WhatsApp Tricks: ನಿಮ್ಮ ಸ್ಮಾರ್ಟ್​​ಫೋನ್ ವೇಗ ಕಡಿಮೆಯಾಗುತ್ತಿದೆಯೇ?: ಇದಕ್ಕೆ ಕಾರಣ ವಾಟ್ಸ್​ಆ್ಯಪ್

ವಾಟ್ಸ್​ಆ್ಯಪ್ ನಲ್ಲಿ ಅನೇಕ ಉಪಯುಕ್ತ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ, ಆದರೆ ಫೋನ್ ವೇಗವನ್ನು ನಿಧಾನಗೊಳಿಸುವ ಕೆಲವು ವೈಶಿಷ್ಟ್ಯಗಳು ಇದರಲ್ಲಿ ಅಡಕವಾಗಿದೆ. ವಾಟ್ಸ್​ಆ್ಯಪ್ ನಿಮ್ಮ ಫೋನ್‌ನ ಸ್ಟೋರೇಜ್ ಅನ್ನು ತಿನ್ನುತ್ತದೆ, ಇದರಿಂದಾಗಿ ಸ್ಟೋರೇಜ್ ತುಂಬಿದಾಗ ಫೋನ್ ನಿಧಾನಗೊಳ್ಳಲು ಪ್ರಾರಂಭಿಸುತ್ತದೆ.

WhatsApp Tricks: ನಿಮ್ಮ ಸ್ಮಾರ್ಟ್​​ಫೋನ್ ವೇಗ ಕಡಿಮೆಯಾಗುತ್ತಿದೆಯೇ?: ಇದಕ್ಕೆ ಕಾರಣ ವಾಟ್ಸ್​ಆ್ಯಪ್
WhatsApp Tricks
Follow us
ಪ್ರೀತಿ ಭಟ್​, ಗುಣವಂತೆ
| Updated By: ಅಕ್ಷತಾ ವರ್ಕಾಡಿ

Updated on: Nov 28, 2024 | 5:12 PM

ನಿಮ್ಮ ಸ್ಮಾರ್ಟ್​ಫೋನ್‌ನ ವೇಗವು ಕ್ರಮೇಣ ಕಡಿಮೆಯಾಗಲು ಪ್ರಾರಂಭಿಸಿದೆಯೆ?. ಇದರಿಂದಾಗಿ ನೀವು ಚಿಂತೆ ಮಾಡುತ್ತಿದ್ದೀರಾ?. ಫೋನ್ ನಿಧಾನಗತಿಯ ವೇಗದ ಹಿಂದೆ ಹಲವು ಕಾರಣಗಳಿದ್ದರೂ, ಇದಕ್ಕೆ ಮುಖ್ಯ ಕಾರಣವೆಂದರೆ ವಾಟ್ಸ್​ಆ್ಯಪ್ ಎಂದರೆ ನಂಬಲೇಬೇಕು. ವಾಟ್ಸ್​ಆ್ಯಪ್ ಫೋನ್ ವೇಗವನ್ನು ಹೇಗೆ ಕಡಿಮೆ ಮಾಡುತ್ತದೆ ಎಂದು ಯೋಚಿಸುತ್ತಿದ್ದೀರಾ?, ನಿಮ್ಮ ಪ್ರಶ್ನೆಗೆ ಇಲ್ಲಿದೆ ಉತ್ತರ.

ಸಹಜವಾಗಿ, ವಾಟ್ಸ್​ಆ್ಯಪ್ ನಲ್ಲಿ ಅನೇಕ ಉಪಯುಕ್ತ ವೈಶಿಷ್ಟ್ಯಗಳನ್ನು ಒದಗಿಸಲಾಗಿದೆ, ಆದರೆ ಫೋನ್ ವೇಗವನ್ನು ನಿಧಾನಗೊಳಿಸುವ ಕೆಲವು ವೈಶಿಷ್ಟ್ಯಗಳು ಇದರಲ್ಲಿ ಅಡಕವಾಗಿದೆ. ವಾಟ್ಸ್​ಆ್ಯಪ್ ನಿಮ್ಮ ಫೋನ್‌ನ ಸ್ಟೋರೇಜ್ ಅನ್ನು ತಿನ್ನುತ್ತದೆ, ಇದರಿಂದಾಗಿ ಸ್ಟೋರೇಜ್ ತುಂಬಿದಾಗ ಫೋನ್ ನಿಧಾನಗೊಳ್ಳಲು ಪ್ರಾರಂಭಿಸುತ್ತದೆ.

ವಾಟ್ಸ್​ಆ್ಯಪ್ ನ ಸೆಟ್ಟಿಂಗ್‌ಗಳಲ್ಲಿ ಸ್ಟೋರೇಜ್ ಮತ್ತು ಡೇಟಾ ಎಂಬ ಆಯ್ಕೆ ಇದೆ, ಈ ವೈಶಿಷ್ಟ್ಯದ ಸಹಾಯದಿಂದ ಅಪ್ಲಿಕೇಶನ್ ಎಷ್ಟು ಸಂಗ್ರಹಣೆಯನ್ನು ಬಳಸುತ್ತಿದೆ ಎಂದು ತಿಳಿಯುತ್ತದೆ? ನಿಮ್ಮ ಸ್ಟೋರೇಜ್ ಅನ್ನು ಯಾವ ಚಾಟ್ ಹೆಚ್ಚು ಬಳಸುತ್ತಿದೆ ಎಂಬುದನ್ನು ಇಲ್ಲಿ ನೀವು ಚಾಟ್-ವಾರು ನೋಡುತ್ತೀರಿ.

ಇದಕ್ಕೆ ಪರಿಹಾರ ಕೂಡ ಇದೆ. ನೀವು ಸ್ಟೋರೇಜ್ ಮತ್ತು ಡೇಟಾಗೆ ಹೋಗಿ ಮತ್ತು ವೈಯಕ್ತಿಕ ಚಾಟ್‌ಗಳನ್ನು ತೆರೆಯುವ ಮೂಲಕ ಡೇಟಾವನ್ನು ಅಳಿಸಬಹುದು. ಅಳಿಸಿದ ನಂತರ, ಸ್ಟೋರೇಜ್ ಕಡಿಮೆ ಆಗಲು ಪ್ರಾರಂಭಿಸುತ್ತದೆ ಮತ್ತು ಫೋನ್‌ನ ವೇಗವು ಸುಧಾರಿಸಲು ಪ್ರಾರಂಭಿಸುತ್ತದೆ.

ಇದಲ್ಲದೆ, ವಾಟ್ಸ್​ಆ್ಯಪ್ ನಲ್ಲಿ ಫೋನ್‌ನ ಸ್ಟೋರೇಜ್ ತುಂಬುವ ಮತ್ತೊಂದು ವೈಶಿಷ್ಟ್ಯವೂ ಇದೆ. ಈ ವೈಶಿಷ್ಟ್ಯದ ಹೆಸರು ಮೀಡಿಯಾ ವಿಸಿಬಿಲಿಟಿ. ನಿಮ್ಮ ವಾಟ್ಸ್​ಆ್ಯಪ್ ನಲ್ಲಿ ಈ ವೈಶಿಷ್ಟ್ಯವು ಆನ್ ಆಗಿದ್ದರೆ, ವಾಟ್ಸ್​ಆ್ಯಪ್ ನಲ್ಲಿ ನೀವು ಸ್ವೀಕರಿಸುವ ಎಲ್ಲ ಫೋಟೋ, ವಿಡಿಯೋ, ಡಾಕ್ಯುಮೆಂಟ್ ಫೋನ್‌ನ ಗ್ಯಾಲರಿಯಲ್ಲಿ ಸೇವ್ ಆಗುತ್ತದೆ. ಹೀಗಾದಾಗ ಫೋನ್‌ನ ಸ್ಟೋರೇಜ್ ತುಂಬಲು ಪ್ರಾರಂಭಿಸುತ್ತದೆ ಮತ್ತು ಫೋನ್ ನಿಧಾನವಾಗುತ್ತದೆ.

ಪರ್ಸನ್ ಮತ್ತು ಗ್ರೂಪ್ ಚಾಟ್‌ಗಳಲ್ಲಿ ಕೂಡ ನೀವು ಈ ವೈಶಿಷ್ಟ್ಯವನ್ನು ಆಫ್ ಮಾಡಬಹುದು. ಇದಕ್ಕಾಗಿ ಪರ್ಸನ್ ಚಾಟ್ ತೆರೆಯಿರಿ ಮತ್ತು ಮೂರು ಚುಕ್ಕೆಗಳ ಮೇಲೆ ಟ್ಯಾಪ್ ಮಾಡುವ ಮೂಲಕ ಕಾಂಟೆಕ್ಟ್ ವೀಕ್ಷಿಸಿ, ಇಲ್ಲಿ ನೀವು ಮೀಡಿಯಾ ವಿಸಿಬಿಲಿಟಿ ಆಯ್ಕೆಯನ್ನು ನೋಡುತ್ತೀರಿ. ನೀವು ಇಲ್ಲಿಂದ ಈ ವೈಶಿಷ್ಟ್ಯವನ್ನು ಆಫ್ ಮಾಡಬಹುದು, ನೀವು ಗ್ರೂಪ್ ಚಾಟ್‌ಗಾಗಿ ಕೂಡ ಇದೇ ಪ್ರಕ್ರಿಯೆಯನ್ನು ಅನುಸರಿಸಬಹುದು.

ಇಂದು 16GB, 32GB, 128GB ಮೆಮೊರಿ ಹೊಂದಿರುವ ಸ್ಮಾರ್ಟ್​ಫೋನುಗಳು ಹೆಚ್ಚು ಜನರ ಬಳಕೆಯಲ್ಲಿವೆ. ಹಾಗೆಂದು 16GB, 32GB, 128GB ಮೆಮೊರಿ ತುಂಬಿಸಿಕೊಳ್ಳಬಹುದು ಎಂದುಕೊಳ್ಳದಿರಿ. ಏಕೆಂದರೆ ಹೆಚ್ಚು ಸ್ಟೋರೇಜ್ ನಿಂದಾಗಿ ಫೋನುಗಳು ನಿಧಾನವಾಗುತ್ತವೆ. ಅಂತೆಯೆ ಫೋನ್​ನಲ್ಲಿರುವ ಅಪ್ಲಿಕೇಷನ್​ಗಳನ್ನು ತೆರೆದಂತೆ ಮೊಬೈಲ್​ನಲ್ಲಿ ಅದು ಸ್ಟೋರ್ ಆಗುತ್ತಾ ಹೋಗುತ್ತದೆ.

ಇದನ್ನೂ ಓದಿ: ನಿಮ್ಮ ಫೋನ್ ಸ್ಟೋರೇಜ್ ಫುಲ್ ಆಗಲು ಪ್ರಮುಖ ಕಾರಣ ಈ ಆ್ಯಪ್: ತಕ್ಷಣ ಹೀಗೆ ಮಾಡಿ

ನಮ್ಮ ಮೊಬೈಲ್​ನಲ್ಲಿರುವ ಕೆಲವು ಅಪ್ಲಿಕೇಷನ್​ಗಳನ್ನು ನಾವು ಬಳಸುವುದೇ ಇಲ್ಲ. ಆದರೂ ಅದು ನಮ್ಮ ಮೊಬೈಲ್ ನಲ್ಲಿ ಇರುತ್ತದೆ. ಇಂತಹ ಅಪ್ಲಿಕೇಷನ್​ಗಳು ಸುಮ್ಮನೆ ಸ್ಟೋರೇಜ್ ಸಮಸ್ಯೆ ಉಂಟುಮಾಡುತ್ತವೆ. ಹಾಗಾಗಿ ಅಂತಹ ಅಪ್ಲಿಕೇಷನ್​ಗಳನ್ನು ಮೊದಲು ಅನ್ಇನ್‌ಸ್ಟಾಲ್ ಮಾಡಿ.

ಮತ್ತಷ್ಟು ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗೌತಮಿ ಜೊತೆ ಆಡಲ್ಲ ಎಂದು ದೊಡ್ಡ ದಂಡ ತೆತ್ತಿದ ಮೋಕ್ಷಿತಾ
ಗೌತಮಿ ಜೊತೆ ಆಡಲ್ಲ ಎಂದು ದೊಡ್ಡ ದಂಡ ತೆತ್ತಿದ ಮೋಕ್ಷಿತಾ
ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
ಮನೆಯಲ್ಲಿ ಬ್ರಹ್ಮ ಕಮಲ ಗಿಡ ಇದ್ದರೆ ಇದೆ ಅನೇಕ ಪ್ರಯೋಜನ!
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
Daily Horoscope: ಈ ರಾಶಿಯವರಿಗಿಂದು 5 ರಾಶಿಗಳ ಶುಭ ಫಲ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಪ್ರವಾಹದ ನೀರಿಗಿಳಿದು 3 ಬೆಕ್ಕಿನ ಮರಿಗಳನ್ನು ರಕ್ಷಿಸಿದ ಪುಟ್ಟ ಬಾಲಕ
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಪಾರ್ಕ್​ನಲ್ಲಿ ಹಾಡಿನ ಶೂಟಿಂಗ್ ಮಾಡಿದ್ರೆ ನೋಡ್ತೀರಾ? ಉಪೇಂದ್ರ ಪ್ರಶ್ನೆ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ