ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಮಹದೇಶ್ವರ ಬೆಟ್ಟದವರೆಗೆ ಪಾದಯಾತ್ರೆ ಮಾಡಿದ್ದ 102 ವರ್ಷದ ವೃದ್ಧೆಗೆ ಸನ್ಮಾನ

ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ ಸಂಕಲ್ಪದೊಂದಿಗೆ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ 18 ಕಿಮೀ ಪಾದಯಾತ್ರೆ ಮಾಡಿದ್ದ ತುಮಕೂರು ಜಿಲ್ಲೆಯ ತಿಪಟೂರಿನ 102 ವರ್ಷದ ಪಾರ್ವತಮ್ಮ ಅವರಿಗೆ ಸಾಲೂರು ಶ್ರೀಗಳು ಸನ್ಮಾನಿಸಿದರು.

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ಮಹದೇಶ್ವರ ಬೆಟ್ಟದವರೆಗೆ ಪಾದಯಾತ್ರೆ ಮಾಡಿದ್ದ 102 ವರ್ಷದ ವೃದ್ಧೆಗೆ ಸನ್ಮಾನ
ವೃದ್ಧೆ ಪಾರ್ವತಮ್ಮಗೆ ಸನ್ಮಾನ
Follow us
TV9 Web
| Updated By: ವಿವೇಕ ಬಿರಾದಾರ

Updated on:Mar 09, 2024 | 11:25 AM

ಚಾಮರಾಜನಗರ, ಮಾರ್ಚ್​ 09: ನರೇಂದ್ರ ಮೋದಿ (Narendra Modi) ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂಬ (PM) ಸಂಕಲ್ಪದೊಂದಿಗೆ ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ (Mahadeshwara Betta) 18 ಕಿಮೀ ಪಾದಯಾತ್ರೆ ಮಾಡಿದ್ದ ತುಮಕೂರು (Tumakuru) ಜಿಲ್ಲೆಯ ತಿಪಟೂರಿನ 102 ವರ್ಷದ ಪಾರ್ವತಮ್ಮ ಅವರಿಗೆ ಸಾಲೂರು ಶ್ರೀಗಳು ಸನ್ಮಾನಿಸಿದರು. ಮಳೆ ಬೆಳೆ ಆಗಲಿ, ರೈತರಿಗೆ ಒಳ್ಳೆದಾಗಲಿ, ಕಾಡು ಪ್ರಾಣಿಗಳಿಗೆ ನೀರು ಸಿಗಲಿ ಮತ್ತು ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿಯಾಗಲೆಂದು ಪಾರ್ವತಮ್ಮ ಅವರು ಪಾದಯಾತ್ರೆ ಮಾಡಿದ್ದರು.

ವೃದ್ಧೆ ಪಾರ್ವತಮ್ಮ ಅವರ ಪಾದಯಾತ್ರೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಕಳೆದ ಎರಡು ದಿನಗಳಿಂದ ವೈರಲ್​ ಆಗುತ್ತಿದೆ. ವೃದ್ಧೆ ಪಾರ್ವತಮ್ಮ ಅವರ ಪಾದಯಾತ್ರೆಯನ್ನು ಮೆಚ್ಚಿ ಸಾಲೂರು ಶ್ರೀಗಳು ಸನ್ಮಾನಿಸಿದರು. ವೃದ್ಧೆ ಪಾರ್ವತಮ್ಮ ಈ ವಯೋಮಾನದಲ್ಲೂ ಯುವಕ ಯುವತಿರನ್ನು ನಾಚಿಸುವಂತೆ ಪಾದಯಾತ್ರೆ ಮಾಡಿದ್ದಾರೆ.

ತಲೆಬಾಗಿದ ಬಿವೈ ವಿಜಯೇಂದ್ರ

“ತಮ್ಮ ಮೂರ್ಖತನವನ್ನು ಪ್ರದರ್ಶಿಸುತ್ತಿರುವ ಕಾಂಗ್ರೆಸ್ ನಾಯಕರಿಗೆ, ಭಾರತದ ಮೂಲೆ ಮೂಲೆಯ ತಾಯಂದಿರು ಮತ್ತು ಸಹೋದರಿರು ಉತ್ತರ ನೀಡಿದ್ದಾರೆ. ಸಮೃದ್ಧವಾಗಿ ಮಳೆಯಾಗಲಿ ಮತ್ತು ದೇಶದ ಹಿತದೃಷ್ಟಿಯಿಂದ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಲಿ ಎಂದು 102 ವರ್ಷದ ಅಜ್ಜಿ ಕಠಿಣವಾದ ದಾರಿಯಲ್ಲಿ “ಮಲೆ ಮಹದೇಶ್ವರ ಬೆಟ್ಟ” ಕ್ಕೆ ಕಾಲ್ನಡಿಗೆಯಲ್ಲಿ ತೆರಳಿದ್ದಾರೆ. ಈ ಅಜ್ಜಿಯ ನಿಸ್ವಾರ್ಥ ಭಕ್ತಿ ಮತ್ತು ರಾಷ್ಟ್ರ ಮತ್ತು ನಮ್ಮ ಪ್ರಧಾನಿಯ ಮೇಲಿನ ಪ್ರೀತಿಗೆ ನಾವು ತಲೆಬಾಗುತ್ತೇವೆ” ಎಂದು ಟ್ವೀಟ್​ ಮಾಡಿದ್ದಾರೆ.

ಏನಿದು ಘಟನೆ

ಗುರುವಾರ (ಮಾ.07) ರಂದು 102 ವರ್ಷ ವಯಸ್ಸಿನ ಪಾರ್ವತಮ್ಮ ಅವರು ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿಯಾಗಬೇಕೆಂದು ಹಾರೈಸಿ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದ್ದರು. ತಾಳಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೆ ಮಾದಪ್ಪನ ದರ್ಶನಕ್ಕೆ 18 ಕಿಲೋಮೀಟರ್ ಕಾಲ್ನಡಿಗೆ ಮೂಲಕ ಶತಾಯುಷಿ ಅಜ್ಜಿ ಕ್ರಮಿಸಿದ್ದರು.

ದೇಶಕ್ಕೆ ಒಳ್ಳೆಯದಾಗಬೇಕು. ರೈತರಿಗೆ ಒಳ್ಳೆಯದಾಗಬೇಕು. ಮಳೆ, ಬೆಳೆ ಚೆನ್ನಾಗಿ ಆಗಬೇಕು. ಹಾಗೆ ಆದರೆ ಅಲ್ಲವೇ ರೈತರಿಗೆ ಒಳಿತಾಗುವುದು? ಅದೇ ರೀತಿ ಕಾಡು ಪ್ರಾಣಿಗಳಿಗೂ ಒಳ್ಳೆಯದಾಗಬೇಕು. ಅವುಗಳಿಗೆ ಕುಡಿಯುವ ನೀರು ದೊರೆಯುವಂತಾಗಬೇಕು. ಈ ಎಲ್ಲ ಬೇಡಿಕೆಗಳನ್ನು ದೇವರ ಮುಂದಿಟ್ಟುಕೊಂಡು ಮಹದೇಶ್ವರನ ದರ್ಶನಕ್ಕೆ ಬರುತ್ತಿದ್ದೇನೆ ಎಂದು ಪಾರ್ವತಮ್ಮ ಹೇಳಿದ್ದರು.

ಇದನ್ನೂ ಓದಿ: ಕಾಜಿರಂಗದಲ್ಲಿ ಮೋದಿ ಸಫಾರಿ, ಚಿತ್ರಗಳಲ್ಲಿ ನೋಡಿ ಪ್ರಧಾನಿಯ ಸವಾರಿ!

ಮೋದಿ ಯಾಕೆ ಪ್ರಧಾನಿಯಾಗಬೇಕು? ಅಜ್ಜಿ ಹೇಳಿದ್ದಿಷ್ಟು…

ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಅಜ್ಜಿ ಹೇಳುತ್ತಿದ್ದಂತೆಯೇ ಜತೆಗೆ ಪಾದಯಾತ್ರೆ ಮಾಡುತ್ತಿದ್ದವರು, ‘ಅವರು ಯಾಕೆ ಪಿಎಂ ಆಗಬೇಕು?’ ಎಂದು ಪ್ರಶ್ನಿಸಿದ್ದಾರೆ. ಇದೇ ವೇಳೆ, ದೇಶಕ್ಕೆ ಒಳ್ಳೆಯದಾಗಲು ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ವೃದ್ಧೆ ಹೇಳಿದ್ದರು. ನಿಮ್ಮ ಆಶೀರ್ವಾದ ಇದ್ದರೆ ಮೋದಿ ಮತ್ತೊಮ್ಮೆ ಪ್ರಧಾನಿ ಆಗಿಯೇ ಆಗುತ್ತಾರೆ ಎಂದು ಸ್ಥಳದಲ್ಲಿ ಇದ್ದವರು ಹೇಳುತ್ತಿರುವ ದೃಶ್ಯ ವಿಡಿಯೋದಲ್ಲಿದೆ.

ನಿಮ್ಮ ಆಶೀರ್ವಾದ ನಮ್ಮ ಮೇಲಿರಲಿ

ನಿಮ್ಮ ಆಶೀರ್ವಾದ ನಮ್ಮ ಮೇಲೂ ಇರಲಿ ಅಜ್ಜಿ ಎಂದು ಸಹ ಯಾತ್ರಿಗಳು ಅಜ್ಜಿಯಲ್ಲಿ ಬೇಡಿಕೊಂಡಿದ್ದಾರೆ. ಅಲ್ಲದೆ, ವೃದ್ಧೆಯ ಸಾಹಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಿಪಟೂರು ಮೂಲದ ಪಾರ್ವತಮ್ಮ ಸುಮಾರು 5-6 ವರ್ಷಗಳಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡುತ್ತಿದ್ದಾರಂತೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 11:25 am, Sat, 9 March 24

ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಶಿಶಿರ್ ಬೇಕೇ ಬೇಕು: ಹಠ ಹಿಡಿದು ಕುಳಿತ ಭವ್ಯಾ, ಶೋಭಾ ಶೆಟ್ಟಿ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಟಿವಿ9 ಕನ್ನಡದ ಸಹೋದರ ಸಂಸ್ಥೆ ನ್ಯೂಸ್ 9ನ ಗ್ಲೋಬಲ್ ಸಮ್ಮಿಟ್ ನೇರಪ್ರಸಾರ
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಕೇರಳದಲ್ಲಿ ವೇಗವಾಗಿ ಬಂದ ಕಾರಿಗೆ ಡಿಕ್ಕಿ ಹೊಡೆದು ಬಸ್​ನ ಚಕ್ರವೇ ಛಿದ್ರ!
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ಬಾತ್​ ರೂಮ್​ನಲ್ಲೂ ನಡೆಯುತ್ತಿದೆ ಬಿಗ್ ಬಾಸ್​ ಆಟ; ಅನುಮಾನದ ಕಣ್ಣು
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ರೈತರ ಸಾಲ ಮಾಡುತ್ತೇನೆಂದಿದ್ದ ಆರ್ ಅಶೋಕ ಮಾಡಿದರೆ? ಸಿದ್ದರಾಮಯ್ಯ
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ತಾಕತ್ ಇದ್ರೆ ತಡೆಯಿರಿ ನೋಡೋಣ: ಚೈತ್ರಾ ಕುಂದಾಪುರ ಸವಾಲು
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
ಬಿಪಿಎಲ್ ಕಾರ್ಡ್; ಬಿಜೆಪಿ ನಾಯಕರು ಮೊದಲು ಕೇಂದ್ರವನ್ನು ಪ್ರಶ್ನಿಸಲಿ: ಸಚಿವ
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
‘ದರ್ಶನ್​ಗೆ ಬೇಲ್ ಕೊಡಬಾರದು, ಸುಪ್ರೀಂ ಕೋರ್ಟ್​ಗೆ ಹಾಕ್ತೀವಿ’: ಪರಮೇಶ್ವರ್
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ವಕ್ಫ್ ಹೋರಾಟ ಪ್ರಧಾನಿ ಮೋದಿ ಆರಂಭಿಸಿದ ಕೇಂದ್ರದ ಯೋಜನೆ: ವಿಜಯೇಂದ್ರ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ
ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಲೇ ಪ್ರಾಣ ಬಿಟ್ಟ ವ್ಯಕ್ತಿ