Vani Vilas Sagar Dam: ವಾಣಿ ವಿಲಾಸ ಸಾಗರ ಜಲಾಶಯ ಬಿರುಕು ವದಂತಿ: ಜಲಾಂತರ್ಗಾಮಿ ಡ್ರೋಣ್ ಮೂಲಕ ಸಮೀಕ್ಷೆ ಮುಂದಾದ ತಜ್ಞರ ತಂಡ

ವಾಣಿ ವಿಲಾಸ ಸಾಗರ ಜಲಾಶಯ ನಿರ್ಮಾಣವಾಗಿ115 ವರ್ಷಗಳೇ ಕಳೆದಿವೆ. ಸದ್ಯ ಬಿರುಕು ಬಿಟ್ಟಿದೆ ಎಂಬ ವದಂತಿ ಹಿನ್ನೆಲೆ ತಜ್ಞರ ತಂಡ ಪರೀಕ್ಷೆಗೆ ಮುಂದಾಗಿದ್ದು, ಜಲಾಂತರ್ಗಾಮಿ ಡ್ರೋಣ್ ಮೂಲಕ ಪರಿಶೀಲನೆ ನಡೆಸಲಾಗುತ್ತಿದೆ.

Vani Vilas Sagar Dam: ವಾಣಿ ವಿಲಾಸ ಸಾಗರ ಜಲಾಶಯ ಬಿರುಕು ವದಂತಿ: ಜಲಾಂತರ್ಗಾಮಿ ಡ್ರೋಣ್ ಮೂಲಕ ಸಮೀಕ್ಷೆ ಮುಂದಾದ ತಜ್ಞರ ತಂಡ
ವಾಣಿ ವಿಲಾಸ ಸಾಗರ ಜಲಾಶಯ Image Credit source: trodly.com
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Dec 31, 2022 | 5:11 PM

ಚಿತ್ರದುರ್ಗ: ಕೋಟೆನಾಡಿನ ರೈತರ ಜೀವನಾಡಿಯಾದ ಹಿರಿಯೂರು ತಾಲೂಕಿನ ವಾಣಿ ವಿಲಾಸಪುರ ಗ್ರಾಮದ ಬಳಿಯ ವಾಣಿ ವಿಲಾಸ ಸಾಗರ ಜಲಾಶಯ (Vani Vilasapura Dam) ನಿರ್ಮಾಣವಾಗಿ115 ವರ್ಷಗಳೇ ಕಳೆದಿವೆ. ಉತ್ತಮ ಮಳೆ ಮತ್ತು ಭದ್ರಾ ಮೇಲ್ದಂಡೆ ಯೋಜನೆಯ ನೀರಿನಿಂದಾಗಿ ಎಂಟು ದಶಕಗಳ ಬಳಿಕ ಜಲಾಶಯ ಭರ್ತಿಯಾಗಿದೆ. ಜಲಾಶಯ ಭರ್ತಿಯಿಂದಾಗಿ ಜನರಲ್ಲಿ ಸಂಭ್ರಮ ಮೂಡಿದೆ. ಅಂತೆಯೇ ಸುರಕ್ಷತೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕವೂ ಮೂಡಿದ್ದು, ಸಂಶಯ ನಿವಾರಣೆಗಾಗಿ ವಿಶ್ವೇಶ್ವರಯ್ಯ ನೀರಾವರಿ ನಿಗಮವು ಕೇರಳ ಮೂಲದ ಐರೋ ಟಿಕ್ನಾಲಜಿ ತಜ್ಞರ ನೆರೆವು ಪಡೆದು ಎರಡು ಕ್ಯಾಮೆರಾ ಹೊಂದಿರುವ ಜಲಾಂತರ್ಗಾಮಿ ಡ್ರೋಣ್ (submarine drone) ಮೂಲಕ ಪರಿಶೀಲನಾ ಕಾರ್ಯ ಆರಂಭಿಸಿದೆ.

ಜಲಾಂತರ್ಗಾಮಿ ಡ್ರೋಣ್ ಮೂಲಕ ಸಚಿತ್ರ ವರದಿ

ಡ್ರೋಣ್​ಗೆ ಅಳವಡಿಸಿರುವ ಎರಡು ಕ್ಯಾಮೆರಾಗಳು ನೀರಿನ ಆಳಕ್ಕೆ ಇಳಿದು ಜಲಾಶಯದ ಒಳಗೋಡೆಯ ಸ್ಥಿತಿಗತಿಯ ದೃಶ್ಯ ದಾಖಲಿಸಲಿದೆ. ನೀರಿನ ತಳ ಮಟ್ಟದ ಒಂದು ತುದಿಯಿಂದ ಮತ್ತೊಂದು ತುದಿಯ ತನಕ ಅವಲೋಕಿಸಲಿರುವ ಜಲಾಂತರ್ಗಾಮಿ ಡ್ರೋಣ್ ಸಚಿತ್ರ ವರದಿ ನೀಡಲಿದೆ. ಡ್ರೋನ್ ಕ್ಯಾಮೆರಾ ಸೆರೆಹಿಡಿಯುವ ದೃಶ್ಯಗಳನ್ನು ಅಣೆಕಟ್ಟೆಯ ಮೇಲೆ ಕುಳಿತಿರುವ ತಜ್ಞರು ಕಂಪ್ಯೂಟರ್​ನಲ್ಲಿ ದಾಖಲಿಸಿಕೊಳ್ಳುತ್ತಾರೆ. ಈ ಕಾರ್ಯಾಚರಣೆ ಇಂದು (ಡಿ.31) ಸಂಜೆವರೆಗೆ ನಡೆಯಲಿದೆ. ನಂತರ ಕೊಚ್ಚಿನ್​ಗೆ ಮರಳುವ ತಂಡ, ಅಣ್ಣೆಕಟ್ಟೆ ಸುರಕ್ಷತೆ ಬಗ್ಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ವರದಿ ನೀಡಿಲಿದೆ ಎಂದು ವಿಶ್ವೇಶ್ವರಯ್ಯ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ ಚಂದ್ರಮೌಳಿ ತಿಳಿಸಿದ್ದಾರೆ.

ಇದನ್ನೂ ಓದಿ: ಕುರಿಗಳಿಗೆ ಶೀಫ್ ಪಾಕ್ಸ್ ರೋಗ: ಕುರಿಗಾಹಿಗಳಿಂದ ಚಿತ್ರದುರ್ಗದಲ್ಲೊಂದು ವಿಚಿತ್ರ ಆಚರಣೆ

ವಾಣಿವಿಲಾಸ ಸಾಗರ ಜಲಾಶಯ ಬಿರುಕು ವದಂತಿ 

ವಾಣಿವಿಲಾಸ ಸಾಗರ ಜಲಾಶಯ 88ವರ್ಷ ಬಳಿಕ 135 ಅಡಿ ದಾಟಿದ್ದರಿಂದ ಡ್ಯಾಂ ಬಿರುಕು ಬಿಟ್ಟಿದೆ ಎಂಬ ವದಂತಿ ಹಬ್ಬಿತ್ತು. ಅಣೆಕಟ್ಟೆಯ ಗೋಡೆಗಳ ಬಗ್ಗೆ ಅಣೆಕಟ್ಟು ರಕ್ಷಣಾ ಸಂಸ್ಥೆ ಅಧ್ಯಯನ ನಡೆಸಿ ವರದಿ ನೀಡಿತ್ತು. ಡ್ರೋನ್ ಸಮೀಕ್ಷೆಯಿಂದ ನಿಖರವಾದ ಮಾಹಿತಿ ತಿಳಿಯುತ್ತದೆ ಎಂಬ ಕಾರಣಕ್ಕೆ ಐರೋ ಟೆಕ್ನಾಲಜಿ ಬಳಸಿಕೊಳ್ಳಲಾಗುತ್ತದೆ ಎಂದು ಚಂದ್ರಮೌಳಿ ಹೇಳಿದರು.

ಇದನ್ನೂ ಓದಿ: ಕನ್ನಡಿಯಲ್ಲಿ ಹಿಂಬದಿ ಚಕ್ರ ಸಡಿಲಗೊಂಡಿರುವುದನ್ನ ನೋಡಿದ KSRTC ಬಸ್ ಚಾಲಕ, ಮುಂದೇನು ಮಾಡಿದರು ನೋಡಿ!

ಅಣ್ಣೆಕಟ್ಟೆ ನಿರ್ಮಾಣ ತಜ್ಞ ಹಾಗೂ ನಿವೃತ್ತ ಚೀಫ್ ಎಂಜಿನಿಯರ್ ಎಸ್.ಬಿ.ಕೊಯಮತ್ತೂರ್, ಕರ್ನಾಟಕ ಎಂಜಿನಿಯರ್ಸ್ ರಿಸರ್ಚ್ ಸ್ಟೇಷನ್ ಮುಖ್ಯ ಎಂಜಿನಿಯರ್ ಮಹೇಶ್, ಅಣ್ಣೆಕಟ್ಟೆ ಸುರಾಕ್ಷ ಸಮಿತಿ ಸದಸ್ಯರಾದ ಕಮಲ ಶೇಖರನ್,  ಭದ್ರಾ ಮೇಲ್ಕಂಡೆ ಯೋಜನೆ ಅಧೀಕ್ಷಕ ಶಿವಪ್ರಕಾಶ್ ನೇತೃತ್ವದ ತಂಡ ಸೆಪ್ಟೆಂಬರ್ 8 ರಂದು ವಾಣಿವಿಲಾಸ ಅಣೆಕಟ್ಟೆಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುರಕ್ಷತೆ ಕುರಿತು ಹಲವು ಸಲಹೆ ಹಾಗೂ ಸೂಚನೆಗಳನ್ನು ನೀಡಲಾಗಿತ್ತು ಎನ್ನಲಾಗಿದೆ.

ಈಗಾಗಲೇ ವಾಣಿ ವಿಲಾಸ ಸಾಗರ ಜಲಾಶಯಕ್ಕೆ ತಜ್ಞರ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಲಂತರ್ಗಾಮಿ ಡ್ರೋಣ್ ಮೂಲಕವೂ ಪರಿಶೀಲನೆ ನಡೆಸಲಾಗುತ್ತಿದೆ. ಯಾವುದೇ ಅಪಾಯ ಇಲ್ಲ, ಆತಂಕ ಪಡುವ ಅಗತ್ಯವಿಲ್ಲ ಎಂಬ ಮಾಹಿತಿ ಇದೆ ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಹೇಳಿದ್ದಾರೆ.

ವರದಿ: ಬಸವರಾಜ ಮುದನೂರ್, ಟಿವಿ9, ಚಿತ್ರದುರ್ಗ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ವೈಶಾಲಿ ಜೊತೆಗೆ ಕೈಕುಲುಕದಿರಲು ಕಾರಣ ತಿಳಿಸಿದ ಯಾಕುಬೊವ್
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಮಹಾಕುಂಭದಲ್ಲಿ ತ್ರಿವೇಣಿ ಸಂಗಮದಲ್ಲಿ ಗೃಹ ಸಚಿವ ಅಮಿತ್ ಶಾ ತೀರ್ಥ ಸ್ನಾನ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಶಿವಣ್ಣ ಶೀಘ್ರದಲ್ಲೇ ಶೂಟಿಂಗ್ ಮಾಡಬಹುದು: ಖುಷಿ ಹಂಚಿಕೊಂಡ ಡಾಲಿ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಸಿದ್ದರಾಮಯ್ಯ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ಶಿವಣ್ಣ
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಡಾಮಿನೇಟ್ ಮಾಡುವ ಪ್ರವೃತ್ತಿ ರಜತ್​ಗೆ ಮುಳುವಾಯಿತೇ?
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಹೆದ್ದಾರಿಯಲ್ಲೇ ಕಾರು ಬೈಕ್ ನಿಲ್ಲಿಸಿ ರಂಪಾಟ, ಕಿ.ಮೀಗಟ್ಟಲೆ ಟ್ರಾಫಿಕ್ ಜಾಮ್
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ಅಧಿಕಾರಿಗಳು ಕೇವಲ ಸಿದ್ದರಾಮಯ್ಯ ಪ್ರಕರಣದಲ್ಲಿ ತಪ್ಪು ಮಾಡ್ತಾರೆಯೇ? ಕೃಷ್ಣ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
ರನ್ನಿಂಗ್ ಕ್ಯಾಚ್ ಹಿಡಿದು ಎಲ್ಲರನ್ನು ಚಕಿತರನ್ನಾಗಿಸಿದ ಡೊನೊವನ್ ಫೆರೇರಾ
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
‘ಭವ್ಯಾ ಗೌಡ ಪರಿಚಯ ಮೊದಲೇ ಇತ್ತು’; ಕೊನೆಗೂ ಒಪ್ಪಿಕೊಂಡ ತ್ರಿವಿಕ್ರಮ್
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?
ನಂಜನಗೂಡು: ಹುಲಿ ವಿಡಿಯೋ ವೈರಲ್ ಬಗ್ಗೆ ಅರಣ್ಯ ಇಲಾಖೆ ಹೇಳಿದ್ದೇನು?