AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಶಿವರಾತ್ರಿ ಜಾತ್ರೆ: ಮಲೆಮಹದೇಶ್ವರ ದೇಗುಲದಲ್ಲಿ ಬರೋಬ್ಬರಿ ಆದಾಯ ಸಂಗ್ರಹ, ಇಲ್ಲಿದೆ ನೋಡಿ ವಿವರ

ಇತಿಹಾಸ ಪ್ರಸಿದ್ಧ ಮಲೆಮಹದೇಶ್ವರ ದೇಗುಲದಲ್ಲಿ ಶಿವರಾತ್ರಿ ಜಾತ್ರೆಯ ಆರು ದಿನಗಳಲ್ಲಿ ಬರೋಬ್ಬರಿ 3.24 ಕೋಟಿ ರೂ. ಆದಾಯ ಸಂಗ್ರಹವಾಗಿದೆ ಎಂದು ದೇಗುಲದ ಆಡಳಿತ ಮಂಡಳಿ ತಿಳಿಸಿದೆ. ವಿಶೇಷ ದರ್ಶನ ಟಿಕೆಟ್, ಲಡ್ಡು ಪ್ರಸಾದ, ಇತರ ಸೇವೆಗಳಿಂದ ಈ ಆದಾಯ ಸಂಗ್ರಹವಾಗಿದ್ದು, ಹುಂಡಿ ಕಾಣಿಕೆ ಮತ್ತು ವಸತಿಯಿಂದ ಬಂದಿರುವ ಆದಾಯವನ್ನು ಇದರಲ್ಲಿ ಸೇರಿಸಲಾಗಿಲ್ಲ.

ಶಿವರಾತ್ರಿ ಜಾತ್ರೆ: ಮಲೆಮಹದೇಶ್ವರ ದೇಗುಲದಲ್ಲಿ ಬರೋಬ್ಬರಿ ಆದಾಯ ಸಂಗ್ರಹ, ಇಲ್ಲಿದೆ ನೋಡಿ ವಿವರ
ಮಲೆಮಹದೇಶ್ವರ ದೇಗುಲ
ಗಣಪತಿ ಶರ್ಮಾ
|

Updated on:Mar 14, 2024 | 11:10 AM

Share

ಚಾಮರಾಜನಗರ, ಮಾರ್ಚ್​ 14: ಚಾಮರಾಜನಗರ (Chamarajanagar) ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳವಾದ ಮಲೆ ಮಹದೇಶ್ವರ ಬೆಟ್ಟದ ಮಲೆಮಹದೇಶ್ವರ ದೇವಸ್ಥಾನದಲ್ಲಿ (Male Mahadeshwara hill temple) ಮಾರ್ಚ್ 6 ರಿಂದ 11 ರವರೆಗೆ ನಡೆದ ಶಿವರಾತ್ರಿ (Maha Shivratri) ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಬರೋಬ್ಬರಿ 3.24 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ವಿಶೇಷವೆಂದರೆ, ಹುಂಡಿ ಕಾಣಿಕೆ ಮತ್ತು ವಸತಿ ವ್ಯವಸ್ಥೆಯ ಶುಲ್ಕದಿಂದ ಗಳಿಸಿದ ಹಣವನ್ನು ಹೊರತುಪಡಿಸಿದ ಆದಾಯ ಇದಾಗಿದೆ.

ಮಲೆ ಮಹದೇಶ್ವರ ಬೆಟ್ಟದ ದೇಗುಲದ ಆಡಳಿತ ಮಂಡಳಿಯು ಎಲ್ಲಾ ರೀತಿಯ ಉತ್ಸವಗಳು, ಸೇವೆಗಳು, ಲಡ್ಡು ಪ್ರಸಾದ ಮಾರಾಟ ಮತ್ತು ಇತರ ಪ್ರಸಾದ, ವಿಶೇಷ ದರ್ಶನ ಟಿಕೆಟ್‌ಗಳು, ಬ್ಯಾಗ್‌ಗಳು, ಸ್ಟಾಲ್ ಒಪ್ಪಂದಗಳು ಮತ್ತು ಇತರ ಎಲ್ಲಾ ಆದಾಯದ ಮೂಲಗಳನ್ನು ಗಣನೆಗೆ ತೆಗೆದುಕೊಂಡಿದೆ.

ಆರು ದಿನಗಳ ಪೈಕಿ ಮಾರ್ಚ್ 10 ರಂದು (ಭಾನುವಾರ) ಅತ್ಯಧಿಕ ಆದಾಯ ಗಳಿಸಲಾಗಿದೆ. ಆ ದಿನ 87.92 ಲಕ್ಷ ರೂ. ಆದಾಯ ಸಂಗ್ರಹವಾಗಿದೆ. ಮಾರ್ಚ್ 6 ರಂದು 40.17 ಲಕ್ಷ ರೂ., ಮಾರ್ಚ್ 7 ರಂದು 30.21 ಲಕ್ಷ ರೂ., ಮಾರ್ಚ್ 8 ರಂದು 70.85 ಲಕ್ಷ ರೂ., ಮಾರ್ಚ್ 9 ರಂದು 62.78 ಲಕ್ಷ ರೂ., ಮಾರ್ಚ್ 11 ರಂದು 32.21 ಲಕ್ಷ ರೂ. ಆದಾಯ ಸಂಗ್ರವಾಗಿದೆ ಎಂದು ಆಡಳಿತ ಮಂಡಳಿಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಆರು ದಿನಗಳಲ್ಲಿ ಲಡ್ಡು ಮಾರಾಟದ ಮೂಲಕ 1.13 ಕೋಟಿ ರೂ., ಚಿನ್ನದ ರಥದ ಸೇವೆಯಿಂದ 90.25 ಲಕ್ಷ ರೂ., ವಿಶೇಷ ದರ್ಶನ ಟಿಕೆಟ್‌ನಿಂದ 67.70 ಲಕ್ಷ ರೂ., ಪ್ರಸಾದ ಮಾರಾಟದಿಂದ 11.93 ಲಕ್ಷ ರೂ., ಸ್ಟಾಲ್ ಒಪ್ಪಂದದ ಮೂಲಕ 10.52 ಲಕ್ಷ ರೂ. ಆದಾಯ ಬಂದಿದೆ ಎಂದು ಆಡಳಿತ ಮಂಡಳಿ ಮಾಹಿತಿ ನೀಡಿದೆ.

ಶಿವರಾತ್ರಿ ಸಂದರ್ಭದ ಮಲೆಮಹದೇಶ್ವರ ದೇವಸ್ಥಾನದಲ್ಲಿ ನಡೆಯುವ ಆರು ದಿನಗಳ ಜಾತ್ರೆಗೆ ರಾಜ್ಯ, ಹೊರ ರಾಜ್ಯಗಳ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ. ಪಾದಯಾತ್ರೆ ಮೂಲಕವೂ ಸಾವಿರಾರು ಭಕ್ತರು ಮಲೆಮಹದೇಶ್ವರನ ದರ್ಶನಕ್ಕೆ ಬರುತ್ತಾರೆ. ಈ ಹಬ್ಬದ ಸಂದರ್ಭದಲ್ಲಿ ದೇಗುಲದ ಆದಾಯ ಗಣನೀಯವಾಗಿ ಹೆಚ್ಚಿರುತ್ತದೆ.

ಇದನ್ನೂ ಓದಿ: ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಮಹದೇಶ್ವರ ಬೆಟ್ಟದವರೆಗೆ ಪಾದಯಾತ್ರೆ ಮಾಡಿದ್ದ 102 ವರ್ಷದ ವೃದ್ಧೆಗೆ ಸನ್ಮಾನ

102 ವರ್ಷ ವಯಸ್ಸಿನ ವೃದ್ಧೆಯೊಬ್ಬರು ನರೇಂದ್ರ ಮೋದಿ ಅವರು ಮತ್ತೆ ಪ್ರಧಾನಿಯಾಗಬೇಕು, ದೇಶದಲ್ಲಿ ಮಳೆ-ಬೆಳೆ ಚೆನ್ನಾಗಿ ಆಗಬೇಕೆಂದು ಪ್ರಾರ್ಥಿಸಿ ಪಾದಯಾತ್ರೆ ನಡೆಸಿದ್ದ ವಿಡಿಯೋ ಇತ್ತೀಚೆಗೆ ವೈರಲ್ ಆಗಿತ್ತು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:09 am, Thu, 14 March 24

Follow Us
ಗಣಪತಿ ಶರ್ಮಾ
ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾಕ್ಕೆ ನಟಿ ರಮಿಕಾ ಡಬ್ಬಿಂಗ್: ವಿಡಿಯೋ ನೋಡಿ
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
‘ಪ್ರೇಮದ ಊರಲಿ’ ಸಿನಿಮಾ ಗಳಿಸಿರುವುದೆಷ್ಟು? ನಟ ಶ್ರೀರಾಮ್ ಹೇಳಿದ್ದೇನು?
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
11 ದಿನ ದಸರಾ ವಿಶೇಷತೆ ಬಗ್ಗೆ ಇತಿಹಾಸ ತಜ್ಞ ಡಾ.ಶೆಲ್ವಪಿಳೈ ಹೇಳಿದ್ದಿಷ್ಟು
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ಅಜ್ಜಿ ಸಾವಿನ ಸುದ್ದಿ ತಿಳಿದರೂ ಮನೆಗೆ ತೆರಳಲು ನಿರಾಕರಿಸಿದ ಅಭಿಜೀತ್ ದಿಪ್ಕೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೂಪಗೊಳ್ಳುತ್ತಿದೆ ಮೈ ಹೋಂ ಗ್ರೂಪ್​​​ನ ಮತ್ತೊಂದು ಅಲ್ಟ್ರಾ ಲಕ್ಸುರಿ ಯೋಜನೆ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರೇವಣ್ಣ ಬೆನ್ನಲ್ಲೇ ಹಾಸನ ಜಿಲ್ಲಾಧಿಕಾರಿ ವಿರುದ್ಧ ಸಮರಕ್ಕಿಳಿದ ಕುಮಾರಸ್ವಾಮಿ
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಕುಮಾರಸ್ವಾಮಿಯ ಸ್ಟಿಂಗ್ ಆಪರೇಷನ್ ಮಾತು
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
'ನನ್ನನ್ನು ಬಂಧಿಸಿರಲಿಲ್ಲ, ಅಪಹರಿಸಿದ್ದರು'; ಯೂಟ್ಯೂಬರ್ ಧ್ರುವ್ ರಾಠೀ
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
‘ತಪ್ಪು ಮಾಡಿಬಿಟ್ಟೆ’: ಎಲಿಮಿನೇಟ್ ಆದ ಬಳಿಕ ಸುದೀಪ್ ಎದುರು ಮಂಜನ ಕಣ್ಣೀರು
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್
ಚಿನ್ನದ ಸಿಂಹಾಸನವೇರಿದ ಯದುವೀರ ಒಡೆಯರ್:ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್