ಮನೆ ದೇವರ ದೇಗುಲ ಪ್ರವೇಶಕ್ಕೂ ಮುನ್ನ ಯಡಿಯೂರಪ್ಪ ಪಾದ ತೊಳೆದ ಬೆಂಬಲಿಗ

ತುಮಕೂರು: ಕುಣಿಗಲ್ ತಾಲೂಕಿನ ಎಡೆಯೂರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದ ವೇಳೆ ಬೆಂಬಲಿಗ ಬಿಎಸ್​ವೈ ಪಾದ ತೊಳೆದ ಘಟನೆ ನಡೆದಿದೆ. ಮನೆ ದೇವರು ಎಡೆಯೂರಿನ ಸಿದ್ದಲಿಂಗೇಶ್ವರ ದೇವರ ದರ್ಶನ ಪಡೆಯಲು ಯಡಿಯೂರಪ್ಪ ಎಡಿಯೂರಿಗೆ ತೆರಳಿದ್ದರು. ದೇಗುಲ ಪ್ರವೇಶಕ್ಕೂ ಮುನ್ನ ಬೆಂಬಲಿಗರೊಬ್ಬರು ಬಿಎಸ್​ವೈ ಅವರ ಪಾದ ತೊಳೆದಿದ್ದಾರೆ. ಪಾದ ತೊಳೆದ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ ದೇಗುಲ ಪ್ರವೇಶಿಸಿದ್ದಾರೆ. ಮೈತ್ರಾದೇವಿ ಯಡಿಯೂರಪ್ಪ ಸಮುದಾಯ ಭವನಕ್ಕೆ ಶಿಲಾನ್ಯಾಸ: ಇಂದು ತಮ್ಮ ಪತ್ನಿಯ ಹೆಸರಲ್ಲಿ ನಿರ್ಮಿಸಲಿರುವ ‘ಮೈತ್ರಾದೇವಿ ಬಿ.ಎಸ್.ಯಡಿಯೂರಪ್ಪ ಸಮುದಾಯಭವನ’ಕ್ಕೆ ಶಿಲಾನ್ಯಾಸ, ದೇವಸ್ಥಾನದ […]

ಮನೆ ದೇವರ ದೇಗುಲ ಪ್ರವೇಶಕ್ಕೂ ಮುನ್ನ ಯಡಿಯೂರಪ್ಪ ಪಾದ ತೊಳೆದ ಬೆಂಬಲಿಗ
ಸಾಧು ಶ್ರೀನಾಥ್​

Updated on: Oct 18, 2019 | 1:16 PM

ತುಮಕೂರು: ಕುಣಿಗಲ್ ತಾಲೂಕಿನ ಎಡೆಯೂರಿಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಭೇಟಿ ನೀಡಿದ್ದ ವೇಳೆ ಬೆಂಬಲಿಗ ಬಿಎಸ್​ವೈ ಪಾದ ತೊಳೆದ ಘಟನೆ ನಡೆದಿದೆ.

ಮನೆ ದೇವರು ಎಡೆಯೂರಿನ ಸಿದ್ದಲಿಂಗೇಶ್ವರ ದೇವರ ದರ್ಶನ ಪಡೆಯಲು ಯಡಿಯೂರಪ್ಪ ಎಡಿಯೂರಿಗೆ ತೆರಳಿದ್ದರು. ದೇಗುಲ ಪ್ರವೇಶಕ್ಕೂ ಮುನ್ನ ಬೆಂಬಲಿಗರೊಬ್ಬರು ಬಿಎಸ್​ವೈ ಅವರ ಪಾದ ತೊಳೆದಿದ್ದಾರೆ. ಪಾದ ತೊಳೆದ ಬಳಿಕ ಸಿಎಂ ಬಿ.ಎಸ್.ಯಡಿಯೂರಪ್ಪ ದೇಗುಲ ಪ್ರವೇಶಿಸಿದ್ದಾರೆ.

ಮೈತ್ರಾದೇವಿ ಯಡಿಯೂರಪ್ಪ ಸಮುದಾಯ ಭವನಕ್ಕೆ ಶಿಲಾನ್ಯಾಸ:
ಇಂದು ತಮ್ಮ ಪತ್ನಿಯ ಹೆಸರಲ್ಲಿ ನಿರ್ಮಿಸಲಿರುವ ‘ಮೈತ್ರಾದೇವಿ ಬಿ.ಎಸ್.ಯಡಿಯೂರಪ್ಪ ಸಮುದಾಯಭವನ’ಕ್ಕೆ ಶಿಲಾನ್ಯಾಸ, ದೇವಸ್ಥಾನದ ನವೀಕರಣ ಕಾಮಗಾರಿಗೆ ಶಿಲಾನ್ಯಾಸ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಸಿಎಂ ಬಿಎಸ್​ವೈ ಚಾಲನೆ ನೀಡಲಿದ್ದಾರೆ.

Published On - 12:46 pm, Fri, 18 October 19

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us