ಪತಿಗಿಂತ ಹೆಚ್ಚು ದುಡಿವ ಪತ್ನಿಗೆ ಜೀವನಾಂಶ ನೀಡಬೇಕಿಲ್ಲ: ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ

High Court Order On Compensation For Divorced Wife: ವಿಚ್ಛೇದನ ಪ್ರಕರಣದಲ್ಲಿ ಪತ್ನಿಯ ಜೀವನಾಂಶ ಕುರಿತು ಕರ್ನಾಟಕ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. ಪತಿಗಿಂತ ಹೆಚ್ಚು ದುಡಿವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಜೀವನಾಂಶ ನೀಡಲು ಸೂಚಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸಿದೆ. ಗಂಡ ಹೆಂಡ್ತಿ ವಿಚ್ಛೇದನ ಪ್ರಕರಣದ ವಿವರ ಇಲ್ಲಿದೆ.

ಪತಿಗಿಂತ ಹೆಚ್ಚು ದುಡಿವ ಪತ್ನಿಗೆ ಜೀವನಾಂಶ ನೀಡಬೇಕಿಲ್ಲ: ಕರ್ನಾಟಕ ಹೈಕೋರ್ಟ್‌ ಮಹತ್ವದ ಆದೇಶ
ಕರ್ನಾಟಕ ಹೈಕೋರ್ಟ್​​
Image Credit source: Getty Images
Edited By:

Updated on: Jun 29, 2026 | 7:38 PM

ಮುಖ್ಯಾಂಶಗಳು

  • ತನಗಿಂತ ಹೆಚ್ಚು ದುಡಿವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ ಎಂದು ಕರ್ನಾಟಕ ಹೈಕೋರ್ಟ್​
  • ಜೀವನಾಂಶ ನೀಡಲು ಸೂಚಿಸಿದ್ದ ಕೆಳಹಂತದ ಆದೇಶ ರದ್ದುಪಡಿಸಿದ ಹೈಕೋರ್ಟ್
  • ಪತಿಗಿಂತ ಪತ್ನಿ ಹೆಚ್ಚು ದುಡಿಯುತ್ತಿರುವುದನ್ನು ಪರಿಗಣಿಸಿ ಹೈಕೋರ್ಟ್ ಈ ತೀರ್ಪು ನೀಡಿದೆ

ಬೆಂಗಳೂರು, (ಜೂನ್ 29):  ವಿಚ್ಛೇದನ ಪ್ರಕರಣದ ಜೀವನಾಂಶ (Divorce Compensation) ಕುರಿತು ಕರ್ನಾಟಕ ಹೈಕೋರ್ಟ್‌ (Karnataka High Court) ಮಹತ್ವದ ಆದೇಶ ನೀಡಿದೆ. ತನಗಿಂತ ಪತ್ನಿ ಹೆಚ್ಚಿನ ಸಂಬಳ ಇದ್ದರೂ ಸಹ ಕೆಳಹಂತಕದ ಕೋರ್ಟ್ ಜೀವನಾಂಶ ನೀಡಲು ಆದೇಶವನ್ನು ಪ್ರಶ್ನಿಸಿದ್ದ ವ್ಯಕ್ತಿಯೊಬ್ಬರ ಅರ್ಜಿಯನ್ನು ಹೈಕೋರ್ಟ್ ಪುರಸ್ಕರಿಸಿದೆ. ಹೌದು.. ಗಂಡನಿಗಿಂತ ಹೆಚ್ಚು ದುಡಿವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ ಎಂದು ಕರ್ನಾಟಕ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಪತಿ ಸಂಬಳವೇ ಪತ್ನಿಗಿಂತ ಕಡಿಮೆಯಿದ್ದಾಗ ಜೀವನಾಂಶಕ್ಕೆ ಬಾದ್ಯಸ್ಥನಲ್ಲ ಎಂದು ನ್ಯಾಯಮೂರ್ತಿ ಡಾ.ಚಿಲ್ಲಕೂರ್ ಸುಮಲತಾರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದ್ದು, ಜೀವನಾಂಶ ನೀಡಲು ಸೂಚಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಪಡಿಸಿದೆ.

ಪತಿಗಿಂತ ಪತ್ನಿಯ ಸಂಬಳವೇ ಹೆಚ್ಚು

2024ರಲ್ಲಿ ವಿವಾಹವಾಗಿದ್ದ ದಂಪತಿ ಕೆಲ ತಿಂಗಳಲ್ಲೇ ಪ್ರತ್ಯೇಕವಾಗಿದ್ದು, ಪತಿಗೆ 60,646 ಸಂಬಳವಿದ್ದರೆ ಪತ್ನಿಗೆ ಮಾಸಿಕ 1 ಲಕ್ಷ ಸಂಬಳವಿತ್ತು. ಹೀಗಾಗಿ ಪತ್ನಿಗೆ ಮಕ್ಕಳು, ಇತರೆ ಬಾದ್ಯತೆಗಳಿಲ್ಲದಿರುವುದನ್ನ ಪರಿಗಣಿಸಿದ್ದು, ಪತಿ ಸಂಬಳವೇ ಪತ್ನಿಗಿಂತ ಕಡಿಮೆಯಿದ್ದಾಗ ಜೀವನಾಂಶಕ್ಕೆ ಬಾದ್ಯಸ್ಥನಲ್ಲ ಎಂದು ನ್ಯಾಯಮೂರ್ತಿ ಡಾ.ಚಿಲ್ಲಕೂರ್ ಸುಮಲತಾರಿದ್ದ ಹೈಕೋರ್ಟ್ ಪೀಠ ಅಭಿಪ್ರಾಯ ಪಟ್ಟಿದೆ. ಅಲ್ಲದೇ ಪತ್ನಿಯನ್ನು ಪತಿಯೇ ಸಲಹಬೇಕು ಎಂಬ ಕಾರಣದ ಮೇರೆಗೆ ಜೀವನಾಂಶವನ್ನು ಮಂಜೂರು ಮಾಡುವ ಆದೇಶವನ್ನು ಹೊರಡಿಸಲು ನ್ಯಾಯಾಲಯಗಳು ಒಲವು ತೋರಬಾರದು ಎಂದು ಸಲಹೆ ನೀಡಿದೆ.

ವಿವಾಹವಾಗಿದ್ದ ಕೆಲವೇ ತಿಂಗಳಲ್ಲೇ ಪ್ರತ್ಯೇಕ

2024ರಲ್ಲಿ ವಿವಾಹವಾಗಿದ್ದ ದಂಪತಿ ಕೆಲ ತಿಂಗಳಲ್ಲೇ ಪ್ರತ್ಯೇಕವಾಗಿದ್ದು, ಪತಿಗೆ 60,646 ಸಂಬಳವಿದ್ದರೆ ಪತ್ನಿಗೆ ಮಾಸಿಕ 1 ಲಕ್ಷ ಸಂಬಳವಿತ್ತು. ಆದರೂ ಸಹ ಪತ್ನಿ ಜೀವನಾಂಶ ಕೋರಿ ವಿಚಾರಣಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯವು, ಪ್ರತಿ ತಿಂಗಳು ಪತ್ನಿಗೆ 20 ಸಾವಿರ ಜೀವನಾಂಶ ನೀಡಲು ಆದೇಶಿಸಿತ್ತು. ಆದ್ರೆ, ಇದನ್ನು ಪ್ರಶ್ನಿಸಿ ಪತಿ, ಹೈಕೋರ್ಟ್​ ಮೆಟ್ಟಿಲೇರಿದ್ದು, ಈ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಪತಿಗಿಂತ ಹೆಚ್ಚು ದುಡಿವ ಪತ್ನಿಗೆ ಪತಿ ಜೀವನಾಂಶ ನೀಡಬೇಕಿಲ್ಲ. 1 ಲಕ್ಷ ರೂಪಾಯಿ ಸಂಬಳದಲ್ಲಿ ಪತ್ನಿ ತನ್ನ ನಿರ್ವಹಣೆ ಮಾಡಿಕೊಳ್ಳಬಲ್ಲಳು. ಪತಿ ಸಂಬಳವೇ ಪತ್ನಿಗಿಂತ ಕಡಿಮೆಯಿದ್ದಾಗ ಜೀವನಾಂಶಕ್ಕೆ ಬಾದ್ಯಸ್ಥನಲ್ಲ ಎಂದು ಪತ್ನಿಗೆ ಮಕ್ಕಳು, ಇತರೆ ಬಾದ್ಯತೆಗಳಿಲ್ಲದಿರುವುದನ್ನ ಪರಿಗಣಿಸಿ ಈ ಆದೇಶ ನೀಡಿದೆ.

ಜೀವನಾಂಶದ ಬಗ್ಗೆ ಕೋರ್ಟ್​ ಹೇಳಿದ್ದಿಷ್ಟು

ಯಾವಾಗ ಪತ್ನಿಯು ಆರ್ಥಿಕವಾಗಿ ಸಬಲಳಾಗಿದ್ದಾಳೋ, ಪತ್ನಿಯ ಆದಾಯವು ಪತಿಯ ಆದಾಯಕ್ಕಿಂತ ಹೆಚ್ಚಾಗಿದೆಯೋ ಮತ್ತು ಮಕ್ಕಳನ್ನು ಸಾಕುವುದು ಸೇರಿದಂತೆ ಪತ್ನಿಯ ಕಡೆಯಿಂದ ಬೇರೆ ಯಾವುದೇ ಹೊಣೆಗಾರಿಕೆಗಳು ಇಲ್ಲದಿರುವಂತಹ ಸಂದರ್ಭಗಳಲ್ಲಿ, ಮಹಿಳೆಯರನ್ನು ಪುರುಷರೇ ಸಾಕಬೇಕು ಅಥವಾ ಪತ್ನಿಯನ್ನು ಪತಿಯೇ ಸಲಹಬೇಕು ಎಂಬ ಕಾರಣದ ಮೇರೆಗೆ ಜೀವನಾಂಶವನ್ನು ಮಂಜೂರು ಮಾಡುವ ಆದೇಶವನ್ನು ಹೊರಡಿಸಲು ನ್ಯಾಯಾಲಯಗಳು ಒಲವು ತೋರಬಾರದು ಎಂದು ಕೋರ್ಟ್ ತಿಳಿಸಿದೆ.

ತನ್ನ ಪತಿಯ ಜೀವನಮಟ್ಟಕ್ಕೆ ಅನುಗುಣವಾಗಿ ತನ್ನನ್ನು ತಾನು ಸಲಹಿಕೊಳ್ಳಲು ಪತ್ನಿಯ ಬಳಿ ಯಾವುದೇ ಆರ್ಥಿಕ ಮೂಲಗಳಿಲ್ಲ ಎಂದು ಸಾಬೀತಾದಾಗ ಮಾತ್ರ ನ್ಯಾಯಾಲಯಗಳು ಮಧ್ಯಂತರ ಅಥವಾ ಅಂತಿಮ ಜೀವನಾಂಶವನ್ನು ನೀಡಬೇಕಾಗುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಉಚ್ಚ ನ್ಯಾಯಾಲಯವು ಸ್ಪಷ್ಟಪಡಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 7:26 pm, Mon, 29 June 26

Follow Us