AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Alva’s Jamboree: ಭಾರತದ ಹಳೆಯ ಸಂಸ್ಕೃತಿಯನ್ನು ನೆನಪಿಸಿದ ಜಾಂಬೂರಿ, ಅದ್ಭುತವಾಗಿತ್ತು ಪ್ರಾಚ್ಯ ವಸ್ತು ಸಂಗ್ರಹ

ಭಾರತೀಯ ಹಳೆಯ ಸಂಸ್ಕೃತಿಗೆ ಸಾಕ್ಷಿಯಾಗಿದ್ದು, ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ನಡೆದ ಜಾಂಬೂರಿ ಕಾರ್ಯಕ್ರಮ. ಈ ಜಾಂಬೂರಿಯು ಹಲವು ವಿಶೇಷತೆಗಳನ್ನು ಒಳಗೊಂಡಿದ್ದು ಜನರನ್ನು ತನ್ನತ್ತ ಸೆಳೆಯುತ್ತಿದೆ.

Alva's Jamboree: ಭಾರತದ ಹಳೆಯ ಸಂಸ್ಕೃತಿಯನ್ನು ನೆನಪಿಸಿದ ಜಾಂಬೂರಿ, ಅದ್ಭುತವಾಗಿತ್ತು ಪ್ರಾಚ್ಯ ವಸ್ತು ಸಂಗ್ರಹ
Alva's Jamboree Image Credit source: TV9 kannada
TV9 Web
| Edited By: |

Updated on:Dec 26, 2022 | 12:59 PM

Share

ಮೂಡುಬಿದಿರೆ: ಭಾರತೀಯ ಹಳೆಯ ಸಂಸ್ಕೃತಿಗೆ ಸಾಕ್ಷಿಯಾಗಿದ್ದು, ಮೂಡುಬಿದಿರೆ ಆಳ್ವಾಸ್ ಕಾಲೇಜಿನಲ್ಲಿ ನಡೆದ ಜಾಂಬೂರಿ ಕಾರ್ಯಕ್ರಮ. ಈ ಜಾಂಬೂರಿಯು ಹಲವು ವಿಶೇಷತೆಗಳನ್ನು ಒಳಗೊಂಡಿದ್ದು ಜನರನ್ನು ತನ್ನತ್ತ ಸೆಳೆಯುತ್ತಿದೆ. ಅದರಲ್ಲೂ ಕಂಪ್ಯೂಟರ್ ಯುಗದಲ್ಲಿರುವಂತ ಇಂದಿನ ಯುವ ಜನತೆಗೆ ತಮ್ಮ ಪೂರ್ವಜರ ಕಾಲಕ್ಕೆ ಕರೆದುಕೊಂಡು ಹೋಗಿದ್ದು ಪ್ರಾಚ್ಯ ವಸ್ತು ಸಂಗ್ರಾಹಕರಾದ ಹಳ್ಳಿಮನೆ ಹೈದರಾಲಿಯ ಈ ಪ್ರಾಚ್ಯ ವಸ್ತು ಸಂಗ್ರಹ. ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ವತಿಯಿಂದ ಆಳ್ವಾಸ್ ಕಾಲೇಜಿನಲ್ಲಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮದಲ್ಲಿ ವಿಜ್ಞಾನ ಮೇಳದ ಆವರಣದಲ್ಲಿ ಪ್ರಾಚ್ಯವಸ್ತು ಸಂಗ್ರಹ ಜನರಿಗೆ ತಮ್ಮ ಪೂರ್ವಜರ ದಿನಗಳನ್ನು ನೆನಪಿಸಿತು.

ಇಲ್ಲಿ ಆರಂಭಿಕ ಕಾಲದಲ್ಲಿನ ವಿವಿಧ ಬಗೆಯ ಬ್ರಿಟಿಷ್, ಟಿಪ್ಪು ಮತ್ತು ಅನೇಕ ಭಾರತೀಯ ರಾಜರ ಕಾಲದಲ್ಲಿ ಮುದ್ರಿಸಲ್ಪಟ್ಟ ಸಾವಿರಾರು ನಾಣ್ಯಗಳು ನಂತರದಲ್ಲಿ ಬಂದಂತಹ ನೂರಾರು ದೇಶಿಯ ಮತ್ತು ವಿದೇಶಿ ನೋಟ್‌ಗಳು ಜನರತ್ತ ಸೆಳೆಯುವಂತೆ ಮಾಡಿತ್ತು. ಅಲ್ಲದೆ ಅಲ್ಲಿನ ಒಂದೊಂದು ನಾಣ್ಯಗಳು ಸಹ ಆಯಾ ಕಾಲದಲ್ಲಿನ ಸನ್ನಿವೇಶಗಳನ್ನು ತಿಳಿಸುವಂತಹದ್ದಾಗಿದ್ದು ಈ ಸಂಗ್ರಹದ ವಿಶೇಷವಾಗಿತ್ತು.

ಅಲ್ಲದೆ ಹಿಂದಿನ ಕಾಲದಲ್ಲಿ ಬಳಸಲಾಗುತ್ತಿದ್ದ ತಾಮ್ರ, ಹಿತ್ತಾಳೆ, ಮರದಲ್ಲಿ ಮಾಡಿದಂತಹ ಉಪಕರಣಗಳನ್ನು ಈ ಜಾಂಬೂರಿ ವಸ್ತು ಸಂಗ್ರಹ ಕಾಣಲು ಸಿಗುತ್ತದೆ. ಇದನ್ನು ಆ ಕಾಲದಲ್ಲಿ ಹೇಗೆ ಬಳಕೆ ಮಾಡುತ್ತಿದ್ದರು, ಈ ವಸ್ತುಗಳಲ್ಲಿ ಯಾವೆಲ್ಲ ರೀತಿಯ ಬದಲಾವಣೆಗಳು ಆಗುತ್ತಿತ್ತು ಎಂಬುದನ್ನು ಜಾಂಬೂರಿ ವಸ್ತು ಪ್ರದರ್ಶನದಲ್ಲಿ ನೋಡಲು ಸಿಗುತ್ತದೆ. ಹಿಂದಿನ ಕಾಲದಲ್ಲಿ ವಿದ್ಯುತ್ ಇಲ್ಲದೆ ಕೆಲಸ ಮಾಡುವ ಉಪಕರಣಗಳನ್ನು ಇಲ್ಲಿ ಪ್ರದರ್ಶನ ಮಾಡಲಾಗಿದೆ. ಕೈಗಳ ಮೂಲಕ ತಿರುಗಿಸುವ ಜೆರಾಕ್ಸ್ ಯಂತ್ರೋಪಕರಣ ಮತ್ತು ಬಂಗಾರ ತೂಗುವ ತಕ್ಕಡಿ, ಅಕ್ಕಿ ಅಳೆಯುವ ಷೇರು, ರಾಜರ ಕಾಲದಲ್ಲಿನ ಕತ್ತಿ, ಉಪ್ಪು ಹಾಕಿಡುವ ಮರಾಯಿ, ಚನ್ನೆಮಣೆ, ಶಾವಿಗೆ ಮಣಿ, 100 ವರ್ಷಕ್ಕಿಂತ ಹಳೆಯ ಸೆಂಟ್ ಬಾಟಲ್‌ಗಳನ್ನ ಕಾಣಬಹುದು.

ಇದನ್ನು ಓದಿ: ನಮ್ಮೂರಿನ ಜಾತ್ರೆಯನ್ನು ನೆನಪಿಸಿದೆ ಧರ್ಮಸ್ಥಳ, ನೆನಪಿನ ಗೂಡಿನಲ್ಲಿ ಸದಾ ಕಾಲ ಜೀವಂತ

ಟೆಲಿಫೋನ್​ನಿಂದ ಇಲ್ಲಿನವರೆಗಿನ ಎಲ್ಲರೀತಿಯ ಫೋನ್ ಮತ್ತು ವಿದೇಶದಲ್ಲಿ ಮತ್ತು ಭಾರತದಲ್ಲೇ ತಯಾರಿಸಿದ ಮೊಬೈಲ್​ಗಳು ಇಲ್ಲಿ ಕಾಣಲು ಸಿಗುತ್ತದೆ. ಸುಮಾರು 80 ಹೆಚ್ಚು ವಿವಿಧ ತರಹದ ಹಳೆಯ ವಾಚ್ ಗಳು ಇಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ನಶೆಗಾಗಿ ಬಳಸುತ್ತಿದ್ದ ಹುಕ್ಕಾ ಪಾಟ್, ಚಿಲಂ, ಸಿಗರೇಟ್ ಬೂದಿಯನ್ನ ಉದುರಿಸಿಡುವ ಪತ್ರೆ ಮತ್ತು ಪೆಟ್ರೊಮ್ಯಾಕ್ಸ್, ಹಾಳೆಯ ಟೊಪ್ಪಿ, ಹಂಡೆ, ಅಕ್ಕಿ ಕೇರುವ ಮರ, ಬೆತ್ತದ ಬುಟ್ಟಿ, ಮಣ್ಣಿನ ಮಡಿಕೆ, ಬ್ಯಾಟರಿಗಳು ಇಲ್ಲಿದೆ.

ಈ ಜಾಂಬೂರಿಯಲ್ಲಿ ಇದು ಮಾತ್ರವಲ್ಲದೇ, ಅನೇಕ ರೀತಿಯ ಪ್ರದರ್ಶನಗಳು ಇದ್ದವು. ರೈತರು ಉಳುಮೆಗೆ ಬಳಸುತ್ತಿದ್ದ ವಿವಿಧ ಭಾಗಗಳಲ್ಲಿನ ನೊಗ ನೇಗಿಲು. ಎತ್ತಿನ ಗಾಡಿ ಮತ್ತು ಮೀನು ಹಿಡಿಯುವ ಮಂಕರಿಗಳು ಜನರನ್ನ ಆಕರ್ಷಿಸಿತ್ತು. ಇವರು ತಮ್ಮ 15ನೇ ವರ್ಷ ದಿಂದಲೇ ಹಳೇವಸ್ತುಗಳನ್ನು ಸಂಗ್ರಹಿಸುತ್ತಾ ಬಂದಿದ್ದು ಕರ್ನಾಟಕವಲ್ಲದೆ ಬೇರೆ ಬೇರೆ ರಾಜ್ಯಗಳಿಂದ ಹಳೇ ವಸ್ತುಗಳನ್ನ ಸಂಗ್ರಹಿಸಿದ್ದಾರೆ. ಇವರ ಈ ಸಾಧನೆಗೆ ಇವರಿಗೆ ಅನೇಕ ಪ್ರಶಸ್ತಿ ಮತ್ತು ಸನ್ಮಾನಗಳು ಸಹ ದೊರಕಿವೆ.

ಕಾರ್ತಿಕ ಹೆಗಡೆ

ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:58 pm, Mon, 26 December 22

ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಯಾವುದೇ ಕಾರ್ಯಗಳಲ್ಲಿ ಶಂಕುಸ್ಥಾಪನೆ ಮಾಡುವುದು ಯಾಕೆ?
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಇಂದು ಈ ರಾಶಿಯವರಿಗೆ ಖರ್ಚು ಜಾಸ್ತಿ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ಡಿಕೆ ಶಿವಕುಮಾರ್​ ಹಾಗೂ ಕೆಎನ್​​ ರಾಜಣ್ಣ ಭೇಟಿ: ಕುತೂಹಲ ಮೂಡಿಸಿದ ನಾಯಕರ ನಡ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ವಿಶಾಖಪಟ್ಟಣದಲ್ಲಿ ರಸ್ತೆ ಕಾಮಗಾರಿ ವೇಳೆ ಶ್ರೀರಾಮನ ಪ್ರಾಚೀನ ವಿಗ್ರಹ ಪತ್ತೆ
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಊಟಿಯಲ್ಲಿ ದಾಖಲೆಯ ಚಳಿ; ಪ್ರವಾಸಿಗರನ್ನು ಸೆಳೆಯುತ್ತಿವೆ ಹಿಮಾವೃತ ಹೂಗಳು
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
ಚಿಕ್ಕಬಳ್ಳಾಪುರದಲ್ಲಿ ಕಾರು-ಸ್ಕೂಟಿ ನಡುವೆ ಭೀಕರ ಅಪಘಾತ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾದ ಕತೆ ಹುಟ್ಟಿದ್ದೇಗೆ? ಭಾವುಕ ಕ್ಷಣ ವಿವರಿಸಿದ ಅರ್ಜುನ್ ಜನ್ಯ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
ಗಣಪತಿ ಪ್ರಸಾದ ಬೆನ್ನಲ್ಲೇ ನಾಗಾಸಾಧುಗಳಿಂದ ಡಿಕೆ ಶಿವಕುಮಾರ್​ಗೆ ಆಶೀರ್ವಾದ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು