ಜಸ್ಟ್​​ ವಾಟ್ಸ್ ಆ್ಯಪ್ ಕಾಲ್ ಮಾಡಿ ಕೋಟ್ಯಂತರ ರೂ ವಂಚನೆ: ಯಾರಿಗೂ ಹೇಳದಂತೆ ವೃದ್ಧನಿಗೆ ಬೆದರಿಕೆ

ಮುಂಬೈನ 68 ವರ್ಷದ ವೃದ್ಧರೊಬ್ಬರು ಸೈಬರ್ ವಂಚನೆಗೆ ಒಳಗಾಗಿದ್ದು, 1.94 ಕೋಟಿ ರೂ. ಕಳೆದುಕೊಂಡಿದ್ದಾರೆ. ವಂಚಕರು ವಾಟ್ಸಾಪ್ ಕಾಲ್ ಮೂಲಕ ಪೊಲೀಸ್ ಅಧಿಕಾರಿಗಳೆಂದು ಹೇಳಿ, ಮನಿ ಲಾಂಡರಿಂಗ್ ಪ್ರಕರಣದಲ್ಲಿ ತೊಡಗಿಸಿಕೊಂಡಿದ್ದೀರಿ ಎಂದು ವೃದ್ಧರನ್ನು ಬೆದರಿಸಿ ಹಣವನ್ನು ಪಡೆದುಕೊಂಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಜಸ್ಟ್​​ ವಾಟ್ಸ್ ಆ್ಯಪ್ ಕಾಲ್ ಮಾಡಿ ಕೋಟ್ಯಂತರ ರೂ ವಂಚನೆ: ಯಾರಿಗೂ ಹೇಳದಂತೆ ವೃದ್ಧನಿಗೆ ಬೆದರಿಕೆ
ಜಸ್ಟ್​​ ವಾಟ್ಸ್ ಆ್ಯಪ್ ಕಾಲ್ ಮಾಡಿ ಕೋಟ್ಯಾಂತರ ರೂ ವಂಚನೆ: ಯಾರಿಗೂ ಹೇಳದಂತೆ ವೃದ್ಧನಿಗೆ ಬೆದರಿಕೆ
Follow us
Jagadisha B
| Updated By: ಗಂಗಾಧರ​ ಬ. ಸಾಬೋಜಿ

Updated on:Dec 14, 2024 | 3:59 PM

ಬೆಂಗಳೂರು, ಡಿಸೆಂಬರ್​ 14: ಸೈಬರ್ ವಂಚನೆ (Cyber crime) ಪ್ರಕರಣಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರು ಜನರು  ವಂಚನೆಗೊಳಗಾಗುತ್ತಿದ್ದಾರೆ. ಸದ್ಯ ಇಂತಹದೇ ಒಂದು ಪ್ರಕರಣ ಬೆಳಕಿಗೆ ಬಂದಿದೆ. ನಗರದಲ್ಲಿ ನೆಲೆಸಿರುವ ಮುಂಬೈ ಮೂಲದ ವೃದ್ಧರೊಬ್ಬರಿಗೆ ಬೆದರಿಕೆ ಹಾಕುವ ಮೂಲಕ 1. 94 ಕೋಟಿ ರೂ. ಹಣವನ್ನು ಖದೀಮರು ವಂಚಿಸಿದ್ದಾರೆ. ಆಗ್ನೇಯ ವಿಭಾಗದ ಸೈಬರ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ವಾಟ್ಸ್ ಆ್ಯಪ್ ಕಾಲ್ ಮಾಡಿ ವಂಚನೆ 

ವಂಚಕರು ಪೊಲೀಸ್ ಅಧಿಕಾರಿಯ ಬಟ್ಟೆ ಹಾಗೂ ಠಾಣೆ ಮಾದರಿಯಲ್ಲಿ ಕೋಣೆಯನ್ನು ಸಿದ್ದಮಾಡಿಕೊಂಡಿದ್ದಾರೆ. ಕಳೆದ ನವೆಂಬರ್​ನಲ್ಲಿ ವೃದ್ಧಗೆ ವಾಟ್ಸ್ ಆ್ಯಪ್ ಕಾಲ್ ಮಾಡಿದ್ದ ವಂಚಕರು, ಮುಂಬೈ ಕ್ರೈಂ ಬ್ರಾಂಚ್​​ ಪೊಲೀಸ್ ಎಂದು ಸಂಭಾಷಣೆ ಆರಂಭಿಸಿದ್ದಾರೆ. ವಿಡಿಯೋ ಕಾಲ್​​ ದೃಶ್ಯ ನೋಡಿ ಅಸಲಿ ಅಧಿಕಾರಿಗಳಿರಬಹುದು ಎಂದು ವೃದ್ಧ ನಂಬಿದ್ದಾರೆ.

ಇದನ್ನೂ ಓದಿ: ಸೈಬರ್​ ವಂಚನೆಗೆ ಹೊಸ ದಾರಿ: ಮನೆಗೆ ಬರುತ್ತೆ ಕೂಪನ್​​​, ಸ್ಕ್ಯಾನ್​ ಮಾಡಿದರೆ ನಿಮ್ಮ ಖಾತೆಯಲ್ಲಿನ ಹಣ ಮಾಯ

ಈ ವೇಳೆ ಉದ್ಯಮಿ ನರೇಶ್ ಗೋಯಲ್ ಮನಿಲ್ಯಾಂಡರಿಂಗ್ ಪ್ರಕರಣದಲ್ಲಿ ತಮ್ಮ ಪಾತ್ರವಿರುವ ಸಂಗತಿ ಪತ್ತೆಯಾಗಿದೆ. ಹವಾಲ ತನಿಖೆ ವೇಳೆ 247 ಸಿಮ್​​ಗಳು ವಶಕ್ಕೆ ಪಡೆಯಲಾಗಿತ್ತು. ಆ ಪೈಕಿ ಒಂದು ನಿಮ್ಮ ಸಿಮ್ ಎಂದು ವೃದ್ಧನಿಗೆ ಆತಂಕ ಸೃಷ್ಟಿಸಿದ್ದಾರೆ. ಆತನ ಜೊತೆ ಭಾಗಿಯಾಗಿ ಕಮಿಷನ್ ಪಡೆದುಕೊಂಡಿದ್ದೀರಾ ಎಂದು ತನಿಖೆ ಹಂತದಲ್ಲಿ ತಿಳಿದುಬಂದಿದೆ. ಪ್ರಕರಣದಲ್ಲಿ ನೇರ ಪಾತ್ರ ಹೊಂದಿದ್ದೀರಾ ನಿಮ್ಮ ವಿಚಾರಣೆ ಅಗತ್ಯ. ಹೀಗಾಗಿ ಮುಂಬೈ ಅಪರಾಧ ವಿಭಾಗಕ್ಕೆ ವಿಚಾರಣೆಗೆ ಹಾಜರಾಗಬೇಕು ಎಂದು ಸೂಚಿಸಿದ್ದಾರೆ.

ಈ ವೇಳೆ ಹೆದರಿದ ವೃದ್ಧನಿಗೆ ತಾವೇ ಪರ್ಯಾಯ ಮಾರ್ಗವಾಗಿ ವಂಚನೆ ಜಾಲ ಬೀಸಿದ್ದಾರೆ. ಆ ಬಳಿಕ ಹೌಸ್ ಅರೆಸ್ಟ್ ಆಗುವಂತೆ ತಿಳಿಸಿದ್ದಾರೆ. ವೃದ್ಧನಿಂದ ಬಲವಂತವಾಗಿ ವೈಯಕ್ತಕ ಮಾಹಿತಿ ಸಂಗ್ರಹಿಸಿದ ದುಷ್ಕರ್ಮಿಗಳು, ನಂತರ ಏಳು ದಿನಗಳಲ್ಲಿ ಹಲವು ಕಂತಿನಲ್ಲಿ ಹಣ ಕಳುಹಿಸುವಂತೆ ಒತ್ತಾಯಿಸಿದ್ದಾರೆ. ಅದೇ ಮಾದರಿಯಲ್ಲಿ ಒಟ್ಟು 1. 94 ಕೋಟಿ ರೂ. ಹಣ ಪಡೆದುಕೊಂಡಿದ್ದಾರೆ. ಬಳಿಕ ಈ ವಿಚಾರ ಯಾರ ಜೊತೆಯೂ ಚರ್ಚಿಸದಂತೆ ಸೂಚಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಸಿಟಿ ಪೊಲೀಸರ ಹೆಸರಿನಲ್ಲಿ ಬಂತು APK ಫೈಲ್: ಆ್ಯಪ್ ಇನ್​ಸ್ಟಾಲ್ ಆಗುತ್ತಿದ್ದಂತೇ ಮೊಬೈಲ್ ಹ್ಯಾಕ್, 1.5 ಲಕ್ಷ ರೂ. ಮಾಯ

ಅದೇ ರೀತಿಯಾಗಿ ಯಾರ ಸಹಾಯವನ್ನು ಪಡೆಯದಂತೆ ತಿಳಿಸಿದ್ದಾರೆ. ಆದರೆ ಕೆಲ ದಿನಗಳ ಬಳಿಕ ಸಂಗತಿಯನ್ನು ತನ್ನ ಮಗಳ ಬಳಿ ವೃದ್ಧ ಹೇಳಿಕೊಂಡಿದ್ದು, ಆ ಬಳಿಕ ವೃದ್ಧನ ಮಗಳು ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:58 pm, Sat, 14 December 24