ಭಾರತ್ ಬಂದ್: ಅಂಗಡಿ ಮುಚ್ಚುವಂತೆ ಮಾಲೀಕನ ಮೇಲೆ ಸಿಪಿಎಂ ಕಾರ್ಯಕರ್ತರ ಪುಂಡಾಟಿಕೆ
ಚಿಕ್ಕಬಳ್ಳಾಪುರ: ಇಂದು ದೇಶವ್ಯಾಪ್ತಿ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆ ಅಂಗಡಿ ಮುಚ್ಚುವಂತೆ ಮಾಲೀಕನ ಮೇಲೆ ಹಲ್ಲೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದಲ್ಲಿ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಪುಂಡಾಟಿಕೆ ನಡೆಸಿದ್ದಾರೆ. ಪಕ್ಷದ ಮುಖಂಡರಾದ ಲಕ್ಷ್ಮಿ ನಾರಾಯಣ ಅಂಗಡಿ ಮಾಲೀಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಟಿ ಅಂಗಡಿ ಮುಚ್ಚುವಂತೆ ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಹಾಗೂ ಚಹಾ ಮಾಡಲು ಕಾಯಿಸಿದ ಹಾಲನ್ನು ಚೆಲ್ಲಲು ಸಹ ಯತ್ನ ಮಾಡಿದ್ದಾರೆ. ಕಾರ್ಯಕರ್ತರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಅಂಗಡಿ ಮುಚ್ಚಿಸದಂತೆ […]
ಚಿಕ್ಕಬಳ್ಳಾಪುರ: ಇಂದು ದೇಶವ್ಯಾಪ್ತಿ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಕರೆ ನೀಡಿರುವ ಹಿನ್ನೆಲೆ ಅಂಗಡಿ ಮುಚ್ಚುವಂತೆ ಮಾಲೀಕನ ಮೇಲೆ ಹಲ್ಲೆ ಮಾಡಲಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ಪಟ್ಟಣದಲ್ಲಿ ಸಿಪಿಐ(ಎಂ) ಪಕ್ಷದ ಕಾರ್ಯಕರ್ತರು ಪುಂಡಾಟಿಕೆ ನಡೆಸಿದ್ದಾರೆ.
ಪಕ್ಷದ ಮುಖಂಡರಾದ ಲಕ್ಷ್ಮಿ ನಾರಾಯಣ ಅಂಗಡಿ ಮಾಲೀಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಟಿ ಅಂಗಡಿ ಮುಚ್ಚುವಂತೆ ಮಾಲೀಕನ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಹಾಗೂ ಚಹಾ ಮಾಡಲು ಕಾಯಿಸಿದ ಹಾಲನ್ನು ಚೆಲ್ಲಲು ಸಹ ಯತ್ನ ಮಾಡಿದ್ದಾರೆ. ಕಾರ್ಯಕರ್ತರ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.
ಅಂಗಡಿ ಮುಚ್ಚಿಸದಂತೆ ಖಾಕಿ ಖಡಕ್ ವಾರ್ನಿಂಗ್: ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣಕ್ಕೆ ಸಂಪೂರ್ಣ ಬಂದ್ ಬಿಸಿ ತಟ್ಟಿದೆ. ಸಿಪಿಐ(ಎಂ) ಕಾರ್ಯಕರ್ತರು 4 ತಂಡಗಳಾಗಿ ಮಾಡಿಕೊಂಡು ಅಂಗಡಿಗಳನ್ನು ಮುಚ್ಚಿಸಿದ್ದಾರೆ. ಹೀಗಾಗಿ ಸಿಪಿಐ(ಎಂ) ಕಾರ್ಯಕರ್ತರಿಗೆ ಪೊಲೀಸರು ಬಲವಂತವಾಗಿ ಅಂಗಡಿ ಮುಚ್ಚಿಸದಂತೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
Published On - 7:48 am, Wed, 8 January 20