Covid-19 Karnataka Update: ಕರ್ನಾಟಕದಲ್ಲಿ ಇಂದು 35,024 ಮಂದಿಗೆ ಕೊರೊನಾ ಸೋಂಕು, 270 ಸಾವು

|

Updated on: Apr 29, 2021 | 6:51 PM

Coronavirus: ಬೆಂಗಳೂರಿನಲ್ಲಿ ಇಂದು ಒಟ್ಟು 19,637 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ನಿನ್ನೆಗೆ ಹೋಲಿಸಿದರೆ ಸೋಂಕಿತರ ಸಂಖ್ಯೆ ಸುಮಾರು ಎರಡು ಸಾವಿರದಷ್ಟು ಕಡಿಮೆಯಾಗಿದೆ. ಬೆಂಗಳೂರಿನಲ್ಲಿ ಇಂದು 143 ಮಂದಿ ಸೋಂಕಿನಿಂದ ಮೃತಪಟ್ಟಿದ್ದಾರೆ.

Covid-19 Karnataka Update: ಕರ್ನಾಟಕದಲ್ಲಿ ಇಂದು 35,024 ಮಂದಿಗೆ ಕೊರೊನಾ ಸೋಂಕು, 270 ಸಾವು
ಪ್ರಾತಿನಿಧಿಕ ಚಿತ್ರ
Follow us on

ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಗುರುವಾರ (ಏಪ್ರಿಲ್ 29) ಸಹ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 35 ಸಾವಿರ ದಾಟಿದೆ. ಸತತ ಎರಡನೇ ದಿನವೂ 35 ಸಾವಿರಕ್ಕೂ ಹೆಚ್ಚು ಸೋಂಕಿತರ ಸಂಖ್ಯೆ ವರದಿಯಾಗಿರುವುದು ಪರಿಸ್ಥಿತಿ ಗಂಭೀರವಾಗಿರುವುದನ್ನು ಸೂಚಿಸುತ್ತದೆ. ರಾಜ್ಯದಲ್ಲಿ ಇಂದು ಒಟ್ಟು 35,024 ಜನರಿಗೆ ಕೊರೊನಾ ದೃಢಪಟ್ಟಿದ್ದು, 270 ಮಂದಿ ಸಾವನ್ನಪ್ಪಿದ್ದಾರೆ. ನಿನ್ನೆ ರಾಜ್ಯದಲ್ಲಿ 39,047 ಜನರಲ್ಲಿ ಸೋಂಕು ಕಾಣಿಸಿಕೊಂಡಿತ್ತು. 229 ಮಂದಿ ಮೃತಪಟ್ಟಿದ್ದರು.

ಬೆಂಗಳೂರಿನಲ್ಲಿ ಇಂದು ಒಟ್ಟು 19,637 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ನಿನ್ನೆಗೆ ಹೋಲಿಸಿದರೆ ಸೋಂಕಿತರ ಸಂಖ್ಯೆ ಸುಮಾರು ಎರಡು ಸಾವಿರದಷ್ಟು ಕಡಿಮೆಯಾಗಿದೆ. ನಿನ್ನೆ ಬೆಂಗಳೂರಿನಲ್ಲಿ 22,596 ಜನರಲ್ಲಿ ಸೋಂಕು ದೃಢಪಟ್ಟಿತ್ತು. ಬೆಂಗಳೂರಿನಲ್ಲಿ ಇಂದು 143 ಮಂದಿ ಮೃತಪಟ್ಟಿದ್ದಾರೆ. ನಿನ್ನೆ ಕೊರೊನಾ ಸೋಂಕಿನಿಂದ ಬೆಂಗಳೂರಿನಲ್ಲಿ 137 ಮಂದಿ ಸಾವನ್ನಪ್ಪಿದ್ದರು.

ರಾಜ್ಯದಲ್ಲಿ ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 14,74,846ಕ್ಕೆ (14.74 ಲಕ್ಷ) ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ 15,306 ಜನರು ಸಾವನ್ನಪ್ಪಿದ್ದಾರೆ. ಸೋಂಕಿತರ ಪೈಕಿ 11,10,025 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 3,49,496 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಿನಲ್ಲಿ ಇಂದು ಒಂದೇ ದಿನ 19,637 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಕೊರೊನಾ ಸೋಂಕಿತರ ಒಟ್ಟು ಸಂಖ್ಯೆ 7,29,984ಕ್ಕೆ (7.29 ಲಕ್ಷ) ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಇಂದು 143 ಮಂದಿ ಸಾವನ್ನಪ್ಪಿದ್ದಾರೆ. ಸೋಂಕಿನಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 6,282ಕ್ಕೆ ಏರಿಕೆಯಾಗಿದೆ. 4,86,183 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. 2,37,518 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿಗೆ ಸೋಂಕು?
ಬೆಂಗಳೂರು ನಗರ 19,637, ಮೈಸೂರು 1,219, ತುಮಕೂರು 1,195, ದಕ್ಷಿಣ ಕನ್ನಡ 1,175, ಬೆಂಗಳೂರು ಗ್ರಾಮಾಂತರ 1,129, ಕಲಬುರಗಿ 957, ಮಂಡ್ಯ 939, ಬಳ್ಳಾರಿ 896, ರಾಯಚೂರು 628, ಹಾಸನ 624, ಉಡುಪಿ 568, ಬೆಳಗಾವಿ 545, ಚಿಕ್ಕಬಳ್ಳಾಪುರ 545, ಕೊಡಗು 537, ಕೋಲಾರ 536, ಧಾರವಾಡ 427, ವಿಜಯಪುರ 408, ಉತ್ತರ ಕನ್ನಡ 377, ಶಿವಮೊಗ್ಗ 372, ಚಾಮರಾಜನಗರ 359, ಬಾಗಲಕೋಟೆ 302, ಯಾದಗಿರಿ 259, ಚಿಕ್ಕಮಗಳೂರು 242, ಕೊಪ್ಪಳ 220, ದಾವಣಗೆರೆ 196, ರಾಮನಗರ 183, ಬೀದರ್ 180, ಗದಗ 132, ಚಿತ್ರದುರ್ಗ 126, ಹಾವೇರಿ 111 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.

ಯಾವ ಜಿಲ್ಲೆಯಲ್ಲಿ ಎಷ್ಟು ಸಾವು?
ರಾಜ್ಯದಲ್ಲಿ ಇಂದು ಕೊರೊನಾ ಸೋಂಕಿನಿಂದ 270 ಜನರು ಸಾವನ್ನಪ್ಪಿದ್ದಾರೆ. ಬೆಂಗಳೂರು ನಗರ ಜಿಲ್ಲೆಯಲ್ಲ ಅತಿಹೆಚ್ಚು, ಅಂದರೆ 143 ಜನರು ಮೃತಪಟ್ಟಿದ್ದಾರೆ. ಬಳ್ಳಾರಿ 16, ಮೈಸೂರು 12, ಕಲಬುರಗಿ 11, ಹಾಸನ, ತುಮಕೂರು, ಮಂಡ್ಯ ಜಿಲ್ಲೆಗಳಲ್ಲಿ ತಲಾ 9 ಜನರು ಬಲಿಯಾಗಿದ್ದಾರೆ. ಯಾದಗಿರಿ 8, ಚಾಮರಾಜನಗರ 7, ಹಾವೇರಿ 6, ಬೀದರ್​ ಮತ್ತು ಧಾರವಾಡ​ ಜಿಲ್ಲೆಗಳಲ್ಲಿ ತಲಾ ಐವರು, ಬೆಂಗಳೂರು ಗ್ರಾಮಾಂತರ​, ರಾಮನಗರ, ಉತ್ತರ ಕನ್ನಡ, ವಿಜಯಪುರ​ ಜಿಲ್ಲೆಗಳಲ್ಲಿ ತಲಾ ನಾಲ್ವರು, ಚಿಕ್ಕಬಳ್ಳಾಪುರ, ಶಿವಮೊಗ್ಗ ಜಿಲ್ಲೆಗಳಲ್ಲಿ ತಲಾ ಮೂವರು, ಚಿತ್ರದುರ್ಗ, ಉಡುಪಿ ಜಿಲ್ಲೆಗಳಲ್ಲಿ ತಲಾ ಇಬ್ಬರು, ಬಾಗಲಕೋಟೆ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕೋಲಾರ ಜಿಲ್ಲೆಗಳಲ್ಲಿ ತಲಾ ಒಬ್ಬರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಈವರೆಗೆ ಕೊರೊನಾದಿಂದ 15,306 ಜನರು ಮೃತಪಟ್ಟಿದ್ದಾರೆ.

(Coronavirus Karnataka Updated 35024 people infected 270 died of covid 19 infection April 29)

ಇದನ್ನೂ ಓದಿ: Coronavirus India Update: ದೇಶದಲ್ಲಿ ಒಂದೇ ದಿನ 3.79 ಲಕ್ಷ ಹೊಸ ಕೊವಿಡ್ ಪ್ರಕರಣ, 3,645 ಸಾವು

ಇದನ್ನೂ ಓದಿ: Explainer: 18ರಿಂದ 45 ವಯೋಮಾನದವರಿಗೆ ಕೋವಿಡ್ ಲಸಿಕೆ; ನೋಂದಣಿ ಹೇಗೆ? ಪಡೆದುಕೊಳ್ಳುವುದು ಎಲ್ಲಿ? ಡೇಟ್ ಮಿಸ್ ಆದ್ರೆ ಏನು ಮಾಡಬೇಕು?