ಚಿತ್ರದುರ್ಗ: ಕ್ಷುಲ್ಲಕ ವಿಚಾರಕ್ಕೆ 2 ಕುಟುಂಬಗಳ ನಡುವೆ ಜಗಳ; ವ್ಯಕ್ತಿ ಕೊಲೆಯಲ್ಲಿ ಅಂತ್ಯ

ನಾಯಿ ಗಲೀಜು ಮಾಡುತ್ತದೆ ಎಂದು ಮಹಾಂತೇಶ ಆಕ್ಷೇಪ ಮಾಡಿದ್ದು, ಮಹಾಂತೇಶ ಮತ್ತು ಸ್ವಾಮಿ ನಡುವೆ ಗಲಾಟೆಯಾಗಿದೆ. ಕೊನೆಗೆ ಇದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯ ಕಂಡಿದೆ. ಸದ್ಯ ಸ್ವಾಮಿ ಮತ್ತು ಆತನ ಪತ್ನಿ ಕಮಲಮ್ಮನ ವಿರುದ್ಧ ಹತ್ಯೆಗೈದಿರುವ ಆರೋಪ ಕೇಳಿ ಬಂದಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರದುರ್ಗ: ಕ್ಷುಲ್ಲಕ ವಿಚಾರಕ್ಕೆ 2 ಕುಟುಂಬಗಳ ನಡುವೆ ಜಗಳ; ವ್ಯಕ್ತಿ ಕೊಲೆಯಲ್ಲಿ ಅಂತ್ಯ
ಎರಡು ಕುಟುಂಬಗಳ ನಡುವೆ ಜಗಳ
Follow us
TV9 Web
| Updated By: preethi shettigar

Updated on: Nov 17, 2021 | 12:03 PM

ಚಿತ್ರದುರ್ಗ: ಕ್ಷುಲ್ಲಕ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಜಗಳವಾಗಿದ್ದು, ವ್ಯಕ್ತಿಯನ್ನು ಕೊಲೆ (Murder) ಮಾಡಿದ ಘಟನೆ ಚಿತ್ರದುರ್ಗ ತಾಲ್ಲೂಕಿನ ಜಾಲಿಕಟ್ಟೆ ಗ್ರಾಮದಲ್ಲಿ ನಡೆದಿದೆ. ಕಟ್ಟಿಗೆಯಿಂದ ತಲೆಗೆ ಹೊಡೆದು ಜಾಲಿಕಟ್ಟೆ‌ ಗ್ರಾಮದ ನಿವಾಸಿ ಮಹಾಂತೇಶ(23) ನನ್ನು ಹತ್ಯೆ ಮಾಡಲಾಗಿದೆ. ಮಹಂತೇಶ್ ಮನೆ ಬಳಿ ನಿತ್ಯ ಸ್ವಾಮಿ ಎಂಬ ವ್ಯಕ್ತಿ ನಾಯಿ ಕರೆದೊಯ್ಯುತ್ತಿದ್ದ. ನಾಯಿ ಗಲೀಜು ಮಾಡುತ್ತದೆ ಎಂದು ಮಹಾಂತೇಶ ಆಕ್ಷೇಪ ಮಾಡಿದ್ದು, ಮಹಾಂತೇಶ ಮತ್ತು ಸ್ವಾಮಿ ನಡುವೆ ಗಲಾಟೆಯಾಗಿದೆ. ಕೊನೆಗೆ ಇದು ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯ ಕಂಡಿದೆ. ಸದ್ಯ ಸ್ವಾಮಿ ಮತ್ತು ಆತನ ಪತ್ನಿ ಕಮಲಮ್ಮನ ವಿರುದ್ಧ ಹತ್ಯೆಗೈದಿರುವ ಆರೋಪ ಕೇಳಿ ಬಂದಿದ್ದು, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಕೊಲೆ ಆರೋಪಿ ಮೇಲೆ ಫೈರಿಂಗ್ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿ ಕಾಲಿಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ ಘಟನೆ ಬೆಂಗಳೂರಿನ ಅಶೋಕನಗರದಲ್ಲಿ ನಡೆದಿದೆ. ನವೆಂಬರ್ 10 ರಂದು ಬೆಳ್ಳಂದೂರಿನಲ್ಲಿ ಮುನ್ನಾಕುಮಾರ್ ಕೊಲೆ ಮಾಡಿದ್ದ ಪಳನಿಯನ್ನು ಬಂಧಿಸಲು ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದರು. ಎಸಿಪಿ ಪರಮೇಶ್ವರ್ ಹಾಗೂ ಇನ್ಸ್​ಪೆಕ್ಟರ್​ ಹರೀಶ್ ಕುಮಾರ್ ತಂಡ ಅರೋಪಿ ಬಂಧನಕ್ಕೆ ತೆರಳಿದ್ದಾರೆ. ಈ ವೇಳೆ ಅಶೋಕನಗರ ಸ್ಮಶಾನದ ಬಳಿ ಆರೋಪಿ ಪಳಸಿ ಇರುವ ಬಗ್ಗೆ ಖಚಿತ ಮಾಹಿತಿ ಸಿಕ್ಕಿತ್ತು. ಈ ಸಂದರ್ಭದಲ್ಲಿ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆ ಪಳನಿ ದಾಳಿ ಮಾಡಿದ್ದಾನೆ. ಇನ್ಸ್‌ಪೆಕ್ಟರ್ ಹರೀಶ್ ಕುಮಾರ್ ಮೇಲೆ ಹಲ್ಲೆ ಮಾಡಿ ಪರಾರಿಗೆ ಯತ್ನಿಸುತ್ತಿದ್ದ ವೇಳೆ ಎಸಿಪಿ ಪರಮೇಶ್ವರ್  ಫೈರಿಂಗ್ ಮಾಡಿದ್ದಾರೆ.

ಎಡಗಾಲಿಗೆ ಶೂಟ್ ಮಾಡಿ ಆರೋಪಿ ಅಲಿಯಾಸ್ ಕರ್ಚಿಫ್ ಪಳನಿಯನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಪಳನಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 20 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ಪಳನಿಗಾಗಿ ಬೆಳ್ಳಂದೂರು ಪೊಲೀಸರು, ಸಿಸಿಬಿ ಪೊಲೀಸರು ಶೋಧ ನಡೆಸುತ್ತಿದ್ದರು. ಸದ್ಯ ಆರೋಪಿ ಪಳನಿಯನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರ ಮೇಲೆ ಹಲ್ಲೆ ಮತ್ತು ಶೂಟೌಟ್ ಸಂಬಂಧ ಆಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:

ಕೇರಳದಲ್ಲಿ ಆರ್​ಎಸ್​ಎಸ್​ ಕಾರ್ಯಕರ್ತನ ಬರ್ಬರ ಹತ್ಯೆ; ಕೊಲೆ ಕಂಡು ಇನ್ನೋರ್ವ ವ್ಯಕ್ತಿಯೂ ಸಾವು

ಎರಡು ವರ್ಷಗಳಿಂದ ರನ್ನ ರೈತರ ಸಹಕಾರಿ ಸಕ್ಕರೆ ಕಾರ್ಖಾನೆ ಬಂದ್; ಮನನೊಂದ ಕಾರ್ಮಿಕ ಆತ್ಮಹತ್ಯೆಗೆ ಶರಣು