ಬ್ಯಾಂಕ್ ಸಾಲ ಪಾವತಿಸದ್ದಕ್ಕೆ ಕಟ್ಟಡ ಜಪ್ತಿಗೆ ಕೋರ್ಟ್‌ ಆದೇಶ: ಸರ್ಕಾರಿ ಕಚೇರಿ ಖಾಲಿ ಮಾಡಿಸಲು ಬಂದ ಸಿಬ್ಬಂದಿ

| Updated By: ಗಂಗಾಧರ​ ಬ. ಸಾಬೋಜಿ

Updated on: Aug 02, 2024 | 5:45 PM

ಬ್ಯಾಂಕ್ ಸಾಲದ ಹಣ ಪಾವತಿಸದ ಹಿನ್ನಲೆ ಸರ್ಕಾರಿ ಕಚೇರಿ ಖಾಲಿ ಮಾಡಿಸುವಂತೆ ಬೆಂಗಳೂರಿನ 32ನೇ ಎಸಿಎಂಎಂ ನ್ಯಾಯಾಲಯದಿಂದ ಆದೇಶಿಸಲಾಗಿದೆ. ಹೀಗಾಗಿ ಇನ್ಫೆಂಟ್ರಿ ರಸ್ತೆಯ ಎಂಬಿಸ್ಸಿ ಕಟ್ಟಡದ 4ನೇ ಮಹಡಿ ತೆರವಿಗೆ ವಿಧಾನ ಸೌಧ ಪೊಲೀಸರೊಂದಿಗೆ ಪ್ರವಾಸೋದ್ಯಮ ಇಲಾಖೆ ಕಚೇರಿಗೆ ಬ್ಯಾಂಕ್ ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಬ್ಯಾಂಕ್ ಸಾಲ ಪಾವತಿಸದ್ದಕ್ಕೆ ಕಟ್ಟಡ ಜಪ್ತಿಗೆ ಕೋರ್ಟ್‌ ಆದೇಶ: ಸರ್ಕಾರಿ ಕಚೇರಿ ಖಾಲಿ ಮಾಡಿಸಲು ಬಂದ ಸಿಬ್ಬಂದಿ
ಬ್ಯಾಂಕ್ ಸಾಲ ಪಾವತಿಸದ್ದಕ್ಕೆ ಕಟ್ಟಡ ಜಪ್ತಿಗೆ ಕೋರ್ಟ್‌ ಆದೇಶ: ಸರ್ಕಾರಿ ಕಚೇರಿ ಖಾಲಿ ಮಾಡಿಸಲು ಬಂದ ಸಿಬ್ಬಂದಿ
Follow us on

ಬೆಂಗಳೂರು, ಆಗಸ್ಟ್​​ 2: ಬ್ಯಾಂಕ್ ಸಾಲದ ಹಣ (money) ಪಾವತಿಸದ ಹಿನ್ನೆಲೆ ಬೆಂಗಳೂರಿನ 32ನೇ ಎಸಿಎಂಎಂ ನ್ಯಾಯಾಲಯದಿಂದ (Court) ಎಂಬಿಸ್ಸಿ ಕಟ್ಟಡದ 4ನೇ ಮಹಡಿ ಜಪ್ತಿಗೆ ಆದೇಶಿಸಲಾಗಿದೆ. ಹೀಗಾಗಿ ಇನ್ಫೆಂಟ್ರಿ ರಸ್ತೆಯ ಎಂಬಿಸ್ಸಿ ಕಟ್ಟಡದ 4ನೇ ಮಹಡಿಯಲ್ಲಿದ್ದ ಸರ್ಕಾರಿ ಕಚೇರಿ ಖಾಲಿ ಮಾಡಿಸಲು ವಿಧಾನಸೌಧ ಪೊಲೀಸರು ಹಾಗೂ ಕೋರ್ಟ್ ಕಮಿಷನರ್ ಜೊತೆ ಆಕ್ಸಿಸ್ ಬ್ಯಾಂಕ್ ಸಿಬ್ಬಂದಿಗಳು ಭೇಟಿ ನೀಡಿದ್ದಾರೆ.

ಜಯರಾಮ್ ಎಂಬುವವರ ಮಾಲೀಕತ್ವದ ಕಟ್ಟಡದ 4ನೇ ಮಹಡಿ ತೆರವಿಗೆ ಕೋರ್ಟ್ ಆದೇಶಿಸಿದೆ. 5 ವರ್ಷಗಳ ಹಿಂದೆ ಮಾಲೀಕ ಜಯರಾಮ್ ಕಟ್ಟಡದ ನಾಲ್ಕನೇ ಮಹಡಿ ಅಡವಿಟ್ಟು ಬ್ಯಾಂಕ್‌ನಲ್ಲಿ 19 ಕೋಟಿ ರೂ. ಸಾಲ ಪಡೆದಿದ್ದರು. ಸದ್ಯ ಅದು ಅಸಲು, ಬಡ್ಡಿ ಸೇರಿದಂತೆ ಒಟ್ಟು 24 ಕೋಟಿ ರೂ. ಬಾಕಿ ಇದೆ. ಬ್ಯಾಂಕ್‌ಗೆ ವಂಚಿಸುವ ಉದ್ದೇಶದಿಂದ ಹಣ ಪಾವತಿ ಮಾಡದ ಆರೋಪ ಕೂಡ ಕೇಳಿಬಂದಿದೆ.

ಇದನ್ನೂ ಓದಿ: Karnataka Rains: ಕರ್ನಾಟಕದಲ್ಲಿ ಜೂನ್​, ಜುಲೈನಲ್ಲಿ ಎಷ್ಟು ಮಳೆಯಾಗಿದೆ? ಇನ್ನೂ ಮುಂದೆ ಎಷ್ಟಾಗಲಿದೆ?

ಕಟ್ಟಡದ 4ನೇ ಮಹಡಿಯಲ್ಲಿ ಡೈರೆಕ್ಟೋರೇಟ್ ಆಫ್ ಇಡಿಸಿಎಸ್​ (EDCS) ಮತ್ತು ಪ್ರವಾಸೋದ್ಯಮ ಇಲಾಖೆ ಕಚೇರಿ ಇತ್ತು. ಸದ್ಯ ಕೋರ್ಟ್ ಆದೇಶ ಜಾರಿಗೆ ಆಕ್ಸಿಸ್ ಬ್ಯಾಂಕ್ ಸಿಬ್ಬಂದಿ ಮತ್ತು ಕೋರ್ಟ್ ಕಮಿಷನರ್ ವಕೀಲ ಸಿದ್ದರಾಜು ಸರ್ಕಾರಿ ಕಚೇರಿ ಖಾಲಿ ಮಾಡಿಸಲು ಆಗಮಿಸಿದ್ದಾರೆ.

ಸಾಲ ಮರುಪಾವತಿಗೆ ಮೂರು ತಿಂಗಳ ಕಾಲಾವಕಾಶ

ಸರ್ಕಾರದ ಎರಡೂ ಇಲಾಖೆಗಳು ಕಾರ್ಯನಿರ್ವಹಣೆ ಹಿನ್ನಲೆ ಸರ್ಕಾರಿ ಕಚೇರಿಗಳ ಮುಖ್ಯಸ್ಥರಿಂದ ಮನವಿ ಮೇರೆಗೆ ಸಾಲ ಮರುಪಾವತಿಗೆ ಬ್ಯಾಂಕ್ ಅಧಿಕಾರಿಗಳು ಮೂರು ತಿಂಗಳ ಕಾಲಾವಕಾಶ ನೀಡಿದ್ದಾರೆ. ಪ್ರತಿ ತಿಂಗಳಿಗೆ 39 ಲಕ್ಷ ರೂ. ಸರ್ಕಾರದ ಇಲಾಖೆಗಳಿಂದ ಪಾವತಿಸಲಾಗುತ್ತಿದೆ. ಮಾಲೀಕ ಜಯರಾಮ್​ಗೆ ಬಾಡಿಗೆ ಪಾವತಿ ಮಾಡಿದ್ದರು ಬ್ಯಾಂಕ್ ಸಾಲ ಪಾವತಿಸಿಲ್ಲ. 27 ಸಾವಿರದ 300 ಚದರಡಿ ವಿಸ್ತೀರ್ಣದ ನಾಲ್ಕನೇ ಮಹಡಿ ಹೊಂದಿದೆ.

ಪ್ಲಾಸ್ಕ್​ನಲ್ಲಿ ಅಕ್ರಮ ಚಿನ್ನ ಸ್ಮಗ್ಲಿಂಗ್: ಪ್ರಯಾಣಿಕ ವಶಕ್ಕೆ 

ಬೆಂಗಳೂರು: ಸೌದಿ ಅರೇಬಿಯಾದ ಜೀದಾ ಏರ್ಪೋಟ್​ನಿಂದ ಅಕ್ರಮವಾಗಿ ಪ್ಲಾಸ್ಕ್​ನಲ್ಲಿ ಚಿನ್ನ ಸ್ಮಗ್ಲಿಂಗ್ ಮಾಡಲು ಯತ್ನಿಸಿದ ವ್ಯಕ್ತಿಯನ್ನ ಕೆಂಪೇಗೌಡ ಏರ್ಪೋಟ್ ಕಸ್ಟಮ್ಸ್​ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸೌದಿ ಅರೇಬಿಯಾದಿಂದ ಆಗಮಿಸಿದ ಪ್ರಯಾಣಿಕ ಪ್ಲಾಸ್ಕ್ ನ ಒಳ ಭಾಗದಲ್ಲಿ ಪೇಸ್ಟ್ ಮಾದರಿಯಲ್ಲಿ ಚಿನ್ನವನ್ನ ಹಾಕಿ ಲಗೇಜ್​ನಲ್ಲಿ ಮರೆ ಮಾಚಿದ್ದ.

ಇದನ್ನೂ ಓದಿ: ಚಾಲಕ, ನಿರ್ವಾಹಕರ ಯೂನಿಫಾರಂಗೆ ಪುಡಿಗಾಸು ಕೊಟ್ಟು ಕೈತೊಳೆದುಕೊಂಡ ಬಿಎಂಟಿಸಿ; ನೌಕರರಿಂದ ಆಕ್ರೋಶ

ಹೀಗಾಗಿ ಏರ್ಪೋಟ್​ನಲ್ಲಿ ಲಗೇಜ್ ಚೆಕ್ ಮಾಡುವ ವೇಳೆ ಪ್ಲಾಸ್ಕ್​ನ ಮೇಲೆ ಅನುಮಾನ ಬಂದಿದ್ದು ಪ್ಲಾಸ್ಕ್ ಅನ್ನ ಒಡೆದು ನೋಡಿದಾಗ ಒಳಗಡೆ ಚಿನ್ನ ಇರುವುದು ಬೆಳಕಿಗೆ ಬಂದಿತ್ತು. ಇನ್ನೂ ಪೇಸ್ಟ್ ಮಾಡಿದ್ದ ಚಿನ್ನವನ್ನ ತೆಗೆದು ನೋಡಿದಾಗ 7 ಲಕ್ಷ 52 ಸಾವಿರ ರೂ. ಮೌಲ್ಯದ 122 ಗ್ರಾಂ ಚಿನ್ನ ಸಿಕ್ಕಿದ್ದು ಚಿನ್ನ ಸಮೇತ ಪ್ರಯಾಣಿಕನನ್ನ ಕಸ್ಟಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.