ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ಐಜಿಪಿ ರಾಘವೇಂದ್ರ ಸುಹಾಸ್​ಗೆ ಸಿಐಡಿಯಿಂದ ನೋಟಿಸ್

| Updated By: sandhya thejappa

Updated on: Jun 19, 2021 | 11:10 AM

ಕೇಸ್​ನಲ್ಲಿ ಇದುವರೆಗೆ ಎಷ್ಟು ಹಣದ ವರ್ಗಾವಣೆ ಅಗಿದೆ? ಬಂಗಾರ ಎಲ್ಲಿಂದ ಎಲ್ಲಿಗೆ ಹೋಗುತಿತ್ತು? ಬಂಗಾರವನ್ನು ಪೊಲೀಸ್ ಠಾಣೆ ಬಳಿಯಿದ್ದ ಕಾರಿನಿಂದ ಯಾರು ಕಳ್ಳತನ ಮಾಡಿದ್ದರು? ಎನ್ನುವ ಹಲವು ಪ್ರಶ್ನೆಗಳಿಗೆ ಸಿಐಡಿ ತಂಡ ಉತ್ತರ ಹುಡುಕುತ್ತಿದೆ.

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ: ಐಜಿಪಿ ರಾಘವೇಂದ್ರ ಸುಹಾಸ್​ಗೆ ಸಿಐಡಿಯಿಂದ ನೋಟಿಸ್
ಐಜಿಪಿ ರಾಘವೇಂದ್ರ ಸುಹಾಸ್
Follow us on

ಬೆಂಗಳೂರು: ಬೆಳಗಾವಿಯಲ್ಲಿ 4ಕೆ.ಜಿ 900 ಗ್ರಾಂ ಚಿನ್ನ ಅಕ್ರಮ ಸಾಗಣೆ ಕೇಸ್ ಸಂಬಂಧ ಐಜಿಪಿ ರಾಘವೇಂದ್ರ ಸುಹಾಸ್​ಗೆ ಸಿಐಡಿ ತನಿಖಾ ತಂಡ ನೋಟಿಸ್ ನೀಡಿದೆ. ವಿಚಾರಣೆಗೆ ಹಾಜರಾಗಲು ಸಿಐಡಿ ನೋಟಿಸ್ ನೀಡಿದ್ದು, ಐಜಿಪಿ ರಾಘವೇಂದ್ರ ಸುಹಾಸ್ ಕೊರೊನಾ ಕಾರಣ ನೀಡಿ ವಿಚಾರಣೆಗೆ ಹಾಜರಾಗುವುದಕ್ಕೆ ಸಮಯವನ್ನು ಕೇಳಿದ್ದಾರೆ. ಕುಟುಂಬಸ್ಥರಿಗೆ ಕೊವಿಡ್ ಇರುವ ಕಾರಣ ನೀಡಿರುವ ಐಜಿಪಿ, ಕೊವಿಡ್​ನಿಂದ ಕುಟುಂಬ ಗುಣವಾದ ಬಳಿಕ ವಿಚಾರಣೆಗೆ ಹಾಜರಾಗುತ್ತೇನೆ ಎಂದಿದ್ದಾರಂತೆ.

ಈವರೆಗಿನ ಹಳೆಯ ಕೇಸ್​ಗೆ ಮೂರು ಹೊಸ ಕೇಸ್ ದಾಖಲಾಗಿದೆ. ನಾಲ್ಕು ಕೇಸ್​ಗಳನ್ನು ಒಟ್ಟಾಗಿಸಿ ಸಿಐಡಿ ತಂಡ ತನಿಖೆ ನಡೆಸುತ್ತಿದೆ. ಕೇಸ್ ನಂಬರ್ 1- ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಕಾರಿನಲ್ಲಿದ್ದ ಬಂಗಾರ ಕಳ್ಳತನವಾಗಿರುವ ಪ್ರಕರಣ ದಾಖಲಾಗಿದೆ. ಕೇಸ್ ನಂಬರ್ 2- ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಹಣ ಪಡೆದಿರುವ ಆರೋಪ ಪ್ರಕರಣ ದಾಖಲಾಗಿದೆ. ಕೇಸ್ ನಂಬರ್ 3- ಹಿರೆಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ನಕಲಿ ಪೊಲೀಸ್ ಐಡಿ ಕಾರ್ಡ್ ಬಳಕೆ ಸಂಬಂಧ ಕೇಸ್ ದಾಖಲಾಗಿದೆ. ಕೇಸ್ ನಂಬರ್ 4- ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಐಜಿಪಿ ಮಾಹಿತಿ ಮೇರೆಗೆ ಎರಿಟಿಗಾ ಕಾರು ಸೀಜ್ ಮಾಡಿದ್ದ ಕೇಸ್ ದಾಖಲಾಗಿದೆ.

ಜಪ್ತಿಯಾದ ಕಾರಿನಲ್ಲಿದ್ದ 4 ಕೆಜಿ 900 ಗ್ರಾಂ ಚಿನ್ನ ಸಾಗಿಸಿದ್ದರು. ಅಕ್ರಮದ ಬಗ್ಗೆ ಟಿವಿ9ನಲ್ಲಿ ವಿಸ್ತೃತ ವರದಿ ಪ್ರಸಾರವಾಗಿತ್ತು. ಟಿವಿ9 ವರದಿ ಬಳಿಕ ಐಜಿಪಿ ಸೇರಿ ನಾಲ್ವರು ಅಧಿಕಾರಿಗಳನ್ನು ಎತ್ತಂಗಡಿ ಮಾಡಲಾಗಿತ್ತು.

ಕೇಸ್​ನಲ್ಲಿ ಇದುವರೆಗೆ ಎಷ್ಟು ಹಣದ ವರ್ಗಾವಣೆ ಅಗಿದೆ? ಬಂಗಾರ ಎಲ್ಲಿಂದ ಎಲ್ಲಿಗೆ ಹೋಗುತಿತ್ತು? ಬಂಗಾರವನ್ನು ಪೊಲೀಸ್ ಠಾಣೆ ಬಳಿಯಿದ್ದ ಕಾರಿನಿಂದ ಯಾರು ಕಳ್ಳತನ ಮಾಡಿದ್ದರು? ಎನ್ನುವ ಹಲವು ಪ್ರಶ್ನೆಗಳಿಗೆ ಸಿಐಡಿ ತಂಡ ಉತ್ತರ ಹುಡುಕುತ್ತಿದೆ.

ಇದನ್ನೂ ಓದಿ

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದ ಬೆನ್ನಲ್ಲೇ ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ವರ್ಗಾವಣೆ

ಮಂಗಳೂರಿನಲ್ಲಿ ಬಂಗಾರ ಕದ್ದ ಮಿಕಗಳು ಲಾಕ್; ಬೆಳಗಾವಿಯಲ್ಲಿ ಗೋಲ್ಡ್ ಸ್ಮಗ್ಲಿಂಗ್ ಕೇಸ್​ಗೆ ಟ್ವಿಸ್ಟ್

(CID issued a notice to IGP Raghavendra Suhas to attend the investigation)

Published On - 11:09 am, Sat, 19 June 21