ಮಂಗಳೂರು-ಬೆಂಗಳೂರು ಮಧ್ಯೆ ಏರ್ ಇಂಡಿಯಾ ಎಕ್ಸ್ಪ್ರೆಸ್ನ 2 ಹೊಸ ವಿಮಾನಗಳು ಆರಂಭ
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಯಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ನಡುವೆ ಸಂಚರಿಸಲಿವೆ. ಹೊಸ ವಿಮಾನಗಳು ಚೆನ್ನೈ, ಕಣ್ಣೂರು, ತಿರುವನಂತಪುರಂ ಮತ್ತು ವಾರಣಾಸಿಗೂ ಸಂಪರ್ಕ ಕಲ್ಪಿಸಲಿವೆ. ಈ ಹೊಸ ವಿಮಾನಗಳ ಕಾರ್ಯಾಚರಣೆಯಿಂದ ಮುಂದಿನ ದಿನಗಳಲ್ಲಿ ದೇಶೀಯ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಂಐಎ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು ನ.13: ಬುಧವಾರದಿಂದ ಮಂಗಳೂರು-ಬೆಂಗಳೂರು (Mangalore-Bengaluru) ಮಧ್ಯೆ ಏರ್ ಇಂಡಿಯಾ ಎಕ್ಸ್ಪ್ರೆಸ್ನ (Air India Express) ಎರಡು ಹೊಸ ವಿಮಾನಗಳು (Airplane) ಕಾರ್ಯಾರಂಭ ಮಾಡಲಿವೆ. ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ (MIA) ಯಿಂದ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIA) ನಡುವೆ ಸಂಚರಿಸಲಿವೆ. ಹೊಸ ವಿಮಾನಗಳು ಚೆನ್ನೈ, ಕಣ್ಣೂರು, ತಿರುವನಂತಪುರಂ ಮತ್ತು ವಾರಣಾಸಿಗೂ ಸಂಪರ್ಕ ಕಲ್ಪಿಸಲಿವೆ. ಈ ಹೊಸ ವಿಮಾನಗಳ ಕಾರ್ಯಾಚರಣೆಯಿಂದ ಮುಂದಿನ ದಿನಗಳಲ್ಲಿ ದೇಶೀಯ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಂಐಎ ಅಧಿಕಾರಿಗಳು ತಿಳಿಸಿದ್ದಾರೆ.
ವಿಮಾನದ ಸಮಯ
ಫ್ಲೈಟ್ ಕ್ಯಾರಿಯರ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಏರ್ ಇಂಡಿಯಾ ಎಕ್ಸ್‌ಪ್ರೆಸ್ IX 782 ವಾರಣಾಸಿಯಿಂದ ಬೆಳಿಗ್ಗೆ 8 ಗಂಟೆಗೆ ಹೊರಟು, 10.30 ಕ್ಕೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು (ಕೆಐಎ) ತಲುಪುತ್ತದೆ. ನಂತರ ಕೆಐಎಯಿಂದ ಬೆಳಗ್ಗೆ 11:10 ಕ್ಕೆ ಹೊರಡುತ್ತದೆ ಮತ್ತು 12:10 ಕ್ಕೆ ಎಂಐಎ ತಲುಪುತ್ತದೆ.
ವಾರಣಾಸಿ ಮತ್ತು ಮಂಗಳೂರಿಗೆ ನವೆಂಬರ್ 25 ರವರೆಗೆ ಕೇವಲ 10 ದಿನಗಳ ಕಾಲ ಮಾತ್ರ ಸಂಪರ್ಕ ಕಲ್ಪಿಸಲಾಗುವುದು. ನವೆಂಬರ್ 26 ರಿಂದ ಇದೇ ವಿಮಾನವು ಚೆನ್ನೈನಿಂದ-ಮಂಗಳೂರಿಗೆ ಬೆಂಗಳೂರು ಮಾರ್ಗವಾಗಿ ಮೂಲಕ ಸಂಪರ್ಕ ಕಲ್ಪಿಸಲಿದೆ. ಇದು ಬೆಳಗ್ಗೆ 9.35ಕ್ಕೆ ಚೆನ್ನೈನಿಂದ ಹೊರಡುತ್ತದೆ, 10.35ಕ್ಕೆ ಕೆಐಎಗೆ ತಲುಪುತ್ತದೆ. 12.10ಕ್ಕೆ ಎಮ್ಐಎಗೆ ತಲುಪುತ್ತದೆ. ಫ್ಲೈಟ್ ನಂಬರ್ IX 678 ಎಮ್ಐಎನಿಂದ ಮಧ್ಯಾಹ್ನ 12:40ಕ್ಕೆ ಹೊರಡುತ್ತದೆ, ಕೆಐಎಗೆ 1.55 ಕ್ಕೆ ಆಗಮಿಸುತ್ತದೆ.
ಇದನ್ನೂ ಓದಿ: ಬೆಂಗಳೂರು: ವಿಮಾನದಲ್ಲಿ ಮಹಿಳೆಯ ಖಾಸಗಿ ಅಂಗಾಂಗ ಮುಟ್ಟಿ ಸಹಪ್ರಯಾಣಿಕನಿಂದ ಕಿರುಕುಳ; ದೂರು ದಾಖಲು
ಎರಡನೇ ಹೊಸ ವಿಮಾನವು ಕಣ್ಣೂರು-ಬೆಂಗಳೂರು-ಮಂಗಳೂರು (IX 1795) ನಡುವೆ ಸಂಚರಿಸುತ್ತದೆ. ಇದು ಬುಧವಾರದಿಂದ ಕಾರ್ಯನಿರ್ವಹಿಸಲಿದೆ. ಇದು ಕಣ್ಣೂರಿನಿಂದ ಸಂಜೆ 4.30 ಕ್ಕೆ ಹೊರಟು 5.50 ಕ್ಕೆ ಕೆಐಎಗೆ ಆಗಮಿಸುತ್ತದೆ. ನಂತರ ಎಐಎಗೆ 6.25 ಕ್ಕೆ ಹೊರಟು 7.35ಕ್ಕೆ ತಲುಪುತ್ತದೆ. ಅದೇ ವಿಮಾನವು ಬದಲಾದ ವಿಮಾನ ಸಂಖ್ಯೆ IX792, ಎಮ್ಐಎನಿಂದ ರಾತ್ರಿ 8.15 ಕ್ಕೆ ನಿರ್ಗಮಿಸುತ್ತದೆ, ರಾತ್ರಿ 9.30ಕ್ಕೆ ಕೆಐಎಗೆ ತಲುಪುತ್ತದೆ. ಮತ್ತು 50 ನಿಮಿಷಗಳ ಲೇಓವರ್ ನಂತರ ತಿರುವನಂತಪುರಂಗೆ ಹೊರಟು ರಾತ್ರಿ 11.25 ಕ್ಕೆ ತಲುಪುತ್ತದೆ. ಏರ್‌ಲೈನ್ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಪ್ರಸ್ತುತ ವಿವರಗಳ ಪ್ರಕಾರ ವಿಮಾನವು ಬೋಯಿಂಗ್ 737 ಮ್ಯಾಕ್ಸ್ ಆಗಿರುತ್ತದೆ.
ಪುಣೆಗೆ ವಿಮಾನ ಹಾರಾಟ ಪುನರಾರಂಭ
ಅಕ್ಟೋಬರ್ 29 ರಿಂದ ನವೆಂಬರ್ 18 ರ ನಡುವೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಪುಣೆ-ಮಂಗಳೂರು ವಿಮಾನವು ವಾರಕ್ಕೆ ಮೂರು ಬಾರಿ ವಿಮಾನ ಸೇವೆಯೊಂದಿಗೆ ನವೆಂಬರ್ 19 ರಿಂದ ಪುನರಾರಂಭಗೊಳ್ಳಲಿದೆ. ಸಮಯವೂ ಬದಲಾಗಿದೆ. 6E177 ವಿಮಾನವು ಪುಣೆಯಿಂದ ಬೆಳಗ್ಗೆ 7.25ಕ್ಕೆ ಹೊರಡಲಿದ್ದು, ಬೆಳಗ್ಗೆ 9.05ಕ್ಕೆ ಎಮ್ಐಎ ತಲುಪಲಿದೆ. 6E358 ವಿಮಾನವು ಎಮ್ಐಎನಿಂದ ಬೆಳಗ್ಗೆ 10.15 ಕ್ಕೆ ಹೊರಟು 11.40 ಕ್ಕೆ ಪುಣೆ ತಲುಪಲಿದೆ. ಈ ವಿಮಾನವು 186 ಆಸನಗಳ ಏರ್‌ಬಸ್ A320 ಆಗಿರುತ್ತದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ