ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆ ಸಮಿತಿ ರಚನೆ; ಪರಿಗಣನೆಯಾಗುವ ಅಂಶಗಳು ಯಾವುವು?

ತಮ್ಮ ಕಾರ್ಯದಲ್ಲಿ ಅನೇಕ ಸವಾಲು, ಏಳುಬೀಳುಗಳು ಉಂಟಾದರೂ ಅದನ್ನೆಲ್ಲ ಮೆಟ್ಟಿನಿಂತು, ಜನಸೇವೆ ಮಾಡುವ ಶಾಸಕರನ್ನು ಪ್ರೋತ್ಸಾಹಿಸುವುದೇ ಈ ಪ್ರಶಸ್ತಿಯ ಉದ್ದೇಶ.

ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆ ಸಮಿತಿ ರಚನೆ; ಪರಿಗಣನೆಯಾಗುವ ಅಂಶಗಳು ಯಾವುವು?
ಬೆಂಗಳೂರಿನ ವಿಧಾನಸೌಧ
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 11, 2021 | 7:18 PM

ಬೆಂಗಳೂರು: ಪ್ರತಿವರ್ಷದಂತೆ ಈ ಬಾರಿಯೂ ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಒಬ್ಬ ಶಾಸಕನನ್ನು ಆಯ್ಕೆ ಮಾಡಲು ವಿಧಾನಸಭೆ ಅಧ್ಯಕ್ಷರು ಸಮಿತಿಯನ್ನು ರಚಿಸಿದ್ದಾರೆ. ಜನರಿಂದ ಚುನಾಯಿತರಾಗುವ ಪ್ರತಿನಿಧಿಗಳ ಅತ್ಯುತ್ತಮ ಕಾರ್ಯ, ಸಾಧನೆಯನ್ನು ಗುರುತಿಸಿ ಪ್ರತಿವರ್ಷವೂ ಒಬ್ಬರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ತಮ್ಮ ಕಾರ್ಯದಲ್ಲಿ ಅನೇಕ ಸವಾಲು, ಏಳುಬೀಳುಗಳು ಉಂಟಾದರೂ ಅದನ್ನೆಲ್ಲ ಮೆಟ್ಟಿನಿಂತು, ಜನಸೇವೆ ಮಾಡುವ ಶಾಸಕರನ್ನು ಪ್ರೋತ್ಸಾಹಿಸುವುದೇ ಈ ಪ್ರಶಸ್ತಿಯ ಉದ್ದೇಶ.

ಅದರಂತೆ 2021ನೇ ಸಾಲಿನ ಪ್ರಶಸ್ತಿಗೆ ಸದಸ್ಯನನ್ನು ಆಯ್ಕೆ ಮಾಡಲು ರಚಿತವಾದ ಸಮಿತಿಯಲ್ಲಿ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ (ಸಮಿತಿ ಅಧ್ಯಕ್ಷರು), ವಿಧಾನಸಭಾ ಉಪಾಧ್ಯಕ್ಷ ವಿಶ್ವನಾಥ್​ ಚಂದ್ರಶೇಖರ್​ ಮಾಮನಿ (ಸದಸ್ಯರು), ಮುಖ್ಯಮಂತ್ರಿ ಯಡಿಯೂರಪ್ಪ (ಸದಸ್ಯರು), ವಿಪಕ್ಷ ನಾಯಕ ಸಿದ್ದರಾಮಯ್ಯ (ಸದಸ್ಯರು), ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ (ಸದಸ್ಯರು), ಶಾಸಕ ಆರ್​.ವಿ.ದೇಶ​ಪಾಂಡೆ (ಸದಸ್ಯರು) ಇದ್ದಾರೆ.

ಪ್ರಶಸ್ತಿಗೆ ಪರಿಗಣನೆಯಾಗುವ ಅಂಶಗಳು 1. ಶಾಸಕರು ತಮ್ಮ ಮತಕ್ಷೇತ್ರಕ್ಕೆ ನೀಡಿರುವ ಕೊಡುಗೆ 2. ಶಾಸಕರಾಗಿ ಕಾರ್ಯನಿರ್ವಹಿಸಿದ ಅನುಭವ 3. ಸದನದ ಚರ್ಚೆಗಳಲ್ಲಿ ತೋರುವ ಕೌಶಲ 4. ಸಾರ್ವಜನಿಕ ಹಿತಾಸಕ್ತಿ ವಿಚಾರಗಳಲ್ಲಿ ಹೊಂದಿರುವ ಆಸಕ್ತಿ 5. ಕನ್ನಡ ಭಾಷೆಯಲ್ಲಿ ಹೊಂದಿರುವ ಪಾಂಡಿತ್ಯ 6. ಸದನಗಳಲ್ಲಿ ಕೇಳುವ ಪ್ರಶ್ನೆಗಳ ಗುಣಮಟ್ಟ, ವ್ಯಾಪ್ತಿ ಮತ್ತು ಪ್ರಸ್ತುತ ಪಡಿಸುವ ವಿಧಾನ 7. ಸದನದಲ್ಲಿ ಹಾಜರಾತಿ 8. ಸದನದ ಹೊರಗೆ ಮತ್ತು ಒಳಗಿನ ನಡವಳಿಕೆ 9. ಇತರ ಶಾಸಕರೊಂದಿಗೆ ತೋರಿಸುವ ಸೌಹಾರ್ದತೆ 10. ಸದನದಲ್ಲಿ ಉಂಟಾಗುವ ಪ್ರತಿರೋಧದ ಸಂದರ್ಭದಲ್ಲಿ ಕಾರ್ಯನಿರ್ವಹಿಸುವಾಗ ತೋರುವ ಸಹಕಾರ

ವಿಧಾನಸಭೆ ಸದಸ್ಯನನ್ನು ಅತ್ಯುತ್ತಮ ಶಾಸಕ ಪ್ರಶಸ್ತಿಗೆ ಆಯ್ಕೆ ಮಾಡುವಲ್ಲಿ ಇವೆಲ್ಲ ವಿಚಾರಗಳನ್ನೂ ಗಣನೆಗೆ ತೆಗೆದುಕೊಂಡು, ಪರಿಶೀಲನೆ ಮಾಡಲಾಗುತ್ತದೆ. ಆಯ್ಕೆ ಸಮಿತಿಯ ಅಧ್ಯಕ್ಷರು ವಿಧಾನಸಭೆ ಅಧ್ಯಕ್ಷರೇ ಆಗಿರುತ್ತಾರೆ. ಹಾಗೇ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿಯೇ ಈ ಸಮಿತಿಯ ಕಾರ್ಯದರ್ಶಿಯಾಗಿರುತ್ತಾರೆ.

ಕೊರೊನಾ ಲಸಿಕೆ ಬಗ್ಗೆ ಕರ್ನಾಟಕದ ರಾಜಕಾರಣಿಗಳು ಸೂಕ್ಷ್ಮವಾಗಿ ವರ್ತಿಸಿರುವುದು ಖುಷಿಯ ವಿಚಾರ: ತೇಜಸ್ವಿ ಸೂರ್ಯ