AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೊರೊನಾ ಲಸಿಕೆ ಪಡೆಯದವರ ದೇಹದಲ್ಲೇ ವೈರಾಣು ರೂಪಾಂತರ ಸಾಧ್ಯತೆ: ತಜ್ಞರ ಎಚ್ಚರಿಕೆ

ಡಿಸೆಂಬರ್‌ವರೆಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ. ಡಿಸೆಂಬರ್‌ವರೆಗೂ ಮಾಸ್ಕ್‌ ಹಾಕುವುದು ದಿನಚರಿ ಆಗಲಿ. ಲಸಿಕೆ ಹಾಕಿಸಿಕೊಂಡರೆ ಸೋಂಕಿನ ತೀವ್ರತೆ ಇರಲ್ಲ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್‌ ತಿಳಿಸಿದ್ದಾರೆ.

ಕೊರೊನಾ ಲಸಿಕೆ ಪಡೆಯದವರ ದೇಹದಲ್ಲೇ ವೈರಾಣು ರೂಪಾಂತರ ಸಾಧ್ಯತೆ: ತಜ್ಞರ ಎಚ್ಚರಿಕೆ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ganapathi bhat

Updated on: Jul 04, 2021 | 5:11 PM

ಬೆಂಗಳೂರು: ಕೊರೊನಾ ಎರಡನೇ ಅಲೇ ಕಡಿಮೆ ಆಯ್ತು ಎಂದು ನಿರ್ಲಕ್ಷ್ಯ ಬೇಡ. ಹಬ್ಬಗಳಲ್ಲಿ ಜನ ಕೊರೊನಾ ನಿಯಮ ನಿರ್ಲಕ್ಷ್ಯ ಮಾಡಬಾರದು. ಡಿಸೆಂಬರ್​ವರೆಗೂ ಮಾಸ್ಕ್​ ಧರಿಸುವುದು ಕಡ್ಡಾಯವಾಗಬೇಕು ಎಂದು ಟಿವಿ9 ವಾಹಿನಿಗೆ ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಮಂಜುನಾಥ್ ಹೇಳಿಕೆ ನೀಡಿದ್ದಾರೆ. ಮಾಸ್ಕ್​ ಧರಿಸುವುದು ನಮ್ಮ ದಿನ ನಿತ್ಯದ ಕಾಯಕವಾಗಬೇಕು. ಕೊರೊನಾ ಮೂರನೇ ಅಲೆ ತಡೆಯುವುದು ಜನರ ಕೈಯಲ್ಲಿದೆ. ಮಾಸ್ಕ್​ ಧರಿಸದೇ, ಅಂತರ ಮರೆತು ನಿರ್ಲಕ್ಷ್ಯ ವಹಿಸಬಾರದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಡಿಸೆಂಬರ್‌ವರೆಗೂ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕಿದೆ. ಡಿಸೆಂಬರ್‌ವರೆಗೂ ಮಾಸ್ಕ್‌ ಹಾಕುವುದು ದಿನಚರಿ ಆಗಲಿ. ಲಸಿಕೆ ಹಾಕಿಸಿಕೊಂಡರೆ ಸೋಂಕಿನ ತೀವ್ರತೆ ಇರಲ್ಲ ಎಂದು ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ. ಮಂಜುನಾಥ್‌ ತಿಳಿಸಿದ್ದಾರೆ.

ವ್ಯಾಕ್ಸಿನ್ ಪಡೆಯದವರಲ್ಲೇ ವೈರಸ್ ರೂಪಾಂತರ ಈ ಮಧ್ಯೆ ತಜ್ಞರು ಮತ್ತೊಂದು ವಿಚಾರ ಬಹಿರಂಗಪಡಿಸಿದ್ದಾರೆ. ಕೊರೊನಾ ವಿರುದ್ಧ ಲಸಿಕೆ ಪಡೆಯದವರಲ್ಲೇ ವೈರಸ್ ರೂಪಾಂತರ ಆಗುತ್ತಿದೆ. ರೋಗ ಬಂದು ಹೋಗಿರುವವರ ದೇಹದಲ್ಲೂ ವೈರಸ್ ರೂಪಾಂತರ ಆಗುತ್ತಿದೆ. ಈ ರೀತಿ ವೈರಸ್ ರೂಪಾಂತರಗೊಳ್ಳಲು ಹೆಚ್ಚಿನ ಅವಕಾಶ ಇರಲಿದೆ. ಸೋಂಕಿತರ ದೇಹವೇ ರೂಪಾಂತರದ ಕಾರ್ಖಾನೆ ಆಗಬಹುದು ಎಂದು ಸಾಂಕ್ರಾಮಿಕ ರೋಗಗಳ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ವಾಂಡರ್ಬಿಲ್ಟ್ ವಿಶ್ವ ವಿದ್ಯಾಲಯ ಪ್ರಾಧ್ಯಾಪಕ ಡಾ. ವಿಲಿಯಂ ಶಾಫ್ನರ್ ಹೀಗೆ ತಿಳಿಸಿದ್ದಾರೆ. ಲಸಿಕೆ ಪಡೆಯದ ಜನರು ಇರುವಲ್ಲಿ ಹೆಚ್ಚು ರೂಪಾಂತರ ಆಗಬಹುದು. ಈ ವಿಧಾನದಲ್ಲಿ ವೈರಸ್ ಹೆಚ್ಚು ರೂಪಾಂತರಗೊಳ್ಳಲು ಅವಕಾಶವಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಲಸಿಕೆ ಪಡೆವರ ದೇಹದಲ್ಲಿ ವೈರಸ್ ರೂಪಾಂತರಕ್ಕೆ ಚಾನ್ಸ್ ಕಡಿಮೆ ಇರಲಿದೆ. ಭಾರತದಲ್ಲಿ ಎರಡನೇ ಅಲೆಗೆ ಕಾರಣವಾಗಿದ್ದು ಕೊರೊನಾ ರೂಪಾಂತರಿ ವೈರಸ್ ಆಗಿದೆ. ರೂಪಾಂತರಿ ಡೆಲ್ಟಾ ಹೆಚ್ಚು ಪಡಿರಿಣಾಮಕಾರಿಯಾದ ವೈರಸ್. ಈ ಮಾದರಿಯ ವೈರಾಣು ವಿಶ್ವದ 90ಕ್ಕೂ ಹೆಚ್ಚು ದೇಶಗಳಲ್ಲಿ ಕಾಣಿಸಿಕೊಂಡಿದೆ. ಸೋಂಕಿತರ ದೇಹದಲ್ಲಿಯೇ ವೈರಸ್ ರೂಪಾಂತರಕ್ಕೆ ಅವಕಾಶ ಇದೆ. ಆದರೆ, ವ್ಯಾಕ್ಸಿನ್ ಪಡೆದವರ ದೇಹದಲ್ಲಿ ವೈರಸ್ ರೂಪಾಂತರ ಪ್ರಕ್ರಿಯೆ ಇರುವುದಿಲ್ಲ ಎಂದು ಅವರು ವಿವರಿಸಿದ್ದಾರೆ. ಈ ಮೂಲಕ, ಲಸಿಕೆ‌ ಪಡೆಯುವುದು ಎಷ್ಟು ಅಗತ್ಯ ಎಂಬುದನ್ನು ತಿಳಿಸಿದ್ದಾರೆ.

ಇದನ್ನೂ ಓದಿ: Delta Variant: ಡೆಲ್ಟಾ ಮಾದರಿ ಕೊರೊನಾ ಸೋಂಕಿನ ಲಕ್ಷಣಗಳು ಈ ಮೊದಲ ಕೊವಿಡ್ ರೋಗಲಕ್ಷಣಕ್ಕಿಂತ ಭಿನ್ನವಾಗಿರಬಹುದು: ಅಧ್ಯಯನ

ಅಧ್ಯಯನ ವರದಿ: ಧೂಳು ಹೆಚ್ಚಿರುವ ನಗರಗಳಲ್ಲಿ ಕೊರೊನಾ ಸೋಂಕು ಹರಡುವ ಸಾಧ್ಯತೆ ಹೆಚ್ಚು, ಬೆಂಗಳೂರಿಗೆ ಆತಂಕ?

ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಭಾರತೀಯ ಸೇನೆ ಮಾಹಿತಿಯನ್ನು ಪಾಕಿಸ್ತಾನಕ್ಕೆ ಕಳಿಸುತ್ತಿದ್ದ ಇಬ್ಬರ ಬಂಧನ
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಇಲಿಗಳು ತಿಂದ ಆಹಾರವೇ ಈ ದೇವಸ್ಥಾನದ ಪ್ರಸಾದ: ಏನಿದರ ವಿಶೇಷತೆ?
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
ಗುಜರಾತ್​ನ ದಾಹೋದ್​ನಲ್ಲಿ 32 ವರ್ಷಗಳ ಬಳಿಕ ಹುಲಿ ಪ್ರತ್ಯಕ್ಷ
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
‘ಅವನು ಸಾಯೋ ಬದಲು ಇವನು ಸಾಯಬಾರದಾ ಎಂದಿದ್ರು’: ಮಡೆನೂರು ಮನು
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಕೇಂದ್ರಕ್ಕೆ ಪವರ್ ಇಲ್ಲ...ರಾಮನಗರ ಹೆಸರು ಬದಲಾವಣೆ ಬಗ್ಗೆ ಡಿಕೆಶಿ ಸ್ಪಷ್ಟನೆ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಬಿಡಿಎನಲ್ಲಿ ಬಾಕಿಯುಳಿಸಿಕೊಂಡಿರುವ ಸಂಸ್ಥೆಗಳ ಬಡ್ಡಿ ಒಮ್ಮೆ ಮನ್ನಾ: ಡಿಕೆಶಿ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಖರ್ಗೆ ಬಾಯಲ್ಲಿ ಪಾಪಿ ಪಾಕಿಸ್ತಾನದ ಹೆಸರು ಬರಬಾರದು: ವಿ ಸೋಮಣ್ಣ
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಅರವಿಂದ ಲಿಂಬಾವಳಿ ಮತ್ತು ಜಿಎಂ ಸಿದ್ದೇಶ್ವರ ಸಭೆಗೆ ಗೈರು
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಮುನಿರತ್ನ ಮೇಲಿರೋದು ಆರೋಪಗಳಲ್ಲ, ಎಫ್​ಐಅರ್ ಆಗಿದೆ: ಖರ್ಗೆ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ
ಪರೀಕ್ಷೆ ಬರೆಯುವ ಆಸೆಗೆ ಪೋಷಕ ಮತ್ತು ಪತಿ ಮನೆಯವರಿಂದ ಆಕ್ಷೇಪಣೆ ಇಲ್ಲ