PSI Recruitment Scam: ಸಿಐಡಿ ನೋಟಿಸ್ ಗೆ ವಕೀಲರ ಮೂಲಕ ಶಾಸಕ ಪ್ರಿಯಾಂಕ್ ಖರ್ಗೆ ಕೊಟ್ಟರು ಉತ್ತರ

PSI Recruitment Scam: ಸಿಐಡಿ ನೋಟಿಸ್ ಗೆ ವಕೀಲರ ಮೂಲಕ ಶಾಸಕ ಪ್ರಿಯಾಂಕ್ ಖರ್ಗೆ ಕೊಟ್ಟರು ಉತ್ತರ
ಸಿಐಡಿ ನೋಟಿಸ್ ಗೆ ವಕೀಲರ ಮೂಲಕ ಶಾಸಕ ಪ್ರಿಯಾಂಕ್ ಖರ್ಗೆ ಕೊಟ್ಟರು ಉತ್ತರ

Priyank Kharge: ನೋಟಿಸು ನೀಡಿರುವುದನ್ನು ಗಮನಿಸಿದರೆ ನೀವು ನಿಮ್ಮ ರಾಜಕೀಯ ನಾಯಕರನ್ನು ಸಂತೈಸಲು ನೀಡಿರುವಂತೆ ಕಾಣುತ್ತದೆಯೇ ಹೊರತು ಯಾವುದೇ ನಿಷ್ಪಕ್ಷಪಾತ ಹಾಗೂ ನ್ಯಾಯೋಚಿತ ತನಿಖೆ ಮಾಡಲು ನೀಡಿರುವಂತೆ ಕಂಡುಬರುತ್ತಿಲ್ಲ. ಜೊತೆಗೆ ನನ್ನ ರಾಜಕೀಯ‌ ಎದುರಾಳಿಗಳಾದ ನಿಮ್ಮ ರಾಜಕೀಯ ನಾಯಕರ ಮೆಚ್ಚಿಸಲು ನೀಡಿರುವಂತೆ ಕಂಡುಬರುತ್ತಿದೆ - ಸಿಐಡಿ ನೋಟಿಸ್ ಗೆ ಶಾಸಕ ಪ್ರಿಯಾಂಕ್ ಖರ್ಗೆ ಉತ್ತರ

TV9kannada Web Team

| Edited By: sadhu srinath

Apr 28, 2022 | 5:30 PM

ಬೆಂಗಳೂರು: ಪೊಲೀಸ್​ ಸಬ್​ಇನ್ಸ್ಪೆಕ್ಟರ್ ನೇಮಕಾತಿ ಪ್ರಕ್ರಿಯೆಯಲ್ಲಿ (PSI Recruitment Scam) ನಡೆದಿದೆಯೆನ್ನಲಾದ ಅಕ್ರಮಗಳ ಬಗ್ಗೆ ಸರಿಯಾದ ತನಿಖೆ ನಡೆಯಲಿ, ಬೇಕಿದ್ದರೆ ದಾಖಲೆಗಳೊಂದಿಗೆ ನಾನೂ ತನಿಖೆಗೆ ಸಹಾಯ ಮಾಡುವೆ ಎಂದು ಚಿತ್ತಾಪುರ ಕಾಂಗ್ರೆಸ್​ ಶಾಸಕ ಪ್ರಿಯಾಂಕ್ ಖರ್ಗೆ ಅವರು ಸರ್ಕಾರಕ್ಕೆ ಸವಾಲು ಎಸೆದಿದ್ದರು. ಆದರೆ ಆ ಸಂಬಂಧ ತನಿಖಾ ಸಂಸ್ಥೆ ಸಿಐಡಿ (CID) ನೋಟಿಸ್​ ನೀಡಿದ್ದರೂ ಶಾಸಕ ಪ್ರಿಯಾಂಕ್ ಪ್ರತಿಕ್ರಿಯಿಸಿರಲಿಲ್ಲ. ಶಾಸಕ ಪ್ರಿಯಾಂಕ್ ರನ್ನು ಪೊಲೀಸರೇನು ಅರೆಸ್ಟ್ ಮಾಡ್ತಾರಾ? ವಿಚಾರಣೆ ತಾನೇ ಮಾಡೋದು.. ಬಂದು ವಿಚಾರಣೆಗೆ ಹಾಜರಾಗಬೇಕು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಸಹ ಒತ್ತಾಯಿಸಿದ್ದರು. ಈ ಮಧ್ಯೆ, ತಮ್ಮ ವಕೀಲರ ಮೂಲಕ ಸಿಐಡಿ ನೋಟಿಸ್ ಗೆ ಶಾಸಕ ಪ್ರಿಯಾಂಕ್ ಖರ್ಗೆ (Congress MLA Priyank Kharge) ಉತ್ತರ ಕೊಟ್ಟಿದ್ದಾರೆ.

ಸಿಐಡಿ ನೋಟಿಸ್ ಗೆ ಪ್ರಿಯಾಂಕ್ ಖರ್ಗೆ ಉತ್ತರ ಹೀಗಿದೆ: ನಿಮ್ಮ ನೋಟಿಸ್ ಗೆ ನಾನು ಈ ಮೂಲಕ ಉತ್ತರ ನೀಡುವುದೇನೆಂದರೆ ಸಿಐಡಿ ತನಿಖಾ ವಿಭಾಗವು ಕೂಡ ಅತ್ಯಂತ ದಕ್ಷ ಹಾಗೂ ಸಮರ್ಥ ತನಿಖೆಯನ್ನು ಮಾಡಲಿ, ನನ್ನ ಬಳಿ ದಾಖಲೆ ಕೇಳುವುದು ಬೇಡ. ಈಗಾಗಲೇ ಸಾರ್ವಜನಿಕವಾಗಿ ನಾನು ಸುದ್ದಿಗೋಷ್ಠಿಯಲ್ಲಿ ಹೇಳಿದ್ದೇನೆ. ಸಾರ್ವಜನಿಕವಾಗಿ ಇರುವ ದಾಖಲೆಗಳನ್ನು ಮೊದಲು ನೀವು ಸಂಗ್ರಹಿಸಿ. ಕ್ರಿಮಿನಲ್ ಪ್ರೊಸೀಜರ್ ಕೋಡ್ ಸೆಕ್ಷನ್ 91 ರ ಪ್ರಕಾರ ಸಮನ್ ನೀಡಿ ದಾಖಲೆಯನ್ನು ಕೇಳುವ ಎಲ್ಲ ಅಧಿಕಾರ ನಿಮಗೆ ಇದೆ. ಆದರೆ ನಿಮಗೆ ಯಾವ ದಾಖಲೆ ಅಗತ್ಯ ಇದೆಯೋ ಅದೇ ದಾಖಲೆಯನ್ನು ನಿರ್ದಿಷ್ಟವಾಗಿ ತಂದು ಕೊಡಿ ಎಂದು ಉಲ್ಲೇಖಿಸ ಬೇಕಾಗುತ್ತದೆ. ನೀವು ಅದನ್ನು ಉಲ್ಲೇಖಿಸಿಲ್ಲ. ನನ್ನ ಬಳಿ ಸಾಕ್ಷ್ಯ, ದಾಖಲೆ ಇದೆ ಎಂದು ಯಾವ ಆಧಾರದ ಮೇಲೆ ನೀವು ನಿರ್ಧಾರಕ್ಕೆ ಬಂದಿದ್ದೀರಿ. ಈ ಹಿನ್ನೆಲೆಯಲ್ಲಿ ನಿಮ್ಮ ನೋಟಿಸ್ ಆಧಾರರಹಿತವು ಹಾಗೂ ಅತ್ಯಂತ ಆಭಾಸಕಾರಿಯೂ, ಅಪಾಯಕಾರಿಯೂ ಆಗಿದೆ. ಈ ಎಲ್ಲ ಹಿನ್ನೆಲೆಯಲ್ಲಿ ನೀವು ಕೊಟ್ಟಿರುವ ನೋಟಿಸ್ ಕಾನೂನುಬಾಹಿರ ಹಾಗೂ ನಿಮ್ಮ ವ್ಯಾಪ್ತಿ ಮೀರಿದ್ದಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಿಐಡಿ ಅಧಿಕಾರಿಗಳಿಗೆ ನಾನು ಹೇಳಬಯಸುವುದೇನೆಂದರೆ ಯಾವುದೇ ಕಾರಣಕ್ಕೂ ಇಂತಹ ಆಧಾರರಹಿತ ನೋಟಿಸನ್ನು ನೀಡತಕ್ಕದ್ದಲ್ಲ. ಇದರ ಬದಲು ತಾವು ಯಾರು ನಿಜವಾದ ಅಪರಾಧಿಗಳು ಇದ್ದಾರೊ ಅವರನ್ನು ಸೆರೆಹಿಡಿಯುವ ಕಡೆ ಗಮನಹರಿಸಿ. ಪ್ರಭು ಚೌಹಾಣ್ ಮತ್ತು ಸಚಿವ ಆರಗ ಜ್ಞಾನೇಂದ್ರ ಬರೆದ ಪತ್ರಗಳನ್ನು ಲಗತ್ತಿಸಿ, ಪ್ರಿಯಾಂಕ್ ಖರ್ಗೆ ಉತ್ತರ ನೀಡಿದ್ದಾರೆ.

ಪ್ರಿಯಾಂಕ್ ಉತ್ತರದ ಸಾರಾಂಶ ಹೀಗಿದೆ: 1) ನೀವಿಗ ತನಿಖೆ‌ ನಡೆಸುತ್ತಿರುವ ಕೇಸಿನ ಕೇಂದ್ರಬಿಂದು ಕಲಬುರಗಿ ಜಿಲ್ಲೆಯ ಚಿತ್ತಾಪುರ ಮತಕ್ಷೇತ್ರದ ಚುನಾಯಿತ ಜನಪ್ರತಿನಿಧಿಯಾಗಿದ್ದೇನೆ. 2) ನೀವು ನನಗೆ ನೋಟಿಸು ನೀಡಿ‌ ನನ್ನಿಂದ ಬಯಸಿರುವ ದಾಖಲೆಗಳು ಸಾರ್ವಜನಿಕ ವಲಯದಲ್ಲಿರುವ ದಾಖಲೆಗಳಾಗಿವೆ. ಹಾಗಾಗಿ ತನಿಖಾಧಿಕಾರಿಗಳು ಮೊದಲು ಸಾರ್ವಜನಿಕ ವಲಯದ ಯಾರಿಂದಲಾದರೂ ಮಾಹಿತಿ ಪಡೆದುಕೊಳ್ಳಬೇಕು. 3)ನೀವು ಕಲಂ 91 ಹಾಗೂ 160 ಅಡಿಯಲ್ಲಿ ನೀಡಿರುವ ನೋಟಿಸು, ಸಂವಿಧಾನದ ಅಡಿಯಲ್ಲಿ ಕೊಡಮಾಡಲಾದ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಾಗಿದೆ. 4) ನೋಟಿಸು ನೀಡಿರುವುದನ್ನು ಗಮನಿಸಿದರೆ ನೀವು ನಿಮ್ಮ ರಾಜಕೀಯ ನಾಯಕರನ್ನು ಸಂತೈಸಲು ನೀಡಿರುವಂತೆ ಕಾಣುತ್ತದೆಯೇ ಹೊರತು ಯಾವುದೇ ನಿಷ್ಪಕ್ಷಪಾತ ಹಾಗೂ ನ್ಯಾಯೋಚಿತ ತನಿಖೆ ಮಾಡಲು ನೀಡಿರುವಂತೆ ಕಂಡುಬರುತ್ತಿಲ್ಲ. ಜೊತೆಗೆ ನನ್ನ ರಾಜಕೀಯ‌ ಎದುರಾಳಿಗಳಾದ ನಿಮ್ಮ ರಾಜಕೀಯ ನಾಯಕರ ಮೆಚ್ಚಿಸಲು ನೀಡಿರುವಂತೆ ಕಂಡುಬರುತ್ತಿದೆ. ನಿಮ್ಮ ಈ‌ ಪ್ರಯತ್ನ ಕಾನೂನುಬಾಹಿರ ಮಾತ್ರವಲ್ಲದೇ ನ್ಯಾಯನಿರ್ವಹಣೆ ವ್ಯಾಪ್ತಿಗೆ ಒಳಪಡುವುದಿಲ್ಲ. 5) ಇನ್ನೂ ಕಲಂ 160 ರ ಪ್ರಕಾರ ಸಾಕ್ಷಿದಾರರಿಗೆ ತಮ್ಮ ಬಳಿ‌ ಇರುವ ದಾಖಲೆಗಳನ್ನು ಒದಗಿಸುವಂತೆ ಕೇಸಿನ ಸಂಪೂರ್ಣ ಮಾಹಿತಿ‌ ಇರುವ ವ್ಯಕ್ತಿಯೊಬ್ಬರನ್ನು ಕರೆಯಬಹುದು. ಆದರೆ, ಈ ಕೇಸಿನಲ್ಲಿ ನಾನು ಸಾಕ್ಷಿದಾರ ಎಂದು ನೀವು ನಂಬಲು ಮಾಹಿತಿಗಳಿರಬೇಕು. ಆದರೆ, ದಿನಾಂಕ 23-04-2022 ರಂದು ನಾನು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಹೇಳಿರುವ ಹೇಳಿಕೆಗಳ ಅಧರಿಸಿ‌ ನೀವು ನನಗೆ ನೋಟಿಸು ನೀಡಿರುವುದಾಗಿ ಹೇಳಿದ್ದೀರಿ. ಆದರೆ‌, ನೀವು ಈಗ ಕೈಗೊಂಡಿರುವ ಹಗರಣದ ತ‌ನಿಖೆ ಸಾರ್ವಜನಿಕ ವಲಯಕ್ಕೆ ಹೊಸದಲ್ಲ. 6) ಪಿಎಸ್ ಐ ನೇಮಕಾತಿಗೆ ಸಂಬಂಧಿಸಿದಂತೆ ಭಾರೀ ಮಟ್ಟದ ಅವ್ಯವಹಾರ ನಡೆದಿದೆ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ ಇದರಿಂದಾಗಿ ಸರ್ಕಾರಕ್ಕೆ ಕೆಟ್ಟ ಹೆಸರು ತರುವುದರಿಂದ ಸಮಗ್ರ ತನಿಖೆ‌ ನಡೆಸುವಂತೆ ಸಚಿವರಾದ ಪ್ರಭು ಚವ್ಹಾಣ್ ದಿನಾಂಕ 03-02-2022. ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಜೊತೆಗೆ ಬಿಜೆಪಿಯ ಎಂ ಎಮ್ ಸಿ‌ ಒಬ್ಬರು ಈ‌ ಹಗರಣದ ಕುರಿತು ತನಿಖೆ‌ ನಡೆಸುವಂತೆ ದಿನಾಂಕ 15-03-2022. ರಂದು ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಈ‌ ಇಬ್ಬರು ಜವಾಬ್ದಾರಿ ಯುತ ಸದಸ್ಯರು ಎರಡು ತಿಂಗಳ ಹಿಂದೆ ಸರ್ಕಾರಕ್ಕೆ ಹಾಗೂ ಗೃಹ ಸಚಿವರಿಗೆ ಪತ್ರ ಬರೆದು ಪಿಎಸ್ ಐ ನೇಮಕಾತಿಯಲ್ಲಿ ಬಹುದೊಡ್ಡ ಹಗರಣ ನಡೆದಿದ್ದು ತನಿಖೆ ಕೈಗೊಳ್ಳುವಂತೆ ಕೋರಿದ್ದರೂ ಕೂಡಾ ತನಿಖಾಧಿಕಾರಿಗಳು ಇವರುಗಳಿಗೆ ನೋಟಿಸು ನೀಡಿಲ್ಲ‌ ಇದು ನನಗೆ ಅಚ್ಚರಿ ತಂದಿದೆ.

ಇದೂ ಓದಿ: ನನಗೆ ಸದ್ಯಕ್ಕೆ ಬಿಜೆಪಿ ಸೇರುವ ಅವಶ್ಯಕತೆ ಇಲ್ಲ, ಬಿಜೆಪಿ ಸೇರುವ ಬಗ್ಗೆ ನಾನು ಎಲ್ಲೂ ಹೇಳಿಲ್ಲ: ಸಂಸದೆ ಸುಮಲತಾ ಅಂಬರೀಶ್ ಸ್ಪಷ್ಟನೆ

ಇದೂ ಓದಿ: ಗೌರವಯುತವಾಗಿ ಶರಣಾಗಿ, ಇಲ್ಲಾಂದ್ರೆ ಆಸ್ತಿ ಮುಟ್ಟುಗೋಲು ಹಾಕ್ತೇವೆ -ಹಾಗರಗಿಗೆ ಗೃಹ ಸಚಿವ ಎಚ್ಚರಿಕೆ ಮಿಶ್ರಿತ ಕಿವಿಮಾತು

Follow us on

Related Stories

Most Read Stories

Click on your DTH Provider to Add TV9 Kannada