Moral policing: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸರ ಅಟ್ಟಹಾಸ; ರಾತ್ರಿ 10 ಗಂಟೆಯಲ್ಲಿ ಕಾಲೇಜು ಬಳಿ ಘಟನೆ
ಮಂಗಳೂರಿನ ಬೆಂದೂರ್ ವೆಲ್ ಬಳಿಯ ಅಗ್ನೇಸ್ ಕಾಲೇಜು ಬಳಿ ಘಟನೆ ನಡೆದಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಆಗ್ನೆಸ್ ಬಳಿ ಇಬ್ಬರು ಯುವತಿಯರು ಮತ್ತು ಇಬ್ಬರು ಯುವಕರು ನಿಂತಿದ್ದರು. ಇದರಲ್ಲಿ ಅನ್ಯಕೋಮಿನ ಯುವಕ ಇರೋ ಮಾಹಿತಿ ಪಡೆದ ಬಜರಂಗ ದಳದ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿ ಮಾಡಿದ್ದಾರೆ.
ಮಂಗಳೂರು: ಮಂಗಳೂರಿನಲ್ಲಿ ಮತ್ತೆ ನೈತಿಕ ಪೊಲೀಸರು ಅಟ್ಟಹಾಸ ತೋರಿದ್ದಾರೆ. ಮಂಗಳೂರಿನ ಬೆಂದೂರ್ ವೆಲ್ ಬಳಿಯ ಅಗ್ನೇಸ್ ಕಾಲೇಜು ಬಳಿ ಘಟನೆ ನಡೆದಿದೆ. ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಆಗ್ನೆಸ್ ಬಳಿ ಇಬ್ಬರು ಯುವತಿಯರು ಮತ್ತು ಇಬ್ಬರು ಯುವಕರು ನಿಂತಿದ್ದರು. ಇದರಲ್ಲಿ ಅನ್ಯಕೋಮಿನ ಯುವಕ ಇರೋ ಮಾಹಿತಿ ಪಡೆದ ಬಜರಂಗ ದಳದ ಕಾರ್ಯಕರ್ತರು ನೈತಿಕ ಪೊಲೀಸ್‌ಗಿರಿ ಮಾಡಿದ್ದಾರೆ.
ಸ್ಥಳಕ್ಕಾಗಮಿಸಿದ ಇಬ್ಬರು ಯುವಕರ ಮೇಲೆ ಹಲ್ಲೆ ಬಜರಂಗ ದಳದ ಕಾರ್ಯಕರ್ತರು ನಡೆಸಿದ್ದಾರೆ. ಹಲ್ಲೆ ನಡೆಸಿದ ಬಳಿಕ ಯುವತಿಯರ ಜೊತೆ ನಾಲ್ವರನ್ನೂ ಕಾರ್ಯಕರ್ತರು ಕದ್ರಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಅದರೆ ಠಾಣೆಯಲ್ಲಿ ಬಜರಂಗ ದಳದ ಕಾರ್ಯಕರ್ತರ ವಿರುದ್ದ ಹಿಂದೂ ಯುವಕ ದೂರು ನೀಡಿದ್ದಾನೆ. ತನಗೆ ಹಲ್ಲೆ ನಡೆಸಿದ್ದಾರೆ ಎಂದು ಇಬ್ಬರ ಮೇಲೆ ಹಿಂದೂ ಯುವಕ ದೂರು ನೀಡಿದ್ದಾನೆ. ದೂರಿನ ಹಿನ್ನೆಲೆಯಲ್ಲಿ ಇಬ್ಬರು ಬಜರಂಗ ದಳದ ಕಾರ್ಯಕರ್ತರನ್ನು ಬಂಧಿಸಲಾಗಿದೆ. ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Also Read: ಹೊಡೆಯುವ ಅಧಿಕಾರ ಕೊಟ್ಟಿದ್ದು ಯಾರು: ನೈತಿಕ ಪೊಲೀಸ್ಗಿರಿಗೆ ಕಡಿವಾಣ ಹಾಕಲು ಯುಟಿ ಖಾದರ್ ಆಗ್ರಹ Also Read: ಸುರತ್ಕಲ್‌ನಲ್ಲಿ ನೈತಿಕ ಪೊಲೀಸ್‌ಗಿರಿ: ಸಿಎಂ ಬೊಮ್ಮಾಯಿ ಇಂಥದ್ದನ್ನ ಸಹಿಸಲ್ಲ ಅಂದಿದ್ದರು, ಈಗೇನಾಯ್ತು? ಖಾದರ್ ಖಾರವಾದ ಪ್ರಶ್ನೆ
Published On - 12:05 pm, Thu, 7 October 21