AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಿಳೆಯ ಕಣ್ಣೀರ ವಿಡಿಯೋ ನೋಡಿ ಸಹಾಯ ಮಾಡಿದ ಸಾರ್ವಜನಿಕರು.. ಎಷ್ಟೇ ಪ್ರಯತ್ನಪಟ್ಟರೂ ಉಳಿಸಲಾಗಲಿಲ್ಲ ಸೋಂಕಿತನ ಪ್ರಾಣ

ವೈದ್ಯರಿಗೆ ಚಿಕಿತ್ಸೆ ಕೊಡುವಂತೆ ಮಹಿಳೆ ಅಂಗಲಾಚುತ್ತಿರುವ ವಿಡಿಯೋ ನೋಡಿ ಸಾರ್ವಜನಿಕರು ಸಹಾಯಕ್ಕೆ ಬಂದಿದ್ದು ತಕ್ಷಣ ಅದೇ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸೋಂಕಿತನಿಗೆ ಲಂಗ್ಸ್ ಡ್ಯಾಮೇಜ್ ಆಗಿತ್ತು ಎನ್ನಲಾಗಿದೆ.

ಮಹಿಳೆಯ ಕಣ್ಣೀರ ವಿಡಿಯೋ ನೋಡಿ ಸಹಾಯ ಮಾಡಿದ ಸಾರ್ವಜನಿಕರು.. ಎಷ್ಟೇ ಪ್ರಯತ್ನಪಟ್ಟರೂ ಉಳಿಸಲಾಗಲಿಲ್ಲ ಸೋಂಕಿತನ ಪ್ರಾಣ
ಸಂಗ್ರಹ ಚಿತ್ರ
ಆಯೇಷಾ ಬಾನು
|

Updated on:Apr 25, 2021 | 10:17 AM

Share

ತುಮಕೂರು: ಕೊರೊನಾ ಎರಡನೇ ಅಲೆಗೆ ಜನ ತತ್ತರಿಸಿದ್ದಾರೆ. ಈ ನಡುವೆ ಆಕ್ಸಿಜನ್ ಕೊರತೆ, ಬೆಡ್ ಕೊರತೆ ಜನರನ್ನು ಮತ್ತಷ್ಟು ನರಳಿ ನರಳಿ ಸಾಯುವಂತೆ ಮಾಡಿವೆ. ಕೊರೊನಾ ಸೋಂಕಿತ ವ್ಯಕ್ತಿ ಸೂಕ್ತ ಚಿಕಿತ್ಸೆ ಸಿಗದೆ ನರಳಿ ನರಳಿ ಒದ್ದಾಡಿ ಪ್ರಾಣ ಬಿಟ್ಟ ಘಟನೆ ತುಮಕೂರಿನಲ್ಲಿ ನಡೆದಿದೆ.

ಕೊರೊನಾ ಸೋಂಕಿತನಿಗೆ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಎಷ್ಟೇ ಬೇಡಿಕೊಂಡರೂ ಅಸಹಾಯಕರಾಗಿದ್ದ ವೈದ್ಯರು ಚಿಕಿತ್ಸೆ ನೀಡಲು ಮುಂದಾಗಿಲ್ಲ. ಪತಿಯನ್ನು ಉಳಿಸಿಕೊಳ್ಳಲು ಮಹಿಳೆ ಅಂಗಲಾಚುತ್ತಿರುವ ಮನಕಲಕುವ ದೃಶ್ಯಗಳು ನೋಡುವವರ ಕಣ್ಣಲ್ಲಿ ನೀರು ತರಿಸುತ್ತದೆ. ಈ ವಿಡಿಯೋ ನಿನ್ನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕು ಆಸ್ಪತ್ರೆಯಲ್ಲಿ ಇಂತಹದೊಂದು ಮನ ಕಲಕುವ ಘಟನೆ ನಡೆದಿದೆ. ವೈದ್ಯರಿಗೆ ಚಿಕಿತ್ಸೆ ಕೊಡುವಂತೆ ಮಹಿಳೆ ಅಂಗಲಾಚುತ್ತಿರುವ ವಿಡಿಯೋ ನೋಡಿ ಸಾರ್ವಜನಿಕರು ಸಹಾಯಕ್ಕೆ ಬಂದಿದ್ದು ತಕ್ಷಣ ಅದೇ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ವ್ಯವಸ್ಥೆ ಮಾಡಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸೋಂಕಿತನಿಗೆ ಲಂಗ್ಸ್ ಡ್ಯಾಮೇಜ್ ಆಗಿತ್ತು ಎನ್ನಲಾಗಿದೆ.

ಬೆಂಗಳೂರಿನಲ್ಲಿ ಡ್ರೈವರ್ ಆಗಿದ್ದ ಸುಮಾರು 30 ವರ್ಷದ ಮೃತ ಸೋಂಕಿತ ವ್ಯಕ್ತಿ. ಕೆಲ ದಿನಗಳ ಹಿಂದೆ ಚಿಕ್ಕನಾಯಕನಹಳ್ಳಿಗೆ ಆಗಮಿಸಿದ್ರು. ಹೆಂಡತಿ ಗಾರ್ಮೆಂಟ್ನಲ್ಲಿ ಕೆಲಸ ಮಾಡುತ್ತಾರೆ. ಸೂಕ್ತ ಚಿಕಿತ್ಸೆಗಾಗಿ ದಿನಕ್ಕೆ 60 ಸಾವಿರ ಪ್ಯಾಕೇಜ್ ಆಗುತ್ತೆ ಎಂದು ಖಾಸಗಿ ಆಸ್ಪತ್ರೆಯವರು ಹೇಳಿದ್ದರು. ಅಷ್ಟು ಹಣ ಕೊಡಲಾಗದೆ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದು ಸೋಂಕಿತ ವ್ಯಕ್ತಿ ಪ್ರಾಣಬಿಟ್ಟಿದ್ದಾರೆ. ವ್ಯಕ್ತಿಯನ್ನು ಉಳಿಸಿಕೊಳ್ಳಲು ಸಾರ್ವಜನಿಕರು ಸಹಾಯ ಮಾಡಿದ್ದರು. ಪತಿಯನ್ನು ಉಳಿಸಿಕೊಳ್ಳಲು ಮಹಿಳೆ ತೀರ ಪರದಾಡಿದ್ದರೂ ಎಷ್ಟೇ ಪ್ರಯತ್ನಪಟ್ಟರೂ ಸೋಂಕಿತನನ್ನು ಉಳಿಸಿಕೊಳ್ಳಲು ಆಗಲೇ ಇಲ್ಲ. ಈ ಮಹಾಮಾರಿ ಕೊರೊನಾ ಜನರನ್ನು ನರಳಿ ನರಳಿ ಸಾಗುವಂತ ಮಾಡುತ್ತಿದೆ. ಹೀಗಾಗಿ ನಾವು ಆದಷ್ಟು ಎಚ್ಚರಿಕೆಯಿಂದ ಇರಬೇಕು.

ಇದನ್ನೂ ಓದಿ: ಕೊವಿಡ್​ ಆಸ್ಪತ್ರೆಯಲ್ಲಿ ಭೀಕರ ಅಗ್ನಿದುರಂತ; 27 ರೋಗಿಗಳು ಸಾವು, 90ಕ್ಕೂ ಹೆಚ್ಚು ಜನರ ರಕ್ಷಣೆ

Published On - 10:16 am, Sun, 25 April 21