AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಸಭೆಯಿಂದ ವಿಧಾನಪರಿಷತ್‌ಗೆ 11 ಸದಸ್ಯರು ಅವಿರೋಧ ಆಯ್ಕೆ: ಯಾರ್ಯಾರು? ಇಲ್ಲಿದೆ ಪಟ್ಟಿ

Karnataka Legislative Council Elections: ಕರ್ನಾಟಕ ವಿಧಾನಸಭೆಯಿಂದ ವಿಧಾನ ಪರಿಷತ್‌ಗೆ ನಡೆದ ಚುನಾವಣೆಯಲ್ಲಿ 11 ಅಭ್ಯರ್ಥಿಗಳೂ ಅವಿರೋಧವಾಗಿ ಆಯ್ಕೆ ಆಗಿದ್ದಾರೆ. ಯಾವುದೇ ಹೆಚ್ಚುವರಿ ಅಭ್ಯರ್ಥಿ ಕಣದಲ್ಲಿ ಇಲ್ಲದಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಹಾಗಾದ್ರೆ, ಯಾರ್ಯಾರು? ಯಾವ ಪಕ್ಷದಿಂದ ಮೇಲ್ಮನೆಗೆ ಆಯ್ಕೆಯಾಗಿದ್ದಾರೆ ಎನ್ನುವ ವಿವರ ಇಲ್ಲಿದೆ.

ವಿಧಾನಸಭೆಯಿಂದ ವಿಧಾನಪರಿಷತ್‌ಗೆ 11 ಸದಸ್ಯರು ಅವಿರೋಧ ಆಯ್ಕೆ: ಯಾರ್ಯಾರು? ಇಲ್ಲಿದೆ ಪಟ್ಟಿ
ವಿಧಾನಸೌಧ
ಕಿರಣ್​ ಹನಿಯಡ್ಕ
| Updated By: Digi Tech Desk|

Updated on:Jun 06, 2024 | 5:16 PM

Share

ಬೆಂಗಳೂರು, (ಜೂನ್ 07): ವಿಧಾನಸಭೆಯಿಂದ ವಿಧಾನಪರಿಷತ್‌ (Karnataka legislative council) ಒಟ್ಟು11 ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್‌ನ 7, ಬಿಜೆಪಿ 3, ಜೆಡಿಎಸ್‌ನ ಓರ್ವ ಸದಸ್ಯರು ವಿಧಾನಪರಿಷತ್​ಗೆ ಅವಿರೋಧ ಆಯ್ಕೆಯಾಗಿದ್ದಾರೆ. ಈ ಬಗ್ಗೆ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರು ಇಂದು (ಜೂನ್ 07) ಅಧಿಕೃತವಾಗಿ ಘೋಷಣೆ ಮಾಡಿದರು.

ಒಟ್ಟು 11 ವಿಧಾನಪರಿಷತ್​ ಸ್ಥಾನಗಳಲ್ಲಿ ವಿಧಾನಸಭೆ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್​ ಏಳು ಸ್ಥಾನ, ಬಿಜೆಪಿ ಮೂರು ಸ್ಥಾನ ಹಾಗೂ ಜೆಡಿಎಸ್​ಗೆ ಒಂದು ಸ್ಥಾನ ಸಿಕ್ಕಿದೆ.  ಕಾಂಗ್ರೆಸ್‌ನಿಂದ ಬೋಸರಾಜು, ಐವಾನ್ ಡಿಸೋಜಾ, ವಸಂತ್ ಕುಮಾರ್, ಬಿಲ್ಕೀಸ್ ಬಾನು‌, ಜಗದೇವ್ ಗುತ್ತೇದಾರ್, ಗೋವಿಂದ್ ರಾಜು, ಯತೀಂದ್ರ ಸಿದ್ದರಾಮಯ್ಯ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: ಸಚಿವ ನಾಗೇಂದ್ರ ರಾಜೀನಾಮೆ: ಸಿದ್ದರಾಮಯ್ಯ ಸರ್ಕಾರದ ಮೊದಲ ವಿಕೆಟ್ ಪತನ

ಬೋಸರಾಜ್​  ಅವರು ಎರಡನೇ ಬಾರಿಗೆ ಮೇಲ್ಮನೆಗೆ ಪ್ರವೇಶ ಮಾಡಿದ್ದು, ಸದ್ಯ ಸಿದ್ದರಾಮಯ್ಯ ಸಂಪುಟದಲ್ಲಿ ಸಚಿವರಾಗಿದ್ದಾರೆ. ಇನ್ನು ಗೋವಿಂದ್ ರಾಜು ಸಹ ಎರಡನೇ ಬಾರಿಗೆ ಆಯ್ಕೆಯಾಗಿದ್ದು, ಸದ್ಯ ಅವರು ಮುಖ್ಯಮಂತ್ರಿ ರಾಜಕೀಯ ಕಾರ್ಯದರ್ಶಿಯಾಗಿದ್ದಾರೆ. ಇನ್ನು ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರವನ್ನು ತಮ್ಮ ತಂದೆಗೆ ಬಿಟ್ಟುಕೊಟ್ಟಿದ್ದ ಯತೀಂದ್ರ ಅವರನ್ನು ಹೈಕಮಾಂಡ್, ಪರಿಷತ್​ಗೆ ಆಯ್ಕೆ ಮಾಡಿದೆ. ಇನ್ನುಳಿದಂತೆ ವಸಂತ್ ಕುಮಾರ್, ಬಿಲ್ಕೀಸ್ ಬಾನು‌, ಜಗದೇವ್ ಗುತ್ತೇದಾರ್ ಹೊಸ ಮುಖಗಳಾಗಿವೆ.

ಇನ್ನು ಬಿಜೆಪಿಯಿಂದ ಸಿಟ ರವಿ, ಎನ್​ ರವಿ ಕುಮಾರ್ ಹಾಗೂ  ಎಂ.ಜಿ ಮೂಳೆ ಅವರು ಅವರೋಧವಾಗಿ ವಿಧಾನಪರಿಷತ್​ಗೆ ಆಯ್ಕೆಯಾಗಿದ್ದರೆ. ಇನ್ನು ಜೆಡಿಎಸ್​ನಿಂದ ಹಿರಿಯ ನಾಯಕ ಜವರಾಯಿಗೌಡ ಮೇಲ್ಮನೆ ಪ್ರವೇಶಿಸಿದ್ದಾರೆ.

ಸಿಟಿ ರವಿ ಅವರು ವಿಧಾನಸಭಾ ಚುನಾವಣೆಯಲ್ಲಿ ಸೋಲುಕಂಡಿದ್ದರು. ಬಳಿಕ ಅವರು ಲೋಕಸಭಾ ಚುನಾವಣೆ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದ್ರೆ, ಲೋಕಸಭಾ ಟಿಕೆಟ್​ ಕೈತಪ್ಪಿದ್ದರಿಂದ ಅವರನ್ನು ವಿಧಾನಪರಿಷತ್​ಗೆ ಆಯ್ಕೆ ಮಾಡಲಾಗಿದೆ. ಇನ್ನು ರವಿ ಕುಮಾರ್ ಎರಡನೇ ಬಾರಿಗೆ ಆಯ್ಕೆಯಾಗಿದ್ದರೆ, ಎಂ.ಜಿ ಮೂಳೆ ಇದೇ ಮೊದಲ ಬಾರಿಗೆ ಮೇಲ್ಮನೆ ಪ್ರವೇಶ ಮಾಡಿದ್ದಾರೆ.

ಇನ್ನು ಪದವೀಧರ, ಶಿಕ್ಷಕರ ಕ್ಷೇತ್ರಗಳ ವಿಧಾನಪರಿಷತ್​ ಚುನಾವಣೆಯ ಮತದಾನ ಎಣಿಕೆ ಪ್ರಕ್ರಿಯೆ ನಡೆದಿದ್ದು, ಯಾರು ಗೆಲ್ಲಲಿದ್ದಾರೆ ಎನ್ನುವುದನ್ನು ಕಾದುನೋಡಬೇಕಿದೆ.

ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 5:08 pm, Thu, 6 June 24