ಲಸಿಕೆ ಪಡೆದ ಮೇಲೆ ಏನಾದರೂ ಆದರೆ ಪರಿಹಾರ ಮೊತ್ತ ಕೊಡಬೇಕು: ಸರ್ಕಾರಿ ನೌಕರರ ಮನವಿ
ಕೊರೊನಾ ಕರ್ತವ್ಯ ನಿರ್ವಹಿಸುವಾಗ ಸಾವನ್ನಪ್ಪಿದರೆ ಕೇಂದ್ರದಿಂದ 30 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿತ್ತು. ಈಗ ಅದೇ ಪರಿಹಾರ, ಲಸಿಕೆ ಪಡೆಯುವಾಗಲೂ ಅನ್ವಯಿಸುವಂತೆ ಮಾಡಿ.
ಬೆಂಗಳೂರು: ಕೊರೊನಾ ಲಸಿಕೆ ಹಂಚಿಕೆಗೆ ಕ್ಷಣಗಣನೆ ಆರಂಭವಾದ ಬೆನ್ನಲ್ಲೇ ಹೊಸ ಪ್ರಶ್ನೆಯೊಂದು ಉದ್ಭವಿಸಿದೆ. ಕೊರೊನಾ ಕರ್ತವ್ಯ ನಿರ್ವಹಿಸುವಾಗ ಸಾವನ್ನಪ್ಪಿದರೆ ಕೇಂದ್ರದಿಂದ 30 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಲಾಗಿತ್ತು. ಈಗ ಅದೇ ಪರಿಹಾರ, ಲಸಿಕೆ ಪಡೆಯುವಾಗಲೂ ಅನ್ವಯಿಸುವಂತೆ ಮಾಡಿ. ಲಸಿಕೆ ಪಡೆದ ಮೇಲೆ ಏನಾದರೂ ಹೆಚ್ಚು ಕಡಿಮೆಯಾದರೆ, ಹಿಂದೆ ಘೋಷಣೆ ಮಾಡಿದ ಪರಿಹಾರ ಅನ್ವಯವಾಗುತ್ತಾ ಎಂದು ಸರ್ಕಾರಿ ನೌಕರರು ಪ್ರಶ್ನೆ ಮಾಡಿದ್ದಾರೆ.
ಮೊದಲ ಹಂತದಲ್ಲಿ ಆರೋಗ್ಯ ಸಿಬ್ಬಂದಿಗಳಿಗೆ, ಎರಡನೇ ಹಂತದಲ್ಲಿ ಪೊಲೀಸ್ ಹಾಗೂ ಮೊದಲ ಸಾಲಿನ ಕೊರೊನಾ ವಾರಿಯರ್ಸ್ಗೆ, ಜೊತೆಗೆ, ಸಾರಿಗೆ ನೌಕರರಿಗೂ ಲಸಿಕೆ ನೀಡಲು ನಿರ್ಧಾರ ಮಾಡಲಾಗಿತ್ತು. ಆದರೆ, ಲಸಿಕೆ ಪಡೆಯುವ ಮುನ್ನ ಮುಂಜಾಗ್ರತೆಯ ಪ್ರಶ್ನೆ ಎತ್ತಿರುವ ಸರ್ಕಾರಿ ನೌಕರರು ಹೀಗೆ ಕೇಳಿಕೊಂಡಿದ್ದಾರೆ.
ಮೊದಲ ಹಂತದಲ್ಲಿ ಕೊವಿಡ್ ವಾರಿಯರ್ಸ್ಗಳಿಗೆ ಲಸಿಕೆ ನೀಡುತ್ತಿರುವುದು ಖುಷಿಯ ವಿಚಾರ. ಆದರೆ, ಲಸಿಕೆ ಪಡೆದ ಮೇಲೆ ಏನಾದರೂ ಆದರೆ, ಸರ್ಕಾರ ಹಿಂದೆ ಘೋಷಣೆ ಮಾಡಿದ ಪರಿಹಾರದ ಮೊತ್ತವನ್ನು ಇದಕ್ಕೂ ಅನ್ವಯಿಸುವಂತೆ ಮಾಡಬೇಕು ಎಂದು ಹೇಳಿದ್ದಾರೆ. ಈ ಬಗ್ಗೆ, ಸರ್ಕಾರಕ್ಕೆ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ, ಸಿಐಟಿಯು ಸಾರಿಗೆ ಘಟಕದ ಕಾರ್ಯದರ್ಶಿ ಆನಂದ್ ಮನವಿ ಮಾಡಿದ್ದಾರೆ.
ಬೆಂಗಳೂರಿನಲ್ಲಿ 1.68 ಲಕ್ಷ ಜನ ಕೊರೊನಾ ವಾರಿಯರ್ಸ್ಗೆ ಲಸಿಕೆ ನೀಡುವ ಕುರಿತು ಮಾಹಿತಿ ಇದೆ. ಲಸಿಕಾ ಪಟ್ಟಿಯಲ್ಲಿ ಹೆಸರು ಕೊಟ್ಟವರಲ್ಲಿ ಆತಂಕ ಉಂಟಾಗಿದೆ. ಪಟ್ಟಿಯಲ್ಲಿರುವ ಎಲ್ಲಾ ವಾರಿಯರ್ಸ್ ಲಸಿಕೆ ಪಡೆಯುವುದುದು ಅನುಮಾನವಾಗಿದೆ.
Published On - 8:17 pm, Mon, 11 January 21