ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟ ಸಚಿವ ಸುರೇಶ್ ಕುಮಾರ್​ಗೆ ಸೋಂಕಿತರಿಂದ ತರಾಟೆ

ಕೊರೊನಾ ಸೋಂಕಿನಿಂದ ಉಸಿರಾಟ ಸಮಸ್ಯೆ ಹೆಚ್ಚಾಗಿದೆ. ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸಲು ಬೆಡ್ಗಳು ಸಿಗುತ್ತಿಲ್ಲ. ಆಕ್ಸಿಜನ್ ಸಿಗದೆ ಕೊರೊನಾ ಸೋಂಕಿತರಿಗೆ ಸಮಸ್ಯೆ ಆಗ್ತಿದೆ. ಆದರೆ ನೀವು ಮಾತ್ರ ಹೊರಗಡೆ ಬೆಡ್ಗಳ ಸಮಸ್ಯೆ ಇಲ್ಲ. ಆಕ್ಸಿಜನ್ ಸಮಸ್ಯೆ ಇಲ್ಲ ಎಂದು ಹೇಳ್ತೀರಾ ಎಂದು ಸೋಂಕಿತರು ಸಚಿವರಿಗೆ ಪ್ರಶ್ನಿಸಿದ್ದಾರೆ.

ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ಕೊಟ್ಟ ಸಚಿವ ಸುರೇಶ್ ಕುಮಾರ್​ಗೆ  ಸೋಂಕಿತರಿಂದ ತರಾಟೆ
ಸಚಿವ ಸುರೇಶ್ ಕುಮಾರ್
Follow us
ಆಯೇಷಾ ಬಾನು
|

Updated on: May 07, 2021 | 1:38 PM

ಚಾಮರಾಜನಗರ: ಸಚಿವ ಸುರೇಶ್ ಕುಮಾರ್ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಕೊರೊನಾ ಸೋಂಕಿತರು ಸಚಿವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಆಕ್ಸಿಜನ್ ಕೊರತೆಯಿಂದಾಗಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ 24 ಮಂದಿ ಮೃತಪಟ್ಟ ಬಗ್ಗೆ ರಾಜ್ಯ ಸರ್ಕಾರ ಮತ್ತು ಚಾಮರಾಜನಗರ ಜಿಲ್ಲಾ ಸಚಿವ ಎಸ್.ಸುರೇಶ್ ಕುಮಾರ್ ತೀವ್ರ ಟೀಕೆಗೆ ಗುರಿಯಾಗುತ್ತಿದ್ದಂತೆ ಪಿಪಿಇ ಕಿಟ್ ಧರಿಸಿ ಆಸ್ಪತ್ರೆಗೆ ಭೇಟಿ ನೀಡಿದ್ದರು. ಸಚಿವರು ವೈದ್ಯರು ಮತ್ತು ಸೋಂಕಿತರೊಂದಿಗೆ ಸಂವಾದ ನಡೆಸಿದರು. ಈ ವೇಳೆ ಸೋಂ ಕಿತರು ಸಚಿವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊರೊನಾ ಸೋಂಕಿನಿಂದ ಉಸಿರಾಟ ಸಮಸ್ಯೆ ಹೆಚ್ಚಾಗಿದೆ. ಸೋಂಕಿತರನ್ನ ಆಸ್ಪತ್ರೆಗೆ ದಾಖಲಿಸಲು ಬೆಡ್ಗಳು ಸಿಗುತ್ತಿಲ್ಲ. ಆಕ್ಸಿಜನ್ ಸಿಗದೆ ಕೊರೊನಾ ಸೋಂಕಿತರಿಗೆ ಸಮಸ್ಯೆ ಆಗ್ತಿದೆ. ಆದರೆ ನೀವು ಮಾತ್ರ ಹೊರಗಡೆ ಬೆಡ್ಗಳ ಸಮಸ್ಯೆ ಇಲ್ಲ. ಆಕ್ಸಿಜನ್ ಸಮಸ್ಯೆ ಇಲ್ಲ ಎಂದು ಹೇಳ್ತೀರಾ ಎಂದು ಸೋಂಕಿತರು ಸಚಿವರಿಗೆ ಪ್ರಶ್ನಿಸಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾಗಿ ಬೆಡ್ಗಳು, ಆಕ್ಸಿಜನ್ ಇಲ್ಲ. ಆಸ್ಪತ್ರೆಯಲ್ಲಿ ನೋಡಿಕೊಳ್ಳಲು ವೈದ್ಯರು, ನರ್ಸ್ಗಳಿಲ್ಲ. ಏನೂ ಅನುಕೂಲ ಇಲ್ಲದಿದ್ರೂ ಎಲ್ಲಾ ವ್ಯವಸ್ಥೆ ಇದೆ ಎಂದು ಹೇಳುತ್ತೀರಾ ಎಂದು ತರಾಟೆಗೆ ತೆಗೆದುಕೊಂಡ್ರು. ಈ ವೇಳೆ ಮಾತನಾಡಿದ ಸುರೇಶ್ ಕುಮಾರ್ ಇಂದು ಮತ್ತು ನಾಳೆಯಲ್ಲಿ ಎಲ್ಲ ಸರಿಯಾಗುತ್ತೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದಾರೆ.

ಅವ್ಯವಸ್ಥೆಯ ಆಗರವಾದ ಚಾಮರಾಜನಗರ ಜಿಲ್ಲಾಸ್ಪತ್ರೆ ಇನ್ನು ಚಾಮರಾಜನಗರ ಜಿಲ್ಲಾ ಕೊವಿಡ್ ಆಸ್ಪತ್ರೆಯಲ್ಲಿ ಸೋಂಕಿತರ ಗೋಳು ಮುಗಿಯುತ್ತಿಲ್ಲ. ತೀವ್ರ ಉಸಿರಾಟ ಸಮಸ್ಯೆಯಿಂದ ಆಸ್ಪತ್ರೆಗೆ ಬಂದರೂ ಕೊರೊನಾ ಸೋಂಕಿತರಿಗೆ ಬೆಡ್ ಸಿಗುತ್ತಿಲ್ಲ. ನರ್ಸ್ಗಳು ನೆಲದ ಮೇಲೆ ಮಲಗಿಸಿ ನೆಪ ಮಾತ್ರಕ್ಕೆ ಚಿಕಿತ್ಸೆ ನೀಡುತ್ತಿದ್ದಾರಂತೆ. ಇಲ್ಲಿ ಸೋಂಕಿತರನ್ನು ನೋಡಲು ವೈದ್ಯರೇ ಇಲ್ಲವಂತೆ.

170 ಬೆಡ್‌ಗಳಿಗೆ ಕೇವಲ ನಾಲ್ವರು ನರ್ಸ್‌ಗಳಿದ್ದೇವೆ. ನಾವ್ಯಾರಿಗೆ ಚಿಕಿತ್ಸೆ ಕೊಡುವುದೆಂದು ನರ್ಸ್‌ಗಳು ಅಳಲು ತೋಡಿಕೊಂಡಿದ್ದಾರೆ. ಮತ್ತೊಂದು ಕಡೆ ಸೋಂಕಿತರ ಕುಟುಂಬಸ್ಥರು ಊಟ ತಂದುಕೊಟ್ಟರೆ ಅದು ಕೊರೊನಾ ಸೋಂಕಿತರಿಗೆ ತಲುಪುತ್ತಿಲ್ಲ ಎಂದು ಜಿಲ್ಲಾಸ್ಪತ್ರೆಯ ವಿರುದ್ಧ ಸೋಂಕಿತರ ಕುಟುಂಬಸ್ಥರು ಕಿಡಿಕಾರಿದ್ದಾರೆ.

ಇದನ್ನೂ ಓದಿ: ಚಾಮರಾಜನಗರಕ್ಕೆ ತಜ್ಞರ ಸಮಿತಿ ಆಗಮಿಸಿ, ಸಾವಿಗೆ ಕಾರಣ ಹುಡುಕಲಿದೆ; ಸಚಿವ ಸುರೇಶ್ ಕುಮಾರ್ ಮಾಹಿತಿ