ಮಂಡ್ಯ: (Mandya)ಮೈ ಶುಗರ್ ಕಾರ್ಖಾನೆ (My Sugar Factory) ಗೇಟ್ ಬಳಿ ಕಾಂಗ್ರೆಸ್ (Congress) ಕಾರ್ಯಕರ್ತರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದ್ದು, ಕಾರ್ಖಾನೆ ಮುಂದೆ ಹೈ ಡ್ರಾಮ ಸೃಷ್ಟಿಯಾಗಿದೆ. ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ಕಾರ್ಖಾನೆ ಸ್ವಚ್ಛತೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಬಂದಿದ್ದರು. ಈ ವೇಳೆ ಕಾರ್ಖಾನೆ ಪ್ರವೇಶಕ್ಕೆ ಅನುಮತಿ ನೀಡದ ಪೊಲೀಸರು ಕಾರ್ಖಾನೆ ಗೇಟ್ ಬಳೆ ತಡೆದಿದ್ದರು. ಇದರಿಂದ ಫ್ಯಾಕ್ಟರಿ ಮುಂದೆ ಪೊಲೀಸರು ಹಾಗೂ ಯೂಥ್ ಕಾಂಗ್ರೆಸ್ ಮುಖಂಡರ ನಡುವೆ ಮತಿನ ಚಕಮಕಿ ನಡೆದಿದೆ. ಕಾರ್ಖಾನೆ ಪ್ರವೇಶಕ್ಕೆ ಅನುಮತಿ ನೀಡಿದರು ಕಾರ್ಖಾನೆ ಪ್ರವೇಶಕ್ಕೆ ಪೊಲೀಸರು ಬಿಡುತ್ತಿಲ್ಲ ಎಂದು ನಲಪಾಡ್ ಆರೋಪ ಮಾಡಿದ್ದಾರೆ.
ಮೊಹಮ್ಮದ್ ನಲಪಾಡ್ ನೇತೃತ್ವದಲ್ಲಿ ಕಾರ್ಖಾನೆ ಮುಂದೆ ಯುವ ಕಾಂಗ್ರೆಸ್ ಕಾರ್ಯಕರ್ತರ ಧರಣಿ ಕೂತಿದ್ದಾರೆ. ಈ ವೇಳೆ ಪೊಲೀಸರು ಕೈ ಕಾರ್ಯಕರ್ತರ ಮನವೊಲಿಸಲು ಯತ್ನಿಸಿದ್ದಾರೆ. ಬ್ಯಾರಿಕೇಡ್ ತಳ್ಳಿ ಒಳ ಪ್ರವೇಶಿಸಲು ಕಾಂಗ್ರೆಸ್ ಮುಖಂಡರು ಯತ್ನಿಸಿದ್ದಾರೆ. ಕಾರ್ಖಾನೆ ಪ್ರವೇಶಕ್ಕೆ ಅನುಮತಿ ನೀಡದ ಪೊಲೀಸರ ನಡೆಗೆ ಆಕ್ರೋಶಗೊಂಡ ಮೊಹಮ್ಮದ್ ನಲಪಾಡ್ ಮೊದಲೇ ಅನುಮತಿ ಪಡೆದಿದ್ದೇವೆ ನಮಗೆ ಕಾರ್ಖಾನೆ ಪ್ರವೇಶಿಸಲು ಬಿಡಿ. ಸ್ವಚ್ಛತೆ ಮಾಡಿದ್ರೆ 10 ಲಕ್ಷ ಫ್ಯಾಕ್ಟರಿಗೆ ಹಣ ಉಳಿಯುತ್ತೆ ಅಂತ ಅಧಿಕಾರಿಗಳೇ ಹೇಳಿದ್ರು. 40% ಕಮಿಷನ್ ಹಣ ಸಿಗಲ್ಲ ಅಂತ ನಮ್ಮನ್ನು ತಡೆಯುತ್ತಿದ್ದೀರಾ? 4ಲಕ್ಷ ಕಮಿಷನ್ ಹಣವನ್ನು ನಾನೇ ಕೊಡ್ತೀನಿ. ಸ್ವಚ್ಛತೆಗೆ ಬಿಡಿ ಎಂದು ಹೇಳಿ ಚೆಕ್ ಬುಕ್ ನಲಪಾಡ್ ತರಲುಹೇಳಿದರು.
ಆದರೆ ಪೊಲೀಸರು ಅನುಮತಿ ನೀಡಿದ ಬಳಿಕ ನೀತಿ ಸಂಹಿತೆ ಜಾರಿಗೆ ಬಂದಿದೆ. ಯಾವುದೇ ಕಾರಣಕ್ಕೂ ಕಾರ್ಖಾನೆ ಒಳಗೆ ಬಿಡುವುದಿಲ್ಲ ಎಂದು ಮನವೊಲಿಸಲು ಯತ್ನಿಸಿದ್ದಾರೆ. ಹೀಗಾಗಿ ರಸ್ತೆಯಲ್ಲೇ ಕುಳಿತು ಯೂತ್ ಕಾಂಗ್ರೆಸ್ ಪ್ರತಿಭಟನೆ ಆರಂಭಿಸಿದ್ದಾರೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.