ಬೆಂಗಳೂರು: ಪ್ರತಿನಿತ್ಯ ಕೊವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜನರು ಕೊರೊನಾ ಹೆಸರು ಕೇಳಿ ಬೇಸತ್ತಿದ್ದಾರೆ. ಕೊರೊನಾದಿಂದ ಇಡೀ ದೇಶ ಮುಕ್ತಿ ಹೊಂದುವುದು ಯಾವಾಗ ಎಂಬುದೊಂದೇ ಜನರೆದುರು ಇರುವ ಪ್ರಶ್ನೆ. ಕಳೆದ ವರ್ಷ ಕೊರೊನಾ ಸಾಂಕ್ರಾಮಿಕ ರೋಗ ಜಗತ್ತಿಗೆ ಆವರಿಸಿದ್ದು, ಅದೆಷ್ಟೋ ಜನ ಸೋಂಕು ತಗುಲಿ ಬಲಿಯಾಗಿದ್ದಾರೆ. ಅದೆಷ್ಟೋ ಜನ ಇನ್ನೂ ನರಳುತ್ತಿದ್ದಾರೆ. ದಿನ ಸಾಗುತ್ತಿದ್ದಂತೆಯೇ ಕೊರೊನಾ ಎರಡನೇ ಅಲೆಯೂ ಹೆಚ್ಚುತ್ತಿದೆ. ಈ ನಿಟ್ಟಿನಲ್ಲಿ ಕರ್ನಾಟಕದ 10 ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಸ್ಥಗಿತಗೊಳಿಸುವಂತೆ ಕಂದಾಯ ಇಲಾಖೆ ಆದೇಶ ಹೊರಡಿಸಿದೆ.
ಕೊವಿಡ್ ಎರಡನೇ ಅಲೆಯ ಆರ್ಭಟದಿಂದ ರಾಜ್ಯದ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ದಕ್ಷಿಣ ಕನ್ನಡ, ಹಾಸನ, ಕಲ್ಬುರ್ಗಿ, ಮಂಡ್ಯ, ಮೈಸೂರು ಮತ್ತು ತುಮಕೂರು ಜಿಲ್ಲಾಧಿಕಾರಿಗಳ ಗ್ರಾಮ ವಾಸ್ಥವ್ಯ ಸ್ಥಗಿತಗೊಳಿಸಲಾಗಿದೆ.
ಕೊವಿಡ್-19 ಸೋಕಿನಿಂದ ಚೇತರಿಸಿಕೊಂಡವರಲ್ಲಿ ಮೂವರಲ್ಲಿ ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆ
ಕೊವಿಡ್-19 ಸೋಕಿನಿಂದ ಚೇತರಿಸಿಕೊಂಡ 6 ತಿಂಗಳೊಳಗೆ ಮೂವರಲ್ಲಿ ಒಬ್ಬರು ಮೆದುಳು ಮತ್ತು ಮಾನಸಿಕ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುತ್ತಾರೆ ಎನ್ನುವುದು ಅಮೆರಿಕದ ಸಂಶೋಧನೆಯೊಂದರ ಮೂಲಕ ಧೃಡಪಟ್ಟಿದೆ. ಸೋಂಕಿನಿಂದ ಚೇತರಿಸಿಕೊಂಡ 2,30,300 ಅಮೆರಿಕನ್ನರನ್ನು ಸಮೀಕ್ಷೆಗೊಳಪಡಿಸಿದ ನಂತರ ಈ ಅಂಶವನ್ನು ಕಂಡುಕೊಳ್ಳಲಾಗಿದ್ದು, ಈ ಮಹಾಮಾರಿಯು ಚೇತರಿಸಿಕೊಂಡ ಹಲವಾರು ಜನರಿಗೆ ಮಾನಸಿಕ ಮತ್ತು ನರ ರೋಗಗಳನ್ನು ತಂದೊಡ್ಡಲಿದೆಯೆಂದು ವಿಜ್ಞಾನಿಗಳು ಮಂಗಳವಾರದಂದು ಹೇಳಿದ್ದಾರೆ. ಸೋಂಕಿತರ ಮಾನಸಿಕ ಸ್ಥಿತಿಗಳಾದ ಆತಂಕ ಮತ್ತು ಖಿನ್ನತೆಯೊಂದಿಗೆ ಕೊರೊನಾ ವೈರಸ್ ಬೆಸೆದುಕೊಂಡಿರುವುದು ಈಗ ಸ್ಪಷ್ಟವಾಗಿದೆ ಎಂದು ಸಂಶೋಧನೆಯಲ್ಲಿ ಪಾಲ್ಗೊಂಡ ವಿಜ್ಞಾನಿಗಳು ಹೇಳಿದ್ದಾರೆ.
ಸೋಕಿನಿಂದ ಚೇತರಿಸಿಕೊಂಡವರಲ್ಲಿ ಸ್ಟ್ರೋಕ್, ಮರೆಗುಳಿತನ ಮತ್ತು ನರ ರೋಗಕ್ಕೆ ಸಂಬಂಧಿಸಿದ ಇತರ ಕಾಯಿಲೆಗಳು ಅಪರೂಪವಾದರೂ ತೀವ್ರ ಸ್ವರೂಪದ ಸೋಂಕಿಗೊಳಗಾಗಿ ಚೇತರಿಸಿಕೊಂಡವರಲ್ಲಿ ಅವುಗಳ ಸಾಧ್ಯತೆಯನ್ನು ಕಡೆಗಣಿಸುವಂತಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಚೇತರಿಸಿಕೊಂಡವರು ಎದುರಿಸಬಹುದಾದ ಮಾನಸಿಕ ಅನಾರೋಗ್ಯಗಳ ಅಪಾಯ ವ್ಯಕ್ತಿಗತವಾಗಿ ಚಿಕ್ಕದಾದರೂ ಜನಸ್ತೋಮದ ಮೇಲೆ ಆಗುವ ಪರಣಾಮವನ್ನು ಕಡೆಗಣಿಸುವಂತಿಲ್ಲ ಎಂದು ಸಂಶೋಧನೆಯಲ್ಲಿ ಪಾಲ್ಗೊಂಡ ಆಕ್ಸಫರ್ಡ್ ವಿಶ್ವವಿದ್ಯಾಲಯದ ಮಾನಸಿಕ ವಿಭಾಗದ ಪ್ರೊಫೆಸರ್ ಪಾಲ್ ಹ್ಯಾರಿಸನ್ ಹೇಳಿದ್ದಾರೆ.
ಇದನ್ನೂ ಓದಿ: ಕೊರೊನಾ ಆತಂಕದ ನಡುವೆಯೂ ಚಿತ್ರದುರ್ಗದಲ್ಲಿ ನಡೆಯಿತು ಅದ್ದೂರಿ ಜೋಡೆತ್ತಿನ ಸ್ಪರ್ಧೆ