ಉಡುಪಿ ಜಿಲ್ಲೆಯಲ್ಲಿ 4 ದಿನದಿಂದ ಕೊರೊನಾ ಕೇಸ್ ಹೆಚ್ಚಳ

|

Updated on: Mar 18, 2021 | 2:49 PM

ಉಡುಪಿಯಲ್ಲಿ ನಾಲ್ಕು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಮಣಿಪಾಲ್​ ಎಂಐಟಿ ಕ್ಯಾಂಪಸ್​ನಲ್ಲಿ ಇಂದು ಒಟ್ಟು 95 ಕೇಸ್​ಗಳು ಪತ್ತೆಯಾಗಿವೆ.

ಉಡುಪಿ ಜಿಲ್ಲೆಯಲ್ಲಿ 4 ದಿನದಿಂದ ಕೊರೊನಾ ಕೇಸ್ ಹೆಚ್ಚಳ
ಪ್ರಾತಿನಿಧಿಕ ಚಿತ್ರ
Follow us on

ಉಡುಪಿ: ಜಿಲ್ಲೆಯಲ್ಲಿ ನಾಲ್ಕು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಮಣಿಪಾಲ್​ ಎಂಐಟಿ ಕ್ಯಾಂಪಸ್​ನಲ್ಲಿ ಇಂದು ಒಟ್ಟು 95 ಕೇಸ್​ಗಳು ಪತ್ತೆಯಾಗಿವೆ. ಜಿಲ್ಲಾಧಿಕಾರಿಗಳ ಸೂಚನೆಯಂತೆ ಕ್ಯಾಂಪಸ್ಅ​ನ್ನು ಕಂಟೈನ್​ ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ.

ಕೊರೊನಾ ಆರ್ಭಟ ಜಿಲ್ಲೆಯಲ್ಲಿ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಎಂಐಟಿ ಕ್ಯಾಂಪಸ್​ನ 5,000 ವಿದ್ಯಾರ್ಥಿಗಳಿಗೆ ಕೊರೊನಾ ಟೆಸ್ಟ್ ಮಾಡಲಾಗುತ್ತಿದೆ. ಒಂದು ವಾರ ನಿರಂತರ ಕೊವಿಡ್ ಟೆಸ್ಟ್ ಮಾಡುತ್ತೇವೆ. ನಗರ ಭಾಗದಲ್ಲಿ ಹೆಚ್ಚು ಪಾಸಿಟಿವ್ ಕೇಸ್​ಗಳು ಪತ್ತೆಯಾಗುತ್ತಿವೆ. ಸಾರ್ವಜನಿಕ ಸ್ಥಳ ಹಾಗೂ ಸಮಾರಂಭಗಳಲ್ಲಿ ಎಚ್ಚರ ವಹಿಸಬೇಕು. ಮಾಸ್ಕ್, ಸಾಮಾಜಿಕ ಅಂತರ ಜೊತೆಗೆ ಸ್ಯಾನಿಟೈಸ್ ಕಡ್ಡಾಯಗೊಳಿಸಬೇಕು. ಉಡುಪಿಯಲ್ಲಿ ಕೊರೊನಾ ಎರಡನೇ ಅಲೆ ಮರುಕಳಿಸಲು ಅವಕಾಶ ಕೊಡಬೇಡಿ ಎಂದು ಜಿಲ್ಲೆಯ ಡಿಹೆಚ್​ಒ ಡಾ.ಸುಧೀರ್ ಚಂದ್ರ ಸೂಡಾ ವಿನಂತಿಸಿಕೊಂಡಿದ್ದಾರೆ.

ಮಂಗಳೂರಿನಲ್ಲಿ 51 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್

ಕೊರೊನಾ ಪಾಸಿಟಿವ್​ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಬಳ್ಳಾಲ್ ಭಾಗ್ ಬಳಿ ಇರುವ ಶ್ರೀದೇವಿ ನರ್ಸಿಂಗ್ ಕಾಲೇಜಿನ 51 ವಿದ್ಯಾರ್ಥಿಗಳಿಗೆ ಕೊರೊನಾ ಪಾಸಿಟಿವ್​ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಕಾಲೇಜು ಮತ್ತು ಹಾಸ್ಟೆಲ್​ಅನ್ನು ಕಂಟೈನ್ ಮೆಂಟ್ ಝೋನ್ ಆಗಿ ಘೋಷಣೆ ಮಾಡಲಾಗಿದೆ.

ಇತ್ತೀಚೆಗೆ ಕೊವಿಡ್‌ ಸೋಂಕಿನ ಹರಡುವಿಕೆ ಪ್ರಮಾಣ ಕಡಿಮೆಯಾಗಿತ್ತು. ಈ ಮೊದಲು ಸೀಲ್‌ಡೌನ್‌, ಲಾಕ್‌ಡೌನ್, ನೈಟ್‌ ಕರ್ಫ್ಯೂ, ಬಂದ್ ಹೇಳುವ ಮಾತನ್ನು ಕೇಳಿ ಕೇಳಿ ಒಂದು ವರ್ಷದಿಂದ ಜನ ಸುಸ್ತಾಗಿದ್ದರು. ಆದರೆ ಈಗ ಮತ್ತೆ ಗಡಿ ಜಿಲ್ಲೆಗಳಲ್ಲಿ ಕೊರೊನಾ ಹಾವಳಿ ಹೆಚ್ಚಾಗುತ್ತಿದೆ. ಹಲವು ತಿಂಗಳುಗಳ ಬಳಿಕ ಮತ್ತೆ ಮಂಗಳೂರಿನಲ್ಲಿ ಸೀಲ್‌ಡೌನ್‌ ಮಾದರಿಯಲ್ಲಿ ಬಂದ್ ಮಾಡಲಾಗಿದೆ.

ಕರಾವಳಿಯಲ್ಲಿ ಕೇರಳ ಕೊರೊನಾದ ಆತಂಕ
ಕೊರೊನಾ ಮಹಾಮಾರಿಯಿಂದಾಗಿ ಯೆನೆಪೋಯ ವಿವಿಯ 9 ಶಿಕ್ಷಣ ಸಂಸ್ಥೆಗಳಿಗೆ ಬೀಗ ಹಾಕಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಕೂಡ ಕೇರಳ ಗಡಿಗೆ ಹೊಂದಿಕೊಂಡಿರುವ ಜಿಲ್ಲೆ. ಮಂಗಳೂರಿನ ತಲಪಾಡಿ ಸೇರಿದಂತೆ 24ಕ್ಕೂ ಹೆಚ್ಚು ಕೇರಳ ಸಂಪರ್ಕ ಬೆಸೆಯುವ ಗಡಿಗಳಿವೆ. ಇನ್ನು, ಕಾಲೇಜುಗಳನ್ನು ಆರಂಭ ಮಾಡಿದ ಮೇಲೆ ಈ ಕೊರೊನಾ ಹಾವಳಿ ಮತ್ತೆ ಹೆಚ್ಚಾಗುತ್ತಿದೆ.

ಇದನ್ನೂ ಓದಿ: ಕೊರೊನಾ ಅಡ್ಡಪರಿಣಾಮಗಳ ಗಂಭೀರತೆ ಬಗ್ಗೆ ಯೋಚಿಸಿದ್ದೀರಾ? ಲಸಿಕೆ ಇದ್ದರೂ ಮೈಮರೆಯಬೇಡಿ

ಇದನ್ನೂ ಓದಿ: Covid-19: ಜನರ ಬಳಿ ಹಣ ಪಡೆದು ನಕಲಿ ಕೋವಿಡ್​-19 ನೆಗೆಟಿವ್​ ವರದಿ ನೀಡುತ್ತಿದ್ದ ಕಿರಾತಕ ಅಂದರ್, ಯಾವೂರಲ್ಲಿ?