ಕಾಡಾನೆಗಳ ದಾಳಿಯಿಂದ ಬನ್ನೇರುಘಟ್ಟದಲ್ಲಿ ಅಪಾರ ಪ್ರಮಾಣದ ಬೆಳೆ ನಾಶ
ಕಾಡಾನೆಗಳು ಪರಂಗಿ, ಹಿರೇಕಾಯಿ ಬೆಳೆಗಳನ್ನು ತುಳಿದು ನಾಶಗೊಳಿಸಿವೆ. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ರೈತರು ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸಿ ಕೊಡುವಂತೆ ಪಟ್ಟು ಬಿದ್ದಿದ್ದಾರೆ.
ಆನೇಕಲ್: ಕಾಡಾನೆಗಳ ದಾಳಿಯಿಂದ ಅಪಾರ ಪ್ರಮಾಣದ ಬೆಳೆನಾಶವಾಗಿದೆ. ಬೆಂಗಳೂರಿನ ಬನ್ನೇರುಘಟ್ಟ ಬಳಿಯ ಭೂತನಹಳ್ಳಿಯಲ್ಲಿ ಬೆಳೆ ನಾಶವಾಗಿದೆ. ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದಿರುವ ಕಾಡಾನೆಗಳು ಪರಂಗಿ, ಹಿರೇಕಾಯಿ ಬೆಳೆಗಳನ್ನು ತುಳಿದು ನಾಶಗೊಳಿಸಿವೆ. ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ರೈತರು ಬೆಳೆಹಾನಿಗೆ ಸೂಕ್ತ ಪರಿಹಾರ ಒದಗಿಸಿ ಕೊಡುವಂತೆ ಪಟ್ಟು ಬಿದ್ದಿದ್ದಾರೆ.
ಮುಂದುವರೆದ ಗುಲಾಬಿ ಹೂ ವಿತರಣೆ ಆನೇಕಲ್ನ ಬಳ್ಳೂರಿನ ಬಳಿ ತಮಿಳುನಾಡಿನಿಂದ ಕಳ್ಳದಾರಿಗಳಲ್ಲಿ ಬರುತ್ತಿದ್ದ ಜನರಿಗೆ ಹೂ ವಿತರಣೆ ಇಂದೂ ಮುಂದುವರೆದಿದೆ. ಪೊಲೀಸರು ಹಾಗು ಪಂಚಾಯತಿ ಸಿಬ್ಬಂದಿ ಗುಲಾಬಿ ನೀಡಿ ಓಡಾಡದಂತೆ ಮನವಿ ಮಾಡಿದ್ದಾರೆ. ಮೊದಲನೇ ದಿನ ಬಳ್ಳೂರಿನ ಸಿಪ್ಕಾರ್ಟ್ ರಸ್ತೆಯನ್ನ ಕಳ್ಳ ದಾರಿಯಾಗಿ ಜನ ಬೆಳೆಸುತ್ತಿದ್ದರು. ತಮಿಳುನಾಡಿನಿಂದ ಅಕ್ರಮವಾಗಿ ಕರ್ನಾಟಕಕ್ಕೆ ಆಗಮಿಸುತ್ತಿದ್ದ ಜನರಿಗೆ ಗುಲಾಬಿ ವಿತರಣೆ ಮಾಡಿದ್ದಾರೆ.
ಸಿಡಿಲು ಬಡಿದು ವ್ಯಕ್ತಿ ಸಾವು ತುಮಕೂರು: ಕೊರಟಗೆರೆ ತಾಲೂಕಿನ ಹುಲಿಕುಂಟೆ ಗ್ರಾಮದ ವ್ಯಕ್ತಿ ಸಿಡಿಲು ಬಡಿದು ಸಾವನ್ನಪ್ಪಿದ್ದಾರೆ. 40 ವರ್ಷದ ಸುರೇಶ್ ಎಂಬುವವರು ತಡರಾತ್ರಿ ಹೊಡೆದ ಸಿಡಿಲಿಗೆ ಬಲಿ ಮೃತಪಟ್ಟಿದ್ದಾರೆ.
ಇದನ್ನೂ ಓದಿ
ರಾಜ್ಯದ ಎಲ್ಲ ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತ ತಿಂಡಿ, ಊಟ ವಿತರಣೆ
ಗಂಗಾ ನದಿಯಲ್ಲಿ ತೇಲಿ ಬಂತು 96 ಮೃತದೇಹ; ಬಿಹಾರ, ಉತ್ತರ ಪ್ರದೇಶದಲ್ಲಿ ಹೆಚ್ಚಿದ ಆತಂಕ
(crop is destroyed by elephants attack in bannerghatta)