ಕೊರೊನಾ ಲಸಿಕೆಯಿಂದ ಮಹಿಳೆಯರಿಗೆ ಅಡ್ಡ ಪರಿಣಾಮ ಹೆಚ್ಚು.. ಅಧ್ಯಯನದಲ್ಲಿ ಹೊಸ ವಿಚಾರ ಬಹಿರಂಗ

ಕೊರೊನಾ ಲಸಿಕೆಯಿಂದ ಮಹಿಳೆಯರಿಗೆ ಅಡ್ಡ ಪರಿಣಾಮ ಹೆಚ್ಚು.. ಅಧ್ಯಯನದಲ್ಲಿ ಹೊಸ ವಿಚಾರ ಬಹಿರಂಗ
ಸಾಂದರ್ಭಿಕ ಚಿತ್ರ

ಕೊರೊನಾ ನಿಯಂತ್ರಣಕ್ಕೆ ಸರ್ಕಾರ‌ ಪಣತೊಟ್ಟಿದೆ. ದೇಶಾದ್ಯಂತ ಹಂತ ಹಂತವಾಗಿ ವ್ಯಾಕ್ಸಿನ್ ಅಭಿಯಾನವನ್ನ ಶುರು ಮಾಡಿದೆ. ಆದ್ರೆ ವ್ಯಾಕ್ಸಿನ್ ಪಡಿತಾ ಇರೋರಿಗೆ ಸಣ್ಣ ಪುಟ್ಟ ಸೈಡ್ ಎಫೆಕ್ಟ್ ಆಗ್ತಿದ್ದು, ಅದರಲ್ಲೂ ಮಹಿಳೆಯರಲ್ಲೇ ಈ ಸೈಡ್ ಎಫೆಕ್ಟ್ ಹೆಚ್ಚಾಗ್ತಿರೋದು ಕಂಡು ಬರ್ತಿದೆಯಂತೆ. ಈ ಬಗ್ಗೆ ಒಂದು ರಿಪೋರ್ಟ್ ಇಲ್ಲಿದೆ.

Ayesha Banu

|

Mar 25, 2021 | 6:47 AM


ಬೆಂಗಳೂರಿನ ಬ್ಯಾಪಿಸ್ಟ್ ಆಸ್ಪತ್ರೆ ವೈದ್ಯರು ನಡೆಸಿರುವ ಸ್ಟಡಿಯಲ್ಲಿ ಭಯಾನಕ ಸತ್ಯ ಹೊರಬಿದ್ದಿದೆ. ಕೊವಿಡ್ ವ್ಯಾಕ್ಸಿನ್ ಸೈಡ್ ಎಫೆಕ್ಟ್ ಮಹಿಳೆಯರಲ್ಲೇ ಅಧಿಕವಾಗಿ ಕಂಡುಬಂದಿದೆ. ರಾಜಧಾನಿ ಖಾಸಗಿ ಆಸ್ಪತ್ರೆಯಲ್ಲಿ ಕೈಗೊಂಡ ಅಧ್ಯಯನದಲ್ಲಿ ಹೊಸ ವಿಚಾರ ಬಹಿರಂಗವಾಗಿದೆ. ಆಸ್ಪತ್ರೆಯ ಕಮ್ಯುನಿಟಿ ಮೆಡಿಸಿನ್ ವಿಭಾಗದಿಂದ ನಡೆಸಲಾಗಿರುವ ಅಧ್ಯಯನದಲ್ಲಿ ಲಸಿಕೆ ಪಡೆದ ಮಹಿಳೆಯರಿಗೆ ಸೈಡ್ ಎಫೆಕ್ಟ್ ಆಗ್ತಿರೋದು ಗೊತ್ತಾಗಿದೆ.

ಪುರುಷರಿಗಿಂತ ಮಹಿಳೆಯರಿಗೆ ಲಸಿಕೆ ಅಡ್ಡ ಪರಿಣಾಮ ಹೆಚ್ಚು
ಲಸಿಕೆ ಪಡೆದ ನಂತ್ರ ಜ್ವರ, ಮೈಕೈ ನೋವು, ಸುಸ್ತು, ತುಟಿ ಊತ ಸೇರಿದಂತೆ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಉದ್ಭವವಾಗಿದೆ. ಲಸಿಕೆ ಪಡೆದ ಶೇಕಡ 78 ಜನರಲ್ಲಿ ಅಡ್ಡಪರಿಣಾಮ ಕಾಣಿಸಿದೆ. ಹಾರ್ಮೋನ್ಸ್, ಇಮ್ಯುನೋಜೆನಿಸಿಟಿ ಪರಿಣಾಮ ಮಹಿಳೆಯರಿಗೆ ಲಸಿಕೆ ಸೈಡ್ ಎಫೆಕ್ಟ್ ಕಂಡುಬಂದಿದ್ದು, ಮಹಿಳೆಯರು ಮಾತ್ರವಲ್ಲದೆ 40 ವರ್ಷದೊಳಗಿನ ಹಲವರಿಗೆ ಸೈಡ್ ಎಫೆಕ್ಟ್ ಕಂಡುಬಂದಿದೆ.

ಇನ್ನು ಲಸಿಕೆಯಿಂದ ಅತಿ ಹೆಚ್ಚು ಸೈಡ್ ಎಫೆಕ್ಟ್ ಏನೂ ಆಗಿಲ್ಲ. ಸಣ್ಣ ಪ್ರಮಾಣದ ಎಫಕ್ಟ್ ಆಗಿದೆ. ಅದ್ರಲ್ಲೂ ಮಹಿಳೆಯರಿಗೆ ಹೆಚ್ಚು ಸೈಡ್ ಎಫೆಕ್ಟ್ ಉಂಟಾಗಿದೆ. ಅದನ್ನ ಹೊರುಪಡಿಸಿ ಲಸಿಕೆ ಕಂಪ್ಲೀಟ್ ಸೇಫಾಗಿದೆ. ಬ್ಯಾಪಿಸ್ಟ್ ಆಸ್ಪತ್ರೆ ಸಿಬ್ಬಂದಿ ಮೇಲೆ ಅಧ್ಯಯನ ನಡೆಸಲಾಗಿದೆ. 1500 ಆಸ್ಪತ್ರೆ ಸಿಬ್ಬಂದಿ ಪೈಕಿ 756 ಸಿಬ್ಬಂದಿಗೆ ಕೊರೊನಾ ಲಸಿಕೆ ನೀಡಲಾಗಿದ್ದು, ಲಸಿಕೆ ಪಡೆದವರಿಗೆ ಗೂಗಲ್ ಫಾರಂ‌ ನೀಡಿ ಉತ್ತರ ಪಡೆಯಲಾಗಿದೆ. 218 ಸಿಬ್ಬಂದಿಯಿಂದ ಹಲವು ರೀತಿ ಉತ್ತರ ಲಭ್ಯವಾಗಿದ್ದು, ಮಹಿಳೆಯರು ಸಣ್ಣ ಸೈಡ್ ಎಫೆಕ್ಟ್ ಬಗ್ಗೆ ಹೇಳಿಕೊಂಡಿದ್ದಾರೆ. ಸೈಡ್ ಎಫೆಕ್ಟ್ ಜೊತೆಗೆ, ಲಸಿಕೆ ಸೇಫ್ ಆಗಿರುವ ಬಗ್ಗೆಯೂ ಉತ್ತಮ ಪ್ರತಿಕ್ರಿಯೆ ಲಭ್ಯವಾಗಿದೆ.

ಒಟ್ನಲ್ಲಿ ಯಾವುದೇ ವ್ಯಾಕ್ಸಿನ್‌ ಪಡೆದರೂ ಸಣ್ಣ ಪುಟ್ಟ ಸೈಡ್ ಎಫೆಕ್ಟ್ ಇದ್ದೇ ಇರತ್ತೆ ಅನ್ನೋದು ತಜ್ಞ ವೈದ್ಯರ ಅಭಿಪ್ರಾಯ. ಆದರಲ್ಲೂ ಮಹಿಳೆಯರಿಗೆ ಬಹುಬೇಗ ಎಫೆಕ್ಟ್ ಉಂಟಾಗುತ್ತದೆ. ಹೀಗಾಗಿ ಯಾರೂ ಗಾಬರಿ ಪಡುವ ಅಗತ್ಯತೆಯಿಲ್ಲ.‌ ಮೂರ್ನಾಲ್ಕು ದಿನದ ಬಳಿಕ ಎಲ್ಲವೂ ಕ್ಲಿಯರ್ ಆಗುತ್ತೆ ಅನ್ನೋದನ್ನೂ ವೈದ್ಯರು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕು: ಲಸಿಕೆ ರಫ್ತಿಗೆ ತಾತ್ಕಾಲಿಕ ತಡೆ?


Follow us on

Related Stories

Most Read Stories

Click on your DTH Provider to Add TV9 Kannada