ವಾಟ್ಸ್​ಆ್ಯಪ್ ಕೂಡ ಹ್ಯಾಕ್ ಆಗುತ್ತೆ ಎಚ್ಚರ! ಆ್ಯಕ್ಸಿಸ್ ಬ್ಯಾಂಕ್ ಹೆಸರಲ್ಲಿ ಈ ರೀತಿಯ ಮೆಸೇಜ್ ಬಂದರೆ ಕ್ಲಿಕ್ ಮಾಡಬೇಡಿ

ಆ್ಯಕ್ಸಿಸ್ ಬ್ಯಾಂಕ್ ಹೆಸರಿನಲ್ಲಿ ರಿವಾರ್ಡ್ ಪಾಯಿಂಟ್‌ಗಳನ್ನು ನೀಡುವುದಾಗಿ ನಕಲಿ ಸಂದೇಶ ಕಳುಹಿಸಿ ವಾಟ್ಸ್​ಆ್ಯಪ್ ಖಾತೆಗಳನ್ನು ಹ್ಯಾಕ್ ಮಾಡುವ ಸೈಬರ್ ವಂಚನೆಯ ಪ್ರಕರಣ ಬೆಳಕಿಗೆ ಬಂದಿದೆ. ವಂಚಕರು APK ಫೈಲ್‌ಗಳನ್ನು ಕಳುಹಿಸಿ ವಾಟ್ಸಾಪ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದಾರೆ. ಆ್ಯಕ್ಸಿಸ್ ಬ್ಯಾಂಕ್ ಈ ರೀತಿಯ ಸಂದೇಶಗಳನ್ನು ಕಳುಹಿಸಿಲ್ಲ, ಕಳುಹಿಸುತ್ತಿಲ್ಲ ಎಂಬುದು ತಿಳಿದುಬಂದಿದ್ದು, ಗ್ರಾಹಕರು ಅನುಮಾನಾಸ್ಪದ ಸಂದೇಶಗಳು ಮತ್ತು ಲಿಂಕ್‌ಗಳನ್ನು ಕ್ಲಿಕ್ ಮಾಡದಿರಲು ಸಲಹೆ ನೀಡಲಾಗಿದೆ.

ವಾಟ್ಸ್​ಆ್ಯಪ್ ಕೂಡ ಹ್ಯಾಕ್ ಆಗುತ್ತೆ ಎಚ್ಚರ! ಆ್ಯಕ್ಸಿಸ್ ಬ್ಯಾಂಕ್ ಹೆಸರಲ್ಲಿ ಈ ರೀತಿಯ ಮೆಸೇಜ್ ಬಂದರೆ ಕ್ಲಿಕ್ ಮಾಡಬೇಡಿ
ವಾಟ್ಸ್​ಆ್ಯಪ್ ಕೂಡ ಹ್ಯಾಕ್ ಆಗುತ್ತೆ ಎಚ್ಚರ!
Follow us
Ganapathi Sharma
|

Updated on:Nov 29, 2024 | 2:26 PM

ಪ್ಯಾನ್ ಅಪ್​ಡೇಟ್ ಮಾಡಲು ಎಸ್​ಬಿಐ ಹೆಸರಲ್ಲಿ ನಕಲಿ ಮೆಸೇಜ್ ಕಳುಹಿಸುವ ಮೂಲಕ ಸೈಬರ್ ವಂಚಕರು ಬ್ಯಾಂಕ್ ಗ್ರಾಹಕರನ್ನು ವಂಚನೆಗೆ ಒಳಗಾಗಿಸಿದ ಬಗ್ಗೆ ಇತ್ತೀಚೆಗಷ್ಟೇ ವರದಿಯಾಗಿತ್ತು. ಅದೇ ರೀತಿ, ಎಸ್‌ಬಿಐ ರಿವಾರ್ಡ್ ಆ್ಯಪ್ ಇನ್‌ಸ್ಟಾಲ್ ಮಾಡಿ ಎಂದು ಸಂದೇಶ ಕಳುಹಿಸಿ ವಂಚನೆ ಮಾಡುತ್ತಿರುವ ಜಾಲದ ಕೃತ್ಯದ ಬಗ್ಗೆಯೂ ಬೆಳಕಿಗೆ ಬಂದಿತ್ತು. ಇದೀಗ ಅದಕ್ಕೆ ಹೊಸದೊಂದು ಸೇರ್ಪಡೆಯಾಗಿದೆ. ಆ್ಯಕ್ಸಿಸ್ ಬ್ಯಾಂಕ್ ರಿವಾರ್ಡ್ ಆ್ಯಪ್ ಹೆಸರಿನಲ್ಲಿ ವಾಟ್ಸ್​ಆ್ಯಪ್ ಖಾತೆಗೇ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ.

ಬ್ಯಾಂಕ್ ಗ್ರಾಹಕರೊಬ್ಬರ ವಾಟ್ಸ್​​ಆ್ಯಪ್​ಗೆ ಆ್ಯಕ್ಸಿಸ್​ ಬ್ಯಾಂಕ್​ನ ಹೆಸರಿನಲ್ಲಿ ರಿವಾರ್ಡ್​ ಪಾಯಿಂಟ್ ಸಂಬಂಧಿತ ಸಂದೇಶವೊಂದು ಬಂದಿದೆ. ಜತೆಗೆ, ಆ್ಯಪ್ ಒಂದನ್ನು ಡೌನ್​ಲೋಡ್ ಮಾಡಿದರೆ ತಕ್ಷಣವೇ ರಿವಾರ್ಡ್​ ಪಾಯಿಂಟ್ ಪಡೆಯಬಹುದು ಎಂದು ಸೂಚಿಸಿ ಎಪಿಕೆ (APK) ಫೈಲ್ ಲಿಂಕ್ ಕೂಡ ಬಂದಿದೆ. ಇದನ್ನವರು ಕ್ಲಿಕ್ ಮಾಡಿದ್ದಾರೆ. ಅದಾದ ಒಂದು ದಿನದ ಬಳಿಕ ವಾಟ್ಸ್​ಆ್ಯಪ್ ಖಾತೆ ಹ್ಯಾಕ್ ಆಗಿದೆ. ಅಷ್ಟೇ ಅಲ್ಲ, ಅವರು ಇರುವ ಎಲ್ಲ ವಾಟ್ಸ್​ಆ್ಯಪ್ ಗ್ರೂಪ್​ಗಳ ಐಕಾನ್ ಹಾಗೂ ಹೆಸರು AXIS BANK ಎಂದಾಗಿದೆ. ಜತೆಗೆ ಅವರ ಡಿಪಿ ಕೂಡ AXIS BANK ಇಮೇಜ್ ಆಗಿ ಪರಿವರ್ತನೆ ಆಗಿದೆ!

ಆ್ಯಕ್ಸಿಸ್ ಬ್ಯಾಂಕ್ ಹೆಸರಿನಲ್ಲಿ ಬರುವ ಸಂದೇಶವೇನು?

‘‘ಆತ್ಮೀಯ ಗ್ರಾಹಕರೇ, ನಿಮ್ಮ AXIS ಬ್ಯಾಂಕ್ ರಿವಾರ್ಡ್ ಪಾಯಿಂಟ್‌ಗಳನ್ನು (7250.00 ರೂ.) ಯಶಸ್ವಿಯಾಗಿ ಆ್ಯಕ್ಟಿವೇಟ್ ಮಾಡಲಾಗಿದೆ ಮತ್ತು ಇಂದೇ ಎಕ್ಸ್​​ಪೈರ್ ಆಗಲಿದೆ! ಈಗ AXIS ಬ್ಯಾಂಕ್ ಆ್ಯಪ್ ಇನ್‌ಸ್ಟಾಲ್ ಮಾಡುವ ಮೂಲಕ ರಿಡೀಮ್ ಮಾಡಿ’’ ಎಂಬ ಸಂದೇಶ ಗ್ರಾಹಕರ ಮೊಬೈಲ್​ಗೆ ಬರುತ್ತದೆ. ಸಂದೇಶದ ಜತೆಗೆ APK ಆ್ಯಪ್ ಲಿಂಕ್ ಸಹ ಕಳುಹಿಸಲಾಗಿತ್ತದೆ.

ಒಂದು ವೇಳೆ, ಗ್ರಾಹಕರು APK ಆ್ಯಪ್ ಲಿಂಕ್ ಕ್ಲಿಕ್ ಮಾಡಿದರೆ ಅವರ ವಾಟ್ಸ್​ಆ್ಯಪ್​ ಅನ್ನು ಸೈಬರ್ ವಂಚಕರು ಹ್ಯಾಕ್ ಮಾಡುತ್ತಾರೆ.

ಸೈಬರ್ ವಂಚಕರ ಕೃತ್ಯ

ಈ ರೀತಿಯ ಸಂದೇಶ ಸೈಬರ್ ವಂಚಕರ ಕೃತ್ಯ ಎಂಬುದು ಪರಿಶೀಲನೆ ವೇಳೆ ಗೊತ್ತಾಗಿದೆ. ಜತೆಗೆ, ಈ ರೀತಿಯ ಸಂದೇಶವನ್ನು ಗ್ರಾಹಕರಿಗೆ ಕಳುಹಿಸಿಲ್ಲ, ಕಳುಹಿಸುತ್ತಿಲ್ಲ ಎಂದು ಆ್ಯಕ್ಸಿಸ್ ಬ್ಯಾಂಕ್ ಕೂಡ ಸ್ಪಷ್ಟಪಡಿಸಿದೆ. ಆದ್ದರಿಂದ, ರಿವಾರ್ಡ್​ ಪಾಯಿಂಟ್ಸ್ ಹೆಸರಿಲ್ಲಿ ಯಾವುದೇ ನಕಲಿ ಸಂದೇಶ, ಎಪಿಕೆ ಫೈಲ್ ಲಿಂಕ್ ಬಂದಲ್ಲಿ ಕ್ಲಿಕ್ ಮಾಡದೇ ಇರುವುದು ಒಳಿತು.

ಇದನ್ನೂ ಓದಿ: ಎಸ್‌ಬಿಐ ರಿವಾರ್ಡ್ ಆ್ಯಪ್ ಇನ್‌ಸ್ಟಾಲ್ ಮಾಡಿದ್ರೆ ನಿಮ್ಮ ಖಾತೆಗೆ ಹಣ ಬರುತ್ತೆ..?

ಎಪಿಕೆ ಫೈಲ್​ಗಳು ಇತ್ತೀಚೆಗೆ ಸೈಬರ್ ವಂಚಕರ ಪ್ರಬಲ ಅಸ್ತ್ರಗಳಾಗಿ ಪರಿಣಮಿಸಿವೆ. ಇವುಗಳನ್ನು ಡೌನ್​ಲೋಡ್ ಮಾಡಿಕೊಂಡಲ್ಲಿ, ಅಥವಾ ನಮಗೆ ಅರಿವಿಲ್ಲದೆಯೇ ಯಾವುದೋ ಲಿಂಕ್ ಕ್ಲಿಕ್ ಮಾಡಿ ಇವುಗಳು ಡೌನ್​ಲೋಡ್ ಆದಲ್ಲಿ ನಮ್ಮ ಮೊಬೈಲ್​ನ ಸಂಪೂರ್ಣ ನಿಯಂತ್ರಣವನ್ನು ಅದು ಸೈಬರ್ ವಂಚಕರಿಗೆ ಕೊಡುತ್ತವೆ. ಇದರಿಂದ ಬ್ಯಾಂಕ್ ಖಾತೆಯಿಂದ ದುಡ್ಡು ಕಳೆದುಕೊಳ್ಳುವುದು, ವೈಯಕ್ತಿಕ ಮಾಹಿತಿ ಸೋರಿಕೆಯಂಥ ಅನೇಕ ಅಪಾಯಗಳು ಎದುರಾಗಬಹುದು.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:05 pm, Fri, 29 November 24

ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ