ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಕೊರೊನಾ ಭಯದ ನಡುವೆಯೇ ಸಿಇಟಿ ಪರೀಕ್ಷೆ ನಡೆದು ಇಂದು ರಿಸಲ್ಟ್ ಪ್ರಕಟವಾಗಿದೆ. 127 ಸ್ಥಳಗಳಲ್ಲಿ ಒಟ್ಟು 497 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗಿದೆ. ಸಾಮಾನ್ಯವಾಗಿ 25 ದಿನದಲ್ಲಿ ಪರೀಕ್ಷೆ ರಿಸಲ್ಟ್ ಬರುತ್ತಿತ್ತು. ಈ ಬಾರಿ 21 ದಿನಕ್ಕೆಲ್ಲಾ ಸಿಇಟಿ ಫಲಿತಾಂಶ ನೀಡಲಾಗಿದೆ.
ಕೊವಿಡ್ ಬೆನ್ನಲ್ಲೇ ಪರೀಕ್ಷೆ ನಡೆಸಲಾಗಿತ್ತು. ಸೊಂಕಿತರು, ಕಂಟೈನ್ ಮೆಂಟ್ ಜೋನ್, ಎಸಿಂಪ್ಟಮ್ಯಾಟಿಕ್ಟ್ ಇರೊ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 194419 ಪರೀಕ್ಷೆ ನೊಂದಣಿ ಮಾಡಿಕೊಂಡಿದ್ದವರು. 175349 ಪರೀಕ್ಷೆಗೆ ಹಾಜರ್ ಆದವರ ಸಂಖ್ಯೆ. ಎಂಜಿನಿಯರಿಂಗ್ ಕೋರ್ಸ್ಗೆ 153470 ರ್ಯಾಂಕ್ ನೀಡಲಾಗಿದೆ. ಕೃಷಿ ಕೋರ್ಸ್ 127627 ರ್ಯಾಂಕ್. ಯೋಗ ಮತ್ತು ನ್ಯಾಚುರೋಪತಿ 129611 ರ್ಯಾಂಕ್. ಬಿ ಫಾರ್ಮಾ ಮತ್ತು ಡಿ ಫಾರ್ಮಾ 155552 ರ್ಯಾಂಕ್ ನೀಡಲಾಗಿದೆ.
ಒಟ್ಟು 63 ಕೊರೊನಾ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು! ಸಿಇಟಿ ಪರೀಕ್ಷೆ ಬರೆಯಲು 194419 ನೊಂದಣಿ ಮಾಡಿಕೊಂಡಿದ್ದವರು. 175349 ಪರೀಕ್ಷೆಗೆ ಹಾಜರ್ ಆಗಿದ್ರು. ಜೊತೆಗೆ ಇದರಲ್ಲಿ 63 ಕೊರೊನಾ ಪಾಸಿಟಿವ್ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಈ ಪೈಕಿ ಇಬ್ಬರಿಗೆ ಱಂಕ್ ಬಂದಿದೆ!