APMC ಕಾಯಿದೆ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟದಿಂದ ಹಸಿರು ನಿಶಾನೆ

ಬೆಂಗಳೂರು: ರಾಜ್ಯವ್ಯಾಪಿ ಭಾರಿ ವಿರೋಧದ ನಡುವೆ ಎಪಿಎಂಸಿ ಕಾಯಿದೆ ತಿದ್ದುಪಡಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಇಂದು ಸಂಜೆ ಸಭೆ ಸೇರಿದ್ದ ಸಂಪುಟವು ಬಿಡಿಎ 38d ಗೆ ತಿದ್ದುಪಡಿ ಕಾಯಿದೆಗೆ ಒಪ್ಪಿಗೆ ನೀಡಿದ್ದು, ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯಿದೆಗೆ ಸಹ ಒಪ್ಪಿಗೆ ಸೂಚಿಸಿದೆ. ಮಂಗಳೂರಿನಲ್ಲಿ ಸಮಗ್ರ ಸಾರಿಗೆ ಕೇಂದ್ರ ಸ್ಥಾಪನೆ. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯಗಳಿಗೆ ಆಹಾರ‌ ಪದಾರ್ಥ ಖರೀದಿಗೆ 260 ಕೋಟಿ ರೂ ನೀಡಲು […]

APMC ಕಾಯಿದೆ ತಿದ್ದುಪಡಿಗೆ ರಾಜ್ಯ ಸಚಿವ ಸಂಪುಟದಿಂದ ಹಸಿರು ನಿಶಾನೆ
ಸಿಎಂ ಯಡಿಯೂರಪ್ಪ
ಸಾಧು ಶ್ರೀನಾಥ್​

Updated on: May 14, 2020 | 6:36 PM

ಬೆಂಗಳೂರು: ರಾಜ್ಯವ್ಯಾಪಿ ಭಾರಿ ವಿರೋಧದ ನಡುವೆ ಎಪಿಎಂಸಿ ಕಾಯಿದೆ ತಿದ್ದುಪಡಿಗೆ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಇಂದು ಸಂಜೆ ಸಭೆ ಸೇರಿದ್ದ ಸಂಪುಟವು ಬಿಡಿಎ 38d ಗೆ ತಿದ್ದುಪಡಿ ಕಾಯಿದೆಗೆ ಒಪ್ಪಿಗೆ ನೀಡಿದ್ದು, ಶಿಕ್ಷಕರ ವರ್ಗಾವಣೆ ತಿದ್ದುಪಡಿ ಕಾಯಿದೆಗೆ ಸಹ ಒಪ್ಪಿಗೆ ಸೂಚಿಸಿದೆ.
ಮಂಗಳೂರಿನಲ್ಲಿ ಸಮಗ್ರ ಸಾರಿಗೆ ಕೇಂದ್ರ ಸ್ಥಾಪನೆ. ಸಮಾಜ ಕಲ್ಯಾಣ ಇಲಾಖೆಯ ವಿದ್ಯಾರ್ಥಿ ವಸತಿ ನಿಲಯಗಳಿಗೆ ಆಹಾರ‌ ಪದಾರ್ಥ ಖರೀದಿಗೆ 260 ಕೋಟಿ ರೂ ನೀಡಲು ಒಪ್ಪಿಗೆ ನೀಡಿದೆ. ತುಂಗಭದ್ರಾ ನದಿಗೆ ನವಿಲೆ ಬಳಿ ಬ್ಯಾಲೆನ್ಸಿಂಗ್ ರಿಜರ್ವಾಯರ್ ನಿರ್ಮಾಣಕ್ಕೆ 14.3 ಕೋಟಿ ರೂ ಅನುದಾನ.

Published On - 6:32 pm, Thu, 14 May 20

ಸಾಧು ಶ್ರೀನಾಥ್​

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Loading...
Unable to load recommendations.
Follow Us