ಲಾಕ್​ಡೌನ್​ 4.O: ಅಂತಾರಾಜ್ಯ ಸಾರಿಗೆಗೆ ಅವಕಾಶ ಕೊಟ್ರೆ ಅಪಾಯ ಕಟ್ಟಿಟ್ಟ ಬುತ್ತಿ!?

|

Updated on: May 18, 2020 | 10:04 AM

ಬೆಂಗಳೂರು: ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅಂತಾರಾಜ್ಯ ಸಾರಿಗೆಗೆ ಅವಕಾಶ ಕೊಟ್ರೆ ಮತ್ತಷ್ಟು ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಹಸಿರು ಜಿಲ್ಲೆಯಾಗಿ ಒಂದೂ ಉಳಿಯೋದು ಡೌಟ್ ಆಗಿದೆ. ಏಕೆಂದರೆ ಲಾಕ್​ಡೌನ್ 2.O ಮುಗಿಯುತ್ತಿದ್ದಂತೆ ಸರ್ಕಾರ ಇ-ಪಾಸ್ ನೀಡಿತ್ತು. ಹೊರ ರಾಜ್ಯದ ಕನ್ನಡಿಗರು ಹಾಗೂ ಕಾರ್ಮಿಕರಿಗೆ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಿತ್ತು. ಇದ್ರಿಂದ ಸಾವಿರಾರು ಮಂದಿ ತಮ್ಮ ಊರು ಸೇರಿಕೊಂಡು ನಿಟ್ಟುಸಿರು ಬಿಟ್ರು. ಆದ್ರೆ ರಾಜ್ಯದಲ್ಲಿದ್ದ 14 ಗ್ರೀನ್ ಜಿಲ್ಲೆಗಳ ಪೈಕಿ 8 ಜಿಲ್ಲೆಗಳು ರೆಡ್ […]

ಲಾಕ್​ಡೌನ್​ 4.O: ಅಂತಾರಾಜ್ಯ ಸಾರಿಗೆಗೆ ಅವಕಾಶ ಕೊಟ್ರೆ ಅಪಾಯ ಕಟ್ಟಿಟ್ಟ ಬುತ್ತಿ!?
Follow us on

ಬೆಂಗಳೂರು: ದಿನೇ ದಿನೇ ಕೊರೊನಾ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ಅಂತಾರಾಜ್ಯ ಸಾರಿಗೆಗೆ ಅವಕಾಶ ಕೊಟ್ರೆ ಮತ್ತಷ್ಟು ಅಪಾಯ ಹೆಚ್ಚಾಗುವ ಸಾಧ್ಯತೆ ಇದೆ. ರಾಜ್ಯದಲ್ಲಿ ಹಸಿರು ಜಿಲ್ಲೆಯಾಗಿ ಒಂದೂ ಉಳಿಯೋದು ಡೌಟ್ ಆಗಿದೆ.

ಏಕೆಂದರೆ ಲಾಕ್​ಡೌನ್ 2.O ಮುಗಿಯುತ್ತಿದ್ದಂತೆ ಸರ್ಕಾರ ಇ-ಪಾಸ್ ನೀಡಿತ್ತು. ಹೊರ ರಾಜ್ಯದ ಕನ್ನಡಿಗರು ಹಾಗೂ ಕಾರ್ಮಿಕರಿಗೆ ರಾಜ್ಯ ಪ್ರವೇಶಕ್ಕೆ ಅವಕಾಶ ನೀಡಿತ್ತು. ಇದ್ರಿಂದ ಸಾವಿರಾರು ಮಂದಿ ತಮ್ಮ ಊರು ಸೇರಿಕೊಂಡು ನಿಟ್ಟುಸಿರು ಬಿಟ್ರು. ಆದ್ರೆ ರಾಜ್ಯದಲ್ಲಿದ್ದ 14 ಗ್ರೀನ್ ಜಿಲ್ಲೆಗಳ ಪೈಕಿ 8 ಜಿಲ್ಲೆಗಳು ರೆಡ್ ಜೋನ್​ಗೆ ಬಂತು.

14 ಜಿಲ್ಲೆಗಳ ಪೈಕಿ 8 ಜಿಲ್ಲೆಗಳಿಗೆ ಕೊರೊನಾ:
ಲಾಕ್​ಡೌನ್ 2.O ಮುಗಿಯುವ ಮೇ 4ರ ವೇಳೆಗೆ ರಾಜ್ಯದಲ್ಲಿ 14 ಜಿಲ್ಲೆಗಳು ಹಸಿರು ಜೋನ್​ನಲ್ಲಿದ್ದವು. ಈ 14 ಜಿಲ್ಲೆಗಳಲ್ಲಿ ಒಂದೇ ಒಂದು ಕೊರೊನಾ ಸೋಂಕು ಇರಲಿಲ್ಲ. ಈಗ 14 ಜಿಲ್ಲೆಗಳಲ್ಲಿ 8 ಜಿಲ್ಲೆಗಳಿಗೆ ಕೊರೊನಾ ವೈರಸ್ ಎಂಟ್ರಿಯಾಗಿದೆ. ಈ 8 ಜಿಲ್ಲೆಗಳಲ್ಲೇ ಕಳೆದ 15 ದಿನಗಳಲ್ಲಿ 153 ಪ್ರಕರಣಗಳು ವರದಿಯಾಗಿದೆ.

ಈ ಎಲ್ಲಾ ಪ್ರಕರಣ ವಿದೇಶ ಹಾಗೂ ಹೊರ ರಾಜ್ಯದ ಹಿನ್ನೆಲೆಯವರಾಗಿದ್ದಾರೆ. ಸುಲಭವಾಗಿ ಇ-ಪಾಸ್ ಪಡೆಯ ಬಹುದಾದ ಕಾರಣ ಹೆಚ್ಚಿನ ಮಂದಿ ರಾಜ್ಯ ಪ್ರವೇಶಿಸಿದ್ದಾರೆ. ಸದ್ಯ ರಾಮನಗರ, ರಾಯಚೂರು, ಚಿಕ್ಕಮಗಳೂರು, ಕೊಡಗು, ಚಾಮರಾಜನರ, ಕೊಪ್ಪಳ ಜಿಲ್ಲೆಗಳು ಹಸಿರು ಜಿಲ್ಲೆಗಳಾಗಿ ಉಳಿದಿವೆ. ಮೈಸೂರು ಸಹ ಕೊರೊನಾ ಮುಕ್ತವಾಗಿದೆ.

ಈಗ ಕೇಂದ್ರ ಸರ್ಕಾರ ಅಂತಾರಾಜ್ಯ ಸಾರಿಗೆಗೆ ಅನುಮತಿ ನೀಡಿದೆ. ಇದನ್ನ ರಾಜ್ಯ ಸರ್ಕಾರ ಒಪ್ಪಿಕೊಂಡ್ರೆ ಬಹುದೊಡ್ಡ ಅಪಾಯ ಕಟ್ಟಿಟ್ಟ ಬುತ್ತಿಯಾಗಲಿದೆ. ರಾಜ್ಯದ ಎಲ್ಲಾ ಜಿಲ್ಲೆಗಳೂ ರೆಡ್ ಝೋನ್​ಗಳಾಗುವ ಆತಂಕ ಶುರುವಾಗಿದೆ.

Published On - 10:03 am, Mon, 18 May 20