Air India: ಮುಂಬೈ-ಮಂಗಳೂರಿಗೆ ತನ್ನ ಎರಡನೇ ದೈನಂದಿನ ವಿಮಾನಯಾನ ಆರಂಭಿಸಿದ ಏರ್ ಇಂಡಿಯಾ

|

Updated on: Jun 12, 2023 | 12:50 PM

ಏರ್ ಇಂಡಿಯಾ ತನ್ನ ಎರಡನೇ ದೈನಂದಿನ ವಿಮಾನಯಾನವನ್ನು ಮುಂಬೈ ಮತ್ತು ಮಂಗಳೂರು ನಡುವೆ ಶನಿವಾರ ಹಾರಾಟ ನಡೆಸಿದೆ. ಇಂಡಿಗೋಗೆ ಮೇ 22ರಂದು ಮುಂಬೈ-ಮಂಗಳೂರು ಸೆಕ್ಟರ್‌ನಲ್ಲಿ ಮೂರನೇ ದೈನಂದಿನ ವಿಮಾನ ಕಾರ್ಯನಿರ್ವಹಿಸಲು ಅವಕಾಶ ನೀಡಿದೆ.

Air India: ಮುಂಬೈ-ಮಂಗಳೂರಿಗೆ ತನ್ನ ಎರಡನೇ ದೈನಂದಿನ ವಿಮಾನಯಾನ ಆರಂಭಿಸಿದ ಏರ್ ಇಂಡಿಯಾ
ಏರ್​ ಇಂಡಿಯಾ
Follow us on

ಮಂಗಳೂರು: ಏರ್ ಇಂಡಿಯಾ (Air India) ತನ್ನ ಎರಡನೇ ದೈನಂದಿನ ವಿಮಾನಯಾನವನ್ನು ಮುಂಬೈ ಮತ್ತು ಮಂಗಳೂರು ನಡುವೆ ಶನಿವಾರ ಹಾರಾಟ ನಡೆಸಿದೆ. ಇಂಡಿಗೋಗೆ ಮೇ 22ರಂದು ಮುಂಬೈ-ಮಂಗಳೂರು ಸೆಕ್ಟರ್‌ನಲ್ಲಿ ಮೂರನೇ ದೈನಂದಿನ ವಿಮಾನವಾಗಿ ಕಾರ್ಯನಿರ್ವಹಿಸಲು ಅವಕಾಶ ನೀಡಿದೆ. ಈಗ, ಎರಡೂ ವಿಮಾನಯಾನ ಸಂಸ್ಥೆಗಳು ಈ ಹೆಚ್ಚು ಪ್ರಯಾಣಿಸುವ ವಲಯದಲ್ಲಿ ಒಟ್ಟಾಗಿ ಐದು ದಿನ ವಿಮಾನಗಳನ್ನು ನಿರ್ವಹಿಸುತ್ತವೆ ಎಂದು ಹೇಳಿದೆ.

ಏರ್ ಇಂಡಿಯಾ ವಿಮಾನ 1679 ಮುಂಬೈನಿಂದ ಮಧ್ಯಾಹ್ನ 12.40ಕ್ಕೆ ಹೊರಟು 2.10ಕ್ಕೆ ಮಂಗಳೂರಿಗೆ ತಲುಪುತ್ತದೆ. ಹಿಂದಿರುಗುವ ಮಾರ್ಗದಲ್ಲಿ AI 1680 ಮಮಗಳೂರಿನಿಂದ ಮಧ್ಯಾಹ್ನ 2.50ಕ್ಕೆ ಹೊರಟು ಸಂಜೆ 4.35ಕ್ಕೆ ಮುಂಬೈ ತಲುಪುತ್ತದೆ. ಈ ವಿಮಾನದ ಮೊದಲ ಹಂತದಲ್ಲಿ 182 ಪ್ರಯಾಣಿಕರು AI 1679 ನಲ್ಲಿ ಮಂಗಳೂರಿಗೆ ಮತ್ತು 167 ಪ್ರಯಾಣಿಕರು AI 1680 ನಲ್ಲಿ ಮುಂಬೈ ತೆರಳಿದ್ದಾರೆ. ಇನ್ನೊಂದು ಏರ್​​ ಇಂಡಿಯಾ ವಿಮಾನ AI 680 ವಿಮಾನವು ಮಂಗಳೂರಿನಿಂದ ಬೆಳಿಗ್ಗೆ 7.55ಕ್ಕೆ ಹೊರಟು, ಬೆಳಿಗ್ಗೆ 9ಕ್ಕೆ ಮುಂಬೈ ತಲುಪುತ್ತದೆ.

ಇದನ್ನೂ ಓದಿ: Air India Discount Offers: ಕೇವಲ 1,705 ರೂ.ಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಕೇ? ಇಂದೇ ಟಿಕೆಟ್ ಕಾಯ್ದಿರಿಸಿ

ಏರ್​​ಲೈನ್​​ ಉದ್ಯಮಗಳ ಪ್ರಕಾರ, ಇಂಡಿಗೋ ಅಕ್ಟೋಬರ್​ 28ರಿಂದ ತನ್ನ ಎರಡನೇ ಹಂತದ ಮುಂಬೈ – ಮಂಗಳೂರು ಸೇವೆಗಳನ್ನು ಕೊನೆಗೊಳಿಸುತ್ತದೆ, ನಂತರ ಏರ್​ ಇಂಡಿಯಾ ತನ್ನ ಸೇವೆಯನ್ನು ಆರಂಭಿಸಲಿದೆ ಎಂದು ಹೇಳಿದ್ದಾರೆ. ಜೂನ್​ 15ರವರೆಗೆ ಹಾರಾಟ ನಡೆಸುತ್ತದೆ ಎಂದು ಹೇಳಲಾಗಿತ್ತು, ಆದರೆ ಇದೀಗ ಇದರ ಹಾರಾಟವನ್ನು ಜುಲೈ 30 ವರೆಗೆ ನಡೆಸಲಿದೆ ಎಂದು ಹೇಳಲಾಗಿದೆ. ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ​​(ಡಿಜಿಸಿಎ) ಅಂಕಿಅಂಶ ಪ್ರಕಾರ 2022 ಮುಂಬೈನಿಂದ ಮಂಗಳೂರಿಗೆ 4.94 ಲಕ್ಷಕ್ಕೂ ಹೆಚ್ಚು ಪ್ರಯಾಣಿಸಿದ್ದಾರೆ, ಈ ವರದಿ ಪ್ರಕಾರ ತಿಂಗಳಿಗೆ 42 ಸಾವಿರ ಪ್ರಯಾಣಿಕರು ಹಾರಾಟ ನಡೆಸಿದ್ದಾರೆ ಎಂದು ಹೇಳಲಾಗಿದೆ. ಅತೀ ಹೆಚ್ಚು ಹಾರಾಟ ನಡೆಸಿದ ಎರಡನೇ ವಿಮಾನ ಮಾರ್ಗವೆಂದರೆ ಮಂಗಳೂರು-ಬೆಂಗಳೂರು ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

 

 

Published On - 12:48 pm, Mon, 12 June 23