ಕೊಬ್ಬರಿ ಎಣ್ಣೆಯೊಂದಿಗೆ KSRTC ಬಸ್​ ಹತ್ತಿದ ಮಹಿಳೆ; ಏನಿದು ಎಂದು ಕೇಳಿದ ಚಾಲಕ, ಬಾಂಬ್ ಎಂದು ಗದರಿದ ಮಹಿಳೆ

ಮಂಗಳೂರು-ಹಾಸನ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕೊಬ್ಬರಿ ಎಣ್ಣೆ ಕೊಂಡೊಯ್ಯುವ ವಿಚಾರದಲ್ಲಿ ಸಿಬ್ಬಂದಿ ಹಾಗೂ ಮಹಿಳೆ ನಡುವೆ ವಾಗ್ವಾದ ನಡೆದಿದ್ದು, ಏನಿದು ಎಂದು ಚಾಲಕ ಕೇಳಿದ್ದಕ್ಕೆ ಬಾಂಬ್ ಇದು ಎಂದು ಮಹಿಳೆ ಗದರಿದ್ದಾರೆ. ಇದು ತೀವ್ರ ವಾಗ್ವಾದಕ್ಕೆ ಕಾರಣವಾಗಿ ಕೊನೆಗೆ ಬಂಟ್ವಾಳ ಪೊಲೀಸರು ಮಧ್ಯಪ್ರವೇಶಿಸುವಂತಾಯಿತು.

ಕೊಬ್ಬರಿ ಎಣ್ಣೆಯೊಂದಿಗೆ KSRTC ಬಸ್​ ಹತ್ತಿದ ಮಹಿಳೆ; ಏನಿದು ಎಂದು ಕೇಳಿದ ಚಾಲಕ, ಬಾಂಬ್ ಎಂದು ಗದರಿದ ಮಹಿಳೆ
ಕೊಬ್ಬರಿ ಎಣ್ಣೆಯೊಂದಿಗೆ KSRTC ಬಸ್​ ಹತ್ತಿದ ಮಹಿಳೆ ಮತ್ತು ಸಿಬ್ಬಂದಿ ನಡುವೆ ತೀವ್ರ ವಾಗ್ವಾದ (ಸಾಂದರ್ಭಿಕ ಚಿತ್ರ)
Follow us
TV9 Web
| Updated By: Rakesh Nayak Manchi

Updated on: Nov 14, 2023 | 6:53 PM

ಮಂಗಳೂರು, ನ:14: ಹಾಸನ ಕೆಎಸ್‌ಆರ್‌ಟಿಸಿ (KSRTC) ಬಸ್‌ನಲ್ಲಿ ಕೊಬ್ಬರಿ ಎಣ್ಣೆ ಕೊಂಡೊಯ್ಯುವ ವಿಚಾರದಲ್ಲಿ ಸಿಬ್ಬಂದಿ ಹಾಗೂ ಮಹಿಳೆ ನಡುವೆ ವಾಗ್ವಾದ ನಡೆದಿದ್ದು, ಏನಿದು ಎಂದು ಚಾಲಕ ಕೇಳಿದ್ದಕ್ಕೆ ಬಾಂಬ್ ಇದು ಎಂದು ಮಹಿಳೆ ಗದರಿದ್ದಾರೆ. ಇದು ತೀವ್ರ ವಾಗ್ವಾದಕ್ಕೆ ಕಾರಣವಾಗಿ ಕೊನೆಗೆ ಬಂಟ್ವಾಳ (Bantwal) ಪೊಲೀಸರು ಮಧ್ಯಪ್ರವೇಶಿಸುವಂತಾಯಿತು.

ಕೆಎಸ್‌ಆರ್‌ಟಿಸಿಯ ಮೂಲಗಳು ವಿವರಗಳನ್ನು ನೀಡುತ್ತಾ, ಬಸ್ ಹಾಸನ ವಿಭಾಗಕ್ಕೆ ಸೇರಿದೆ ಎಂದು ತಿಳಿಸಿವೆ. ಅಲ್ಲದೆ, ಮಹಿಳೆ ಕೆಎಸ್‌ಆರ್‌ಟಿಸಿ ಉದ್ಯೋಗಿಯ ಪತ್ನಿ ಎಂದು ತಿಳಿದು ಬಂದಿದೆ. ಮೂರು ಕೊಬ್ಬರಿ ಎಣ್ಣೆ ಡಬ್ಬಿಯೊಂದಿಗೆ ಮಹಿಳೆಯೊಬ್ಬರು ಬಸ್ ಹತ್ತಿದ್ದಾರೆ. ಇದು ಏನು ಎಂದು ಚಾಲಕ ಕೇಳಿದಾಗ, ಮಹಿಳೆ ಸಿಟ್ಟಾಗಿ ಬಾಂಬ್ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮಂಗಳೂರು: KSRTC ಬಸ್​ನಲ್ಲಿ ಕೋಳಿ ಮಾಂಸ ಜಗಳ; ಠಾಣೆಗೆ ಬಸ್​ ತೆಗೆದುಕೊಂಡು ಹೋದ ಚಾಲಕ

ಇದು ಪರಿಸ್ಥಿತಿಯನ್ನು ಮತ್ತೊಂದು ತಿರುವು ಪಡೆಯಲು ಕಾರಣವಾಗಿ ಬಸ್ ಕಂಡೆಕ್ಟರ್ ಹಾಗೂ ಮಹಿಳೆಯ ನಡುವೆ ತೀವ್ರ ವಾಗ್ವಾದ ನಡೆಯಿತು. ಕೊನೆಗೆ ಪೊಲೀಸರು ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಿದ್ದಾರೆ ಎಂದು ಬಂಟ್ವಾಳ ಪೊಲೀಸ್ ಮೂಲಗಳು ತಿಳಿಸಿವೆ.

ಕಳೆದ ತಿಂಗಳು ಪ್ರಯಾಣಿಕರೊಬ್ಬರು ಕೆಎಸ್​ಆರ್​ಟಿಸಿ ಬಸ್​ನಲ್ಲಿ ಕೋಳಿ ಮಾಂಸ ಕೊಂಡೊಯ್ದಿದ್ದಕ್ಕೆ ಆಕ್ರೋಶಗೊಂಡ ಕಂಡೆಕ್ಟರ್ ಹಾಗೂ ಚಾಲಕ ಬಸ್​ ಅನ್ನು ನೇರವಾಗಿ ಪೊಲೀಸ್ ಠಾಣೆಗೆ ಕೊಂಡೊಯ್ದ ಘಟನೆ ನಡೆದಿತ್ತು. ಕೊನೆಗೆ ಪೊಲೀಸರು ಬಸ್ ಸಿಬ್ಬಂದಿಗೆ ಬುದ್ಧಿವಾದ ಹೇಳಿ ಕಳುಹಿಸಿದ್ದರು. ಇನ್ನು, ಸಿಬ್ಬಂದಿ ನಡೆಗೆ ಪ್ರಯಾಣಿಕ ಆಕ್ರೋಶ ಹೊರಹಾಕಿದ್ದರು. ಕೂಲಿ ಮಾಡಿ ಜೀವನ ಸಾಗಿಸುವ ನಾವು ಕೋಳಿ ಮಾಂಸವನ್ನು ಹಣಕೊಟ್ಟು ಆಟೋದಲ್ಲಿ ಕೊಂಡೊಯ್ಯಲು ಆಗುತ್ತಾ ಎಂದು ಪ್ರಶ್ನಿಸಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ