SARI, ILI ಕೇಸ್​ಗಳಿಂದಲೇ ಹೆಚ್ಚುತ್ತಿದ್ದಾರೆ ಕೊರೊನಾ ಸೋಂಕಿತರು!

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಇದರ ಜೊತೆಗೆ SARI, ILI ಕೇಸ್‌ಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಕೂಡ ಹೆಚ್ಚುತ್ತಿದೆ. SARI, ILIನ ಒಬ್ಬ ರೋಗಿಯಿಂದ ಸರಾಸರಿ 9 ಮಂದಿಗೆ ಕೊರೊನಾ ವೈರಸ್ ತಗುಲುತ್ತಿದೆ. SARI, ILI ಕೇಸ್​ಗಳು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ. 29 SARI ಪ್ರಕರಣಗಳಿಂದ 281 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅಲ್ಲದೆ ಬೆಚ್ಚಿಬೀಳುವ ಸಂಗತಿ ಅಂದ್ರೆ SARI ಕೇಸ್‌ಗಳಿಗೆ ಸೋಂಕಿನ ಮೂಲ ಸಹ ಪತ್ತೆ ಆಗ್ತಿಲ್ಲ. ಕುಟುಂಬದವರಿಂದ SARI, […]

SARI, ILI ಕೇಸ್​ಗಳಿಂದಲೇ ಹೆಚ್ಚುತ್ತಿದ್ದಾರೆ ಕೊರೊನಾ ಸೋಂಕಿತರು!
ಸಾಧು ಶ್ರೀನಾಥ್​

Updated on: May 07, 2020 | 10:20 AM

ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ದಿನೇದಿನೆ ಹೆಚ್ಚುತ್ತಿದೆ. ಇದರ ಜೊತೆಗೆ SARI, ILI ಕೇಸ್‌ಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಕೂಡ ಹೆಚ್ಚುತ್ತಿದೆ. SARI, ILIನ ಒಬ್ಬ ರೋಗಿಯಿಂದ ಸರಾಸರಿ 9 ಮಂದಿಗೆ ಕೊರೊನಾ ವೈರಸ್ ತಗುಲುತ್ತಿದೆ.

SARI, ILI ಕೇಸ್​ಗಳು ಆರೋಗ್ಯ ಇಲಾಖೆಗೆ ದೊಡ್ಡ ತಲೆನೋವಾಗಿದೆ. 29 SARI ಪ್ರಕರಣಗಳಿಂದ 281 ಜನರಿಗೆ ಕೊರೊನಾ ಸೋಂಕು ತಗುಲಿದೆ. ಅಲ್ಲದೆ ಬೆಚ್ಚಿಬೀಳುವ ಸಂಗತಿ ಅಂದ್ರೆ SARI ಕೇಸ್‌ಗಳಿಗೆ ಸೋಂಕಿನ ಮೂಲ ಸಹ ಪತ್ತೆ ಆಗ್ತಿಲ್ಲ. ಕುಟುಂಬದವರಿಂದ SARI, ILI ಕೇಸ್​ಗಳನ್ನು ಪ್ರತ್ಯೇಕಿಸಿ ಅಂತ ಆರೋಗ್ಯ ಇಲಾಖೆ ಹೇಳ್ತಿತ್ತು.

ಈಗ SARI, ILI ಕೇಸ್‌ಗಳೇ ಕುಟುಂಬಕ್ಕೆ ಮಾರಕವಾಗ್ತಿದೆ. ಒಬ್ಬ ಸೋಂಕಿತನಿಂದ ಸರಾಸರಿ 9 ಜನರಿಗೆ ಕೊರೊನಾ ಸೋಂಕು ತಗುಲುತ್ತಿದೆ. ಸಾರಿ ಕೇಸ್ ಹಿಸ್ಟರಿ ಪತ್ತೆ ಹಚ್ಚುವುದೇ ಆರೋಗ್ಯ ಇಲಾಖೆಗೆ ದೊಡ್ಡ ಸವಾಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us