ಕರುನಾಡಿಗೆ ಕೊರೊನಾ ಕಂಟಕ: ವಿದೇಶಗಳಿಂದ ಮರಳುತ್ತಿರುವವರಿಗೆ ಸೋಂಕಿನ ಲಕ್ಷಣ

ಬೆಂಗಳೂರು: ಕೊರೊನಾ, ಕೊರೊನಾ, ಕೊರೊನಾ ಹೀಗೆ ಎಲ್ಲೇ ಹೋದ್ರೂ ಕೊರೊನಾ ಸೋಂಕಿನದ್ದೇ ಜಪ. ಕೊರೊನಾದ್ದೇ ಭಯ ಅದರದ್ದೇ ಆತಂಕ. ಪರಿಸ್ಥಿತಿ ಹೀಗಿರುವಾಗ್ಲೇ ವಿದೇಶಗಳಿಂದ ತಾಯ್ನಾಡಿಗೆ ಮರಳುತ್ತಿರುವ ಭಾರತೀಯರಲ್ಲಿ ಸೋಂಕಿನ ಲಕ್ಷಣ ಹೆಚ್ಚಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಗೂಡು ಸೇರಿದವರು ನೇರ ಆಸ್ಪತ್ರೆಗೆ ಸೇರುತ್ತಿದ್ದಾರೆ. ಎಲ್ಲೆಲ್ಲಿ ಹಬ್ಬಿದೆಯೋ, ಎಲ್ಲೆಲ್ಲಿ ಜೀವಂತವಾಗಿದೆಯೋ. ಕೊರೊನಾ ಕಾಟದಿಂದ ಇಡೀ ಜಗತ್ತಿಗೆ ಶಾಕ್ ಆಗಿದೆ. ನಮ್ಮವರ ಜೀವ ಉಳಿದರೆ ಸಾಕು ಅಂತಾ ವಿಶ್ವದ ಪ್ರತಿಯೊಂದು ದೇಶವೂ ಹಪಹಪಿಸುತ್ತಿದೆ. ಅತ್ತ ವ್ಯಾಕ್ಸಿನ್ ಸಿಗುತ್ತಿಲ್ಲ ಅಂತಾ ವಿಜ್ಞಾನಿಗಳು […]

ಕರುನಾಡಿಗೆ ಕೊರೊನಾ ಕಂಟಕ: ವಿದೇಶಗಳಿಂದ ಮರಳುತ್ತಿರುವವರಿಗೆ ಸೋಂಕಿನ ಲಕ್ಷಣ
Follow us
ಸಾಧು ಶ್ರೀನಾಥ್​
| Updated By:

Updated on: May 25, 2020 | 7:32 AM

ಬೆಂಗಳೂರು: ಕೊರೊನಾ, ಕೊರೊನಾ, ಕೊರೊನಾ ಹೀಗೆ ಎಲ್ಲೇ ಹೋದ್ರೂ ಕೊರೊನಾ ಸೋಂಕಿನದ್ದೇ ಜಪ. ಕೊರೊನಾದ್ದೇ ಭಯ ಅದರದ್ದೇ ಆತಂಕ. ಪರಿಸ್ಥಿತಿ ಹೀಗಿರುವಾಗ್ಲೇ ವಿದೇಶಗಳಿಂದ ತಾಯ್ನಾಡಿಗೆ ಮರಳುತ್ತಿರುವ ಭಾರತೀಯರಲ್ಲಿ ಸೋಂಕಿನ ಲಕ್ಷಣ ಹೆಚ್ಚಾಗುತ್ತಿದೆ. ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಗೂಡು ಸೇರಿದವರು ನೇರ ಆಸ್ಪತ್ರೆಗೆ ಸೇರುತ್ತಿದ್ದಾರೆ.

ಎಲ್ಲೆಲ್ಲಿ ಹಬ್ಬಿದೆಯೋ, ಎಲ್ಲೆಲ್ಲಿ ಜೀವಂತವಾಗಿದೆಯೋ. ಕೊರೊನಾ ಕಾಟದಿಂದ ಇಡೀ ಜಗತ್ತಿಗೆ ಶಾಕ್ ಆಗಿದೆ. ನಮ್ಮವರ ಜೀವ ಉಳಿದರೆ ಸಾಕು ಅಂತಾ ವಿಶ್ವದ ಪ್ರತಿಯೊಂದು ದೇಶವೂ ಹಪಹಪಿಸುತ್ತಿದೆ. ಅತ್ತ ವ್ಯಾಕ್ಸಿನ್ ಸಿಗುತ್ತಿಲ್ಲ ಅಂತಾ ವಿಜ್ಞಾನಿಗಳು ತಲೆಕೆಡಿಸಿಕೊಂಡಿದ್ದರೆ, ಇತ್ತ ಸೋಂಕಿತರಿಗೆ ಚಿಕಿತ್ಸೆ ನೀಡಲು ಬಡರಾಷ್ಟ್ರಗಳು ಪರದಾಡ್ತಿವೆ. ವಾತಾವರಣ ಇಷ್ಟು ಗಂಭೀರವಾಗಿರುವಾಗ ಹೊರ ದೇಶಗಳಿಂದ ತಾಯ್ನಾಡಿಗೆ ಮರಳುತ್ತಿರುವವರಿಂದ ಕೊರೊನಾ ಸ್ಫೋಟ ಸ್ಟಾರ್ಟ್ ಆಗಿದೆ.

ಯೆಸ್, ಶಾಕ್ ಆಯ್ತಾ.. ಈ ವಿಷಯ ಕೇಳಿದ ಮೇಲೆ ನಿಮಗೆ ಶಾಕ್ ಆಗಲೇಬೇಕು ತಾನೆ. ಯಾಕಂದ್ರೆ ದಿನೇ ದಿನೆ ‘ಕೊರೊನಾ’ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿರುವಾಗಲೇ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಸಾವಿರಾರು ಜನ ರಾಜಧಾನಿಗೆ ಬಂದಿಳಿದಿದ್ದಾರೆ. ಮೇ 11ರಿಂದ ಮೇ 24ರವರೆಗೆ, ಅಂದ್ರೆ 14 ದಿನಗಳಲ್ಲಿ ಬರೋಬ್ಬರಿ 15 ವಿಮಾನಗಳ ಮೂಲಕ ವಿದೇಶಗಳಿಂದ ಬೆಂಗಳೂರಿಗೆ 2250 ಜನ ಎಂಟ್ರಿ ಕೊಟ್ಟಿದ್ದಾರೆ. ಇನ್ನು ‘ದಿ ಗ್ರೇಟ್ ಜರ್ನಿ’ಯ ಇಂಚಿಂಚು ಡೀಟೇಲ್ಸ್ ಅನ್ನ ನೋಡೋದಾದ್ರೆ.

ಕರುನಾಡಿಗೆ ‘ಕೊರೊನಾ’ ಕಂಟಕ ಕೊರೊನಾ ಸೋಂಕಿನಿಂದ ಎದುರಾದ ಸಂಕಷ್ಟದ ಹಿನ್ನೆಲೆ ವಿದೇಶದಲ್ಲಿದ್ದ ಭಾರತೀಯರನ್ನ ಏರ್ ಲಿಫ್ಟ್ ಮಾಡಲಾಗ್ತಿದೆ. ಹೀಗೆ ಮೇ 11ರಿಂದ ಮೇ 24ರವರೆಗೆ ವಿದೇಶಗಳಿಂದ ಬೆಂಗಳೂರಿಗೆ 2250 ಜನ ಬಂದಿಳಿದಿದ್ದಾರೆ. ಇನ್ನು ಕಳೆದ 14 ದಿನದ ಅವಧಿಯಲ್ಲಿ ಒಟ್ಟು 15 ವಿಮಾನಗಳು ವಿವಿಧ ದೇಶಗಳಿಂದ ಬೆಂಗಳೂರಿಗೆ ಎಂಟ್ರಿಯಾಗಿವೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಮೂಲಕ ಕನ್ನಡಿಗರನ್ನು 2250 ವಿದೇಶಗಳಿಂದ ಸ್ವಾಗತಿಸಲಾಗಿದೆ. ಮತ್ತೊಂದ್ಕಡೆ ಜನವರಿಯಿಂದ ಮಾರ್ಚ್ ಮಧ್ಯೆ 90 ಸಾವಿರ ಜನರು ಆಗಮಿಸಿದ್ದಾರೆ ಎಂಬ ಶಾಕ್ ಕೂಡ ಸಿಕ್ಕಿದೆ.

ಲಂಡನ್​ನಿಂದ ಆಗಮಿಸಿದ್ದ ಯುವತಿಗೆ ಕೊರೊನಾ: ಬೆಂಗಳೂರಿಗೆ ಬಂದಿಳಿದವರ ಪೈಕಿ ಲಂಡನ್​ನಿಂದ ಬಂದಿದ್ದ 27 ವರ್ಷದ ಯುವತಿಗೆ ಕೊರೊನಾ ಪಾಸಿಟೀವ್ ಬಂದಿದೆ. ಯುವತಿ ವೈಟ್​ಫೀಲ್ಡ್​ನ ಹೋಟೆಲ್ ಒಂದರಲ್ಲಿ ಕ್ವಾರಂಟೈನ್ ಆಗಿದ್ದರು. ಜೊತೆಗೇ ಉಡುಪಿಯಲ್ಲಿ ಅರಬ್ ರಾಷ್ಟ್ರದಿಂದ ಬಂದಿದ್ದ ವ್ಯಕ್ತಿಗೂ ಸೋಂಕು ದೃಢಪಟ್ಟಿದೆ. ಮತ್ತೊಂದು ಕಡೆ ಇಂದಿನಿಂದ ‘ಅಂತರ್ ರಾಜ್ಯ’ ವಿಮಾನಗಳ ಓಡಾಟ ಕೂಡ ಶುರುವಾಗಲಿದ್ದು, ಗಾಯದ ಮೇಲೆ ಬರೆ ಎಳೆದಂತಾಗಿದೆ.

ಒಟ್ನಲ್ಲಿ 2 ಸಾವಿರದ ಗಡಿ ದಾಟಿರೋ ಸೋಂಕಿತರ ಸಂಖ್ಯೆ ರಾಜ್ಯದಲ್ಲಿ ತೀವ್ರ ಆತಂಕ ಹುಟ್ಟಿಸಿದೆ. 9 ದಿನಗಳಲ್ಲಿ ಬರೋಬ್ಬರಿ 1 ಸಾವಿರ ಹೊಸ ಕೇಸ್​ಗಳು ಪತ್ತೆಯಾಗಿವೆ. ವಿದೇಶಗಳಿಂದ ಆಗಮಿಸುತ್ತಿರುವವರ ಜೊತೆಗೆ ಅಕ್ಕಪಕ್ಕದ ರಾಜ್ಯಗಳಿಂದ ಬರುತ್ತಿರುವವರೂ ಆತಂಕಕ್ಕೆ ಕಾರಣರಾಗಿದ್ದಾರೆ. ಅದ್ರಲ್ಲೂ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ರಾಜಸ್ಥಾನದಿಂದ ಬಂದವರಿಂದಲೇ ಗಂಡಾಂತರ ಹೆಚ್ಚಾಗಿದೆ. ‘ಕೊರೊನಾ’ ಸಂಕಷ್ಟ ಶುರುವಾದಾಗಿನಿಂದ ಇಲ್ಲಿವರೆಗೂ ಸುಮಾರು 1 ಲಕ್ಷದ 11 ಸಾವಿರ ಮಂದಿ ರಾಜ್ಯಕ್ಕೆ ಎಂಟ್ರಿಕೊಟ್ಟಿದ್ದಾರಂತೆ. ಇದು ರಾಜ್ಯವನ್ನು ದಿನೇ ದಿನೆ ಕೊರೊನಾ ಸೋಂಕಿನ ಸುಳಿಗೆ ಸಿಲುಕಿಸುತ್ತಿದೆ.

ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
ವೈಕುಂಠ ಏಕಾದಶಿ, ಚಿಕ್ಕತಿರುಪತಿಯ ವೆಂಕಟೇಶ್ವರನಿಗೆ ವಿಶೇಷ ಪೂಜೆ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ
Video: ರೈಲಿನಲ್ಲಿ ಕುಡುಕ ಪ್ರಯಾಣಿಕ ಹಾಗೂ ಟಿಟಿಇ ನಡುವೆ ಹೊಡೆದಾಟ