ಚಾಮರಾಜನಗರ, ಮಾರ್ಚ್ 24: ಬಡವರು, ಕೂಲಿ ಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾದ್ದರೆ ಹೋಗುವುದು ಸರ್ಕಾರಿ ಆಸ್ಪತ್ರೆಗೆ. ಆದರೆ ಅಂತ ಸರ್ಕಾರಿ ಆಸ್ಪತ್ರೆ (Government Hospital) ಯ ಸಿಬ್ಬಂದಿಗಳೇ ವಸೂಲಿಗೆ ನಿಂತ್ರೆ ಬಡ ಬಗ್ಗರ ಗತಿಯೇನು? ಇಂತಿಂತ ಚಿಕಿತ್ಸೆಗೆ ಇಂತಿಷ್ಟು ಹಣ ಅಂತ ಫಿಕ್ಸ್ ಮಾಡಿ ಲಂಚ ಪಡೆಯುತ್ತಿರುವ ಸಂತೇಮರಳ್ಳಿ ಸರ್ಕಾರಿ ಆಸ್ಪತ್ರೆಯ ಕರ್ಮಕಾಂಡ ಈಗ ಬಟಾ ಬಯಲಾಗಿದೆ. ಜಿಲ್ಲೆಯ ಚಾಮರಾಜನಗರ ತಾಲೂಕಿನ ಸಂತೇಮರಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಸಿಬ್ಬಂದಿಗಳು ರೋಗಿಗಳಿಂದ ಹಣಪಡೆದುಕೊಳ್ಳುವ ಮೂಲಕ ಸುಲಿಗೆಗೆ ಇಳಿದಿದ್ದಾರೆ.
ಸಂತೇಮರಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ನಾರ್ಮಲ್ ಡೆಲವರಿಗೆ 3 ಸಾವಿರ ರೂ. ಸಿಜೇರಿಯನ್ಗೆ 20 ಸಾವಿರ ರೂ. ಗರ್ಭಕೋಶ ಶಸ್ತ್ರ ಚಿಕಿತ್ಸೆಗೆ 30 ಸಾವಿರ ರೂ. ಅಂತ ಒಂದೊಂದು ಆಪರೇಷನ್ಗೆ ಒಂದೊಂದ ಹಣ ನಿಗದಿ ಮಾಡಲಾಗಿದೆ. ಆಶಾ ಕಾರ್ಯಕರ್ತೆಯರು ಆ ಹಣವನ್ನ ಸಂಗ್ರಹಿಸಿ ನರ್ಸ್ಗಳಿಗೆ ಕೊಡ್ಬೇಕಂತೆ. ಬಳಿಕ ವೈದ್ಯಾಧಿಕಾರಿ ರೇಣುಕಾದೇವಿ ಈ ಹಣವನ್ನ ಸಂಗ್ರಹಿಸುತ್ತಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.
ಇದನ್ನೂ ಓದಿ: ಶಿವರಾತ್ರಿ ಜಾತ್ರೆ: ಮಲೆಮಹದೇಶ್ವರ ದೇಗುಲದಲ್ಲಿ ಬರೋಬ್ಬರಿ ಆದಾಯ ಸಂಗ್ರಹ, ಇಲ್ಲಿದೆ ನೋಡಿ ವಿವರ
ಇದೇ ರೀತಿ ರಾಣಿ ಎಂಬ ಆಶಾ ಕಾರ್ಯಕರ್ತೆಗೆ 10 ಸಾವಿರ ರೂ. ಹಣವನ್ನ ಡೆಲವರಿ ರೋಗಿಗಳ ಬಳಿ ವಸೂಲಿ ಮಾಡೋಕೆ ಹೇಳಿದ್ರಂತೆ. ಇದಕ್ಕೊಪ್ಪದೆ ಇದ್ದಿದ್ದಕ್ಕೆ ವೈದ್ಯಾಧಿಕಾರಿ ರೇಣುಕಾದೇವಿ ಇಲ್ಲ ಸಲ್ಲದ ಆರೋಪ ಮಾಡಿ ಭ್ರಷ್ಟಾಚಾರ ವಿರುದ್ದ ಧ್ವನಿ ಎತ್ತಿದ್ದ ಆಶಾ ಕಾರ್ಯಕರ್ತೆ ರಾಣಿ ವಿರುದ್ದ ಮೆಮೋ ನೀಡಿದ್ದಾರೆ. ಅಸಲಿ ಆಶಾ ಕಾರ್ಯಕರ್ತೆಯರು ಸರ್ಕಾರಿ ನೌಕರರಲ್ಲ. ಅವರಿಗೆ ನೋಟಿಸ್ ನೀಡಲು ಕಾನೂನಲ್ಲಿ ಅವಕಾಶವಿಲ್ಲ ಆದರೂ ಸಹ ಮೆಮೋ ನೀಡಿ ಈಗ ವೈದ್ಯಾಧಿಕಾರಿ ರೇಣುಕಾದೇವಿ ಅಡಕತ್ತರಿಗೆ ಸಿಲುಕಿದ್ದಾರೆ.
ಒಂದು ಹೆಜ್ಜೆ ಮುಂದೆ ಹೋಗಿರುವ ಡಾಕ್ಟರ್ ಮೇಡಂ ಜಾತಿ ಅಸ್ತ್ರ ಪ್ರಯೋಗಿಸಿ ಅಟ್ರಾಸಿಟಿ ಕೇಸ್ ಹಾಕಿಸಿ ನಿನ್ನನ್ನ ಒಳಗೆ ಕಳಿಸುತ್ತೇನೆಂದು ಧಮ್ಕಿ ಹಾಕಿದ್ದಾರಂತೆ.
ಇದನ್ನೂ ಓದಿ: ಹೆಗ್ಗೋಠಾರದಲ್ಲಿ ಆಚರಿಸಲಾಯ್ತು ವಿಶೇಷ ಶಿವರಾತ್ರಿ ಉತ್ಸವ; 40 ಕಿಲೋ ಮೀಟರ್ ಕಾಲ್ನಡಿಗೆಯಲ್ಲಿ ತೆರಳಿ ಕಪಿಲಾ ತೀರ್ಥ ತಂದ ಭಕ್ತಗಣ
ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಹೋಗಲು ಹಣವಿಲ್ಲ ಅಂತ ಸರ್ಕಾರಿ ಆಸ್ಪತ್ರೆಗೆ ಬರುವ ಬಡ ಬಗ್ಗರ ಬಳಿಯೇ ಹಣ ಪಡೆದುಕೊಳ್ಳುವವರ ವಿರುದ್ದ ಜಿಲ್ಲಾ ಆರೋಗ್ಯಾಧಿಕಾರಿಗಳು ಸೂಕ್ತ ಕ್ರಮ ತೆಗೆದುಕೊಂಡು ತಕ್ಕ ಶಾಸ್ತಿ ಮಾಡ್ಬೇಕಿದೆ. ಇಲ್ಲದೇ ಹೋದರೆ ಬಡ, ಬಗ್ಗರು ಚಿಕಿತ್ಸೆಯಿಂದ ವಂಚಿತರಾಗುವುದಂತು ಪಕ್ಕಾ.
ಮತ್ತಷ್ಟು ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.