ಹೇಮಾವತಿ ಡ್ಯಾಂನಿಂದ ಕೆರೆ, ಕೃಷಿಗೆ ನೀರು ಬಿಡುಗಡೆ ಸ್ಥಗಿತ: ಕುಡಿಯುವ ನೀರಿಗೆ ಆದ್ಯತೆ

ಕುಡಿಯುವ ನೀರಿನ ಯೋಜನೆಗೆ ನೀರು ಅವಶ್ಯಕತೆ ಇರುವುದರಿಂದ ಕೆರೆ ಮತ್ತು ಕೃಷಿಗೆ ಬಿಡುತ್ತಿದ್ದ ನೀರನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತಿದ್ದೇವೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡುತ್ತಿದ್ದೇವೆ ಎಂದಿದ್ದಾರೆ.

ಹೇಮಾವತಿ ಡ್ಯಾಂನಿಂದ ಕೆರೆ, ಕೃಷಿಗೆ ನೀರು ಬಿಡುಗಡೆ ಸ್ಥಗಿತ: ಕುಡಿಯುವ ನೀರಿಗೆ ಆದ್ಯತೆ
ಜೆ.ಸಿ. ಮಾಧುಸ್ವಾಮಿ (ಸಂಗ್ರಹ ಚಿತ್ರ)
Follow us
TV9 Web
| Updated By: ganapathi bhat

Updated on:Apr 06, 2022 | 9:12 PM

ಬೆಂಗಳೂರು: ಹೇಮಾವತಿ ಡ್ಯಾಂನಿಂದ ಕೆರೆ, ಕೃಷಿಗೆ ನೀರು ಬಿಡುಗಡೆ ಸ್ಥಗಿತಗೊಳಿಸುವ ವಿಚಾರವಾಗಿ ಸಚಿವ ಜೆ.ಸಿ. ಮಾಧುಸ್ವಾಮಿ ಹಾಗೂ ಕೆ. ಗೋಪಾಲಯ್ಯ ಜಂಟಿ ಸುದ್ದಿಗೋಷ್ಠಿ ನಡೆಸಿದ್ದಾರೆ. ವಿಕಾಸಸೌಧದಲ್ಲಿ ಹೇಮಾವತಿ ನೀರಾವರಿ ಸಲಹಾ ಸಮಿತಿ ಸಭೆ ಬಳಿಕ ಅವರು ಮಾತನಾಡಿದ್ದಾರೆ.

ಕುಡಿಯುವ ನೀರಿನ ಯೋಜನೆಗೆ ನೀರು ಅವಶ್ಯಕತೆ ಇರುವುದರಿಂದ ಕೆರೆ ಮತ್ತು ಕೃಷಿಗೆ ಬಿಡುತ್ತಿದ್ದ ನೀರನ್ನು ತಾತ್ಕಾಲಿಕವಾಗಿ ನಿಲ್ಲಿಸುತ್ತಿದ್ದೇವೆ. ಕುಡಿಯುವ ನೀರಿಗೆ ಮೊದಲ ಆದ್ಯತೆ ಕೊಡುತ್ತಿದ್ದೇವೆ. ಇಂದಿನ ಸಭೆ ಯಶಸ್ವಿಯಾಗಿ ನಡೆದಿದೆ ಎಂದು ಕೆ.ಗೋಪಾಲಯ್ಯ ವಿವರಣೆ ನೀಡಿದ್ದಾರೆ.

ಕುಡಿಯುವ ನೀರಿನ ಯೋಜನೆಗೆ ಮೊದಲ ಆದ್ಯತೆ ನೀಡುತ್ತೇವೆ. ಈಗ ನೀರು ನಿಲ್ಲಿಸದಿದ್ದರೆ ಕುಡಿಯುವ ನೀರಿಗೆ ಸಮಸ್ಯೆ ಆಗುತ್ತದೆ. ಹಾಸನ ಸೇರಿ ಎಲ್ಲಾ ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆ ಆಗುತ್ತದೆ. ಹಾಗಾಗಿ, ಕುಡಿಯುವ ನೀರಿಗೆ ಸಮಸ್ಯೆ ಆಗದಂತೆ ಕ್ರಮ ಕೈಗೊಂಡಿದ್ದೇವೆ. ಮಳೆ ಬಂದಾಗ ಮತ್ತೆ ಕೃಷಿ ಚಟುವಟಿಕೆಗಳಿಗೆ ನೀರು ಬಿಡುಗಡೆ ಮಾಡುತ್ತೇವೆ ಎಂದು ಮಾಧುಸ್ವಾಮಿ ತಿಳಿಸಿದ್ದಾರೆ.

ಜೊತೆಗೆ, ತುಮಕೂರಿಗೆ ಎಷ್ಟು ನೀರು ಬಿಟ್ಟಿದ್ದೀರಿ, ಅದರ ಲೆಕ್ಕ ಹೇಳಿ ಎಂದು ಅಧಿಕಾರಿಗಳಿಗೆ ಮಾಧುಸ್ವಾಮಿ ಪ್ರಶ್ನೆ ಮಾಡಿದ್ದಾರೆ. ತುರುವೇಕೆರೆಯಲ್ಲಿ ನೀರು ವ್ಯರ್ಥ ಆಗುತ್ತದೆ. ನೀರು ವ್ಯರ್ಥ ಮಾಡುವುದು ಬೇಡ ಎಂದು ಹೇಳಿದರೂ ಕೇಳುವುದಕ್ಕೆ ಅಧಿಕಾರಿಗಳು ತಯಾರಿಲ್ಲ. ಯಾಕೆ ಅಧಿಕಾರಿಗಳು ಆ ಕೆಲಸ ಮಾಡುವುದಿಲ್ಲ. ನಿಮಗೆ ಏನು ಹೇಳಬೇಕು. ನಮಗೆ ಗೊತ್ತಾಗುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಮಾಧುಸ್ವಾಮಿ ಗರಂ ಆಗಿದ್ದಾರೆ.

ಸಮಿತಿ ಸಭೆಯಲ್ಲಿ, ಹಾಸನ ಜಿಲ್ಲೆಗೆ ಕುಡಿಯುವ ನೀರು ಇಲ್ಲದಂತೆ ಮಾಡಬೇಡಿ ಎಂದು ಶಾಸಕ ಪ್ರೀತಂಗೌಡ, ಗೋಪಾಲಸ್ವಾಮಿ ಮನವಿ ಮಾಡಿರುವ ಬಗ್ಗೆ ತಿಳಿದುಬಂದಿದೆ. ಹಾಸನ ಜಿಲ್ಲೆಗೆ ಕುಡಿಯುವ ನೀರು ಎಷ್ಟು ಬೇಕೋ ಅಷ್ಟು ನೀರು ಮಾತ್ರ ಹೇಮಾವತಿ ಜಲಾಶಯದಲ್ಲಿ ಇದೆ. ಕಳೆದ ವರ್ಷ ತುಮಕೂರಿಗೆ ನೀರು ಬಿಡಲು ನಾವು ಸಹಕಾರ ಕೊಟ್ಟಿದ್ದೆವು. ದಯವಿಟ್ಟು ಹಾಸನಕ್ಕೆ ಕುಡಿಯುವ ನೀರು ಇಲ್ಲದ ಪರಿಸ್ಥಿತಿ ನಿರ್ಮಾಣ ಮಾಡಬೇಡಿ ಎಂದು ಶಾಸಕ ಪ್ರೀತಂಗೌಡ ಮತ್ತು ಪರಿಷತ್ ಸದಸ್ಯ ಗೋಪಾಲಸ್ವಾಮಿ ಮನವಿ ಮಾಡಿದ್ದಾರೆ.

ಸಭೆಯಲ್ಲಿ ಅಧಿಕಾರಿಗಳನ್ನ ತರಾಟೆಗೆ ತೆಗೆದುಕೊಳ್ಳುವಾಗ ಕೆಟ್ಟ ಪದ ಬಳಸಿದ್ದೇನೆ, Sorry: ಸಚಿವ ಮಾಧುಸ್ವಾಮಿ ವಿಷಾದ

Published On - 6:43 pm, Mon, 11 January 21