿಗೆ ಬಂಪರ್

ಖಾಸಗಿ ವಿದ್ಯಾ ಸಂಸ್ಥೆಗಳಿಂದ ಮಕ್ಕಳ ಕಲಿಕೆ ಮತ್ತಿತರೆ ಮಾಹಿತಿಯನ್ನು ವಾಟ್ಸಪ್ ಗ್ರೂಪ್ ಮೂಲಕ ಪೋಷಕರಿಗೆ ಷೇರ್ ಮಾಡಲಾಗುತ್ತದೆ. ಮಕ್ಕಳಿಗೆ ಸಮವಸ್ತ್ರ, ಆಟಿಕೆ ಸಾಮಗ್ರಿಗಳು, ಕಲಿಕಾ ಸಾಮಾಗ್ರಿಗಳು ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಅಂಗನವಾಡಿಯಲ್ಲಿ ಸಂಗ್ರಹಿಸಿದ್ದು ಮಾದರಿ ಅಂಗನವಾಡಿಯಾಗಿ ಮಕ್ಕಳನ್ನು ಬರಸೆಳೆಯುತ್ತಿದೆ. ಉತ್ತಮ ಕಲಿಕೆಯ ಜತೆಗೆ ಗುಣಮಟ್ಟದ ಆಹಾರವನ್ನು ಮಕ್ಕಳಿಗೆ ನೀಡಲಾಗುತ್ತಿದೆ. ಆ ಮೂಲಕ ಅಂಗನವಾಡಿ ಕೇಂದ್ರ ಮಕ್ಕಳ ಮೆಚ್ಚಿನ ತಾಣವಾಗಿದೆ.

model anganwadi centre in chitradurga which grabbing attraction

ಆಟವಾಡುತ್ತಿರುವ ಮಕ್ಕಳು

ಇನ್ನು ಈ ಭಾಗದ ಅನೇಕ ಪೋಷಕರು ಆರಂಭದಲ್ಲಿ ಮಕ್ಕಳನ್ನು ಪ್ರಾಯೋಗಿಕವಾಗಿ ಅಂಗನವಾಡಿಗೆ ಕಳಿಸುವ ಇಚ್ಛೆ ಹೊಂದಿದ್ದರು. ಆದ್ರೆ, ಅಂಗನವಾಡಿಯ ಅಭಿವೃದ್ಧಿ ಮತ್ತು ಕಲಿಕೆಯನ್ನು ಕಂಡು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಅಡ್ಮಿಷನ್ ಮಾಡುವುದನ್ನು ಕೈ ಬಿಟ್ಟಿದ್ದಾರೆ. ಅಷ್ಟರ ಮಟ್ಟಿಗೆ ಈ ಅಂಗನವಾಡಿ ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಸೆಡ್ಡು ಹೊಡೆದಿದೆ. ಈ ಪರಿಣಾಮ ಈ ಭಾಗದ 20ಕ್ಕೂ ಹೆಚ್ಚು ಮಕ್ಕಳು ಇಲ್ಲಿ ಕಲಿಕೆಯಲ್ಲಿ ತೊಡಗಿದ್ದಾರೆ.

ಒಟ್ಟಾರೆಯಾಗಿ ಕೋಟೆನಾಡು ಚಿತ್ರದುರ್ಗದ ಗಾಂಧಿ ನಗರದ ಅಂಗನವಾಡಿ ಕೇಂದ್ರ ನಿಜಕ್ಕೂ ಮಾದರಿ ಅಂಗನವಾಡಿ ಕೇಂದ್ರವಾಗಿದೆ. ಪುಟ್ಟ ಪುಟ್ಟ ಮಕ್ಕಳು ಈ ಅಂಗನವಾಡಿ ಕೇಂದ್ರದಲ್ಲಿ ಸಖತ್ ಏಂಜಾಯ್ ಮಾಡುತ್ತಿದ್ದಾರೆ. ಖಾಸಗಿ ಸಂಸ್ಥೆಗಳಿಗೇನೂ ಕಡಿಮೆ ಇಲ್ಲ ಎಂಬಂತೆ ಅಂಗನವಾಡಿಯ ಪರಿಸರ ನಿರ್ಮಾಣ ಆಗಿದ್ದು ಜನ ಮೆಚ್ಚುಗೆಗೆ ಪಾತ್ರವಾಗಿದೆ.

model anganwadi centre in chitradurga which grabbing attraction

ಮಕ್ಕಳನ್ನು ತೊಟ್ಟಿಲಲ್ಲಿ ಮಲಗಿಸುತ್ತಿರುವ ಶಿಕ್ಷಕಿ

ಚಿತ್ರದುರ್ಗ ಜಿಲ್ಲೆಯ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ 

Published On - 1:27 pm, Wed, 7 June 23